ಚಿಕ್ಕಬಳ್ಳಾಪುರ: ಗಂಡ ಬೇಡ ಎಂದು ಮನೆ ಬಿಟ್ಟು ಹೋಗಿದ್ದ ಮಡದಿ; ಪತ್ನಿ ಮೇಲಿನ ಕೋಪಕ್ಕೆ ಚುಚ್ಚೇ ಬಿಟ್ಟ ಪಾಪಿ ಪತಿ

ಅವರದ್ದು ಲವ್ ಮ್ಯಾರೇಜ್, ತಿಂಗಳಿನಿಂದ ನಾಪತ್ತೆಯಾಗಿದ್ದ ಪತ್ನಿ ಅಪ್ಪಿತಪ್ಪಿ ಇತನ ಕಣ್ಣಿಗೆ ಬಿದ್ದಿದ್ದಾಳೆ. ಹೆಂಡತಿ ಕಂಡಿದ್ದೇ ತಡ, ಬಾ ಮನೆಗೆ ಹೋಗೋಣ ಎಂದಿದ್ದಾನೆ. ಇದಕ್ಕೆ ಒಪ್ಪದ ಪತ್ನಿಗೆ ಸ್ಕ್ರೂಡ್ರೈವರ್​ನಿಂದ ಪತ್ನಿ ಎದೆ, ಕುತ್ತಿಗೆಗೆ ಚುಚ್ಚಿದ್ದಾನೆ.

ಚಿಕ್ಕಬಳ್ಳಾಪುರ: ಗಂಡ ಬೇಡ ಎಂದು ಮನೆ ಬಿಟ್ಟು ಹೋಗಿದ್ದ ಮಡದಿ; ಪತ್ನಿ ಮೇಲಿನ ಕೋಪಕ್ಕೆ ಚುಚ್ಚೇ ಬಿಟ್ಟ ಪಾಪಿ ಪತಿ
ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆ
Follow us
ಕಿರಣ್ ಹನುಮಂತ್​ ಮಾದಾರ್
|

Updated on:Apr 14, 2023 | 9:15 AM

ಚಿಕ್ಕಬಳ್ಳಾಪುರ: ಪೊಲೀಸರು ಆರೋಪಿಗೆ ಬೇಡಿ ಹಾಕಿ ಎಳೆದು ತರುತ್ತಿದ್ದಾರೆ, ದುರುಳನ ಕೈಯಲ್ಲಿರುವ ಚಾಕು, ಕೃತ್ಯಕ್ಕೆ ಸಾಕ್ಷಿ ಹೇಳುತ್ತಿದೆ. ಹೌದು ಹೀಗೆ ಪೊಲೀಸರ ಕೈಯಲ್ಲಿ ಸಿಕ್ಕಿಹಾಕಿಕೊಂಡಿರುವ ಇತನ ಹೆಸರು ರಾಜೇಶ್. ಕೋಲಾರ ಮೂಲದ ಇತ ಮೋಟಾರ್ ರಿಪೇರಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಮೊದಲ ಪತ್ನಿ ಲೀಲಾ ಬಾಣಂತನಕ್ಕೆಂದು ತವರು ಮನೆಗೆ ಹೋದರೆ, ಆಕೆಯ ಹಿಂದೆಯೇ ಹೋಗಿ ಪತ್ನಿಯ ಅಕ್ಕ ನಿರ್ಮಲಾಗೆ ಮರಳು ಮಾಡಿ 2ನೇ ಮದುವೆ ಮಾಡಿಕೊಂಡಿದ್ದ. ಬಳಿಕ ನಿರ್ಮಲಾ ಒಂದು ತಿಂಗಳ ಹಿಂದೆ ಮನೆ ಬಿಟ್ಟು ಹೋಗಿದ್ದಳಂತೆ. ಮೊನ್ನೆ ಚಿಕ್ಕಬಳ್ಳಾಪುರ ತಾಲೂಕಿನ ಪಟ್ರೇನಹಳ್ಳಿಯ ಸ್ನೇಹಿತೆ ಮನೆಯಲ್ಲಿ ಅಪ್ಪಿತಪ್ಪಿ ರಾಜೇಶನ ಕಣ್ಣಿಗೆ ಬಿದ್ದಿದ್ದು, ಪತ್ನಿ ಬಳಿ ಓಡೋಡಿ ಬಂದು, ಬಾ ಮನೆಗೆ ಹೋಗೋಣ ಎಂದು ಪೀಡಿಸಿದ್ದಾನೆ. ಇವನ ಕಾಟಕ್ಕೆ ಬೇಸತ್ತಿದ್ದ ನಿರ್ಮಲಾ ನಾನ್ ಬರಲ್ಲ ಹೋಗೋ ಎಂದಿದ್ದಾಳೆ. ಇಷ್ಟಕ್ಕೆ ಕೋಪಗೊಂಡ ರಾಜೇಶ, ಕೈಯಲ್ಲಿದ್ದ ಸ್ಕ್ರೂಡ್ರೈವರ್​ನಿಂದ ಪತ್ನಿ ಎದೆ, ಕುತ್ತಿಗೆಗೆ ಚುಚ್ಚಿದ್ದಾನೆ. ಗಂಭೀರ ಗಾಯಗೊಂಡ ನಿರ್ಮಲಾ ಈಗ ಆಸ್ಪತ್ರೆಯಲ್ಲಿ ನರಳಾಡುತ್ತಿದ್ದಾಳೆ.

ಬೆಂಗಳೂರಿನಿಂದ ಬಂದಿದ್ದ ನಿರ್ಮಲಾ

ಅಸಲಿಗೆ ನಿರ್ಮಲಾ ಬೆಂಗಳೂರಿನ ಕೆ.ಆರ್.ಪುರಂನಲ್ಲಿ ಸಂಬಂಧಿಕರ ಜೊತೆ ವಾಸವಾಗಿದ್ದಳು. ಅನಾರೋಗ್ಯದಿಂದಾಗಿ ಚಿಕಿತ್ಸೆ ಪಡೆಯುವುದಕ್ಕೆ ಚಿಕ್ಕಬಳ್ಳಾಪುರಕ್ಕೆ ಬಂದಿದ್ದ ಸಮಯದಲ್ಲಿ ಈ ದುರಂತ ನಡೆದಿದೆ. ಬಳಿಕ ಆತನೇ ಹೋಗಿ ಗ್ರಾಮಾಂತರ ಠಾಣೆಯಲ್ಲಿ ಶರಣಾಗಿದ್ದಾನೆ. ಮೊದಲ ಪತ್ನಿಗೆ ಮೋಸ ಮಾಡಿ, ಬಳಿಕ ಅಕ್ಕನ ಬಾಳನ್ನೂ ನಾಶ ಮಾಡಿದ ಪಾಪಿ ಈಗ ಕಂಬಿ ಎಣಿಸುತ್ತಿದ್ದಾನೆ. ಇತ್ತ ಗಂಡನ ಕೈಗೆ ಸಿಕ್ಕಿ ನಲುಗಿದ ಮಹಿಳೆ ಕಣ್ಣೀರು ಹಾಕುತ್ತಿದ್ದಾಳೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:15 am, Fri, 14 April 23