ಅವರೆಕಾಳುಗಳಲ್ಲಿ ಸಮೃದ್ಧವಾಗಿರುವ ಪೋಷಕಾಂಶಗಳಿವೆ. ಇದು ಯಾವುದೇ ಹಣ್ಣು ಮತ್ತು ತರಕಾರಿಗಿಂತ ಕಡಿಮೆ ಏನಿಲ್ಲ. ಜೊತೆಗೆ ಇದರಲ್ಲಿರುವ ಕ್ಯಾಲೋರಿಗಳು ದೇಹವನ್ನು ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ. ಈ ಬಗೆಯ ಕಾಳುಗಳಲ್ಲಿ ವಿಟಮಿನ್ ಬಿ1, ಅಥವಾ ಥಿಯಮಿನ್, ಕಬ್ಬಿಣಾಂಶ, ತಾಮ್ರ, ರಂಜಕ, ಪೊಟಾಶಿಯಂ ಮತ್ತು ಮ್ಯೆಗ್ನಿಶಿಯಂಗಳು ಇರುತ್ತವೆ.