ಮತ್ತೊಂದು ಹಾಡಿನ ಮೂಲಕ ಸೌಂಡು ಮಾಡಲು ಸಜ್ಜಾದ ‘ಆರ್​ಆರ್​ಆರ್​’: ಜ್ಯೂ. ಎನ್​ಟಿಆರ್​ ಫ್ಯಾನ್ಸ್​ ಕಾತರ

ಮತ್ತೊಂದು ಹಾಡಿನ ಮೂಲಕ ಸೌಂಡು ಮಾಡಲು ಸಜ್ಜಾದ ‘ಆರ್​ಆರ್​ಆರ್​’: ಜ್ಯೂ. ಎನ್​ಟಿಆರ್​ ಫ್ಯಾನ್ಸ್​ ಕಾತರ
ಜ್ಯೂ. ಎನ್​ಟಿಆರ್

Revolt Of BHEEM: ‘ಆರ್​ಆರ್​ಆರ್’ ಸಿನಿಮಾದಲ್ಲಿ ಜ್ಯೂ. ಎನ್​ಟಿಆರ್​ ಅವರು ಕೊಮರಾಮ್​ ಭೀಮ್ ಪಾತ್ರವನ್ನು ಮಾಡಿದ್ದಾರೆ. ಆ ಪಾತ್ರವನ್ನು ವಿವರಿಸುವ ಹಾಡು ಡಿ.24ರಂದು ಸಂಜೆ ನಾಲ್ಕು ಗಂಟೆಗೆ ಬಿಡುಗಡೆ ಆಗಲಿದೆ.

TV9kannada Web Team

| Edited By: Rajesh Duggumane

Dec 23, 2021 | 1:36 PM

ಬಹುನಿರೀಕ್ಷಿತ ‘ಆರ್​ಆರ್​ಆರ್​’ (RRR Movie) ಸಿನಿಮಾ ಈಗಾಗಲೇ ಅನೇಕ ಕಾರಣಗಳಿಂದಾಗಿ ಹೈಪ್​ ಸೃಷ್ಟಿ ಮಾಡಿದೆ. ಖ್ಯಾತ ನಿರ್ದೇಶಕ ಎಸ್​.ಎಸ್​. ರಾಜಮೌಳಿ (SS Rajamouli) ಅವರು ಈ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ ಎಂಬ ಒಂದೇ ಕಾರಣ ಸಾಕು ‘ಆರ್​ಆರ್​ಆರ್​’ ಬಗ್ಗೆ ನಿರೀಕ್ಷೆ ಮೂಡಲು. ಅದರ ಜೊತೆಗೆ ಜ್ಯೂ. ಎನ್​ಟಿಆರ್​ (Jr NTR) ಮತ್ತು ರಾಮ್​ ಚರಣ್​ ಅವರ ಭರ್ಜರಿ ಕಾಂಬಿನೇಷನ್​ನಿಂದಾಗಿ ಸಿನಿಮಾದ ಚಾರ್ಮ್​ ಹೆಚ್ಚಿದೆ. ಎಂ.ಎಂ. ಕೀರವಾಣಿ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ‘ಆರ್​ಆರ್​ಆರ್​’ ಹಾಡುಗಳು ಈಗಾಗಲೇ ಜನಮನ ಗೆದ್ದಿವೆ. ಅದರಲ್ಲೂ ‘ಹಳ್ಳಿ ನಾಟು..’ ಹಾಡು ಸಖತ್​ ವೈರಲ್​ ಆಗಿದೆ. ಈಗ ಇನ್ನೊಂದು ಹಾಡನ್ನು ಬಿಡುಗಡೆ ಮಾಡಲು ಸಮಯ ನಿಗದಿ ಆಗಿದೆ. ಚಿಕ್ಕದೊಂದು ಟೀಸರ್​ ಮೂಲಕ ಆ ಬಗ್ಗೆ ಮಾಹಿತಿ ಹಂಚಿಕೊಂಡಿದೆ ಆರ್​ಆರ್​ಆರ್​ ತಂಡ.

