ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸರ್ಕಾರದಿಂದ ಸರ್ಕಸ್, ಚಿನ್ನದ ಮೊಟ್ಟೆ ಗಣಿ ಇಲಾಖೆಯಲ್ಲಿ ರಾಜಧನ ಸೊರಿಕೆ ತಡೆಗೆ ವಿನೂತನ ಪ್ಲಾನ್!

| Updated By: ಸಾಧು ಶ್ರೀನಾಥ್​

Updated on: Oct 13, 2023 | 10:45 AM

ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸರ್ಕಸ್ ಮಾಡುತ್ತಿರುವ ರಾಜ್ಯ ಸರ್ಕಾರವು ಚಿನ್ನದ ಮೊಟ್ಟೆಯಂತಿರುವ ರಾಜ್ಯ ಗಣಿ ಇಲಾಖೆಯಲ್ಲಿ ರಾಜಧನ ವಂಚನೆ ತಡೆಯಲು ವಿನೂತನ ಮಾದರಿ ಅಂದರೆ ಯಂತ್ರೋಪಕರಣಗಳ ಚಾಲನೆ, ಸಾಮಾಗ್ರಿ ಸಂಗ್ರಹ, ವಿದ್ಯುತ್ ಬಿಲ್ ಆಧಾರದ ಮೇಲೆ ರಾಜಧನ ಸಂಗ್ರಹಕ್ಕೆ ಆದೇಶ ಹೊರಡಿಸಿದೆ.

ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸರ್ಕಾರದಿಂದ ಸರ್ಕಸ್, ಚಿನ್ನದ ಮೊಟ್ಟೆ ಗಣಿ ಇಲಾಖೆಯಲ್ಲಿ ರಾಜಧನ ಸೊರಿಕೆ ತಡೆಗೆ ವಿನೂತನ ಪ್ಲಾನ್!
ಚಿನ್ನದ ಮೊಟ್ಟೆ ಗಣಿ ಇಲಾಖೆಯಲ್ಲಿ ರಾಜಧನ ಸೊರಿಕೆ ತಡೆಯಲು ವಿನೂತನ ಚಿಂತನೆ
Follow us on

ಚಿಕ್ಕಬಳ್ಳಾಪುರ, ಅಕ್ಟೋಬರ್​ 13: ಗ್ಯಾರಂಟಿ ಯೋಜನೆಗಳ ಮೂಲಕ ಜನಪ್ರಿಯವಾಗಿರುವ ರಾಜ್ಯ ಸರ್ಕಾರ (siddaramaiah), ಗ್ಯಾರಂಟಿ (guarantee) ಯೋಜನೆಗಳಿಗೆ ಹಣ ಹೊಂದಿಸಲು ಆದಾಯ ಮೂಲಕ್ಕಾಗಿ ದಿನೆ ದಿನೇ ವಿನೂತನ ಚಿಂತನೆ ನಡೆಸಿದಂತೆ ಕಾಣ್ತಿದೆ, ಸರ್ಕಾರದಲ್ಲಿ ಚಿನ್ನದ ಮೊಟ್ಟೆಯಂತಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ (mines department ) ಸೋರಿಕೆಯಾಗ್ತಿದ್ದ ರಾಜಧನ ಸಂಗ್ರಹದಲ್ಲಿ (royalty) ಮತ್ತಷ್ಟು ಸುಧಾರಣೆ ಮಾಡಿಕೊಂಡು ವಿನೂತನ ರೀತಿಯಲ್ಲಿ ರಾಜಧನ ಸಂಗ್ರಹಕ್ಕೆ ಮುಂದಾಗಿದೆ.

ರಾಜಧನ ಸಂಗ್ರಹಕ್ಕೆ ಏನು ಪ್ಲಾನ್ ಮಾಡಿದೆ:
ಇಲಾಖೆಯ ಅಧಿಕಾರಿಗಳ ಕಣ್ಣಿಗೆ ಮಣ್ಣು ಎರಚಿ ರಾಜಧನ ಸಂದಾಯ ಮಾಡುವಲ್ಲಿ ಕೆಲವು ಸ್ಟೋನ್ ಕ್ರಷರ್ ಗಳು, ಕಲ್ಲಿನ ಉತ್ಪನ್ನಗಳ ಸಾಗಾಟದಾರರು, ಗ್ರಾನೈಟ್ ಉದ್ಯಮೆದಾರರು ವಂಚನೆ ಮಾಡುವ ಪ್ರಕರಣಗಳು ಕಂಡು ಬಂದಿದ್ದವು. ಇದ್ರಿಂದ ರಾಜಧನ ವಂಚನೆ ತಡೆಯಲು ಮುಂದಾಗಿರುವ ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಈಗ ವಿನೂತನ ಮಾದರಿ ಅಂದರೆ ಯಂತ್ರೋಪಕರಣಗಳ ಚಾಲನೆ, ಸಾಮಾಗ್ರಿ ಸಂಗ್ರಹ, ವಿದ್ಯುತ್ ಬಿಲ್ ಆಧಾರದ ಮೇಲೆ ರಾಜಧನ ಸಂಗ್ರಹಕ್ಕೆ ಆದೇಶ ಹೊರಡಿಸಿದೆ.

