ಪರ್ಸೆಂಟ್​ ಲೆಕ್ಕಾಚಾರ ಇಲ್ಲಿದೆ! ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಮಂಜೂರಾದ ಬಾಕಿ ಬಿಲ್ ಕಮೀಷನ್‍ಗಾಗಿ ಯುದ್ದವೇ ನಡೆಯುತ್ತಿದೆ

percentage commission calculation! ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ 25 % ಕಮೀಷನ್ ಲಂಚಾವತಾರದಲ್ಲಿ ಜಿಲ್ಲಾ ಸರ್ಜನ್‍ಗೆ 10%, ನಿವಾಸಿ ವೈದ್ಯಾಧಿಕಾರಿಗಳಿಗೆ 5%, ಆಸ್ಪತ್ರೆಯ ಸೂಪರಿಂಡೆಂಟ್‍ಗೆ 4% ಹಾಗೂ ಆಸ್ಪತ್ರೆಯ ಗುಮಾಸ್ತರಿಗೆ 2% ಸೇರಿದೆ ಎನ್ನುವ ಸುಳಿವು ದೊರೆತಿದೆ. ಟಿವಿ9 ಕನ್ನಡ ಡಿಜಿಟಲ್‍ಗೆ ಖಚಿತ ಮಾಹಿತಿಯನ್ನು ಸ್ವತಃ ಆಸ್ಪತ್ರೆಯ ಸಿಬ್ಬಂದಿಯೇ ನೀಡಿದ್ದಾರೆ.

ಪರ್ಸೆಂಟ್​ ಲೆಕ್ಕಾಚಾರ ಇಲ್ಲಿದೆ! ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಮಂಜೂರಾದ ಬಾಕಿ ಬಿಲ್ ಕಮೀಷನ್‍ಗಾಗಿ ಯುದ್ದವೇ ನಡೆಯುತ್ತಿದೆ
ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ನಡೆಯುತಿರುವ ಪರ್ಸೆಂಟ್​ ಲೆಕ್ಕಾಚಾರ
Follow us
| Updated By: ಸಾಧು ಶ್ರೀನಾಥ್​

Updated on: Oct 09, 2023 | 1:18 PM

ಚಿಕ್ಕಬಳ್ಳಾಪುರ, ಅಕ್ಟೋಬರ್​ 9 : ಬಡಪಾಯಿ ಮಹಿಳೆಯರ ಹೆರಿಗೆ ಮಾಡಿಸಲು ಲಂಚಕ್ಕೆ ಕೈಚಾಚಿ ಸಿಕ್ಕಿಬಿದ್ದ ಪ್ರಕರಣ ತನಿಖೆ ನಡೆಯುತ್ತಿರುವಾಗಲೇ ಆ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯುತ್ತಿರುವ (Chikkaballapur district hospital) ಅವ್ಯವಹಾರಗಳು, ಅಕ್ರಮಗಳು ಒಂದೊಂದೆ ಬಯಲಾಗುತ್ತಿವೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವೈದ್ಯಕೀಯ ಶಿಕ್ಷಣ ಇಲಾಖೆಗೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ನಿರ್ವಹಣೆಯನ್ನು ವಹಿಸಿದ ನಂತರ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಹಾಗೂ ನಡೆದಿರುವ ಅವ್ಯವಹಾರಗಳು, ಅಕ್ರಮಗಳು, ಭ್ರಷ್ಟಾಚಾರ ಪ್ರಕರಣಗಳು (corruption) ಬಯಲಾಗುತ್ತಿವೆ. ಟಿವಿ9 ಕನ್ನಡ ಡಿಜಿಟಲ್ ವರದಿಯ ಸರಣಿ ಆರಂಭಿಸಿದ ನಂತರ ಈಗಾಗಲೇ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರು ಆಸ್ಪತ್ರೆಯ ಕರ್ಮಕಾಂಡಗಳ ( percentage commission calculation) ಬಗ್ಗೆ ತನಿಖೆಗೆ ಸೂಚಿಸಿದ್ದಾರೆ. ಈ ಮದ್ಯೆ ಟಿವಿ9 ಕನ್ನಡ ಡಿಜಿಟಲ್‍ಗೆ ಮತ್ತೊಂದು ಹಗರಣದ ಖಚಿತ ಸುಳಿವು ದೊರೆತಿದ್ದು ಸಾರ್ವಜನಿಕರ ಮುಂದಿಡಲು ಬಯಸಿದೆ.

