ಇಶಾ ಫೌಂಡೇಷನ್ ಆದಿಯೋಗಿ ಪ್ರತಿಮೆ ನೋಡಲು ಅವಲಗುರ್ಕಿ ಗ್ರಾಮ ಪಂಚಾಯತಿಗೆ ಸುಂಕ ಕಟ್ಟಬೇಕಂತೆ! ಶಿವನ ಭಕ್ತರು ಕೆಂಡಾಮಂಡಲ

Isha Foundation: ಚಿಕ್ಕಬಳ್ಳಾಪುರ ತಾಲೂಕಿನ ಅವಲಗುರ್ಕಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪಕ್ಕಾ ಖಾಸಗಿ ಜಮೀನಿನಲ್ಲಿ ಅಂದ್ರೆ ಇಶಾ ಫೌಂಡೇಷನ್ ಗೆ ಸೇರಿದ ಖಾಸಗಿ ಜಾಗದಲ್ಲಿ ಆದಿಯೋಗಿ ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಗಿದೆ. ರಸ್ತೆಗಳನ್ನು ಸಹ ಇಶಾ ಫೌಂಡೇಷನ್ ಅಭಿವೃದ್ದಿ ಮಾಡಿದೆ ಎನ್ನಲಾಗಿದೆ.

ಇಶಾ ಫೌಂಡೇಷನ್ ಆದಿಯೋಗಿ ಪ್ರತಿಮೆ ನೋಡಲು ಅವಲಗುರ್ಕಿ ಗ್ರಾಮ ಪಂಚಾಯತಿಗೆ ಸುಂಕ ಕಟ್ಟಬೇಕಂತೆ! ಶಿವನ ಭಕ್ತರು ಕೆಂಡಾಮಂಡಲ
ಆದಿಯೋಗಿ ಪ್ರತಿಮೆ ನೋಡಲು ಅವಲಗುರ್ಕಿ ಗ್ರಾಮ ಪಂಚಾಯತಿಗೆ ಸುಂಕ ಕಟ್ಟಬೇಕಂತೆ!
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jan 28, 2023 | 6:35 PM

ಚಿಕ್ಕಬಳ್ಳಾಪುರ (Chikkaballapur) ತಾಲೂಕಿನ ಅವಲಗುರ್ಕಿ (Avalagurki) ಗ್ರಾಮದ ಬಳಿ 112 ಅಡಿಗಳ ಆದಿಯೋಗಿ (Adiyogi) ಶಿವನ ವಿಗ್ರಹ ನಿರ್ಮಾಣ ಮಾಡಿದ್ದೇ ತಡ… ಪ್ರತಿದಿನ ಸಾವಿರಾರು ಮಂದಿ ಶಿವನ ಭಕ್ತರು, ಬೈಕ್ ಹಾಗೂ ಕಾರುಗಳಲ್ಲಿ ಅವಲಗುರ್ಕಿ ಗ್ರಾಮದತ್ತ ಆಗಮಿಸುತ್ತಿದ್ದಾರೆ. ಇದನ್ನೇ ಅವಕಾಶ ಮಾಡಿಕೊಂಡ ಸ್ಥಳೀಯ ಗ್ರಾಮ ಪಂಚಾಯತಿಯು ತನಗೆ ಸಂಬಂಧವೇ ಇಲ್ಲದಿದ್ರೂ… ರಸ್ತೆಯಲ್ಲಿ ನಿಂತು ಟೋಲ್ ಸುಂಕದ ರೀತಿಯಲ್ಲಿ ವಾಹನಗಳಿಗೆ ಸುಂಕ ವಸೂಲಿ (toll amount) ಮಾಡುವುದರ ಮೂಲಕ ಶಿವನ ಭಕ್ತರ (Isha Foundation) ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ಒಂದು ವರದಿ.

ಬೃಹತ್ ಶಿವನ ವಿಗ್ರಹದ ಮುಂದೆ ನಿಂತು, ಭಕ್ತಿ ಬಾವ ಪ್ರಾರ್ಥನೆ ಮಾಡ್ತಿರುವ ಶಿವನ ಭಕ್ತರು ಒಂದೆಡೆಯಾದ್ರೆ… ಮತ್ತೊಂದೆಡೆ ಶಿವನನ್ನು ನೋಡಲು ಬೈಕ್ ಹಾಗೂ ಕಾರುಗಳಲ್ಲಿ ಆಗಮಿಸ್ತಿರೊ ಸಾವಿರ ಜನ. ಇದರ ಮಧ್ಯೆ, ಇದನ್ನೇ ತಮ್ಮ ಸೌಭಾಗ್ಯ ಎಂದುಕೊಂಡಿರುವ ಸ್ಥಳೀಯ ಅವಲಗುರ್ಕಿ ಗ್ರಾಮ ಪಂಚಾಯತ್ ಕಾರ್ಯಾಲಯದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು, ಇಶಾ ಫೌಂಡೇಷನ್ ಗೆ ಹೋಗುವ ವಾಹನಗಳನ್ನು ತಡೆದು… ಬೈಕ್ ಗೆ 10 ರೂಪಾಯಿ ಹಾಗೂ ಕಾರುಗಳಿಗೆ 30 ರೂಪಾಯಿ ಸುಂಕ ವಸೂಲಿ ಮಾಡ್ತಿದ್ದಾರೆ.

