ಟೊಮೆಟೊ ತೋಟಕ್ಕೆ ಸರ್ಕಾರಿ ಬೋರ್ ವೇಲ್ ದುರ್ಬಳಕೆ: ವಾಟರ್ ಮ್ಯಾನ್ ವಿರುದ್ಧ ಗ್ರಾಮಸ್ಥರು ಆಕ್ರೋಶ
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಕಾನಗಮಾಕಲಪಲ್ಲಿ ಗ್ರಾಮ ಪಂಚಾಯಿತಿಯ ವಾಟರ್ ಮ್ಯಾನ್ ಶ್ರೀರಾಮನಾಯಕ್ ಎನ್ನುವವರು ಸರ್ಕಾರಿ ಬೋರ್ ವೆಲ್ ನೀರನ್ನ ತನ್ನ ಜಮೀನಿಗೆ ಹರಿಸಿಕೊಂಡು ಟೊಮೆಟೊ ಬೆಳೆಯುತ್ತಿದ್ದಾರೆ.
ಚಿಕ್ಕಬಳ್ಳಾಪುರ, ಜುಲೈ 23: ಇತ್ತೀಚೆಗೆ ಟೊಮೆಟೊ (tomato) ಬೆಲೆ ಗಗನಕ್ಕೆ ಏರಿದ ಹಿನ್ನೆಲೆ ತಾನು ಟೊಮೆಟೊ ಬೆಳೆದು ಲಕ್ಷ ಲಕ್ಷ ಸಂಪಾದನೆ ಮಾಡಬುದು ಎಂದು ದುರಾಸೆಗೆ ಬಿದ್ದ ಗ್ರಾಮ ಪಂಚಾಯತಿಯೊಂದರ ವಾಟರ್ ಮ್ಯಾನ್ (water man) ಕುಡಿಯುವ ನೀರಿನ ಸರ್ಕಾರಿ ಬೋರ್ ವೇಲ್ ನನ್ನು ತನ್ನ ಸ್ವಂತ ಟೊಮೆಟೊ ತೋಟಕ್ಕೆ ಬಳಸಿಕೊಳ್ಳುತ್ತಿರುವ ಪ್ರಕರಣ ಬಯಲಾಗಿದೆ.
ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಕಾನಗಮಾಕಲಪಲ್ಲಿ ಗ್ರಾಮ ಪಂಚಾಯಿತಿಯ ವಾಟರ್ ಮನ್ ಶ್ರೀರಾಮನಾಯಕ್ ಎನ್ನುವವರು ಸರ್ಕಾರಿ ಬೋರ್ ವೆಲ್ ನೀರನ್ನ ತನ್ನ ಜಮೀನಿಗೆ ಹರಿಸಿಕೊಂಡು ಟೊಮೆಟೊ ಬೆಳೆಯುತ್ತಿದ್ದಾರೆ. ಇತ್ತ ಗ್ರಾಮದ ನಲ್ಲಿಯಲ್ಲಿ ನೀರು ಯಾಕೆ ಬರುತ್ತಿಲ್ಲ ಅಂತ ವಿಚಾರಿಸಿದಾಗ ವಾಟರ್ ಮ್ಯಾನ್ನ ಅಸಲಿ ಕರಾಮತ್ತು ಬಯಲಾಗಿದೆ.
ಇದನ್ನೂ ಓದಿ: Chikkaballapur News: ಹಣ ದ್ವಿಗುಣದ ಆಸೆಗೆ 3.21 ಲಕ್ಷ ರೂಪಾಯಿ ಕಳೆದುಕೊಂಡ ಚಿಕ್ಕಬಳ್ಳಾಪುರ ಶಿಕ್ಷಕಿ!
ಕಾನಗಮಾಕಲಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೂರಗಮಾಕಲಪಲ್ಲಿ ಗ್ರಾಮಕ್ಕೆ ಒಂದು ವಾರದಿಂದ ನೀರು ಪೂರೈಕೆಯಾಗಿಲ್ಲ. ಇದರಿಂದ ಗ್ರಾಮದ ಮಹಿಳೆಯರು ಗ್ರಾಮ ಹೊರವಲಯದ ಕಿಲೋಮೀಟರ್ ದೂರ ಸಾಗಿ ಖಾಸಗಿ ಬೋರ್ ವೆಲ್ಗಳಿಂದ ನೀರು ತರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಸರ್ಕಾರಿ ಬೋರ್ ವೇಲ್ನಿಂದ ಗ್ರಾಮಕ್ಕೆ ನೀರು ಪೂರೈಕೆ ಮಾಡುತ್ತಿಲ್ಲ ಅಂತ ಕೇಳಿದ ಗ್ರಾಮಸ್ಥರಿಗೆ ವಾಟರ್ ಮ್ಯಾನ್ ಶ್ರೀರಾಮನಾಯಕ್ ಧಮ್ಕಿ ಹಾಕ್ತಿದ್ದಾನಂತೆ. ಇದರಿಂದ ರೋಸಿಹೋದ ಗ್ರಾಮಸ್ಥರು ಶ್ರೀರಾಮನಾಯಕ್ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ರೇಷ್ಮೆ ಗೂಡಿನ ಬಾಕಿ ಹಣ ಕೊಡದೆ ಪ್ರಾಣ ಬೆದರಿಕೆ ಹಾಕಿದ ವ್ಯಾಪಾರಿ: ನ್ಯಾಯ ಕೋರಿ ಪೊಲೀಸ್ ಠಾಣೆ ಮೆಟ್ಟಿಲೇರಿದ ರೈತರು
ಶ್ರೀರಾಮನಾಯಕ್ ಸ್ಥಳೀಯ ಗ್ರಾಮಪಂಚಾಯಿತಿ ಸದಸ್ಯನ ಜೊತೆ ಸೇರಿ ಉದ್ದಟತನದಿಂದ ವರ್ತಿಸುತ್ತಿದ್ದಾನಂತೆ. ಈತನ ವರ್ತನೆ ವಿರುದ್ದ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಪಂಚಾಯಿತಿ ಪಿಡಿಓ ಸೇರಿದಂತೆ ಹಲವು ಅಧಿಕಾರಿಗಳಿಗೆ ದೂರು ನೀಡಿದ್ರೂ ಯಾರೂ ಏನೂ ಕ್ರಮ ಕೈಗೊಂಡಿಲ್ಲವಂತೆ. ಗ್ರಾಮದ ಜನರಿಗೆ ನೀರು ಸರಬರಾಜು ಮಾಡದೆ ತನ್ನ ಜಮೀನಿಗೆ ನೀರು ಹಾಯಿಸಿಕೊಳ್ಳುತ್ತಿರುವ ವಾಟರ್ ಮ್ಯಾನ್ ವಿರುದ್ದ ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.