Chikkaballapur district hospital -4.56 ಕೋಟಿ ಬಾಕಿ ಬಿಲ್ ಬಿಡುಗಡೆಗೆ ಸರ್ಕಸ್

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವೈದ್ಯಕೀಯ ಶಿಕ್ಷಣ ಇಲಾಖೆಗೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ನಿರ್ವಹಣೆಯನ್ನು ವಹಿಸಿದಕ್ಕೂ ಮೊದಲು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆಂದು ಖರೀದಿಸಿರುವ ಔಷಧಿಗಳು, ಲ್ಯಾಬ್ ರೀಏಜೆಂಟ್ ಕೆಮಿಕಲ್ಸ್‍ಗಳು ಸೇರಿದಂತೆ ವಿದ್ಯುತ್ ಬಾಕಿ ಬಿಲ್ ಬರೋಬ್ಬರಿ 4.56 ಕೋಟಿ ಬಾಕಿ ಇದೆ. ಆದರೆ 2.67 ಕೋಟಿ ಮೌಲ್ಯದ ಔಷಧಿಗಳು ಹಾಗೂ ಸರ್ಜರಿ ಸಾಮಾಗ್ರಿಗಳ ಖರೀದಿ ಮಾಡಲಾಗಿದೆ. ಇದರ ಜೊತೆಗೆ 1 ಕೋಟಿ ರೂಪಾಯಿ ಮೌಲ್ಯದ ಲ್ಯಾಬ್ ರೀಏಜೆಂಟ್‍ಗಳ ಖರೀದಿ ಮಾಡಲಾಗಿದ್ದು, ಆದರೆ 4.56 ಕೋಟಿ ರೂಪಾಯಿಗಳ ಖರೀದಿಯಲ್ಲಿ ಅವ್ಯವಹಾರ, ಭ್ರಷ್ಟಾಚಾರ ನಡೆದಿರುವ ಆರೋಪ ಕೇಳಿಬಂದಿದೆ.

Chikkaballapur district hospital -ಬಿಲ್ ಹಣ ಬಿಡುಗಡೆಗೂ ಮುನ್ನವೇ ಅಡ್ವಾನ್ಸ್ ಕಮೀಷನ್ ಪಡೆದ ಆರೋಪ

