AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Coriander Crop: ಆ ಬಡ ರೈತ 1 ಎಕರೆ ಜಮೀನಿನಲ್ಲಿ ಹನಿ ನೀರಾವರಿ ಮೂಲಕ ಕಷ್ಟಪಟ್ಟು ಕೊತ್ತಂಬರಿ ಸೊಪ್ಪು ಬೆಳೆದಿದ್ದ, ಮುಂದೇನಾಯ್ತು?

Pesticides: ರೈತನ ಮೇಲಿನ ದ್ವೇಷವೊ... ಇಲ್ಲಾ ಜಮಿನು ವಿವಾದವೊ ಗೊತ್ತಿಲ್ಲ. ಆದ್ರೆ ಬೆಳೆದು ನಿಂತಿದ್ದ ಕೊತ್ತಂಬರಿ ಸೊಪ್ಪುವಿನ ಮೇಲೆ ಕಳೆನಾಶಕ ಸಿಂಪಡಣೆ ಮಾಡಿ, ರೈತನ ಕಣ್ಣಲ್ಲಿ ನೀರು ತರಿಸಿದ್ದು ಮಾತ್ರ ವಿಪರ್ಯಾಸ.

Coriander Crop: ಆ ಬಡ ರೈತ 1 ಎಕರೆ ಜಮೀನಿನಲ್ಲಿ ಹನಿ ನೀರಾವರಿ ಮೂಲಕ ಕಷ್ಟಪಟ್ಟು ಕೊತ್ತಂಬರಿ ಸೊಪ್ಪು ಬೆಳೆದಿದ್ದ, ಮುಂದೇನಾಯ್ತು?
ಬೆಳೆದು ನಿಂತಿದ್ದ ಕೊತ್ತಂಬರಿ ಸೊಪ್ಪುವಿನ ಮೇಲೆ ಕಳೆನಾಶಕ ಸಿಂಪಡಣೆ
TV9 Web
| Updated By: ಸಾಧು ಶ್ರೀನಾಥ್​|

Updated on: Jan 27, 2023 | 2:28 PM

Share

ಆತ ಬಡ ರೈತ (Farmer), ತನಗಿರುವ ಒಂದು ಎಕರೆ ಜಮೀನಿನಲ್ಲಿ ಹನಿ ನೀರಾವರಿ ಮೂಲಕ ಕಷ್ಟಪಟ್ಟು ಕೊತ್ತಂಬರಿ ಸೊಪ್ಪು (Coriander Crop) ಬೆಳೆದಿದ್ದ. ಇನ್ನೇನು ಒಂದು ದಿನ ಬಿಟ್ಟಿದ್ರೆ… ಕಟಾವು ಮಾಡಿ ಮಾರುಕಟ್ಟೆಗೆ ಹಾಕಬೇಕಿತ್ತು. ಅಷ್ಟರಲ್ಲೆ… ಅದ್ಯಾರ ಕಣ್ಣು ಬಿತ್ತೊ ಏನೋ… ರಾತ್ರೋರಾತ್ರಿ ಕೊತ್ತಂಬರಿ ತೋಟಕ್ಕೆ ವಿಷ ಸಿಂಪಡಣೆ ಮಾಡಿದ್ದಾರೆ. ಇದ್ರಿಂದ ತೋಟದಲ್ಲಿದ್ದ ಕೊತ್ತಂಬರಿ ಸೊಪ್ಪು ಒಣಗಿ ಹೋಗಿದೆ. ಈ ಕುರಿತು ಒಂದು ವರದಿ. ಹುಲುಸಾಗಿ ಬೆಳೆದು ನಿಂತ ಕೊತ್ತಂಬರಿ ಸೊಪ್ಪಿನ ಮೇಲೆ ವಕ್ರದೃಷ್ಟಿ ಬೀರಿದ ದುಷ್ಕರ್ಮಿಗಳು (Miscreants) ಕಟಾವಿಗೆ ಬಂದಿದ್ದ ಕೊತ್ತಂಬರಿ ಸೊಪ್ಪಿನ ತೋಟಕ್ಕೆ ಕಳೆನಾಶಕ ಸಿಂಪಡಣೆ ಮಾಡಿ (Pesticides) ರೈತನ ಕಣ್ಣಲ್ಲಿ ನೀರು ಹಾಕಿಸಿರುವುದು ಚಿಕ್ಕಬಳ್ಳಾಪುರ (Chikkaballapur) ತಾಲೂಕಿನ ಪೆಸಲಪರ್ತಿ ಗ್ರಾಮದ ಬಡ ರೈತ ಶ್ರೀನಿವಾಸ್ ತೋಟದಲ್ಲಿ.

