Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಧಿ ಆಸೆಗಾಗಿ ಜಮೀನಿನಲ್ಲಿ ದೇವರ ಕಲ್ಲು ಕಿತ್ತು ಶೋಧ ನಡೆಸಿದ ದುಷ್ಕರ್ಮಿಗಳು, ಆತಂಕದಲ್ಲಿ ಜಮೀನು ಮಾಲೀಕ

ಜಮೀನಿನಲ್ಲಿ ನಿಧಿ ಇದೆ, ನಾವು ಅಲ್ಲಿ ಟೆಸ್ಟ್ ಮಾಡಿದ್ದೇವೆ ಅಂತ ಇಬ್ಬರು ಆಸಾಮಿಗಳು ತಿಳಿಸಿದ್ದಾರಂತೆ.‌ ಆದ್ರೆ ಮಾಲೀಕರು ಇದಕ್ಕೆ ಒಪ್ಪಿಲ್ಲವಂತೆ. ನಿಧಿಗಾಗಿ ಶೋಧ ಮಾಡಿದ್ರೆ‌ ಕುಟುಂಬಕ್ಕೆ ಕೆಡಕಾಗುತ್ತೆ ಅನ್ನೋ ಕಾರಣಕ್ಕೆ ಅವರಿಬ್ಬರಿಗೂ ಬೇರೆ ಬೇರೆ ಕಾರಣ ಹೇಳಿ‌ ಕಳುಹಿಸುತ್ತಿದ್ದರಂತೆ.

ನಿಧಿ ಆಸೆಗಾಗಿ ಜಮೀನಿನಲ್ಲಿ ದೇವರ ಕಲ್ಲು ಕಿತ್ತು ಶೋಧ ನಡೆಸಿದ ದುಷ್ಕರ್ಮಿಗಳು, ಆತಂಕದಲ್ಲಿ ಜಮೀನು ಮಾಲೀಕ
ನಿಧಿ ಆಸೆಗಾಗಿ ಜಮೀನಿನಲ್ಲಿ ದೇವರ ಕಲ್ಲು ಕಿತ್ತು ಶೋಧ
Follow us
ದಿಲೀಪ್​, ಚೌಡಹಳ್ಳಿ
| Updated By: ಸಾಧು ಶ್ರೀನಾಥ್​

Updated on:Aug 05, 2023 | 10:22 AM

ಮನುಷ್ಯನ ಆಸೆಗಳಿಗೆ ಮಿತಿಯೆ ಇಲ್ಲ.‌ಎಷ್ಟೇ ಹಣ ಇದ್ರು ಹಣ ಮತ್ತಷ್ಟು ಬೇಕು ಅನ್ನೋ‌ ಆಸೆ. ಅಂತಹ ಆಸೆಯಿಂದಲ್ಲೆ ಜಮೀನೊಂದರಲ್ಲಿ ನಿಧಿ ಇದೆ ಎಂದುಕೊಂಡು ನಿಧಿ (treasure) ಆಸೆಗೆ ಜಮೀನನಲ್ಲಿದ್ದ ದೇವರ ಕಲ್ಲನ್ನು ಕಿತ್ತು ನಿಧಿ ಶೋಧ (digging land) ನಡೆಸಿದ್ದಾರೆ.ಸದ್ಯ ಜಮೀನಲ್ಲಿ ನಡೆದ ನಿಧಿ ಶೋಧದಿಂದ ಜಮೀನಿನ ಮಾಲೀಕರು ಆತಂಕಕೊಳಗಾಗಿದ್ದಾರೆ. ಕಲ್ಲಿಗೆ ಪೂಜೆ… ಅಲ್ಲೆ ಬಿದ್ದಿರೋ ಕುಂಕುಮ ಅರಿಶಿನ…ಮತ್ತೊಂದೆಡೆ‌ ದೇವರ ಕಲ್ಲನ್ನು ಬೀಳಿಸಿ ತೆಗೆದಿರೋ ಗುಂಡಿ… ಇಷ್ಟಕ್ಕೆಲ್ಲ ಕಾರಣ, ಈ ಸ್ಥಳದಲ್ಲಿ ನಿಧಿ ಇದೆ ಎಂಬ ನಂಬಿಕೆ.ಹೌದು, ಹಿಂದಿನಿಂದಲೂ ನಿಧಿ ಬಗ್ಗೆ ಹಲವು ಕತೆಗಳು ಹಳ್ಳಿಹಳ್ಳಿಗಳಲ್ಲಿ ಹುಟ್ಟಿಕೊಂಡಿವೆ. ಹಾಗೇ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ‌ ಅಗ್ರಹಾರ ಗ್ರಾಮದಲ್ಲು (Agrahara village in Hunsur taluk in Mysore) ಇಂತಹದೆ ನಿಧಿ ಬಗ್ಗೆ ಹಲವು ಕತೆಗಳು ಹುಟ್ಟಿಕೊಂಡಿದೆ.

