ರಾಜ್ಯದಲ್ಲಿ ಶಕ್ತಿ ಯೋಜನೆಯಡಿ (Shakti Scheme) ಮಹಿಳೆಯರಿಗೆ ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿದ್ದೆ ತಡ… ಇರೊ ಬರೊ ಕೆ.ಎಸ್.ಆರ್.ಟಿ.ಸಿ ಬಸ್ ಗಳು ಹೌಸ್ ಪುಲ್ ಆಗಿ ಸಂಚರಿಸುತ್ತಿವೆ, ಇದ್ರಿಂದ ಬಸ್ ಗಳ ಕೊರತೆ ಎದುರಿಸುತ್ತಿರುವ ಸಂಸ್ಥೆ… ಸಂಸ್ಥೆಯ ಗ್ಯಾರೇಜ್ ನಲ್ಲಿರುವ ಗುಜರಿ ಬಸ್ ಗಳಿಗೆ ಸುಣ್ಣ ಬಣ್ಣ ಆಯಿಲ್ ಗಿಯಲ್ ಹಾಕಿ ಹೊಸ ಲುಕ್ ನಲ್ಲಿ ರಸ್ತೆಗೆ ಇಳಿಸಿದ್ದು ಅದಕ್ಕೆ ಪ್ರಯಾಣಿಕರು ಮಾರು ಹೋಗಿದ್ದಾರೆ. ಈ ಕುರಿತು ಒಂದು ವರದಿ. ನವ ವಧುವಿನಿಂತೆ (bride) ಕಂಗೊಳಿಸುತ್ತಿರೊ ಕೆ.ಎಸ್.ಆರ್.ಟಿ.ಸಿ ಬಸ್ (KSRTC bus), ಬಸ್ ಗಳ ಪರಿಶೀಲನೆ ನಡೆಸಿರುವ ಅಧಿಕಾರಿಗಳು, ಸ್ವತಃ ಅಧಿಕಾರಿಗಳೆ ಆಶ್ಚರ್ಯಚಕಿತರಾಗಿ ಬಸ್ ಗಳನ್ನು ನೋಡುತ್ತಿರುವುದು ಚಿಕ್ಕಬಳ್ಳಾಪುರ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ.
ಹೌದು! ರಾಜ್ಯದಲ್ಲಿ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿದ್ದೆ ತಡ… ಇರೊ ಬರೊ ಕೆ.ಎಸ್.ಆರ್.ಟಿ.ಸಿ ಬಸ್ ಗಳು ಹೌಸ್ ಪುಲ್ ಆಗಿ ಸಂಚರಿಸುತ್ತಿವೆ, ಇದ್ರಿಂದ ಸಂಸ್ಥೆಯಲ್ಲಿ ಬಸ್ ಗಳ ಕೊರತೆ ಎದುರಾಗಿದೆ, ಮತ್ತೊಂದೆಡೆ ಹೊಸ ಬಸ್ ಗಳನ್ನು ಸರ್ಕಾರ ನೀಡದ ಕಾರಣ… ಸಂಸ್ಥೆಯ ಗ್ಯಾರೇಜ್ ನಲ್ಲಿದ್ದ ಗುಜರಿ ಬಸ್ ಗಳಿಗೆ ಸುಣ್ಣ ಬಣ್ಣ ಹೊಡೆದು ಆಯಿಲ್ ಗಿಯಲ್ ಹಾಕಿ ಇಂಜಿನ್ ಗಳನ್ನು ರೆಡಿ ಮಾಡಿ ಹಳೆ ಬಸ್ ಗಳಿಗೆ ಹೊಸ ಲುಕ್ ನೀಡಲಾಗಿದೆ ಎನ್ನುತ್ತಾರೆ ಹಿಮರ್ವಧನ್ ನಾಯ್ಡು, ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಎಸ್.ಆರ್.ಟಿ.ಸಿ.
Also Read: ನಿಧಿ ಆಸೆಗಾಗಿ ಜಮೀನಿನಲ್ಲಿ ದೇವರ ಕಲ್ಲು ಕಿತ್ತು ಶೋಧ ನಡೆಸಿದ ದುಷ್ಕರ್ಮಿಗಳು, ಆತಂಕದಲ್ಲಿ ಜಮೀನು ಮಾಲೀಕ
ಚಿಕ್ಕಬಳ್ಳಾಪುರ ವಿಭಾಗೀಯ ಕಾರ್ಯಗಾರದಲ್ಲಿ ಹಳೆ ಬಸ್ ಗಳನ್ನು ಹೊಸ ಬಸ್ ಗಳನ್ನಾಗಿ ರೆಡಿ ಮಾಡಲಾಗಿದೆ. ಬಸ್ ಗಳ ಕ್ಯಾಪಾಸಿಟಿ ಇನ್ನೂ ಇದ್ರೂ ತಾಂತ್ರಿಕ ದೋಷಗಳಿಂದ ಕೆಲವು ಬಸ್ ಗಳನ್ನು ಮೂಲೆಗುಂಪು ಮಾಡಲಾಗಿತ್ತು, ಸರ್ಕಾರದ ಅನುಮತಿ ಪಡೆದು ರಿಪೇರಿ ಇದ್ದ ಬಸ್ ಗಳಿಗೆ 3ಲಕ್ಷ ರೂಪಾಯಿಯಿಂದ ಹಿಡಿದು 5 ಲಕ್ಷ ರೂಪಾಯಿ ಖರ್ಚು ಮಾಡಿ ಮತ್ತೆ ರಸ್ತೆಗೆ ಇಳಿಸಲಾಗಿದೆ. ಚಿಕ್ಕಬಳ್ಳಾಪುರ ವಿಭಾಗೀಯ ಕಚೇರಿಯಲ್ಲೆ… ಈಗಾಗಲೇ 15 ಹಳೆ ಬಸ್ ಗಳಿಗೆ ಹೊಸ ಲುಕ್ ನೀಡಿ ರಸ್ತೆಗೆ ಇಳಿಸಲಾಗಿದೆ ಎನ್ನುತ್ತಾರೆ ಶ್ರೀನಿವಾಸ, ಕುಶಲಕರ್ಮಿ ಕೆ.ಎಸ್.ಆರ್.ಟಿ.ಸಿ
ಇನ್ನು ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿದ್ದೆ ತಡ… ಕೆ.ಎಸ್.ಆರ್.ಟಿ.ಸಿ ಬಸ್ ಗಳು ಹೌಸ್ ಪುಲ್ ಆಗಿ ಸಂಚರಿಸುತ್ತಿದ್ದು, ಪ್ರತಿ ತಿಂಗಳು ಚಿಕ್ಕಬಳ್ಳಾಪುರ ವಿಭಾಗದಲ್ಲಿ ಒಂದು ಕೋಟಿ ರೂಪಾಯಿ ಲಾಭ ಬರುತ್ತಿದೆ! ಇದ್ರಿಂದ ಸಾರಿಗೆ ಇಲಾಖೆ ಲಾಭದತ್ತ ಮುಂದುವರೆದಿದೆ.
ಚಿಕ್ಕಬಳ್ಳಾಪುರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