Post Covid Illness: ಕೋವಿಡ್​ನಿಂದ ಗುಣಮುಖರಾದವರಲ್ಲಿ ಮಾನಸಿಕ ಅಸ್ವಸ್ಥತೆ ಹೆಚ್ಚಳ, ಲಕ್ಷಣಗಳೇನು?

ನೀವು ಖಿನ್ನತೆ, ಆತಂಕ ಸೇರಿದಂತೆ ಇತರೆ ಮಾನಸಿಕ ಅನಾರೋಗ್ಯದಿಂದ ಬಳಲುತ್ತಿದ್ದೀರಾ, ನೀವೊಬ್ಬರೇ ಅಲ್ಲ ಕೊರೊನಾದಿಂದ ಗುಣಮುಖರಾಗಿರುವ ಬಹಳಷ್ಟು ಮಂದಿ ಇಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

Post Covid Illness: ಕೋವಿಡ್​ನಿಂದ ಗುಣಮುಖರಾದವರಲ್ಲಿ ಮಾನಸಿಕ ಅಸ್ವಸ್ಥತೆ ಹೆಚ್ಚಳ, ಲಕ್ಷಣಗಳೇನು?
Mental Illness
Follow us
TV9 Web
| Updated By: ನಯನಾ ರಾಜೀವ್

Updated on: Jun 14, 2022 | 5:04 PM

ನೀವು ಖಿನ್ನತೆ, ಆತಂಕ ಸೇರಿದಂತೆ ಇತರೆ ಮಾನಸಿಕ ಅನಾರೋಗ್ಯದಿಂದ ಬಳಲುತ್ತಿದ್ದೀರಾ, ನೀವೊಬ್ಬರೇ ಅಲ್ಲ ಕೊರೊನಾದಿಂದ ಗುಣಮುಖರಾಗಿರುವ ಬಹಳಷ್ಟು ಮಂದಿ ಇಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಕೊರೊನಾದಿಂದಾಗಿ ಇಡೀ ಪ್ರಪಂಚವೇ ಅಲ್ಲೋಲಕಲ್ಲೋಲವಾಗಿದೆ. ಆರೋಗ್ಯ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಇದೀಗ ಕೆಲವು ತಿಂಗಳುಗಳಿಂದ ಸಹಜ ಸ್ಥಿತಿಗೆ ಮರಳಲು ಪ್ರಯತ್ನಿಸುತ್ತಿವೆ.

ಕೊರೊನಾ ಸೋಂಕಿನಿಂದಾಗಿ ಮೃತಪಟ್ಟಿರುವವರ ಸಂಖ್ಯೆಯೂ ಹೆಚ್ಚಿದೆ. ಹಾಗೆಯೇ ಬದುಕುಳಿದವರು ಕೂಡ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ. ಕೋವಿಡ್​ನಿಂದ ಗುಣಮುಖರಾದವರಲ್ಲಿ ಸಾಮಾನ್ಯವಾಗಿ ಮಾನಸಿಕ ಅಸ್ವಸ್ಥೆತೆಯು ಕಾಡುತ್ತಿದೆ.

ಕೊರೊನಾ ಸೋಂಕು ತಗುಲಿದ ಬಳಿಕ ನಾಲ್ಕರಿಂದ ಐದು ತಿಂಗಳ ಬಳಿಕ ಈ ಸಮಸ್ಯೆಗಳು ಶುರುವಾಗುತ್ತವೆ. ಶೇ. 25ರಷ್ಟು ಕೊರೊನಾ ಸೋಂಕಿತರು ಮಾನಸಿಕ ಅಸಮತೋಲನವನ್ನು ಅನುಭವಿಸುತ್ತಾರೆ ಎಂಬುದು ತಿಳಿದುಬಂದಿದೆ. ಇನ್ನೂ ಕೆಲವರು ಉಸಿರಾಟದ ತೊಂದರೆ ಅನುಭವಿಸಬಹುದು ಎಂದು ಜರ್ನಲ್ ವರ್ಲ್ಡ್​ ಸೈಕ್ಯಾಟ್ರಿಯಲ್ಲಿ ತಿಳಿಸಲಾಗಿದೆ.