ಈ ಅಗ್ರಹಾರ ಗ್ರಾಮದ ಲೋಕೇಶ್ ಎಂಬುವವರ ಜಮೀನಿನಲ್ಲಿ ಒಂದು ದೇವರ ಕಲ್ಲಿದ್ದು, ಆ ಕಲ್ಲಿನ ಕೆಳಗಡೆ ಒಂದು ಹಂಡೆಯಲ್ಲಿ ಚಿನ್ನ ಇದೆ ಎಂದು ನಂಬಿಕೊಂಡಿದ್ದಾರೆ‌. ಆದ್ರೆ ಇಷ್ಟು ದಿನ ದೇವರ ಮೇಲಿದ್ದ ನಂಬಿಕೆಯಿಂದ ಗುಂಡಿ ತೆಗೆಯುವ ಧೈರ್ಯವನ್ನ ಕುಟುಂಬಸ್ಥರು ಮಾಡಿರಲಿಲ್ಲ. ಈ ಬಗ್ಗೆ ಕಳೆದ ಒಂದು ತಿಂಗಳಲ್ಲಿ ಈ ಬಗ್ಗೆ ಗ್ರಾಮದಲ್ಲಿ ಮತ್ತೆ ಚರ್ಚೆ ಶುರುವಾಗಿದೆ.

ಈ ವೇಳೆ ಗ್ರಾಮದ ವ್ಯಕ್ತಿಯೊಬ್ಬ ಮುಸ್ಲಿಂ ಸಮುದಾಯಕ್ಕೆ ಸೇರಿದ ಇಬ್ಬರನ್ನು ಕರೆದುಕೊಂಡು ಬಂದು ಇವರು ನಿಧಿ ತೆಗೆಯುತ್ತಾರೆ ಅಂತ ಲೋಕೇಶ್ ಕುಟುಂಬಸ್ಥರಿಗೆ ಪರಿಚಯಿಸಿದ್ದಾನೆ. ಅಲ್ಲಿ ನಿಧಿ ಇದೆ, ನಾವು ಅಲ್ಲಿ ಟೆಸ್ಟ್ ಮಾಡಿದ್ದೇವೆ ಅಂತನು ಇಬ್ಬರು ಆಸಾಮಿಗಳು ತಿಳಿಸಿದ್ದಾರಂತೆ.‌ ಆದ್ರೆ ಕುಟುಂಬಸ್ಥರು ಇದಕ್ಕೆ ಒಪ್ಪಿಲ್ಲವಂತೆ. ನಿಧಿಗಾಗಿ ಶೋಧ ಮಾಡಿದ್ರೆ‌ ಕುಟುಂಬಕ್ಕೆ ಕೆಡಕಾಗುತ್ತೆ ಅನ್ನೋ ಕಾರಣಕ್ಕೆ ಅವರಿಬ್ಬರಿಗು ಬೇರೆ ಬೇರೆ ಕಾರಣ ಹೇಳಿ‌ ಕಳುಹಿಸುತ್ತಿದ್ದರಂತೆ. ಆದ್ರೆ ಕಳೆದ‌ ಶುಕ್ರವಾರದಂದು ಬಂದು ನೋಡಿದ್ರೆ‌ ಜಮೀನಲ್ಲಿ‌ಪೂಜೆ ಮಾಡಿ ಕಲ್ಲನ್ನು ಬೀಳಿಸಿ‌ಗುಂಡಿ ತೆಗೆಯಲಾಗಿದೆ ಎಂದು ಜಮೀನಿನ ಮಾಲೀಕ ಲೋಕೇಶ್ ತಿಳಿಸಿದ್ದಾರೆ.

Also Read:  BPL ​, APL ಕಾರ್ಡ್​ದಾರರಿಗೆ ಗುಡ್​ ನ್ಯೂಸ್​ ಕೊಟ್ಟ ಆಹಾರ ಸಚಿವ ಕೆ.ಹೆಚ್​. ಮುನಿಯಪ್ಪ

ಸದ್ಯ ಗುಂಡಿ ತೆಗೆದಿರುವ ಬಗ್ಗೆ ಮೊದಲು ಆ ಇಬ್ಬರ ಮೇಲೆ ಕುಟುಂಬಸ್ಥರು ಅನುಮಾನಗೊಂಡಿದ್ದಾರೆ.ಆದ್ರೆ ಆ ಕುಟುಂಬಸ್ಥರು ಅವರನ್ನ ವಿಚಾರಿಸಿದ್ರೆ ನಮಗೆ ಈ ಬಗ್ಗೆ ಏನು ಗೊತ್ತಿಲ್ಲ ಅಂತಿದ್ದಾರಂತೆ. ಇದ್ರಿಂದ ಸದ್ಯ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ದೂರನ್ನು ಸಹ ನೀಡಿದ್ದಾರೆ. ಆದ್ರೆ‌ ಜಮೀನಿನಲ್ಲಿ ನಡೆದಿರುವ ಘಟನೆಯಿಂದ ತಮಗೆ ಏನಾದ್ರು ಕೆಡುಕಾಗುತ್ತದಾ ಎಂಬುದು ಲೋಕೇಶ್ ತಾಯಿ ಸರೋಜಮ್ಮ ಅವರ ಆತಂಕ.

ಒಟ್ಟಾರೆ, ಗುಂಡಿ ತೆಗೆದಾಗ ಏನು ಸಿಕ್ಕಿದೆ ಅಂತ ಗುಂಡಿ ತೋಡಿದವರಿಗಷ್ಟೆ ಗೊತ್ತು. ಆದ್ರೆ ಜಮೀನಿನಲ್ಲಿ ಪೂಜೆ ಮಾಡಿ ಗುಂಡಿ ತೆಗೆದಿರೋದ್ರಿಂದ ಕುಟುಂಬಸ್ಥರಂತು ಆತಂಕಗೊಂಡಿದ್ದಾರೆ.

ಮೈಸೂರು ಜಿಲ್ಲೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:58 am, Sat, 5 August 23