ಕಿಚನ್ ರಾಣಿ ಟೊಮ್ಯಾಟೊಗೆ ಎಲ್ಲಿಲ್ಲದ ಬೇಡಿಕೆ; ಹುಳಿರಾಣಿ ಟೊಮ್ಯಾಟೊ ಬದಲು ಗೃಹಿಣಿಯರು ಈಗ ಹುಳಿರಾಜನ ಮೊರೆ ಹೋಗಿದ್ದಾರೆ!

| Updated By: ಸಾಧು ಶ್ರೀನಾಥ್​

Updated on: Jul 14, 2023 | 1:08 PM

ಒಟ್ನಲ್ಲಿ ಹುಳಿರಾಣಿ ಟೊಮ್ಯಾಟೊ ಬದಲು... ಗೃಹಿಣಿಯರು ಈಗ ಹುಳಿರಾಜ ನಿಂಬೆಹಣ್ಣಿನ ಮೊರೆ ಹೋಗಿದ್ದು, ಅಡುಗೆಗೆ ಟೊಮ್ಯಾಟೊ ಬದಲು ನಿಂಬೆಹಣ್ಣು ಬಳಸುತ್ತಿದ್ದಾರೆ! 

ಕಿಚನ್ ರಾಣಿ ಟೊಮ್ಯಾಟೊಗೆ ಎಲ್ಲಿಲ್ಲದ ಬೇಡಿಕೆ; ಹುಳಿರಾಣಿ ಟೊಮ್ಯಾಟೊ ಬದಲು ಗೃಹಿಣಿಯರು ಈಗ ಹುಳಿರಾಜನ ಮೊರೆ ಹೋಗಿದ್ದಾರೆ!
ಕಿಚನ್ ರಾಣಿ ಟೊಮ್ಯಾಟೊಗೆ ಬಂದಿದೆ ಎಲ್ಲಿಲ್ಲದ ಬೇಡಿಕೆ
Follow us on

ಚಿಕ್ಕಬಳ್ಳಾಪುರ, ಜುಲೈ 14: ಕಿಚನ್ ರಾಣಿ ಎಂದೆ ಖ್ಯಾತಿಯಾಗಿದ್ದ ಕೆಂಪು ಸುಂದರಿ ಟೊಮ್ಯಾಟೊ…ಈಗ ಸಿಕ್ಕಾಪಟ್ಟೆ ಡಿಮ್ಯಾಂಡ್. ಕೈಯಲ್ಲಿ ಗರಿಗರಿ ನೋಟು ಹಿಡಿದುಕೊಂಡು ಕೆಂಪು ಸುಂದರಿಯನ್ನು ಹುಡುಕಾಡಿದ್ರೂ… ಬೇಕಾದಷ್ಟು ಸಿಕ್ತಿಲ್ಲ, ಸಿಕ್ಕರೂ… ದುಬಾರಿ ಬೆಲೆ ತೆತ್ತು ಕೊಂಡುಕೊಳ್ಳಲಾಗ್ತಿಲ್ಲ, ಇದ್ರಿಂದ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಗೃಹಿಣಿಯರು, ಅಡುಗೆಗೆ ಟೊಮ್ಯಾಟೊ (Tomato price) ಬದಲು ನಿಂಬೆಹಣ್ಣಿನ (lemon) ಮೊರೆ ಹೋಗಿದ್ದಾರೆ. ಇದ್ರಿಂದ ನಿಂಬೆ ಹಣ್ಣಿಗೂ ಡಿಮ್ಯಾಡ್ ಬಂದಿದೆ. ಈ ಕುರಿತು ಒಂದು ವರದಿ (chikkaballapur news).