ಸಂಶೋಧಕರು ಹೇಳಿದ್ದೇನು? ಸಂಶೋಧಕರ ಪ್ರಕಾರ ಕೇವಲ ಕೊರೊನಾಗೆ ತುತ್ತಾದವರು ಮಾತ್ರವಲ್ಲದೆ ಕೊರೊನಾ ಬಾರದವರ ಮಾನಸಿಕ ಆರೋಗ್ಯವೂ ಹದಗೆಟ್ಟಿದೆ. ಕೊರೊನಾ ನಂತರ ಆನ್ಕ್ಸೈಟಿ ಡಿಸ್​ಆರ್ಡರ್, ಸೈಕ್ಯಾಟ್ರಿಕ್ ಡಿಸ್​ಆರ್ಡರ್, ಡಿಪ್ರೆಸ್ಸೀವ್ ಡಿಸ್​ಆರ್ಡರ್, ಪೋಸ್ಟ್​ ಟ್ರ್ಯಾಟಿಕ್ ಡಿಸ್​ಆರ್ಡರ್ ಉಂಟಾಗುತ್ತದೆ.

ಈ ಸಮಸ್ಯೆಗಳು ಎಷ್ಟು ದಿನಗಳ ಕಾಲ ಇರಲಿವೆ? ಈ ಸಮಸ್ಯೆಗಳು ವ್ಯಕ್ತಿಯಿಂದ ವ್ಯಕ್ತಿಗೆ ವ್ಯತ್ಯಾಸಗಳಿರುತ್ತವೆ, ಯಾವ ರೀತಿಯ ಸಮಸ್ಯೆಗಳಿರುತ್ತವೆ ಎಂಬುದರ ಮೇಲೆ ಎಲ್ಲವೂ ನಿಂತಿರುತ್ತದೆ. ಸಾಮಾನ್ಯ ಸಮಸ್ಯೆಗಳು ಒಂದೆರಡು ವಾರ ಅಥವಾ ಒಂದು ತಿಂಗಳುಗಳ ಕಾಲ ಇರಬಹುದು.

ಸಮಸ್ಯೆಗಳನ್ನು ಪತ್ತೆ ಹೆಚ್ಚುವುದು ಹೇಗೆ? -ನಿಮ್ಮ ಹಾವಭಾವದಲ್ಲಿ ಬದಲಾವಣೆ -ನಿದ್ರಾಹೀನತೆ ಅಥವಾ ಸೌಂಡ್ ಸ್ಲೀಪ್ ಇಲ್ಲದಿರುವುದು -ಕುಟುಂಬದವರ ಜತೆ ಕುಳಿತು ಮಾಡತನಾಡಲು ಸಾಧ್ಯವಾಗದಿರುವುದು, ಮನಸ್ಸು ಎಲ್ಲೋ ಇರುವಂತೆ ಭಾಸವಾಗುವುದು, ಏಕಾಗ್ರತೆ ಇಲ್ಲದಿರುವುದು ಈ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸುವುದು ಒಳಿತು.

ಚಿಕಿತ್ಸೆಗಳೇನು? ವ್ಯಾಯಾಮ, ಸೈಕೋಥೆರಪಿ, ಮೆಡಿಕೇಷನ್, ಧ್ಯಾನ ಮಾಡಿ ಇದ್ಯಾವುದರಿಂದಲೂ ಕಡಿಮೆಯಾಗದಿದ್ದರೆ ವೈದ್ಯರ ಬಳಿ ತೆರಳಿ ಸೂಕ್ತ ಸಲಹೆ ಪಡೆಯಿರಿ.

ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಆಧರಿಸಿರುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