ಜಮ್ಮುವಿಗೆ 6, ಕಾಶ್ಮೀರಕ್ಕೆ 1 ಹೊಸ ಸ್ಥಾನ; ಕಣಿವೆ ರಾಜ್ಯದಲ್ಲಿ ಗದ್ದಲ ಎಬ್ಬಿಸಿದ ಕರಡು ಪ್ರಸ್ತಾವನೆ
ಡಿಲಿಮಿಟೇಶನ್ ಎನ್ನುವುದು ಒಂದು ಪ್ರದೇಶದ ಜನಸಂಖ್ಯೆಯ ಬದಲಾವಣೆಗಳನ್ನು ಪ್ರತಿಬಿಂಬಿಸಲು ಅಸೆಂಬ್ಲಿ ಅಥವಾ ಲೋಕಸಭಾ ಕ್ಷೇತ್ರದ ಗಡಿಗಳನ್ನು ಮರುರೂಪಿಸುವುದಾಗಿದೆ. ಡಿಲಿಮಿಟೇಶನ್ ಆಯೋಗವು ಸ್ವತಂತ್ರ ಸಂಸ್ಥೆಯಾಗಿದ್ದು, ಕಾರ್ಯಾಂಗ ಮತ್ತು ರಾಜಕೀಯ ಪಕ್ಷಗಳು ಅದರ ಕಾರ್ಯಚಟುವಟಿಕೆಯಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ.
ಶ್ರೀನಗರ: ಜಮ್ಮುವಿಗೆ ಆರು ಹೊಸ ಶಾಸಕಾಂಗ ಸ್ಥಾನಗಳನ್ನು ಮತ್ತು ಕಾಶ್ಮೀರಕ್ಕೆ ಒಂದೇ ಒಂದು ಸ್ಥಾನವನ್ನು ಸೂಚಿಸಿದ ಕರಡು ಪ್ರಸ್ತಾವನೆಗೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಮುಖ ರಾಜಕೀಯ ಗದ್ದಲವು ಭುಗಿಲೆದ್ದಿದೆ. ಸ್ಥಳೀಯ ಪಕ್ಷಗಳು ಅಧಿಕಾರದ ಸಮತೋಲನವನ್ನು ಹಾಳು ಮಾಡುವ ಪ್ರಯತ್ನ ಎಂದು ಬಣ್ಣಿಸಿದೆ. ಕೇಂದ್ರ ಸರ್ಕಾರದ ಡಿಲಿಮಿಟೇಶನ್ (ಗಡಿ ನಿರ್ಣಯ) ಆಯೋಗದ ಕರಡನ್ನು ಇಂದು ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಐದು ಸಂಸದರಿಗೆ ವಿತರಿಸಲಾಯಿತು.
ಸಭೆಯಲ್ಲಿ ಭಾಗವಹಿಸಿದ್ದ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಮತ್ತು ಸಂಸದ ಫಾರೂಕ್ ಅಬ್ದುಲ್ಲಾ ಅವರು ಕರಡು ಪ್ರಸ್ತಾವನೆಯನ್ನು ದೃಢಪಡಿಸಿದರು. ಡಿಸೆಂಬರ್ 31ರಂದು ಔಪಚಾರಿಕ ಹೇಳಿಕೆಯ ಮೂಲಕ ಪಕ್ಷವು ಇದಕ್ಕೆ ಪ್ರತಿಕ್ರಿಯಿಸುತ್ತದೆ ಎಂದು ಹೇಳಿದರು.
ಆಯೋಗದ ಆದೇಶದ ಪ್ರಕಾರ, 2011ರ ಜನಗಣತಿಯ ಆಧಾರದ ಮೇಲೆ ಡಿಲಿಮಿಟೇಶನ್ ಪ್ರಕ್ರಿಯೆಯನ್ನು ಮಾಡಲಾಗಿದೆ ಮತ್ತು ಅಸೆಂಬ್ಲಿ ಸ್ಥಾನಗಳನ್ನು ಮರುವಿನ್ಯಾಸ ಮಾಡಲು ಜನಸಂಖ್ಯೆಯು ಏಕೈಕ ಮಾನದಂಡವಾಗಿದೆ. 2011ರ ಜನಗಣತಿಯ ಪ್ರಕಾರ, ಕಾಶ್ಮೀರವು ಜಮ್ಮುಗಿಂತ 15 ಲಕ್ಷ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಕಾಶ್ಮೀರದಲ್ಲಿ 68.8 ಲಕ್ಷ ಜನಸಂಖ್ಯೆಯಿದ್ದು, ಜಮ್ಮುವಿನಲ್ಲಿ 53.5 ಲಕ್ಷ ಜನಸಂಖ್ಯೆಯಿದೆ. ಈಗ ಕರಡು ಪ್ರಸ್ತಾವನೆಯ ಪ್ರಕಾರ ಕಾಶ್ಮೀರ 47 ಮತ್ತು ಜಮ್ಮು 43 ಸ್ಥಾನಗಳನ್ನು ಹೊಂದಿರುತ್ತದೆ.