ರಾಜಧನ ವಂಚನೆಯ ಬಗ್ಗೆ ಟಿವಿ9 ಪದೆ ಪದೆ ವರದಿ ಪ್ರಸಾರ ಮಾಡಿತ್ತು:
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ 77 ಕ್ರಷರ್ ಗಳು ಹಾಗೂ 203 ಕಲ್ಲು ಕ್ವಾರಿಗಳಲ್ಲಿ ಹೇಗೆ ರಾಜಧನ ವಂಚಿಸಿ ಅಕ್ರಮವಾಗಿ ಕಲ್ಲು, ಗ್ರಾನೈಟ್ ದಿಮ್ಮೆಗಳು ಹಾಗೂ ಕಲ್ಲಿನ ಉತ್ಪನ್ನಗಳ ಸಾಗಾಟ ಮಾಡುವ ಕುರಿತು 19/6/2023, 2/11/2023, 21/6/2023 ದಿನಾಂಕಗಳಲ್ಲಿ ಸಾಕ್ಷಿ ಸಮೇತ ಟಿವಿ9 ಕನ್ನಡ ಡಿಜಿಟಲ್ ವರದಿ ಮಾಡಿತ್ತು, ಆಗ ಅಧಿಕಾರಿಗಳು ಕಾರ್ಯಚರಣೆ ಮಾಡಿ ಕೆಲವು ವಾಹನಗಳಿಗೆ ದಂಡ ವಿಧಿಸಿದ್ದರು.

ರಾಜಧನ ಸೋರಿಕೆ ಸಂಗ್ರಹಕ್ಕೆ ಕಾರ್ಯಾಚರಣೆ:
ಕಲ್ಲು ಗಣಿಗಾರಿಕೆಯಲ್ಲಿ ಸೊರಿಕೆಯಾಗುತ್ತಿದ್ದ ರಾಜಧನ ತಡೆಯಲು ವಿನೂತನ ಪ್ರಯೋಗದ ಸುತ್ತೋಲೆ ಹಿಡಿದು ಚಿಕ್ಕಬಳ್ಳಾಫುರದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಥಿ ಹಿರಿಯ ಭೂ ವಿಜ್ಞಾನಿ ಶ್ರೀಮತಿ ಕೃಷ್ಣವೇಣಿ ಮೂರು ತಂಡಗಳನ್ನು ಮಾಡಿದ್ದು, ಕ್ರಷರ್ ಗಳಲ್ಲಿರುವ ಸ್ಟಾಕ್, ವಿದ್ಯುತ್ ಬಿಲ್ , ಸಂದಾಯವಾಗಿರುವ ರಾಜಧನ ಪರಿಶೀಲನೆ ನಡೆಸಿದ್ದು ಬಾಕಿ ಬರಬೇಕಾದ ರಾಜಧನ ಕಟ್ಟಿ ಇಲ್ಲವಾದ್ರೆ ಕ್ರಷರ್ ನಿಲ್ಲಿಸಿ ಅಂತ ಖಡಕ್ ಎಚ್ಚರಿಕೆ ನೀಡಿ ಕಾರ್ಯಾಚರಣೆ ನಡೆಸಿದ್ದಾರೆ, ಇದೆ ವೇಳೆ 48 ಸ್ಟೋನ್ ಕ್ರಷರ್ ಘಟಕಗಳಿಗೆ ನೋಟೀಸ್ ಜಾರಿ ಮಾಡಿದ್ದಾರೆ.

ಬಳ್ಳಾರಿಯ ಗಣಿಯನ್ನು ಮೀರಿಸಿದಂತಿದೆ ಚಿಕ್ಕಬಳ್ಳಾಪುರದ ಕಲ್ಲು ಗಣಿ:
ಗಣಿನಾಡು ಬಳ್ಳಾರಿಯನ್ನೇ ಮೀರಿಸುವ ಹಾಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಲ್ಲು ಗಣಿಗಾರಿಕೆ ಬೆಳೆದು ನಿಂತಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 203 ಕಲ್ಲುಕ್ವಾರಿಗಳು ಹಾಗೂ 77 ಕ್ರಷರ್‍ ಗಳು ತಲೆ ಎತ್ತಿವೆ. ಕಲ್ಲು ಗಣಿಗಾರಿಕೆ ಹಾಗೂ ಕಲ್ಲುಪುಡಿ ಘಟಕಗಳ ಅಬ್ಬರದಲ್ಲಿ ರಾಜ್ಯಸರ್ಕಾರಕ್ಕೆ ಪ್ರತಿದಿನ ಲಕ್ಷಾಂತರ ರೂಪಾಯಿ ರಾಜಧನ ವಂಚನೆಯಾಗುತ್ತಿದೆ. ಗಣಿಧಣಿಗಳು ಚಾಪೆ ಕೆಳಗೆ ತೂರಿ ಸರ್ಕಾರಕ್ಕೆ ರಾಯಲ್ಟಿ ವಂಚನೆ ಮಾಡುತ್ತಿರುವ ಬಗ್ಗೆ ಟಿವಿ9 ಕನ್ನಡ ಡಿಜಿಟಲ್ ಮೂರ್ನಾಲ್ಕು ಬಾರಿ ಸಾಕ್ಷಿ ಸಮೇತ ವರದಿ ಪ್ರಕಟ ಮಾಡಿತ್ತು.

