Gujarat Plane Crash: ಗುಜರಾತ್ ಮಾಜಿ ಸಿಎಂ ವಿಜಯ ರೂಪಾನಿ ದೇಹದ ಗುರುತು ಪತ್ತೆ, ರಾಜ್ಕೋಟ್ನಲ್ಲಿ ಅಂತ್ಯಕ್ರಿಯೆ
ದುರಂತದಲ್ಲಿ ಬಲಿಯಾದ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ ರೂಪಾನಿ ಅವರ ದೇಹದ ಗುರುರು ಸಿಕ್ಕಿದ್ದು ಅವರ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಗುಜರಾತ್ ಗೃಹ ಸಚಿವ ಹರ್ಷ ಸಾಂಘ್ವಿ ಅವರು ನಿನ್ನೆ ಮಾಧ್ಯಮಗಳಿಗೆ ಹೇಳಿಕೆಯೊಂದನ್ನು ನೀಡಿ ಮಾಜಿ ಮುಖ್ಯಮಂತ್ರಿಯವರ ಅಂತ್ಯ ಸಂಸ್ಕಾರ ಸರಕಾರೀ ಗೌರವಗಳೊಂದಿಗೆ ಇಂದು ಮಧ್ಯಾಹ್ನ ರಾಜ್ಕೋಟ್ನಲ್ಲಿ ನಡೆಯಲಿದೆ ಎಂದು ಹೇಳಿದರು.
ಬೆಂಗಳೂರು, ಜೂನ್ 16: ನಾಲ್ಕು ದಿನಗಳ ಹಿಂದೆ ಅಹಮದಾಬಾದ್ ನಲ್ಲಿ ದುರಂತಕ್ಕೀಡಾದ ವಿಮಾನದಲ್ಲಿದ್ದ (plane crash) ಪ್ರಯಾಣಿಕರ ಮೃತದೇಹಗಳನ್ನು ಗುರುತು ಪತ್ತೆ ಹಚ್ಚುವುದು ಸಿವಿಲ್ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗೆ ಸವಾಲಿನ ಕೆಲಸವಾಗಿದೆ. ಶವಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ ಮತ್ತು ರುಂಡ-ಮುಂಡ, ಕೈ-ಕಾಲುಗಳು ಬೇರೆ ಬೇರೆಯಾಗಿವೆ. ಮಡಿದವರ ಸಂಬಂಧಿಕರು ಸಿವಿಲ್ ಆಸ್ಪತ್ರೆಗೆ ಬಂದು ತಮ್ಮ ಡಿಎನ್ಎ ನಮೂನೆಗಳನ್ನು ನೀಡಿ ಆಸ್ಪತ್ರೆಯ ಆವರಣದಲ್ಲಿ 4-ದಿನದಿಂದ ಕಾಯುತ್ತಿದ್ದಾರೆ. ನಮ್ಮ ವರದಿಗಾರ ನೀಡಿರುವ ಮಾಹಿತಿ ಪ್ರಕಾರ ಇದುವರೆಗೆ 80 ಶವಗಳ ಡಿಎನ್ಎ ಮ್ಯಾಚ್ ಆಗಿದೆ ಮತ್ತು 33 ಶವಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.
ಇದನ್ನೂ ಓದಿ: Gujarat Plane Crash; ವಿಮಾನ ಟೇಕಾಫ್ ಆಗುತ್ತಿದ್ದಂತೆಯೇ ಪೈಲಟ್ಗಳು ಮೇಡೇ ಎಂದು ಕಾಲ್ ಮಾಡಿದ್ದಾರೆ: ಪ್ರದೀಪ್ ಈಶ್ವರ್
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