The draft recommendation of the J&K delimitation commission is unacceptable. The distribution of newly created assembly constituencies with 6 going to Jammu & only 1 to Kashmir is not justified by the data of the 2011 census.
— Omar Abdullah (@OmarAbdullah) December 20, 2021
ಡಿಲಿಮಿಟೇಶನ್ ಎಂದರೇನು?:
ಡಿಲಿಮಿಟೇಶನ್ ಎನ್ನುವುದು ಒಂದು ಪ್ರದೇಶದ ಜನಸಂಖ್ಯೆಯ ಬದಲಾವಣೆಗಳನ್ನು ಪ್ರತಿಬಿಂಬಿಸಲು ಅಸೆಂಬ್ಲಿ ಅಥವಾ ಲೋಕಸಭಾ ಕ್ಷೇತ್ರದ ಗಡಿಗಳನ್ನು ಮರುರೂಪಿಸುವುದಾಗಿದೆ. ಡಿಲಿಮಿಟೇಶನ್ ಆಯೋಗವು ಸ್ವತಂತ್ರ ಸಂಸ್ಥೆಯಾಗಿದ್ದು, ಕಾರ್ಯಾಂಗ ಮತ್ತು ರಾಜಕೀಯ ಪಕ್ಷಗಳು ಅದರ ಕಾರ್ಯಚಟುವಟಿಕೆಯಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ. ಆಯೋಗವು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿದೆ. ಮುಖ್ಯ ಚುನಾವಣಾ ಆಯುಕ್ತರು ಅಥವಾ ಚುನಾವಣಾ ಆಯುಕ್ತರು ಮತ್ತು ರಾಜ್ಯ ಚುನಾವಣಾ ಆಯುಕ್ತರನ್ನು ಒಳಗೊಂಡಿರುತ್ತದೆ.
The draft recommendation of the J&K delimitation commission is unacceptable. The distribution of newly created assembly constituencies with 6 going to Jammu & only 1 to Kashmir is not justified by the data of the 2011 census.
— Omar Abdullah (@OmarAbdullah) December 20, 2021
ಜಮ್ಮು ಮತ್ತು ಕಾಶ್ಮೀರದ ಐವರು ಸಂಸದರು ಸಹ ಸದಸ್ಯರಾಗಿದ್ದಾರೆ, ಆದರೆ, ಅವರ ಶಿಫಾರಸುಗಳು ಆಯೋಗಕ್ಕೆ ಬದ್ಧವಾಗಿಲ್ಲ. ಫಾರೂಕ್ ಅಬ್ದುಲ್ಲಾ ಸೇರಿದಂತೆ ಮೂವರು ನ್ಯಾಷನಲ್ ಕಾನ್ಫರೆನ್ಸ್ ಸಂಸದರು ಫೆಬ್ರವರಿಯಲ್ಲಿ ಡಿಲಿಮಿಟೇಶನ್ ಆಯೋಗದ ಹಿಂದಿನ ಸಭೆಯನ್ನು ಬಹಿಷ್ಕರಿಸಿದ್ದರು. ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣವೊಂದು ಬಾಕಿ ಇರುವ ಕಾರಣ ಆಯೋಗದ ಅಧ್ಯಕ್ಷರು ತಮ್ಮ ಸಮಸ್ಯೆಗಳನ್ನು ತಿಳಿಸಿದರೆ ಸಭೆಗೆ ಸೇರುವುದಾಗಿ ಅವರು ಸೂಚಿಸಿದ್ದಾರೆ.
This commision has been created simply to serve BJPs political interests by dividing people along religious & regional lines. The real game plan is to install a government in J&K which will legitimise the illegal & unconstitutional decisions of August 2019.
— Mehbooba Mufti (@MehboobaMufti) December 20, 2021
ಇದನ್ನೂ ಓದಿ: Sheena Bora Murder: ಶೀನಾ ಬೋರಾ ಕಾಶ್ಮೀರದಲ್ಲಿ ಜೀವಂತವಾಗಿದ್ದಾಳೆ; ಅಚ್ಚರಿಯ ವಿಷಯ ತಿಳಿಸಿದ ಇಂದ್ರಾಣಿ ಮುಖರ್ಜಿ
ಜಮ್ಮು ಮತ್ತು ಕಾಶ್ಮೀರ: ಪುಲ್ವಾಮಾದಲ್ಲಿ ಓರ್ವ ಭಯೋತ್ಪಾದಕನನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು