AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಬಳ್ಳಾಪುರದ ಮಿಟ್ಟಹಳ್ಳಿಯಲ್ಲಿ ಮತ್ತೆ ಭೂಮಿಯಿಂದ ಬಂತು ಭಾರಿ ಶಬ್ದ!

ನವೆಂಬರ್ 9ಕ್ಕೂ ಮಿಟ್ಟಹಳ್ಳಿ ಗ್ರಾಮ ಸೇರಿ ಸುತ್ತಮುತ್ತಲ ಐದು ಹಳ್ಳಿಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಮಿಟ್ಟಹಳ್ಳಿ ಗ್ರಾಮಸ್ಥರಲ್ಲಿ ಕೆಲವರು ಅರಳಿ ಕಟ್ಟೆ ಮೇಲೆ ಕುಳಿತಿದ್ರೆ ಇನ್ನೂ ಕೆಲವರು ರಾತ್ರಿ ಊಟ ಮಾಡುತ್ತ ತಮ್ಮ ಪಾಡಿಗೆ ತಮ್ಮ ತಮ್ಮ ಮನೆಗಳಲ್ಲಿ ಇದ್ದರು.

ಚಿಕ್ಕಬಳ್ಳಾಪುರದ ಮಿಟ್ಟಹಳ್ಳಿಯಲ್ಲಿ ಮತ್ತೆ ಭೂಮಿಯಿಂದ ಬಂತು ಭಾರಿ ಶಬ್ದ!
ಮಿಟ್ಟಹಳ್ಳಿ ಜನರಲ್ಲಿ ಆತಂಕ ಹೆಚ್ಚಾಗಿದೆ
TV9 Web
| Updated By: sandhya thejappa|

Updated on:Nov 11, 2021 | 9:01 AM

Share

ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲೂಕಿನ ಮಿಟ್ಟಹಳ್ಳಿಯಲ್ಲಿ ಭೂಮಿಯಿಂದ ಮತ್ತೆ ಭಾರಿ ಶಬ್ದ ಕೇಳಿಬಂದಿದೆ. ನಿನ್ನೆ (ನ.10) ರಾತ್ರಿಯಿಂದ 3 ಬಾರಿ ಶಬ್ದ ಕೇಳಿಬಂದಿದೆ. ರಾತ್ರಿ 9 ಗಂಟೆ, ಬೆಳಗಿನ ಜಾವ 3 ಗಂಟೆ, 5 ಗಂಟೆಗೆ ಕೇಳಿಬಂದ ಭಾರಿ ಶಬ್ದದಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ. ನಿನ್ನೆ ಗ್ರಾಮಕ್ಕೆ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳ ಭೇಟಿ ನೀಡಿದ್ದರು. ಭೂಕಂಪ ಆಗಿರುವ ಬಗ್ಗೆ ಮಾಪಕದಲ್ಲಿ ದಾಖಲಾಗಿಲ್ಲ. ಕೊಳವೆ ಬಾವಿಗಳಲ್ಲಿ ಜಲಮರುಪೂರಣದಿಂದ ಶಬ್ದ ಕೇಳಿಬಂದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ನವೆಂಬರ್ 9ಕ್ಕೂ ಮಿಟ್ಟಹಳ್ಳಿ ಗ್ರಾಮ ಸೇರಿ ಸುತ್ತಮುತ್ತಲ ಐದು ಹಳ್ಳಿಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಮಿಟ್ಟಹಳ್ಳಿ ಗ್ರಾಮಸ್ಥರಲ್ಲಿ ಕೆಲವರು ಅರಳಿ ಕಟ್ಟೆ ಮೇಲೆ ಕುಳಿತಿದ್ರೆ ಇನ್ನೂ ಕೆಲವರು ರಾತ್ರಿ ಊಟ ಮಾಡುತ್ತ ತಮ್ಮ ಪಾಡಿಗೆ ತಮ್ಮ ತಮ್ಮ ಮನೆಗಳಲ್ಲಿ ಇದ್ದರು. ನವೆಂಬರ್ 9ರ ರಾತ್ರಿ 8.50ರ ಸಮಯದಲ್ಲಿ ಭೂಮಿಯಿಂದ ಭಾರಿ ಶಬ್ದ ಬಂದಿದೆ. ಏನಾಯಿತು ಎಂದು ಯೋಚನೆ ಮಾಡುವಷ್ಟರಲ್ಲಿ ಮನೆಯಲ್ಲಿದ್ದ ಪಾತ್ರೆಗಳು, ದೇವರ ಪೋಟೋಗಳು ಗಡ ಗಡ ಸದ್ದು ಮಾಡಿ, ನೆಲಕ್ಕೆ ಉರುಳಿ ಬಿದ್ದಿವೆ. ಇದರಿಂದ ಭಯ ಭೀತರಾದ ಗ್ರಾಮಸ್ಥರು ಊಟದ ತಟ್ಟೆ ಬಿಟ್ಟು ಮನೆಯಿಂದ ಆಚೆ ಓಡಿ ಬಂದಿದ್ದಾರೆ.

ಸುತ್ತಮುತ್ತ ಗಣಿಗಾರಿಕೆ ಇಲ್ಲ ಮಿಟ್ಟಹಳ್ಳಿ, ನಂದನವನ, ಅಪ್ಸನಹಳ್ಳಿ, ಗೋನೇನಹಳ್ಳಿ ಸೇರಿದಂತೆ ಸುತ್ತಮುತ್ತ 10 ಕೀಲೋ ಮೀಟರ್ ವ್ಯಾಪ್ತಿಯಲ್ಲಿ ಎಲ್ಲಿಯೂ ಕಲ್ಲು ಕ್ವಾರಿ ಕ್ರಷರ್​ಗಳಿಲ್ಲ. ಎಲ್ಲಿಯೂ ಗಣಿಗಾರಿಕೆ ನಡೆಯುತ್ತಿಲ್ಲ. ಆದರೂ ಭೂಮಿಯಲ್ಲಿ ಸ್ಪೋಟಗೊಂಡ ಶಬ್ಧ ಕೇಳಿ ಕ್ಷಣಾರ್ಧದಲ್ಲಿ ಅಲ್ಲೊಲ ಕಲ್ಲೊಲವಾದ ಅನುಭವ ಎಲ್ಲರಿಗೂ ಆಗಿದೆ.

ಇದನ್ನೂ ಓದಿ

ಆಯುಷ್ಮಾನ್ ಖುರಾನಾ ಪತ್ನಿ ತಾಹಿರಾ ಕಶ್ಯಪ್ ದಿಟ್ಟೆ ಅಂತ ಕರೆಸಿಕೊಳ್ಳವುದಕ್ಕೆ ಹಲವಾರು ಕಾರಣಗಳಿವೆ!

ಗದುಗಿನ ರಾಚೋಟಿ ವೀರಭದ್ರೇಶ್ವರನನ್ನು ಭಕ್ತರು ಕಲಿಯುಗ ಕಾಮಧೇನು ಅಂತ ಕರೆಯುತ್ತಾರೆ

Published On - 8:46 am, Thu, 11 November 21

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