ಅನೈತಿಕ ಸಂಬಂಧ: ಶಿಡ್ಲಘಟ್ಟದಲ್ಲಿ ಪತ್ನಿ ಇಬ್ಬರು ಪುತ್ರಿಯರಿಗೆ ಬೆಂಕಿ ಹಚ್ಚಿ ಸಾಯಿಸಿ, ತಾನೂ ವಿಷ ಕುಡಿದ ವ್ಯಕ್ತಿ

ಪತ್ನಿಯನ್ನು ಕೊಂದು ಇಬ್ಬರು ಮಕ್ಕಳಿಗೆ ಬೆಂಕಿ ಇಟ್ಟು ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ಸ್ಥಳೀಯರು ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.

ಅನೈತಿಕ ಸಂಬಂಧ: ಶಿಡ್ಲಘಟ್ಟದಲ್ಲಿ ಪತ್ನಿ ಇಬ್ಬರು ಪುತ್ರಿಯರಿಗೆ ಬೆಂಕಿ ಹಚ್ಚಿ ಸಾಯಿಸಿ, ತಾನೂ ವಿಷ ಕುಡಿದ ವ್ಯಕ್ತಿ
ಘಟನಾ ಸ್ಥಳ
Edited By:

Updated on: Feb 22, 2023 | 12:31 PM

ಚಿಕ್ಕಬಳ್ಳಾಪುರ: ಪತ್ನಿಯ ಅನೈತಿಕ ಸಂಬಂಧ ಆರೋಪ ಹಿನ್ನೆಲೆ ಪತ್ನಿ, ಇಬ್ಬರು ಮಕ್ಕಳಿಗೆ ಬೆಂಕಿ ಇಟ್ಟು ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಹೆಣ್ಣೂರು ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ವರ್ಷಿತಾ(12), ಸ್ನೇಹಾ(9) ಎಂಬ ಇಬ್ಬರು ಪುತ್ರಿಯರು, ಪತ್ನಿ ನೇತ್ರಾವತಿ(37) ಮೃತಪಟ್ಟಿದ್ದು ಪತಿ ಸೊನ್ನೇಗೌಡ(48) ಸ್ಥಿತಿ ಗಂಭೀರವಾಗಿದೆ. ಹೆಂಡತಿ ಮಕ್ಕಳನ್ನು ಸಾಯಿಸಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಸೊನ್ನೇಗೌಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಸದ್ಯ ಮನೆಯಲ್ಲಿ ಬೆಂಕಿ ಉರಿಯುತ್ತಿರುವುದನ್ನು ನೋಡಿ ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ಬೆಂಕಿ ಆರಿಸಿದ್ದಾರೆ. ಆದ್ರೆ ಅಷ್ಟೊತ್ತಿಗಾಗಲೇ ಮೂವರು ಮೃತಪಟ್ಟಿದ್ದಾರೆ. ವಿಷ ಸೇವಿಸಿ ಅಶ್ವಸ್ಥನಾಗಿದ್ದ ಸೊನ್ನೇಗೌಡನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಇನ್ನು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಸ್ಥಳಕ್ಕೆ ಎಸ್ಪಿ ಡಿ.ಎಲ್.ನಾಗೇಶ ಭೇಟಿ

ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್ಪಿ ಡಿ.ಎಲ್.ನಾಗೇಶ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರು ಹಾಗೂ ಮೃತಳ ಸಂಬಂಧಿಗಳಿಂದ ಮಾಹಿತಿ ಪಡೆದಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:04 am, Wed, 22 February 23