ಅಕ್ರಮ ಕಟ್ಟಡಗಳ ವಿರುದ್ಧ ಬಿಬಿಎಂಪಿ ಸಮರ: ಹಲವೆಡೆ ಕಟ್ಟಡಗಳ ತೆರವು
ಬೆಂಗಳೂರಿನ ಯಲಹಂಕ ವಲಯದಲ್ಲಿ ಬಿಬಿಎಂಪಿ ಅಧಿಕಾರಿಗಳು ನಕ್ಷೆ ಉಲ್ಲಂಘನೆ ಮಾಡಿದ 13 ಕಟ್ಟಡಗಳನ್ನು ತೆರವುಗೊಳಿಸಿದ್ದಾರೆ. ಹಲವಾರು ಬಾರಿ ನೋಟಿಸ್ ನೀಡಿದ್ದರೂ ಕ್ಯಾರೆ ಎನ್ನದ ಕಟ್ಟಡ ಮಾಲೀಕರ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ. ಭದ್ರಪ್ಪ ಲೇಔಟ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಈ ಕಾರ್ಯಾಚರಣೆ ಮಾಡಲಾಗಿದೆ.
ಬೆಂಗಳೂರು, ಜೂನ್ 16: ನಗರದಲ್ಲಿ ಅಕ್ರಮ ಕಟ್ಟಡಗಳ ವಿರುದ್ಧ ಬಿಬಿಎಂಪಿ (BBMP) ಸಮರ ಸಾರಿದೆ. ಯಲಹಂಕ ವಲಯದ 13 ಕಡೆ ನಕ್ಷೆ ಉಲ್ಲಂಘನೆ ಮಾಡಿದವರಿಗೆ ಶಾಕ್ ನೀಡಿದ್ದು, ಯಲಹಂಕ ಜಂಟಿ ಆಯುಕ್ತರು, EE ನೇತೃತ್ವದಲ್ಲಿ ಅಕ್ರಮ ಕಟ್ಟಡಗಳ ತೆರವು ಮಾಡಲಾಗಿದೆ. ಹಲವು ಬಾರಿ ನೋಟಿಸ್ ನೀಡಿದರೂ ಕಟ್ಟಡ ಮಾಲೀಕರು ಕ್ಯಾರೆ ಎಂದಿಲ್ಲ. ಈ ಹಿನ್ನೆಲೆಯಲ್ಲಿ ಅಕ್ರಮ ಕಟ್ಟಡಗಳ ತೆರವು ಮಾಡಲಾಗಿದೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.