BPL ​, APL ಕಾರ್ಡ್​ದಾರರಿಗೆ ಗುಡ್​ ನ್ಯೂಸ್​ ಕೊಟ್ಟ  ಆಹಾರ ಸಚಿವ ಕೆ.ಹೆಚ್​. ಮುನಿಯಪ್ಪ

BPL ​, APL ಕಾರ್ಡ್​ದಾರರಿಗೆ ಗುಡ್​ ನ್ಯೂಸ್​ ಕೊಟ್ಟ ಆಹಾರ ಸಚಿವ ಕೆ.ಹೆಚ್​. ಮುನಿಯಪ್ಪ

ಸಾಧು ಶ್ರೀನಾಥ್​
|

Updated on: Aug 04, 2023 | 6:01 PM

ಆಂಧ್ರ ಹಾಗೂ ತೆಲಂಗಾಣ ಸರ್ಕಾರ ಅಕ್ಕಿ ನೀಡಲು ಮುಂದಾಗಿವೆ. ಸೆಪ್ಟೆಂಬರ್​ ತಿಂಗಳಿನಲ್ಲಿ 10 ಕೆಜಿ ಅಕ್ಕಿ ವಿತರಿಸುವ ಚಿಂತನೆ ಇದೆ ಎಂದು ಆಹಾರ ಸಚಿವ ಮುನಿಯಪ್ಪ ಭರವಸೆಯ ಮಾತುಗಳನ್ನಾಡಿದರು.

ಬೆಂಗಳೂರು: ಆಗಸ್ಟ್​ 4: ಹೊಸದಾಗಿ ಪಡಿತರ ಕಾರ್ಡ್ ವಿತರಣೆಗೆ ಸೂಚನೆ ನೀಡಲಾಗಿದೆ ಎಂದು ಬೆಂಗಳೂರಿನಲ್ಲಿ ಆಹಾರ ಸಚಿವ ಕೆ.ಹೆಚ್​.ಮುನಿಯಪ್ಪ (Food minister KH Muniyappa) ಅವರು ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ. ಹಾಗಾಗಿ ಹೊಸದಾಗಿ BPL​, APL​ ಕಾರ್ಡ್​ಗೆ ಅರ್ಜಿ (application) ಸಲ್ಲಿಸಬಹುದು. ನೀತಿಸಂಹಿತೆ ಜಾರಿ ಹಿನ್ನೆಲೆ ರೇಷನ್​​ ಕಾರ್ಡ್​ ವಿತರಣೆ ಸ್ಥಗಿತವಾಗಿತ್ತು. ಈಗ ಹೊಸ ಪಡಿತರ ಕಾರ್ಡ್​ ವಿತರಣೆಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಪಡಿತರ ಕಾರ್ಡ್​ಗೆ ಹೊಸ ಸದಸ್ಯರ ಹೆಸರು ಸೇರ್ಪಡೆಗೂ ಅವಕಾಶವಿದೆ. ಕಾರ್ಡ್​ನಲ್ಲಿರುವ ಮೃತರ ಹೆಸರನ್ನು ತೆರವುಗೊಳಿಸಲು ಸೂಚನೆ ನೀಡಲಾಗಿದೆ ಎಂದು ಸಚಿವ ಮುನಿಯಪ್ಪ ಹೇಳಿದ್ದಾರೆ.

ಅನ್ನಭಾಗ್ಯದ ಉದ್ದೇಶ ಹಸಿದವರಿಗೆ ಅನ್ನ ಕೊಡಬೇಕು ಅಂತ. ಅನ್ನಭಾಗ್ಯ (Anna Bhagya) ಯೋಜನೆಯಡಿ 5 ಕೆಜಿ ಅಕ್ಕಿ ಜೊತೆ ಹಣ ಜಮೆಯಾಗುತ್ತಿದೆ. ಈವರೆಗೆ ಒಂದು ಕೋಟಿ ಕುಟುಂಬಕ್ಕೆ ಹಣ ಹಾಕಲಾಗಿದೆ. ಇಲಾಖೆಯಿಂದ ಸುಮಾರು 556 ಕೋಟಿ ಹಣ ಹಾಕಲಾಗಿದೆ. ರಾಗಿ, ಜೋಳಕ್ಕೆ ಬೆಂಬಲ ಬೆಲೆ ಹೆಚ್ಚಳಕ್ಕೆ ಕೇಂದ್ರ ಸಚಿವರಿಗೆ ಮನವಿ ಮಾಡಿಕೊಂಡಿದ್ದೇವೆ ಎಂದು ಬೆಂಗಳೂರಿನಲ್ಲಿ ಆಹಾರ ಸಚಿವ ಕೆ.ಹೆಚ್​.ಮುನಿಯಪ್ಪ ವಿವರಿಸಿದ್ದಾರೆ.

ಆಂಧ್ರ ಹಾಗೂ ತೆಲಂಗಾಣ ಸರ್ಕಾರ ಅಕ್ಕಿ ನೀಡಲು ಮುಂದಾಗಿವೆ ಎಂದು ಆಹಾರ ಇಲಾಖೆ ಸಚಿವ K.H​.ಮುನಿಯಪ್ಪ ಇದೇ ವೇಳೆ ಹೇಳಿದ್ದಾರೆ. ₹ 34 ದರದಲ್ಲಿ ನೀಡಿದರೆ ಅಕ್ಕಿ ಖರೀದಿ ಮಾಡಲು ಸಿದ್ಧವಿದ್ದೇವೆ. ಆಹಾರ ನಿಗಮದ ದರದಲ್ಲಿ ಅಕ್ಕಿ ನೀಡುವಂತೆ ಮನವಿ ಮಾಡುತ್ತೇವೆ. 1 ವಾರದಲ್ಲಿ ಅಲ್ಲಿನ ಅಧಿಕಾರಿಗಳು ನಿರ್ಧಾರ ಪ್ರಕಟಿಸುವ ವಿಶ್ವಾಸವಿದೆ. ಸೆಪ್ಟೆಂಬರ್​ ತಿಂಗಳಿನಲ್ಲಿ 10 ಕೆಜಿ ಅಕ್ಕಿ ವಿತರಿಸುವ ಚಿಂತನೆ ಇದೆ ಎಂದು ಆಹಾರ ಸಚಿವ ಮುನಿಯಪ್ಪ ಭರವಸೆಯ ಮಾತುಗಳನ್ನಾಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