ಚಿಕ್ಕಬಳ್ಳಾಪುರಕ್ಕೆ 225 ಕೋಟಿ ಟಾರ್ಗೆಟ್ ನೀಡಿರುವ ಸರ್ಕಾರ:
ನಿನ್ನೆಗುರುವಾರ (12_10_2023) ಸಚಿವಸಂಪುಟ ಉಪ ಸಮೀತಿ ಸಭೆ ನಡೆದಿದೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ರಾಜಧನ ಸೋರಿಕೆ ಹಾಗೂ ಒತ್ತುವರಿ ಗಣಿಗಾರಿಕೆಯ ಬಗ್ಗೆ ಚರ್ಚೆಯಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯೊಂದಕ್ಕೆ 225 ಕೋಟಿ ರೂಪಾಯಿ ರಾಜಧನ ಸಂಗ್ರಹಕ್ಕೆ ಟಾರ್ಗೆಟ್ ನೀಡಲಾಗಿದೆ. ಇದ್ರಿಂದ ಚಿಕ್ಕಬಳ್ಳಾಪುರದಲ್ಲಿ ಅಧಿಕಾರಿಗಳು ಹೈಅಲರ್ಟ್ ಆಗಿದ್ದಾರೆ..

ಹಿರಿಯ ಭೂ ವಿಜ್ಞಾನಿ ಹೇಳುವುದೇನು?:
ರಾಜಧನ ಸಂದಾಯ, ಸಾಮಗ್ರಿ ಸ್ಟಾಕ್ ಹಾಗೂ ವಿದ್ಯುತ್ ಬಿಲ್ ಗಳ ಮದ್ಯೆ ಹೊಂದಾಣಿಕೆ ಆಗ್ತಿಲ್ಲ. ಇಲಾಖೆಗೆ ಒಂದು ಲೆಕ್ಕೆ ತೊರಿಸಿ ಇನ್ನೊಂದು ಲೆಕ್ಕೆದಲ್ಲಿ ವ್ಯವಹಾರ ಮಾಡಿರುವ ಶಂಕೆ ಕಂಡು ಬಂದಿದೆ. ಇದ್ರಿಂದ 48 ಸ್ಟೋನ್ ಕ್ರಷರ್ ಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಇನ್ನುಳಿದ ಕ್ರಷರ್ ಗಳು ಹಾಗೂ ಕ್ವಾರಿಗಳ ಪರಿಶೀಲನೆ ನಡೆದಿದೆ ಎಂದು ಭೂ ವಿಜ್ಞಾನಿ ಕೃಷ್ಣವೇಣಿ ತಿಳಿಸಿದರು.

ಅಧಿಕಾರಿಗಳ ಕ್ರಮಕ್ಕೆ ಕೆಲವು ಸ್ಟೋನ್ ಕ್ರಷರ್ ಮಾಲಿಕರ ವಿರೋಧ:
ಕಲ್ಲು ಗಣಿಗಾರಿಕೆಯಲ್ಲಿ ವಿದ್ಯುತ್ ಬಿಲ್ ಆಧಾರದ ಮೇಲೆ ರಾಜಧನ ಸಂಗ್ರಹ ಮಾಡುವುದನ್ನು ಕೆಲವು ಸ್ಟೋನ್ ಕ್ರಷರ್ ಮಾಲಿಕರ ವಿರೋಧ ವ್ಯಕ್ತಪಡಿಸಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ಧೇಶಕ ಸುತ್ತೋಲೆಗೆ ವಿರೋಧ ಮಾಡಿದ್ದಾರೆ. ವಿದ್ಯುತ್ ಏರಿಳಿತ, ಯಂತ್ರೋಪಕರಣಗಳ ಸಾಮರ್ಥ್ಯ ಯಾವಾಗಲೂ ಒಂದೆ ರೀತಿ ಇರುವುದಿಲ್ಲ ಮೊದಲಿನಂತೆ ರಾಜಧನ ಸಂಗ್ರಹ ಇರಲಿ ಎಂದು ವಾದ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