ಈ ಸಿನಿಮಾದಲ್ಲಿ ಜ್ಯೂ. ಎನ್​ಟಿಆರ್​ ಅವರು ಕೊಮರಾಮ್​ ಭೀಮ್ ಪಾತ್ರವನ್ನು ಮಾಡಿದ್ದಾರೆ. ಆ ಪಾತ್ರ ಹೇಗಿದೆ ಎಂಬುದಕ್ಕೆ ಈಗಾಗಲೇ ಸಾಕ್ಷಿ ಸಿಕ್ಕಿದೆ. ವಿವಿಧ ಗೆಟಪ್​ನಲ್ಲಿ ಜ್ಯೂ. ಎನ್​ಟಿಆರ್​ ಕಾಣಿಸಿಕೊಂಡಿದ್ದಾರೆ. ಆ ಪಾತ್ರವನ್ನು ವಿವರಿಸುವ ಹಾಡು ಡಿ.24ರಂದು ಸಂಜೆ ನಾಲ್ಕು ಗಂಟೆಗೆ ಬಿಡುಗಡೆ ಆಗಲಿದೆ. ಕನ್ನಡ, ತೆಲುಗು, ಮಲಯಾಳಂ, ತಮಿಳು ಮತ್ತು ಹಿಂದಿ ವರ್ಷನ್​ನಲ್ಲಿ ಈ ಗೀತೆ ಬಿಡುಗಡೆ ಆಗಲಿದೆ. ಇಂದು (ಡಿ.23) ಈ ಹಾಡಿನ ಚಿಕ್ಕ ಪ್ರೋಮೋ ರಿಲೀಸ್​ ಆಗಿದ್ದು, ಜ್ಯೂ, ಎನ್​ಟಿಆರ್​ ಅಭಿಮಾನಿಗಳ ಕಾತರ ಹೆಚ್ಚಿಸಿದೆ.

ಜ.7ರಂದು ವಿಶ್ವಾದ್ಯಂತ ‘ಆರ್​ಆರ್​ಆರ್​’ ಸಿನಿಮಾ ಬಿಡುಗಡೆ ಆಗಲಿದೆ. ಬಾಲಿವುಡ್​ನ ಖ್ಯಾತ ನಟಿ ಆಲಿಯಾ ಭಟ್​ ಅವರು ಈ ಚಿತ್ರದ ಮೂಲಕ ಇದೇ ಮೊದಲ ಬಾರಿಗೆ ದಕ್ಷಿಣ ಭಾರತ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ನಟ ಅಜಯ್​ ದೇವಗನ್​ ಕೂಡ ಈ ಸಿನಿಮಾದಲ್ಲಿ ಮುಖ್ಯ ಪಾತ್ರ ನಿಭಾಯಿಸಿದ್ದಾರೆ. ಟ್ರೇಲರ್​ ನೋಡಿದ ಸಿನಿಪ್ರಿಯರು ಫಿದಾ ಆಗಿದ್ದಾರೆ. ‘ಜನನಿ..’ ಹಾಡು ಕೂಡ ಗಮನ ಸೆಳೆದಿದೆ.

ಟ್ರೇಲರ್​ನಲ್ಲಿ ಎಲ್ಲಾ ಪಾತ್ರಗಳ ಪರಿಚಯವಾಗಿದೆ. ಸಿನಿಮಾ ಎಷ್ಟು ಅದ್ದೂರಿಯಾಗಿ ಇರಲಿದೆ ಎನ್ನುವುದರ ಸಣ್ಣ ಝಲಕ್​ ಟ್ರೇಲರ್​ನಲ್ಲಿ ಸಿಕ್ಕಿದೆ. ‘ಆರ್​ಆರ್​ಆರ್​’ ಸಿನಿಮಾ ಮೇಕಿಂಗ್​ ಕೂಡ ಉತ್ಕೃಷ್ಟ ಮಟ್ಟದಿಂದ ಕೂಡಿರಲಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಟ್ರೇಲರ್​ ರಿಲೀಸ್​ ಆದ ನಂತರದಲ್ಲಿ ಚಿತ್ರತಂಡ ಪ್ರಚಾರಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿದೆ. ಹಲವು ರಾಜ್ಯಗಳಿಗೆ ತೆರಳಿ ತಂಡ ಸಿನಿಮಾ ಪ್ರಚಾರ ಕಾರ್ಯ ನಡೆಸಿದೆ. ಬೆಂಗಳೂರಿಗೂ ಚಿತ್ರತಂಡ ಆಗಮಿಸಿತ್ತು. ರಾಮ್​ ಚರಣ್​, ಆಲಿಯಾ ಭಟ್​, ಜ್ಯೂ. ಎನ್​ಟಿಆರ್​ ಅವರು ಮಾಧ್ಯಮಗೋಷ್ಠಿ ನಡೆಸಿ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದರು.

ಇದನ್ನೂ ಓದಿ:

ಆರ್​ಆರ್​ಆರ್​ ಚಿತ್ರ ಓಟಿಟಿಯಲ್ಲಿ ಬರೋದು ಯಾವಾಗ? ಕಾತರದ ಪ್ರಶ್ನೆಗೆ ಸಿಕ್ತು ಉತ್ತರ

Jr NTR: ಆರ್​ಆರ್​ಆರ್​ ಪತ್ರಿಕಾಗೋಷ್ಠಿಯಲ್ಲಿ ಕನ್ನಡದಲ್ಲೇ ಮಾತನಾಡಿದ ಜೂ. ಎನ್​ಟಿಆರ್

Follow us on

Related Stories

Most Read Stories

Click on your DTH Provider to Add TV9 Kannada