ಹೌದು! ಶ್ರೀನಿವಾಸ್ ತನ್ನ ಒಂದು ಎಕರೆ 27 ಗುಂಟೆ ಜಮೀನಿನಲ್ಲಿ 50 ಸಾವಿರ ರೂಪಾಯಿ ಬಂಡವಾಳ ಹಾಕಿ ಹನಿ ನೀರಾವರಿ ಮೂಲಕ ಕೊತ್ತಂಬರಿ ಸೊಪ್ಪು ಬೆಳೆದಿದ್ದ, ಮಾರುಕಟ್ಟೆಯಲ್ಲಿ ಒಳ್ಳೆ ಬೆಲೆ ಇತ್ತು, ಒಂದೂವರೆ ಲಕ್ಷ ರೂಪಾಯಿಗೆ ಕೊತ್ತಂಬರಿ ಸೊಪ್ಪು ತೋಟ ಮಾರಾಟ ಮಾಡಿದ್ದ. ಗುತ್ತಿಗೆ ಪಡೆದವರು ಆಗಮಿಸಿ ಕೊತ್ತಂಬರಿ ಸೊಪ್ಪು ಕೀಳುವುದಕ್ಕೂ ಮುನ್ನ ದುಷ್ಕರ್ಮಿಗಳು ತೋಟಕ್ಕೆ ಕಳೆನಾಶಕ ಸಿಂಪಡಣೆ ಮಾಡಿದ್ದಾರೆ. ಇದ್ರಿಂದ ಬೆಳೆದು ನಿಂತಿದ್ದ ಕೊತ್ತಂಬರಿ ಸೊಪ್ಪು ಒಣಗಿದೆ.

ಶ್ರೀನಿವಾಸ್ ತೋಟದಲ್ಲಿ ಬೆಳೆದಿದ್ದ ಕೊತ್ತಂಬರಿ ಸೊಪ್ಪುನ್ನು ಗುತ್ತಿಗೆ ಪಡೆದಿದ್ದ, ಕೊತ್ತಂಬರಿ ಸೊಪ್ಪು ವ್ಯಾಪಾರಿ ಶ್ರೀಧರ್ ಏನು ಮಾಡಬೇಕು ಎಂದು ದಿಕ್ಕು ತೋಚುತ್ತಿಲ್ಲ. ಒಂದು ಎಕರೆಯಲ್ಲಿ ಬಹುತೇಕ ಕೊತ್ತಂಬರಿ ಸೊಪ್ಪು ಬೆಳೆಗೆ ಕಳೆನಾಶಕ ಸಿಂಪಡಣೆ ಮಾಡಿದ್ದಾರೆ. ಉಳಿದ ಕೊತ್ತಂಬರಿ ಸೊಪ್ಪನ್ನು ಕೀಳುತ್ತಿದ್ದೇವೆ. ಹಾಕಿದ ಬಂಡವಾಳ ಬರಲ್ಲ. ರೈತ ಮುಂಗಡ ಹಣ ವಾಪಸ್ ಕೊಡುವುದಿಲ್ಲ ಎನ್ನುತ್ತಿದ್ದಾನೆ ಅಂತಾ ತನ್ನ ಅಳಲು ತೋಡಿಕೊಂಡಿದ್ದಾರೆ.

ರೈತನ ಮೇಲಿನ ದ್ವೇಷವೊ… ಇಲ್ಲಾ ಜಮಿನು ವಿವಾದವೊ ಗೊತ್ತಿಲ್ಲ. ಆದ್ರೆ ಬೆಳೆದು ನಿಂತಿದ್ದ ಕೊತ್ತಂಬರಿ ಸೊಪ್ಪುವಿನ ಮೇಲೆ ಕಳೆನಾಶಕ ಸಿಂಪಡಣೆ ಮಾಡಿ, ರೈತನ ಕಣ್ಣಲ್ಲಿ ನೀರು ತರಿಸಿದ್ದು ಮಾತ್ರ ವಿಪರ್ಯಾಸ.

ವರದಿ: ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ

ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