ಚಿಕ್ಕಬಳ್ಳಾಪುರ: ತಾಲೂಕಿನ ಶ್ರೀನಿವಾಸ ಸಾಗರ ಜಲಾಶಯ(Srinivasa Sagara Dam)ದಲ್ಲಿ ಮುಳುಗಿ ಯುವಕನೊರ್ವ ಸಾವನ್ನಪ್ಪಿದ ಘಟನೆ ನಡೆದಿದೆ. ಮೊಹಮ್ಮದ್ ಯಾಸೀನ್ ಮೃತ ವ್ಯಕ್ತಿ. ಇತ ಬೆಂಗಳೂರಿನ ಶ್ಯಾಂಪುರ ನಿವಾಸಿಯಾಗಿದ್ದು, ವೀಕೆಂಡ್ ಹಿನ್ನೆಲೆ ಸ್ನೇಹಿತರ ಜೊತೆಗೆ ಪ್ರವಾಸಕ್ಕೆ ಬಂದಿದ್ದಾಗ ಈ ಅವಘಡ ಸಂಭವಿಸಿದೆ. ಈ ಕುರಿತು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ: ನಗರದ ವಿಜಯನಗರದಲ್ಲಿ ಉಸಿರುಗಟ್ಟಿಸಿ ಇಂಜಿನಿಯರ್ ಪತ್ನಿಯನ್ನ ಹತ್ಯೆ ಮಾಡಿದ ಘಟನೆ ನಡೆದಿದೆ. ಕಮಲಮ್ಮ(57) ಕೊಲೆಯಾದ ಮಹಿಳೆ. ಪತಿ ಮಲ್ಲಿಕಾರ್ಜುನ ಗೋವಾಕ್ಕೆ ತೆರಳಿದ್ದಾಗ ಮನೆಗೆ ನುಗ್ಗಿದ ದುಷ್ಕರ್ಮಿಗಳು ಬಾಯಿಗೆ ಬಟ್ಟೆ ತುರುಕಿ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾರೆ. ಈ ಕುರಿತು ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಸ್ ದಾಖಲಾಗಿದೆ.
ಇದನ್ನೂ ಓದಿ:Raga : ಮೃತ ವ್ಯಕ್ತಿಯನ್ನೂ ಬದುಕಿಸಬಲ್ಲ, ರೋಗಗಳನ್ನೂ ಗುಣಪಡಿಸಬಲ್ಲ ಸಂಜೀವಿನಿಯೇ ರಾಗ
ದಕ್ಷಿಣ ಕನ್ನಡ: ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಬಳಿ ಉಚಿತ ಬಸ್ ವಿಚಾರವಾಗಿ ವಿದ್ಯಾರ್ಥಿಗಳು-ಪ್ರಯಾಣಿಕರ ನಡುವೆ ಗಲಾಟೆಯಾಗಿದೆ. ಮಂಗಳೂರುನಿಂದ ಮೂಡಿಗೆರೆ ಹೋಗುವ ಸರಕಾರಿ ಬಸ್ ಫುಲ್ ಆಗಿದ್ದು, ಕಾಲೇಜ್ ವಿದ್ಯಾರ್ಥಿಗಳು ಉಜಿರೆಯಲ್ಲಿ ಬಸ್ ಹತ್ತಿದ್ದಾರೆ. ಈ ವೇಳೆ ಕಂಡಕ್ಟರ್ ವಿದ್ಯಾರ್ಥಿಗಳನ್ನು ಬಸ್ನಲ್ಲಿ ಮುಂದೆ ಹೋಗಲು ತಳ್ಳಾಟ ನಡೆದಿದೆ. ಈ ವಿಚಾರದಲ್ಲಿ ಬಸ್ ಕಂಡಕ್ಟರ್ ಹಾಗೂ ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ನಡೆದು, ವಿದ್ಯಾರ್ಥಿಗಳು ಚಾರ್ಮಾಡಿ ಯುವಕರಿಗೆ ಕರೆ ಮಾಡಿ ಬಸ್ ಅಡ್ಡಹಾಕಲು ಮಾಹಿತಿ ನೀಡಿದ್ದಾರೆ. ಚಾರ್ಮಾಡಿಯಲ್ಲಿದ್ದ ಯುವಕರು ಚೆಕ್ ಪೋಸ್ಟ್ ಗೆ ಬಂದು ಗಲಾಟೆ ಮಾಡಿ, ಸರಕಾರಿ ಬಸ್ ಕಂಡಕ್ಟರ್ ಮತ್ತು ಪ್ಯಾಸೆಂಜರ್ಗೆ ಸ್ಥಳೀಯರು ಸೇರಿ ಹಲ್ಲೆಗೆ ಯತ್ನಿಸಿದ್ದಾರೆ.
ಇನ್ನಷ್ಟು ರಾಜ್ಯಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