ರೂ. 2.67 ಕೋಟಿ ಮೌಲ್ಯದ ಔಷಧಿಗಳು ಹಾಗೂ ಸರ್ಜರಿ ಸಾಮಾಗ್ರಿಗಳ ಖರೀದಿ ಹಾಗೂ ಇದರ ಜೊತೆಗೆ 1 ಕೋಟಿ ರೂಪಾಯಿ ಮೌಲ್ಯದ ಲ್ಯಾಬ್ ರೀಏಜೆಂಟ್‍ಗಳ ಖರೀದಿ ಮಾಡಲಾಗಿದೆ. ಗೌರಿಬಿದನೂರು, ಚಿಂತಾಮಣಿ, ಚಿಕ್ಕಬಳ್ಳಾಪುರಕ್ಕೆ ಸೇರಿದ 3 ಜನ ಗುತ್ತಿಗೆದಾರರಿಂದ ಬಾಕಿ ಬಿಲ್ ಬಿಡುಗಡೆಗೂ ಮುನ್ನವೇ 25% ಕಮೀಷನ್ ಲಂಚ ಒಪ್ಪಂದ ಮಾಡಿಕೊಂಡು, ಅದರಲ್ಲಿ ವೈಯಕ್ತಿಕ ಕಾರು ಖರೀದಿ ಸೇರಿದಂತೆ ಅರ್ಧದಷ್ಟು ಕಮೀಷನ್ ಸಹಾ ಪಡೆದ ಆರೋಪ ಕೇಳಿಬಂದಿದೆ. ಆ ಸಮಯದಲ್ಲಿ ಕರ್ತವ್ಯದಲ್ಲಿದ್ದ ಜಿಲ್ಲಾ ಸರ್ಜನ್ ನಿವಾಸಿ ವೈದ್ಯಾಧಿಕಾರಿಗಳು ಸೇರಿದಂತೆ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದು, ಟಿವಿ9 ಕನ್ನಡ ಡಿಜಿಟಲ್‍ಗೆ ಖಚಿತ ಮಾಹಿತಿಯನ್ನು ಸ್ವತಃ ಆಸ್ಪತ್ರೆಯ ಸಿಬ್ಬಂದಿಗಳೇ ಬಯಲು ಮಾಡಿದ್ದಾರೆ.

Chikkaballapur district hospital -ಕಮೀಷನ್ ದಂಧೆ ಯಾವ ರೀತಿ ನಡೆದಿದೆ

ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ ಎನ್ನಲಾದ 25 % ಕಮೀಷನ್ ಲಂಚಾವತಾರದಲ್ಲಿ ಜಿಲ್ಲಾ ಸರ್ಜನ್‍ಗೆ 10%, ನಿವಾಸಿ ವೈದ್ಯಾಧಿಕಾರಿಗಳಿಗೆ 5%, ಆಸ್ಪತ್ರೆಯ ಸೂಪರಿಂಡೆಂಟ್‍ಗೆ 4% ಹಾಗೂ ಸ್ಟಾಕ್ ಇಲ್ಲದೇ ಮೆಡಿಸಿನ್ ಪಡೆದುಕೊಂಡಿರುವುದಾಗಿ ಒಪ್ಪಿಕೊಂಡು ನಕಲಿ ಬಿಲ್‍ಗೆ ಅನುಮೋದನೆ ನೀಡಿದ್ದಕ್ಕೆ ಫಾರ್ಮಾಸಿಸ್ಟ್‍ಗೆ 3%, ಆಸ್ಪತ್ರೆಯ ಗುಮಾಸ್ತರಿಗೆ 2% ಸೇರಿದೆ ಎನ್ನುವ ಸುಳಿವು ದೊರೆತಿದೆ.

ಇದನ್ನೂ ಓದಿ:ಟಿವಿ9 ವರದಿ ಫಲಶ್ರುತಿ: ಚಿಕ್ಕಬಳ್ಳಾಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ನ್ಯಾಯಾಧೀಶರು ಹಾಗೂ ಲೋಕಾಯುಕ್ತ ಅಧಿಕಾರಿಗಳ ಭೇಟಿ!

ಒಟ್ಟಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಬಡರೋಗಿಗಳಿಗೆ ಚಿಕಿತ್ಸೆ ನೀಡುವುದರಲ್ಲಿ ಬಡ ರೋಗಿಗಳ ಹೆಸರಿನಲ್ಲಿ ಆಸ್ಪತ್ರೆಯ ವೈದ್ಯರು, ಅಧಿಕಾರಿಗಳು, ಸಿಬ್ಬಂದಿಗಳು ಹಗರಣ ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಸರ್ಕಾರ ತನಿಖೆ ನಡೆಸಬೇಕಾಗಿದೆ.

