ಕಾರ್ಮಿಕ ಮಹಿಳೆ ಮೇಲೆ ಪಿಎಸ್ಐ ದರ್ಪ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

ಕಾರ್ಮಿಕ ಮಹಿಳೆ ಮೇಲೆ ಪಿಎಸ್ಐ ದರ್ಪ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
ಕಾರ್ಮಿಕ ಮಹಿಳೆ ಮೇಲೆ ಪಿಎಸ್ಐ ದರ್ಪ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

ಅನೈತಿಕ ಸಂಬಂಧ ಹಿನ್ನೆಲೆ ಮಹಿಳೆಯನ್ನು ಠಾಣೆಗೆ ಕರೆತಂದು ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಒರಿಸ್ಸಾ ಮೂಲದ ಮಹಿಳೆ ದಿಬ್ಬೂರಹಳ್ಳಿ ಬಳಿ ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡ್ತಿದ್ದಳು

TV9kannada Web Team

| Edited By: Ayesha Banu

Dec 23, 2021 | 1:56 PM

ಚಿಕ್ಕಬಳ್ಳಾಫುರ: ಕಾರ್ಮಿಕ ಮಹಿಳೆ ಮೇಲೆ ಪೊಲೀಸ್ ಅಧಿಕಾರಿ ಹಲ್ಲೆ ನಡೆಸಿರುವ ಘಟನೆ ನಡೆದಿದ್ದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚಿಕ್ಕಬಳ್ಳಾಫುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಪಾಪಣ್ಣ ಕಾರ್ಮಿಕ ಮಹಿಳೆಯನ್ನು ಥಳಿಸಿರುವ ಆರೋಪ ಕೇಳಿ ಬಂದಿದೆ.

ಅನೈತಿಕ ಸಂಬಂಧ ಹಿನ್ನೆಲೆ ಮಹಿಳೆಯನ್ನು ಠಾಣೆಗೆ ಕರೆತಂದು ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಒರಿಸ್ಸಾ ಮೂಲದ ಮಹಿಳೆ ದಿಬ್ಬೂರಹಳ್ಳಿ ಬಳಿ ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡ್ತಿದ್ದಳು. ಮಹಿಳೆ ಬಗ್ಗೆ ಅನೈತಿಕ ಸಂಬಂಧ ಕುರಿತು ಮೌಕಿಕ ದೂರಿನ ಮೇಲೆ ಮಹಿಳೆಯನ್ನು ಕರೆ ತಂದ ಪಿಎಸ್ಐ ಪಾಪಣ್ಣ ಮಹಿಳೆ ಎನ್ನುವುದನ್ನೂ ಲೆಕ್ಕಿಸದೆ ಮನ ಬಂದಂತೆ ಥಳಿಸಿದ್ದಾರೆ.

ನೆಲದ ಮೇಲೆ ಕುರಿಸಿ ಲಾಠಿಯಿಂದ ಪಾದಗಳಿಗೆ ಹೊಡೆದಿದ್ದಾರೆ. ಪೊಲೀಸ್ ಕಾನ್ಸ್ಟೇಬಲ್ ಮಹಿಳೆಯನ್ನು ಬೂಟು ಕಾಲಿಗಳಿಂದ ಹಲ್ಲೆ ಮಾಡಿದ್ದಾರೆ. ಸದ್ಯ ಪಿಎಸ್ಐ ಪಾಪಣ್ಣ ಕೃತ್ಯದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಾರ್ವಜನಿಕರು ಪೊಲೀಸ್ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಹಲ್ಲೆಗೆ ಒಳಗಾದ ಮಹಿಳೆ ಸುಲೋಚನಾ ಕೆಲಸ ಮಾಡುತ್ತಿದ್ದ ಇಟ್ಟಿಗೆ ಕಾರ್ಖಾನೆಯಲ್ಲಿ ಆಕೆಯ ಸಂಬಂಧಿ, ಪರಿಚಿತ ವ್ಯಕ್ತಿ ಕೂಡ ಕೆಲಸ ಮಾಡುತ್ತಿದ್ದ. ಸುಲೋಚನಾ ತನ್ನ ಗಂಡ ಮಾಧವ್ ಪ್ರತಿ ದಿನ ಕುಡಿದು ಬಂದು ಹಲ್ಲೆ ನಡೆಸುವುದಾಗಿ ಹೇಳಿ ಆಕೆ ತನ್ನ ಸಂಬಂಧಿಯ ಜೊತೆ ಬಂದಿದ್ದಳು. ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರೂ ನಾಪತ್ತೆಯಾಗ ಕಾರಣ ಇಟ್ಟಿಗೆ ಕಾರ್ಖಾನೆ ಮಾಲೀಕ ಡಿ.ಜಿ ರಾಮಚಂದ್ರ ಈ ಬಗ್ಗೆ ದೂರು ದಾಖಲಿಸಿದ್ದರು. ಬಳಿಕ ಎರಡು ದಿನ ಕಳೆದ ನಂತರ ಇಬ್ಬರನ್ನೂ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ಬುದ್ದಿ ಹೇಳುವ ಕೆಲಸ ನಡೆದಿತ್ತು. ಮಹಿಳೆಗೆ ಮೂರು ಜನ ಮಕ್ಕಳಿದ್ದು ಅನ್ಯ ಪುರುಷನೊಂದಿಗೆ ಹೋಗುವುದು ಸರಿ ಇಲ್ಲ.

