Raga : ಮೃತ ವ್ಯಕ್ತಿಯನ್ನೂ ಬದುಕಿಸಬಲ್ಲ, ರೋಗಗಳನ್ನೂ ಗುಣಪಡಿಸಬಲ್ಲ ಸಂಜೀವಿನಿಯೇ ರಾಗ

ರಾಗವು ಸಂಗೀತವನ್ನು ಸಂಯೋಜಿಸುವ ಸ್ವರಗಳ ಆರೋಹಣ ಮತ್ತು ಅವರೋಹಣ ನಿಯಮವಾಗಿದೆ. ರಾಗವು ಸ್ವರಗಳ ಗುಂಪಾಗಿದ್ದು, ಅದನ್ನು ಹಾಡುವ ಮೂಲಕ ಅಥವಾ ನುಡಿಸುವ ಮೂಲಕ ಮನಸ್ಸಿಗೆ ಶಾಂತಿಯನ್ನು ನೆಲೆಸುತ್ತದೆ. ರಾಗ ಎಂಬ ಪದವು ರಸ ಎಂಬ ಧಾತುವಿನಿಂದ ಬಂದಿದೆ.

Raga : ಮೃತ ವ್ಯಕ್ತಿಯನ್ನೂ ಬದುಕಿಸಬಲ್ಲ, ರೋಗಗಳನ್ನೂ ಗುಣಪಡಿಸಬಲ್ಲ ಸಂಜೀವಿನಿಯೇ ರಾಗ
Kamala Bharadwaj
Follow us
TV9 Web
| Updated By: ನಯನಾ ರಾಜೀವ್

Updated on:Jun 14, 2022 | 8:23 PM

ರಾಗವು ಸಂಗೀತವನ್ನು ಸಂಯೋಜಿಸುವ ಸ್ವರಗಳ ಆರೋಹಣ ಮತ್ತು ಅವರೋಹಣ ನಿಯಮವಾಗಿದೆ. ರಾಗವು ಸ್ವರಗಳ ಗುಂಪಾಗಿದ್ದು, ಅದನ್ನು ಹಾಡುವ ಮೂಲಕ ಅಥವಾ ನುಡಿಸುವ ಮೂಲಕ ಮನಸ್ಸಿಗೆ ಶಾಂತಿಯನ್ನು ನೆಲೆಸುತ್ತದೆ. ರಾಗ ಎಂಬ ಪದವು ರಸ ಎಂಬ ಧಾತುವಿನಿಂದ ಬಂದಿದೆ. ಇದರರ್ಥ ಸಂತೋಷಪಡಿಸುವುದು. ರಾಗದಲ್ಲಿ ಸ್ವರ ಮತ್ತು ವರ್ಣಗಳ ಸುಮಧುರ ಸಂಯೋಜನೆಯು ಮನಸ್ಸಿಗೆ ಮುದ ನೀಡುತ್ತದೆ. ರಾಗ ಎಂದರೇನು?, ರಾಗದಿಂದ ಆರೋಗ್ಯಕ್ಕೆ ಏನು ಪ್ರಯೋಜನ ಇವೆಲ್ಲದರ ಕುರಿತು ಯೋಗ ತಜ್ಞೆ ಕಮಲಾ ಭಾರದ್ವಾಜ್ ನೀಡಿರುವ ಮಾಹಿತಿ ಇಲ್ಲಿದೆ.

ಕಲ್ಪಿತ ಹಾಗೂ ಮನೋಧರ್ಮ ಸಂಗೀತ

ಕರ್ನಾಟಕ ಸಂಗೀತಕ್ಕೆ ಎರಡು ವಿಧಗಳಿವೆ ಕಲ್ಪಿತ ಸಂಗೀತ ಮತ್ತೊಂದು ಮನೋಧರ್ಮ ಸಂಗೀತ ಕಲ್ಪಿತ ಸಂಗೀತದಲ್ಲಿ ಈ ಮೊದಲು ಸಂಗೀತವನ್ನು ರಚನೆ ಮಾಡಿ, ನೆನಪಿನಲ್ಲಿಟ್ಟುಕೊಂಡು, ಪ್ರಾಕ್ಟೀಸ್ ಮಾಡಿ ಬಳಿಕ ಹಾಡುವುದು ಮನೋಧರ್ಮ ಸಂಗೀತವೆಂದರೆ ಇದರಲ್ಲಿ ಪ್ರಯೋಗವಿರುತ್ತದೆ.

ಪ್ರತಿ ರಾಗವು ಹೊಂದಿರುವ ಅಂಶಗಳು ಮೇಲಕ್ಕೇರುವ ಸ್ವರಗಳ ಕ್ರಮ (ಆರೋಹಣ) ಕೆಳಗಿಳಿಯುವ ಸ್ವರಗಳ ಕ್ರಮ (ಅವರೋಹಣ) ಮುಖ್ಯ ಮತ್ತು ಅಮುಖ್ಯ ಸ್ವರಗಳು ಸ್ವರಗಳನ್ನು ಅಲಂಕೃತವಾಗಿರಿಸುವ ಕ್ರಮಗಳು (ಗಮಕ)

 ರಾಗದ ಉಪಯೋಗ : – ಉದ್ವೇಗ, ಆತಂಕವನ್ನು ಕಡಿಮೆ ಮಾಡುತ್ತದೆ.

-ರಕ್ತದೊತ್ತಡವೂ ಕಡಿಮೆಯಾಗುತ್ತದೆ

– ದುಃಖವನ್ನು ಕಡಿಮೆ ಮಾಡುತ್ತದೆ.

– ರೋಗಿಯನ್ನು ಮಾನಸಿಕ ಆಘಾತದಿಂದ ಹೊರಬರಲು ಸಹಾಯ ಮಾಡುತ್ತದೆ.

– ಮನಸ್ಸಿನ ಏಕಾಗ್ರತೆಯನ್ನು ಉತ್ತೇಜಿಸುತ್ತದೆ. ಉಸಿರಾಟ ತೊಂದರೆ ದೂರಮಾಡುತ್ತದೆ

– ನೋವು, ಮೈಗ್ರೇನ್ ತಲೆನೋವು ನಿವಾರಿಸುತ್ತದೆ.

– ಉತ್ತಮ ನಿದ್ರೆಯನ್ನು ಉತ್ತೇಜಿಸುತ್ತದೆ. ನಿದ್ರಾಹೀನತೆ ಹೋಗಲಾಡಿಸುತ್ತದೆ, ( ನೀಲಾಂಬರಿ, ಆನಂದಭೈರವಿ, ಎದುಕುಲ ಕಾಂಬೋಜಿ, ಕಲ್ಯಾಣಿ) ಮನುಷ್ಯನ ಸ್ವಭಾವಕ್ಕನುಸಾರವಾಗಿ ರಾಗಗಳಿರುತ್ತವೆ, ಮನುಷ್ಯನಲ್ಲಿ ರಾಗ ಸಂಯೋಜನೆಯಾಗುತ್ತದೆ.

ರಾಗ ಚಿಕಿತ್ಸೆ ಎಂದರೇನು? ರಾಗಕ್ಕೆ ಅದರದ್ದೇ ಆದ ಶಕ್ತಿ ಇದೆ, ಪ್ರಾಚೀನ ಹಿಂದೂ ಸಂಪ್ರದಾಯದಲ್ಲಿ ರೋಗಕ್ಕೆ ರಾಗದಿಂದ ಅಥವಾ ಹಾಡಿನಿಂದಲೇ ಚಿಕಿತ್ಸೆ ನೀಡಲಾಡುತ್ತಿತ್ತು. ವೇದ ಮಂತ್ರವನ್ನು ಹೇಳುವ ಮೂಲಕಬೇರೆ ಬೇರೆ ರೀತಿಯ ಭಕ್ತಿಗಳು ಅಂದರೆ ಚೈತನ್ಯ ಸಂಪ್ರದಾಯ, ವಲ್ಲಭ ಸಂಪ್ರದಾಯ, ಹರಿದಾಸ ಸ್ವಾಮಿ ಅಕ್ಬರ್ ಸಂದರ್ಭದಲ್ಲಿ ಸಂಗೀತ ಗುರುವಾಗಿದ್ದು, ಥಾನ್ಸೇನ್ ಸಂಸ್ಥಾನದಲ್ಲಿ ಒಂದು ರಾಗವನ್ನು ಪ್ರಸ್ತುತಪಡಿಸುವ ಮೂಲಕ ಓರ್ವ ರಾಣಿಯ ಆರೋಗ್ಯವನ್ನು ಸರಿಪಡಿಸಿದ್ದರು.

