ಚಿಕ್ಕಬಳ್ಳಾಪುರ: ಕೊರೆಯುವ ಚಳಿಗೆ ಹೃದಯಾಘಾತ; ತೊಂಡೆಬಾವಿ ಯೋಧ ಹುತಾತ್ಮ

| Updated By: ganapathi bhat

Updated on: Dec 27, 2021 | 6:21 PM

ಇಂದೀಗ ಮೃತ ಸೈನಿಕನ ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ಆಗಮಿಸಲಿದೆ. ತೊಂಡೇಭಾಯಿವಿಂದ ಸ್ವಗ್ರಾಮ ತೆರೆದಾಳವರೆಗೂ ಮೆರವಣಿಗೆ ಮಾಡಲಿದ್ದಾರೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಲಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಚಿಕ್ಕಬಳ್ಳಾಪುರ: ಕೊರೆಯುವ ಚಳಿಗೆ ಹೃದಯಾಘಾತ; ತೊಂಡೆಬಾವಿ ಯೋಧ ಹುತಾತ್ಮ
ಸಿಆರ್‌ಪಿಎಫ್ ಯೋಧ ಟಿ.ಜಿ. ಸತೀಶ್
Follow us on

ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ತಾಲೂಕಿನ ತೇರೆದಾಳ ಗ್ರಾಮದ ಸಿಆರ್‌ಪಿಎಫ್ ಯೋಧ ಒಬ್ಬರು ಹುತಾತ್ಮರಾಗಿದ್ದಾರೆ. ಸೋಮವಾರ ಸ್ವಗ್ರಾಮಕ್ಕೆ ಯೋಧನ ಪಾರ್ಥಿವ ಶರೀರ ಆಗಮನ ಆಗಲಿದೆ. ಕರ್ತವ್ಯದ ವೇಳೆ ಕೊರೆಯುವ ಚಳಿಯಲ್ಲಿ ಸಿಆರ್​ಪಿಎಫ್ ಯೋಧ ಟಿ.ಜಿ. ಸತೀಶ್ ಹುತಾತ್ಮರಾಗಿದ್ದರು. ತೇರೆದಾಳ ಗ್ರಾಮದ ಸಿಆರ್​ಪಿಎಫ್ ಯೋಧ ವೀರ ಮರಣವನ್ನಪ್ಪಿದ್ದರು.

ನಾಗಲ್ಯಾಂಡ್​ನಲ್ಲಿ ಸಿಆರ್​ಪಿಎಫ್ ಯೋಧರಾಗಿದ್ದ ಸತೀಶ್ ಕರ್ತವ್ಯನಿರತರಾಗಿದ್ದ ವೇಳೆ ಹೃದಯಘಾತವಾಗಿರುವ ಬಗ್ಗೆ ಮಾಹಿತಿ ಲಭಿಸಿತ್ತು. ಕನಿಷ್ಠ ತಾಪಮಾನ ಹಾಗೂ ಕೊರೆಯುವ ಚಳಿಗೆ ವೀರ ಮರಣಹೊಂದಿರುವ ಬಗ್ಗೆ ಮಾಹಿತಿ ದೊರಕಿತ್ತು. ಇಂದೀಗ ಮೃತ ಸೈನಿಕನ ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ಆಗಮಿಸಲಿದೆ. ತೊಂಡೇಭಾಯಿವಿಂದ ಸ್ವಗ್ರಾಮ ತೆರೆದಾಳವರೆಗೂ ಮೆರವಣಿಗೆ ಮಾಡಲಿದ್ದಾರೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಲಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಈ ಸಂಬಂಧ ಚಿಕ್ಕಬಳ್ಳಾಫುರ ಜಿಲ್ಲಾಡಳಿತದಿಂದ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಚಿಕ್ಕಬಳ್ಳಾಫುರ ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಸಚಿವ ಸುಧಾಕರ್ ಅಂತಿಮ ದರ್ಶನ ಪಡೆದುಕೊಳ್ಳಲಿದ್ದಾರೆ.

ಇದನ್ನೂ ಓದಿ: ಭಾರತೀಯ ವಾಯುಸೇನೆಯ ಮಿಗ್-21 ವಿಮಾನ ಪತನ; ವಿಂಗ್ ಕಮಾಂಡರ್ ಹರ್ಷಿತ್ ಸಿನ್ಹಾ ದುರಂತ ಸಾವು

ಇದನ್ನೂ ಓದಿ: ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಸೇನೆಯಿಂದ ಬಂಕರ್ ನಿರ್ಮಾಣ; ಭಾರತದಿಂದ ಎಚ್ಚರಿಕೆ ಸಂದೇಶ ರವಾನೆ

Published On - 6:15 pm, Mon, 27 December 21