Chikkaballapur district hospital -ಬಾಕಿ ಬಿಲ್‍ಗೆ ವೈದ್ಯಕೀಯ ಶಿಕ್ಷಣ ಇಲಾಖೆಯ ಸರ್ಕಸ್

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವೈದ್ಯಕೀಯ ಶಿಕ್ಷಣ ಇಲಾಖೆಗೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ನಿರ್ವಹಣೆಯನ್ನು ವಹಿಸಿದ ನಂತರ ಬಹುತೇಕ ಔಷಧಿಗಳು, ಓ.ಟಿ. ಸಲಕರಣೆಗಳು ಖಾಲಿಯಾಗಿವೆ. ಮತ್ತೊಂದಡೆ ಈ ಹಿಂದೆ ಬಾಕಿ ಇರುವ 4.56 ಕೋಟಿ ಹಣ ಬಿಡುಗಡೆಯಾಗಿಲ್ಲ. ಇದರಿಂದ ಈಗ ವೈದ್ಯಕೀಯ ಶಿಕ್ಷಣ ಇಲಾಖೆ ಬಾಕಿ ಬಿಲ್ ಬಿಡುಗಡೆ ಮಾಡಿಸಿಕೊಳ್ಳಲು ಹರಸಾಹಸ ಮಾಡುತ್ತಿದೆ. ನಂದಿ ಸರ್ಕಾರಿ ವೈದ್ಯಕೀಯ ಕಾಲೇಜಿನ ನಿರ್ದೇಶಕ ಹಾಗೂ ಡೀನ್ ಡಾ|| ಮಂಜುನಾಥ್ ಕಡತವನ್ನಿಟ್ಟುಕೊಂಡು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವೈದ್ಯಕೀಯ ಶಿಕ್ಷಣ ಇಲಾಖೆಗೆ ದುಂಬಾಲು ಬಿದ್ದಿದ್ದಾರೆ. ಜೊತೆಗೆ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಎಂ.ಸಿ.ಸುಧಾಕರ್ ರವರನ್ನು ಪಟ್ಟು ಹಿಡಿದು ಬಾಕಿ ಬಿಲ್ ಮಂಜೂರು ಮಾಡಿಸಿದ್ದಾರೆ.

Chikkaballapur district hospital -ಮಂಜೂರಾಗಿರುವ ಬಾಕಿ ಬಿಲ್ ಕಮೀಷನ್‍ಗೆ ಮುಸುಕಿನ ಗುದ್ದಾಟ

ಕೊನೆಗೂ ಹರಸಾಹಸ ಪಟ್ಟು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಎಂ.ಸಿ.ಸುಧಾಕರ್ ರವರ ಮೂಲಕ ಬಾಕಿ ಇರುವ 4.56 ಕೋಟಿ ಬಿಲ್ ಮಂಜೂರು ಮಾಡಿಸಿದ್ದಾರೆ. ಬದಲಾದ ಪರಿಸ್ಥಿತಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಬದಲು ವೈದ್ಯಕೀಯ ಶಿಕ್ಷಣ ಇಲಾಖೆ ಆಸ್ಪತ್ರೆಯನ್ನು ನಿರ್ವಹಿಸುತ್ತಿದೆ. ಇದರಿಂದ 2 ಇಲಾಖೆಗಳ ಸಂಬಂಧಿಸಿದ ಅಧಿಕಾರಿಗಳ ಮಧ್ಯೆ ಕಮೀಷನ್‍ಗಾಗಿ ಮುಸುಕಿನ ಗುದ್ದಾಟ ನಡೆಯುತ್ತಿದೆ. ನನಗೆಷ್ಟು… ನಿನಗೆಷ್ಟು… ಎನ್ನುವ ಮುಸುಕಿನ ಗುದ್ದಾಟ ನಡೆದಿದ್ದು, ಮಾತಿನ ವಾಕ್ಸಮರ ನಡೆದಿದೆಯಂತೆ. ಇದರಿಂದ ಸರ್ಕಾರ ತನಿಖೆ ನಡೆಸಿದರೆ ಲಂಚಾವತಾರ ಬಯಲಾಗಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್  ಮಾಡಿ

ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