ತ್ಯಾಗರಾಜರು ಬಿಲಹರಿ ರಾಗದ ನಾಜೀವ ಧಾರದ ಮೂಲಕ ಸತ್ತವರನ್ನೂ ಕೂಡ ಬದುಕಿಸಿದ್ದರು. ಮುತ್ತುಸ್ವಾಮಿ ಧೀಕ್ಷಿತರ ನವಗ್ರಹಕೃತಿ ಇದರಿಂದ ಹೊಟ್ಟೆನೋವು ಗುಣಪಡಿಸಲಾಗುತ್ತಿತ್ತು. ಶ್ಯಾಮ ಶಾಸ್ತ್ರಿಯವರ ದುರುಸುಗು ಸಂಪೂರ್ಣ ಆರೋಗ್ಯಕ್ಕಾಗಿ ಈ ರಾಗವನ್ನು ಹಾಡಲಾಗುತ್ತಿತ್ತು. ತ್ಯಾಗರಾಜರು ರಾಜರನ್ನು ಮಲಗಿಸಲು ಆಂದೋಲಿಕ ಉಪಚಾರ ಉಯ್ಯಾಳಲೋಕ, ನೀಲಾಂಬರಿ ರಾಗ, ಶ್ರೀರಾಮ ರಾಮ ರಾಮವನ್ನು ಹಾಡುತ್ತಿದ್ದರು. ನೀಲಾಂಬರಿ ರಾಗ ಕೇಳುವಾಗ ನಿದ್ರೆಯ ಬರುವ ಸಾಧ್ಯತೆ 78.84 ರಷ್ಟಿದ್ದರೆ ಕಲ್ಯಾಣ ರಾಗ ಹಾಡಿದರೆ ಶೇ. 82.19 ರಷ್ಟು ನಿದ್ರೆ ಬರುವ ಸಾಧ್ಯತೆ ಇರುತ್ತದೆ.

ಕಮಲಾ ಭಾರಧ್ವಾಜ್ ಕುರಿತು ಮಾಹಿತಿ: ಕಮಲಾ ಭಾರಧ್ವಾಜ್ ಪ್ರಸಿದ್ಧ ಯೋಗ ತಜ್ಞರಾಗಿದ್ದು, ಸತ್ಯವೆನ್ನುವ ಯೋಗ ಕೇಂದ್ರವನ್ನು ಮುನ್ನಡೆಸುತ್ತಿದ್ದಾರೆ. ಯೋಗದಲ್ಲಿ ಎಂಎಸ್​ಸಿ ಮಾಡಿದ್ದು, ಹಾಗೆಯೇ ಯೋಗದಲ್ಲಿಯೇ ಪಿಜಿ ಡಿಪ್ಲೊಮಾ ಓದಿದ್ದಾರೆ. ಅವರು ಜೈನ್​ ಕಾಲೇಜಿನಲ್ಲಿ ಎಂಬಿಎ ಪೂರೈಸಿದ್ದಾರೆ.

ಅವರಿಗೆ 2015ರಲ್ಲಿ ಯೋಗದಲ್ಲಿನ ಸಾಧನೆಗಾಗಿ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಯೋಗ ಕಲಾಸಾಧಕಿ ಪ್ರಶಸ್ತಿಗೂ ಭಾಜನರಾಗಿದ್ದಾರೆ, ಜ್ಯೋತಿಷ ರತ್ನ ಸೇರಿದಂತೆ ಹಲವು ಕೋರ್ಸ್​ಗಳನ್ನು ಮಾಡಿದ್ದಾರೆ.  ರಾಗದ ಕುರಿತ ಹೆಚ್ಚಿನ ಮಾಹಿತಿಗಾಗಿ ಮೊ.ನಂ.9663879672. www.astroyoga.co.in ಭೇಟಿ ನೀಡಿ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:31 pm, Tue, 14 June 22

