AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಂದಿ ಬೆಟ್ಟ, ಸ್ಕಂದಗಿರಿಧಾಮಕ್ಕೆ 4 ದಿನ ಪ್ರವಾಸಿಗರಿಗೆ ನಿರ್ಬಂಧ

ಜುಲೈ 2 ರಂದು ಚಿಕ್ಕಬಳ್ಳಾಪುರದ ನಂದಿ ಬೆಟ್ಟದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಾಲ್ಕು ನಂದಿ ಬೆಟ್ಟ ಮತ್ತು ಸ್ಕಂದಗಿರಿಧಾಮಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಸಭೆಯ ಭದ್ರತೆ ಮತ್ತು ವಾಹನ ದಟ್ಟಣೆಯನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಅತಿಥಿಗೃಹಗಳ ಕಾರ್ಯಾಚರಣೆಯನ್ನೂ ಸ್ಥಗಿತಗೊಳಿಸಲಾಗಿದೆ.

ನಂದಿ ಬೆಟ್ಟ, ಸ್ಕಂದಗಿರಿಧಾಮಕ್ಕೆ 4 ದಿನ ಪ್ರವಾಸಿಗರಿಗೆ ನಿರ್ಬಂಧ
ನಂದಿ ಬೆಟ್ಟ
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Edited By: |

Updated on:Jun 28, 2025 | 10:00 PM

Share

ಚಿಕ್ಕಬಳ್ಳಾಪುರ, ಜೂನ್​ 28: ಚಿಕ್ಕಬಳ್ಳಾಪುರ (Chikkaballapur) ತಾಲೂಕಿನ ನಂದಿ ಬೆಟ್ಟದಲ್ಲಿ (Nandi Hill) ಬುಧವಾರ (ಜುಲೈ 2) ರಂದು ರಾಜ್ಯ ಸಚಿವ ಸಂಪುಟ ಸಭೆ (Cabinet Meeting) ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಜೂನ್ 30ರ ಬೆಳಿಗ್ಗೆ 6 ಗಂಟೆಯಿಂದ ಜುಲೈ 3ರ ಮಧ್ಯಾಹ್ನ 2 ಗಂಟೆವರೆಗೂ ನಂದಿ ಬೆಟ್ಟ ಹಾಗೂ ಸ್ಕಂದಗಿರಿಧಾಮಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ.

2025ನೇ ಸಾಲಿನ 14ನೇ ಸಚಿವ ಸಂಪುಟ ಸಭೆಯು ಜುಲೈ 2 ರಂದು ಚಿಕ್ಕಬಳ್ಳಾಪುರ ತಾಲೂಕಿನ ವಿಶ್ವ ಪ್ರಸಿದ್ಧ ಪ್ರವಾಸಿ ತಾಣ ನಂದಿ ಬೆಟ್ಟದಲ್ಲಿ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಉಪ ಮುಖ್ಯಮಂತ್ರಿಗಳು, ಮಂತ್ರಿಗಳು, ಶಾಸಕರುಗಳು ಸೇರಿದಂತೆ ಆಯಾ ಇಲಾಖೆಯ ಅಧಿಕಾರಿಗಳು ಭಾಗಿಯಾಗುತ್ತಾರೆ. ಹೀಗಾಗಿ, ಮುಂಜಾಗೃತಾ ಕ್ರಮವಾಗಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳು ಜೂನ್ 30ರ ಬೆಳಿಗ್ಗೆ 6 ಗಂಟೆಯಿಂದ ಜುಲೈ 3ರ ಮಧ್ಯಾಹ್ನ 2 ಗಂಟೆವರೆಗೂ ನಂದಿ ಬೆಟ್ಟ ಹಾಗೂ ಸ್ಕಂದಗಿರಿಧಾಮಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧಿಸಿದ್ದಾರೆ.

ಇನ್ನು, ನಂದಿ ಬೆಟ್ಟದ ಮೇಲೆ ಇರುವ ಅತಿಥಿಗೃಹಗಳ ಕಾರ್ಯಾಚರಣೆ ಕೂಡ ಬಂದ್​ ಮಾಡಲಾಗಿದೆ. ನಂದಿ ಬೆಟ್ಟಕ್ಕೆ ಹೋಗಲು ಹಾಗೂ ಬರಲು ಒಂದೇ ರಸ್ತೆ ಇದ್ದು ವಾಹನ ದಟ್ಟಣೆ ಹೆಚ್ಚಾಗುತ್ತದೆ. ನಂದಿಬೆಟ್ಟದಲ್ಲಿ ಕಡಿದಾದ ತಿರುವುಗಳಿಂದ ಕೂಡಿದ ರಸ್ತೆಗಳಲ್ಲಿ ವಾಹನ ಮತ್ತು ಪ್ರವಾಸಿಗರನ್ನು ನಿಯಂತ್ರಿಸುವುದು ಕಷ್ಟ ಸಾದ್ಯ, ಈ ಹಿನ್ನೆಲೆಯಲ್ಲಿ ಪೊಲೀಸರು ನಂದಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸುವಂತೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಹೀಗಾಗಿ, ನಿರ್ಬಂಧ ವಿಧಿಸಲಾಗಿದೆ. ಚಾರಣಿಗರ ಅಚ್ಚುಮೆಚ್ಚಿನ ತಾಣ ಸ್ಕಂದಗಿರಿಗೂ ನಿರ್ಬಂಧ ವಿಧಿಸಲಾಗಿದೆ.

ಇದನ್ನೂ ಓದಿ
Image
ರೋಗಬಾಧೆ ನಡುವೆಯೂ ಗುಣಮಟ್ಟದ ದಾಳಿಂಬೆ ಬೆಳೆದು ಲಕ್ಷಾಧಿಪತಿಯಾದ ರೈತ
Image
ನಂದಿ ಬೆಟ್ಟದಲ್ಲಿ ಸಚಿವ ಸಂಪುಟ ಸಭೆಗೆ ಮತ್ತೆ ದಿನಾಂಕ ನಿಗದಿ
Image
ಅಪಾರ್ಟಮೆಂಟ್, ಕಂಪನಿಗಳಿಗೆ ತಾನು ಬೆಳೆದ ಮಾವು ರುಚಿ ಹಚ್ಚಿಸಿದ ರೈತ
Image
ಚಿಕ್ಕಬಳ್ಳಾಪುರದ ಹಲಸು ಬಲು ಸೊಗಸು: ಹೈದರಾಬಾದ್​​ನಲ್ಲೂ ಭಾರೀ ಡಿಮ್ಯಾಂಡ್

ಇದನ್ನೂ ಓದಿ: ರೈತರಿಗೆ ಮುಟ್ಟಿದ ನಂದಿನಿ ಹಾಲಿನ ದರ ಏರಿಕೆ ಹಣ: ಚಿಕ್ಕಬಳ್ಳಾಪುರದಲ್ಲಿ ಹರಿದ ಹಾಲಿನಹೊಳೆ

ರಾಜ್ಯ ಸಚಿವ ಸಂಪುಟದ ಎಪೇಕ್ಟ್​ನಿಂದ ಪ್ರಕೃತಿ ಪ್ರೀಯರು ಜೂನ್ 30ರಿಂದ ಜುಲೈ 3ರವರೆಗೂ ನಂದಿ ಬೆಟ್ಟ ಹಾಗೂ ಸ್ಕಂದಗಿರಿಧಾಮದತ್ತ ಮುಖ ಮಾಡದಿರುವುದು ಒಳಿತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:49 pm, Sat, 28 June 25

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