ವಾಪಾಸ್ ಗಂಡನ ಬಳಿಯೇ ಹೋಗುವಂತೆ ಎಚ್ಚರಿಕೆ ನೀಡಲಾಗಿತ್ತು. ಆದ್ರೆ ಮಹಿಳೆ ಇದಕ್ಕೆ ಒಪ್ಪಲಿಲ್ಲ. ಹಾಗೂ ಇದೇ ವೇಳೆ ವ್ಯಕ್ತಿಯನ್ನು ವಿಚಾರಿಸಿದಾಗ ಆತ ನನ್ನ ಹಾಗೂ ಸುಲೋಚನಾಳ ನಡುವೆ ಯಾವುದೇ ಅನೈತಿಕ ಸಂಬಂಧ ಇಲ್ಲ. ಆಕೆಯ ಗಂಡ ಕುಡಿದು ಬಂದು ಹಲ್ಲೆ ಮಾಡ್ತಾನೆ ಎಂದು ನನ್ನ ಜೊತೆಯೇ ಇರುವುದಾಗಿ ಕೇಳಿದ್ಳು ಅದಕ್ಕಾಗಿ ಆಕೆಯನ್ನು ಕರೆದುಕೊಂಡು ಬಂದೆ. ಬೇಕಾದ್ರೆ ಆಕೆಯನ್ನು ಆಕೆಯ ಗಂಡನ ಬಳಿಯೇ ಕಳಿಸಿ ಎಂದು ವ್ಯಕ್ತಿ ತಿಳಿಸಿದ್ದಾನೆ. ತನ್ನ ಗಂಡನ ಬಳಿ ಮರಳಲು ನಿರಾಕರಿದ ಮಹಿಳೆಯನ್ನು ಪಿಎಸ್​ಐ ಪಾಪಣ್ಣ ಮತ್ತು ಪೊಲೀಸ್ ಕಾನ್ಸ್ಟೇಬಲ್ ಹಲ್ಲೆ ಮಾಡಿದ್ದಾರೆ. ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸದ್ಯ ಘಟನೆ ಸಂಬಂಧ ಮಾನವ ಹಕ್ಕುಗಳು ಮತ್ತು ಮಾಧ್ಯಮ ಸಂಘಟನೆ ಪೊಲೀಸ್ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದು ಮಹಿಳೆ ಮೇಲಿನ ಹಲ್ಲೆ ಖಂಡಿಸಿದ್ದಾರೆ.

ಇದನ್ನೂ ಓದಿ: ಮತ್ತೊಂದು ಹಾಡಿನ ಮೂಲಕ ಸೌಂಡು ಮಾಡಲು ಸಜ್ಜಾದ ‘ಆರ್​ಆರ್​ಆರ್​’: ಜ್ಯೂ. ಎನ್​ಟಿಆರ್​ ಫ್ಯಾನ್ಸ್​ ಕಾತರ

Follow us on

Related Stories

Most Read Stories

Click on your DTH Provider to Add TV9 Kannada