ಅಸಲಿಗೆ ಪಂಚಾಯತಿಯಿಂದ ರಸ್ತೆಯಾಗಲಿ, ನೀರು, ಸ್ವಚ್ಛತೆ, ನೋಡಲು ಬರುವ ಸ್ಥಳ (ಆದಿಯೋಗಿ ಪ್ರತಿಮೆ ಸ್ಥಳ) ಸಹ ಯಾವುದೂ ಪಂಚಾಯತಿಗೆ ಸೇರಿಲ್ಲ. ಆದ್ರೆ ಜನ ತಮ್ಮ ವ್ಯಾಪ್ತಿಯ ಏರಿಯಾದಲ್ಲಿ ಸಂಚಾರ ಮಾಡ್ತಿದ್ದಾರೆ ಅಂತ ಅನಧಿಕೃತವಾಗಿ ಸುಂಕ ವಸೂಲಿ ಮಾಡ್ತಿದಾರೆ ಎಂದು ಆದಿಯೋಗಿ ಭಕ್ತರಾದ ಜೈ ಕುಮರ್ ಎಂಬುವವರು ಆರೋಪ ಮಾಡಿದ್ದಾರೆ.

ಚಿಕ್ಕಬಳ್ಳಾಪುರ ತಾಲೂಕಿನ ಅವಲಗುರ್ಕಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪಕ್ಕಾ ಖಾಸಗಿ ಜಮೀನಿನಲ್ಲಿ ಅಂದ್ರೆ ಇಶಾ ಫೌಂಡೇಷನ್ ಗೆ ಸೇರಿದ ಖಾಸಗಿ ಜಾಗದಲ್ಲಿ ಆದಿಯೋಗಿ ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಗಿದೆ. ರಸ್ತೆಗಳನ್ನು ಸಹ ಇಶಾ ಫೌಂಡೇಷನ್ ಅಭಿವೃದ್ದಿ ಮಾಡಿದೆ ಎನ್ನಲಾಗಿದೆ. ಸ್ಥಳೀಯ ಪಂಚಾಯತಿಯಿಂದ ಇದುವರೆಗೂ ಯಾವುದೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸಿಲ್ಲ.

Isha Foundation at Chikkaballapur lord shiva followers angry against Avalagurki Gram Panchayat (2)

ಆದ್ರೂ ಅಲವಗುರ್ಕಿ ಗ್ರಾಮ ಪಂಚಾಯತಿ ವಾಹನ ಪ್ರವೇಶ ಶುಲ್ಕ ವಸೂಲಿ ಮಾಡ್ತಿದೆ. ಈ ಕುರಿತು ಚಿಕ್ಕಬಳ್ಳಾಪುರ ತಾಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ಮಂಜುನಾಥ್ ರನ್ನು ಪ್ರಶ್ನಿಸಿದ್ರೆ… ಎಲ್ಲಾ ಗೊತ್ತಿದ್ದು, ಏನೂ ಗೊತ್ತಿಲ್ಲದಂತೆ, ವಿಚಾರಿಸಿ ಹೇಳುತ್ತೇನೆ ಎಂದು ಜವಾಬ್ದಾರಿಯಿಂದ ನುಣಚಿಕೊಂಡರು.

ವಿಕೆಂಡ್ ನಲ್ಲಿ ನಂದಿಗಿರಿಧಾಮಕ್ಕೆ ಬರುವ ಪ್ರವಾಸಿಗರು, ನಂದಿಗಿರಿಧಾಮ ಪ್ರವಾಸ ಮುಗಿಸಿಕೊಂಡು 112 ಅಡಿಗಳ ಆದಿಯೋಗಿ ಶಿವನ ದರ್ಶನಕ್ಕೆ ಆಗಮಿಸ್ತಿದ್ದಾರೆ. ಆದ್ರೆ ಇದನ್ನೆ ತಮ್ಮ ಸೌಭಾಗ್ಯ ಎಂದುಕೊಂಡಿರುವ ಪಂಚಾಯತಿಯೊಂದು ಕಾನೂನುಬಾಹಿರವಾಗಿ ಸುಂಕ ವಸೂಲಿ ಮಾಡ್ತಿರೋದು ಶಿವನ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

ವರದಿ: ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ

ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ
ಆಂತರಿಕ ವಿಷಯಗಳ ಬಗ್ಗೆ ಮಾತಾಡಬಾರದೆಂದು ಸಮಿತಿ ಹೇಳಿದೆ: ಬಸನಗೌಡ ಯತ್ನಾಳ್
ಆಂತರಿಕ ವಿಷಯಗಳ ಬಗ್ಗೆ ಮಾತಾಡಬಾರದೆಂದು ಸಮಿತಿ ಹೇಳಿದೆ: ಬಸನಗೌಡ ಯತ್ನಾಳ್