ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಸೇನೆಯಿಂದ ಬಂಕರ್ ನಿರ್ಮಾಣ; ಭಾರತದಿಂದ ಎಚ್ಚರಿಕೆ ಸಂದೇಶ ರವಾನೆ
ಕುಪ್ವಾರಾ ಜಿಲ್ಲೆಯ ಟೀತ್ವಾಲ್ ಗ್ರಾಮದಲ್ಲಿ ಪಾಕಿಸ್ತಾನ ಅಕ್ರಮವಾಗಿ ಬಂಕರ್ ನಿರ್ಮಾಣ ಮಾಡುತ್ತಿರುವುದಕ್ಕೆ ಭಾರತೀಯ ಸೇನೆ ಆಕ್ಷೇಪ ವ್ಯಕ್ತಪಡಿಸಿದೆ.
ಶ್ರೀನಗರ: ಗಡಿ ನಿಯಂತ್ರಣ ರೇಖೆಯಲ್ಲಿ ಬಂಕರ್‌ಗಳನ್ನು ನಿರ್ಮಿಸುವ ಪಾಕಿಸ್ತಾನದ ಪ್ರಯತ್ನಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಕುಪ್ವಾರಾ ಜಿಲ್ಲೆಯ ಟೀತ್ವಾಲ್ ಗ್ರಾಮದಲ್ಲಿ ಪಾಕಿಸ್ತಾನ ಅಕ್ರಮವಾಗಿ ಬಂಕರ್ ನಿರ್ಮಾಣ ಮಾಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಅಕ್ರಮ ನಿರ್ಮಾಣವನ್ನು ನಿಲ್ಲಿಸಿ ಅಥವಾ ಅದರ ಪರಿಣಾಮಗಳನ್ನು ಎದುರಿಸಿ ಎಂದು ಪಾಕಿಸ್ತಾನದ ಸೇನೆಗೆ ಭಾರತ ಖಡಕ್ ಎಚ್ಚರಿಕೆಯನ್ನು ರವಾನಿಸಿದೆ. ಪಾಕಿಸ್ತಾನದ ಗಡಿಯಿಂದ 500 ಮೀಟರ್ ಮುಂದಕ್ಕೆ ಅಕ್ರಮವಾಗಿ ಬಂಕರ್ ನಿರ್ಮಿಸಲಾಗಿದೆ.
ಈ ಬಗ್ಗೆ ಕಾಶ್ಮೀರದ ಪೊಲೀಸರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಟೀತ್ವಾಲ್ ಪ್ರದೇಶದಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ ಅಕ್ರಮವಾಗಿ ಬಂಕರ್ ನಿರ್ಮಿಸುತ್ತಿರುವ ಬಗ್ಗೆ ಸ್ಥಳೀಯರು ನಮಗೆ ಮಾಹಿತಿ ನೀಡಿದರು. ಅದಕ್ಕೆ ಭಾರತೀಯ ಸೇನೆಯಿಂದ ವಿರೋಧ ವ್ಯಕ್ತಪಡಿಸಲಾಗಿದೆ. ಹಾಗೇ, ಅಕ್ರಮ ನಿರ್ಮಾಣವನ್ನು ತೆರವುಗೊಳಿಸುವಂತೆ ಲೌಡ್ ಸ್ಪೀಕರ್ಗಳ ಮೂಲಕ ಅನೌನ್ಸ್ ಮಾಡಲಾಗಿದೆ.
ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್, ಕಳೆದ ಎರಡು ವರ್ಷಗಳಲ್ಲಿ ಪಾಕಿಸ್ತಾನದಿಂದ 5,600ಕ್ಕೂ ಹೆಚ್ಚು ಕದನ ವಿರಾಮ ಉಲ್ಲಂಘನೆಗಳು ಗಡಿ ನಿಯಂತ್ರಣ ರೇಖೆಯಲ್ಲಿ ವರದಿಯಾಗಿವೆ ಎಂದು ಹೇಳಿದ್ದಾರೆ. ಪಾಕಿಸ್ತಾನಿ ಸೈನಿಕರ ಆಕ್ರಮಣಗಳನ್ನು ಎದುರಿಸಲು ಸೈನಿಕರಿಗೆ ಎಲ್ಲ ರೀತಿಯ ಸ್ವಾತಂತ್ರ್ಯ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ಗಡಿ ನಿಯಂತ್ರಣ ರೇಖೆಯ ಸಮೀಪ ಪಾಕಿಸ್ತಾನದ ‘ಅಕ್ರಮ ನಿರ್ಮಾಣ’ ಸ್ಥಗಿತಗೊಂಡಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಾಮಾನ್ಯ ಪ್ರೋಟೋಕಾಲ್‌ನಂತೆ, ಎರಡೂ ಬದಿಗಳನ್ನು ಮುಂಚಿತವಾಗಿ ತಿಳಿಸದ ಹೊರತು ಯಾವುದೇ ರೀತಿಯ ನಿರ್ಮಾಣವನ್ನು ಮಾಡಲು ಯಾವುದೇ ಬದಿಯನ್ನು ಅನುಮತಿಸಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ. ಆದರೆ, ಅದು ಬಂಕರ್ ಅಥವಾ ಯಾವುದಾದರೂ ಗುಡಿಸಲು ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಘಟನೆಯ ಕುರಿತು ಸೇನೆಯು ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಬೇಕಿದೆ.
ಇದನ್ನೂ ಓದಿ: ಜಮ್ಮುವಿಗೆ 6, ಕಾಶ್ಮೀರಕ್ಕೆ 1 ಹೊಸ ಸ್ಥಾನ; ಕಣಿವೆ ರಾಜ್ಯದಲ್ಲಿ ಗದ್ದಲ ಎಬ್ಬಿಸಿದ ಕರಡು ಪ್ರಸ್ತಾವನೆ
Sheena Bora Murder: ಶೀನಾ ಬೋರಾ ಕಾಶ್ಮೀರದಲ್ಲಿ ಜೀವಂತವಾಗಿದ್ದಾಳೆ; ಅಚ್ಚರಿಯ ವಿಷಯ ತಿಳಿಸಿದ ಇಂದ್ರಾಣಿ ಮುಖರ್ಜಿ
Published On - 9:06 pm, Tue, 21 December 21