ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ತಾಲೂಕಿನ ಗ್ರಾಮ ವಾಟದಹೊಸಹಳ್ಳಿಯಲ್ಲಿ ಪರ್ವಿನಾ ಎಂಬಾಕೆಯ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಪರ್ವಿನಾ ಬಾನು ಸಾವು ಪ್ರಕರಣದ ತನಿಖೆ ಒಂದು ಹಂತ ತಲುಪಿದೆ. ಈ ವೇಳೆ, ದುಷ್ಕೃತ್ಯಕ್ಕೆ ಕುಟುಂಬದ ಸದಸ್ಯರೇ ಕಾರಣ ಎಂಬ ವಿಚಾರ ಬಯಲಾಗಿದೆ. ಹೆತ್ತ ತಂದೆ, ತಾಯಿ, ದೊಡ್ಡಪ್ಪನಿಂದಲೇ ಪರ್ವಿನಾ ಕೊಲೆ ನಡೆಸಲಾಗಿರುವ ಅಂಶ ಬೆಳಕಿಗೆ ಬಂದಿದೆ.
ಸ್ವತಃ ಪೋಷಕರೇ ಕೊಲೆ ಮಾಡಿ ಪರ್ವೀನಾಳನ್ನು ಬಾವಿಗೆ ಬಿಸಾಡಿರುವ ವಿಚಾರ ಬಯಲಾಗಿದೆ. ವಾಟದಹೊಸಹಳ್ಳಿಯಲ್ಲಿ ಪರ್ವಿನಾ ಕೊಲೆ ಮಾಡಲಾಗಿತ್ತು. ಪರ್ವಿನಾ, ತನ್ನ ಪತಿ ಮೃತಪಟ್ಟ ಬಳಿಕ ಮತ್ತೊಬ್ಬರ ಜತೆ ಸಂಬಂಧ ಇಟ್ಟುಕೊಂಡಿದ್ದಳು. ದಿನಕ್ಕೊಬ್ಬರಂತೆ ಸಂಬಂಧ ಇಟ್ಟುಕೊಳ್ಳುತ್ತಿದ್ದ ಆರೋಪ ಕೇಳಿಬಂದಿತ್ತು. ಇದರಿಂದ ಮರ್ಯಾದೆ ಹೋಗುತ್ತಿದೆ ಎಂದು ಪೋಷಕರು ಮಗಳನ್ನೇ ಹತ್ಯೆಗೈದಿರುವ ವಿಚಾರ ಬಯಲಾಗಿದೆ. ಗುಲ್ಜರ್, ಪೈಯಾಜ್, ಪ್ಯಾರೆಜಾನ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಗೌರಿಬಿದನೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಸ್ವತಃ ತಂದೆ ತಾಯಿ ಹಾಗೂ ದೊಡ್ಡಪ್ಪ ಸೇರಿಕೊಂಡು ಮಗಳನ್ನು ಕೊಲೆ ಮಾಡಿದ್ದರು. ಕೊಲೆ ಕೃತ್ಯ ನಡೆಸಿ ಮೃತದೇಹವನ್ನು ಪಾಳು ಬಾವಿಯೊಂದರಲ್ಲಿ ಎಸೆದಿದ್ದರು. ವಾಟದಹೊಸಹಳ್ಳಿ ಗ್ರಾಮದ ಪಾಳು ಬಾವಿಯಲ್ಲಿ ಪರ್ವಿನಾ ಶವ ಪತ್ತೆಯಾಗಿತ್ತು. ಹಗ್ಗದಿಂದ ಪರ್ವಿನಾ ಕತ್ತು ಹಿಸುಕಿ ಕೊಲೆ ಮಾಡಿ ಶವ ಬಿಸಾಡಿರುವ ಮಾಹಿತಿ ತಿಳಿದುಬಂದಿತ್ತು. ಇದೇ ತಿಂಗಳ 5 ರಂದು ಪರ್ವಿನಾ ಶವವಾಗಿ ಪತ್ತೆಯಾಗಿದ್ದಳು. ಗೌರಿಬಿದನೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಇದೀಗ ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಮಡಿಕೇರಿ: ಆಸ್ತಿ ಆಸೆಗೆ ವಿಕಲಚೇತನ ವ್ಯಕ್ತಿಯನ್ನೇ ಕೊಲೆಗೈದ ಚಿಕ್ಕಪ್ಪ; ಆರೋಪಿಗಳನ್ನು ಬಂಧಿಸಿದ ಪೊಲೀಸರು