ದರ್ಶನ್ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಪೊಲೀಸರ ಬಿಗಿ ಭದ್ರತೆ
ದರ್ಶನ್ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಪೊಲೀಸರ ಬಿಗಿ ಭದ್ರತೆ
ಆಸ್ಪತ್ರೆಯೊಳಗೆ ಜೋರಾಗಿ ಹಾಡು ಹಾಕಿ ನರ್ಸ್​ಗಳ ಡ್ಯಾನ್ಸ್
ಆಸ್ಪತ್ರೆಯೊಳಗೆ ಜೋರಾಗಿ ಹಾಡು ಹಾಕಿ ನರ್ಸ್​ಗಳ ಡ್ಯಾನ್ಸ್
ಗುಲ್ಮಾರ್ಗ್​ನಲ್ಲಿ ತಾಜಾ ಹಿಮಪಾತ; ಕುಣಿದು ಕುಪ್ಪಳಿಸಿದ ಪ್ರವಾಸಿಗರು
ಗುಲ್ಮಾರ್ಗ್​ನಲ್ಲಿ ತಾಜಾ ಹಿಮಪಾತ; ಕುಣಿದು ಕುಪ್ಪಳಿಸಿದ ಪ್ರವಾಸಿಗರು
ದತ್ತಜಯಂತಿ: ಶೋಭಾಯಾತ್ರೆಯ ಮನಮೋಹಕ ದೃಶ್ಯ ಡ್ರೋನ್​ನಲ್ಲಿ ಕಂಡಿದ್ದು ಹೀಗೆ
ದತ್ತಜಯಂತಿ: ಶೋಭಾಯಾತ್ರೆಯ ಮನಮೋಹಕ ದೃಶ್ಯ ಡ್ರೋನ್​ನಲ್ಲಿ ಕಂಡಿದ್ದು ಹೀಗೆ
ಬಿಜೆಪಿ ಅಧಿಕಾರದಲ್ಲಿದ್ದಾಗ ಯತ್ನಾಳ್ ಯಾಕೆ ವಕ್ಫ್ ವಿಷಯ ಮಾತಾಡಲಿಲ್ಲ: ಸಚಿವ
ಬಿಜೆಪಿ ಅಧಿಕಾರದಲ್ಲಿದ್ದಾಗ ಯತ್ನಾಳ್ ಯಾಕೆ ವಕ್ಫ್ ವಿಷಯ ಮಾತಾಡಲಿಲ್ಲ: ಸಚಿವ
ಕ್ಲಾಸ್​ ರೂಂನಲ್ಲೇ ಶಿಕ್ಷಕನಿಗೆ ಚಾಕುವಿನಿಂದ ಇರಿದ ವಿದ್ಯಾರ್ಥಿಗಳು
ಕ್ಲಾಸ್​ ರೂಂನಲ್ಲೇ ಶಿಕ್ಷಕನಿಗೆ ಚಾಕುವಿನಿಂದ ಇರಿದ ವಿದ್ಯಾರ್ಥಿಗಳು
ದರ್ಶನ್ ನಂಬಿಕೊಂಡು ಹಲವು ಕುಟುಂಬಗಳು ಇವೆ: ತರುಣ್ ಸುಧೀರ್​
ದರ್ಶನ್ ನಂಬಿಕೊಂಡು ಹಲವು ಕುಟುಂಬಗಳು ಇವೆ: ತರುಣ್ ಸುಧೀರ್​
ಧಾರವಾಡ ಸಭೆಯಲ್ಲಿ ಭಾಗಿಯಾಗಿದ್ದ ಬೆಲ್ಲದ್ ಸತ್ಯ ಸಭೆಗೆ ತಿಳಿಸಲಿ: ಜಮೀರ್
ಧಾರವಾಡ ಸಭೆಯಲ್ಲಿ ಭಾಗಿಯಾಗಿದ್ದ ಬೆಲ್ಲದ್ ಸತ್ಯ ಸಭೆಗೆ ತಿಳಿಸಲಿ: ಜಮೀರ್
ದರ್ಶನ್​ಗೆ ಜಾಮೀನು: ತೂಗುದೀಪ ನಿಲಯದ ಬಳಿ ಅಭಿಮಾನಿಗಳ ಸಂಭ್ರಮ
ದರ್ಶನ್​ಗೆ ಜಾಮೀನು: ತೂಗುದೀಪ ನಿಲಯದ ಬಳಿ ಅಭಿಮಾನಿಗಳ ಸಂಭ್ರಮ
ಸುಮ್ಮನೆ ಮಾತಾಡಿದರೂ ಅನುಕುಮಾರ್ ತಾಯಿ ಜಯಮ್ಮಗೆ ಎದೆನೋವು ಬರುತ್ತದೆ
ಸುಮ್ಮನೆ ಮಾತಾಡಿದರೂ ಅನುಕುಮಾರ್ ತಾಯಿ ಜಯಮ್ಮಗೆ ಎದೆನೋವು ಬರುತ್ತದೆ