ತರಕಾರಿ ವ್ಯಾಪಾರಿ ಭಾಗ್ಯಮ್ಮಳ ತರಕಾರಿ ರೇಟ್ ಕಾರ್ಡ್​​ ಕೇಳಿದ್ರೆ…. ಕೆಲವರು ಈ ತರಕಾರಿ ಸಹವಾಸವೆ ಬೇಡ ಅಂತ… ರೇಟ್ ಕೇಳಿ ಕೇಳಿ ಬರಿಗೈಲ್ಲಿ ಹೊಗ್ತಿದ್ದಾರಂತೆ… ಕೆ.ಜಿ ಬೆಂಡೆಕಾಯಿಗೆ-40 ರೂಪಾಯಿ, ಮೆಣಸಿನಕಾಯಿ- 100 , ಬಜ್ಜಿ ಮೆಣಸಿಕಾಯಿ- 40, ಶುಂಠಿ-300 , ಮೂಲಂಗಿ-30 , ಆಲೂಗಡ್ಡೆ- 30, ನವಿಲು ಕೋಸು-50 , ಬೀನ್ಸ್-100 , ಹಾಗಲಕಾಯಿ-50 , ಬೀಟ್ ರೂಟ್- 40 , ನುಗ್ಗೆಕಾಯಿ-60 , ಕ್ಯಾಪ್ಸಿಕಂ – 80 , ಸೋರೆಕಾಯಿ- 40 , ಚವಳಿಕಾಯಿ-40 , ಹೀರೇಕಾಯಿ-40 , ಬೆಳ್ಳುಳ್ಳಿ- 200 ರೂಪಾಯಿ ಆಗಿದೆ.

ಇದರ ಜೊತೆಗೆ ಕೆಂಪು ಸುಂದರಿ ಟೊಮ್ಯಾಟೊ ಬೆಲೆ ಕೆ.ಜಿಗೆ 150 ರೂಪಾಯಿ ಇದೆ. ಇದ್ರಿಂದ ತಲೆ ಕೆಡಿಸಿಕೊಂಡಿರುವ ಗೃಹಿಣಿಯರು, ಈಗ ಟೊಮ್ಯಾಟೊ ಸಹವಾಸದ ಬದಲು ಪರ್ಯಾಯವಾಗಿ ಅದೊಂದು ಹುಳಿ ಹಣ್ಣಿನ ಮೊರೆ ಹೋಗಿದ್ದಾರೆ. ಅಷ್ಟಕ್ಕೂ ಅದ್ಯಾವುದು ಗೊತ್ತಾ!

ಇದನ್ನೂ ಓದಿ: ಈಗ ವಿಮಾನ ಪ್ರಯಾಣದ​ ಟಿಕೆಟ್​ ಬುಕ್ ಮಾಡಿದರೆ 1.5 ಕೆಜಿ ಟೊಮೇಟೊ ಫ್ರೀ ಕೊಡ್ತಾರಂತೆ!

ಹೌದು!! ಟೊಮ್ಯಾಟೊ ದುಬಾರಿಯಾಗಿ ಆಪಲ್ ಬೆಲೆ ಮೀರಿಸಿದೆ. ಇತ್ತಿಚಿಗೆ ಹುಣಸೆ ಹಣ್ಣು ಸಹ ದುಬಾರಿಯಾಗಿದೆ. ಇದ್ರಿಂದ ಮಹಿಳೆಯರು ಟೊಮ್ಯಾಟೊನೂ ಬೇಡ, ಹುಣಸೇಹಣ್ಣು ಬೇಡ – ಅದರ ಬದಲು ಹುಳಿ ಹುಳಿ ನಿಂಬೆಹಣ್ಣಿನ ಮೊರೆ ಹೊಗ್ತಿದ್ದಾರೆ. ಈಗ ಮಳೆಗಾಲ ಇರುವ ಕಾರಣ ನಿಂಬೆ ಹಣ್ಣು ಬೆಲೆ ತುಂಬಾ ಕಡಿಮೆ, ಎರಡು ರೂಪಾಯಿಗೆ ನಿಂಬೆಹಣ್ಣು ಸಿಕ್ತಿದೆ ಅಂತ ಚಿತ್ರಾನ್ನದಿಂದ ಹಿಡಿದು ಕೆಲವು ಅಡುಗೆಗೆ ನಿಂಬೆಹಣ್ಣಿನ ಹುಳಿ ಬಳಸುತ್ತಿದ್ದಾರೆ.

ಒಟ್ನಲ್ಲಿ ಹುಳಿರಾಣಿ ಟೊಮ್ಯಾಟೊ ಬದಲು… ಗೃಹಿಣಿಯರು ಈಗ ಹುಳಿರಾಜ ನಿಂಬೆಹಣ್ಣಿನ ಮೊರೆ ಹೋಗಿದ್ದು, ಅಡುಗೆಗೆ ಟೊಮ್ಯಾಟೊ ಬದಲು ನಿಂಬೆಹಣ್ಣು ಬಳಸುತ್ತಿದ್ದಾರೆ!

ಚಿಕ್ಕಬಳ್ಳಾಪುರ ಜಿಲ್ಲಾ ವರದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