Obesity: ಬೊಜ್ಜಿನಿಂದ ಎದುರಾಗುವ ಆರೋಗ್ಯ ಸಮಸ್ಯೆಗಳ ಸುತ್ತ ಒಂದು ಸುತ್ತು

Obesity: ದೇಹದ ಬೊಜ್ಜು( Obesity) ನಿಮ್ಮನ್ನು ಖಿನ್ನತೆಯವರೆಗೂ ಕೊಂಡೊಯ್ಯಬಹುದು ಎಚ್ಚರವಾಗಿರಿ. ಬೊಜ್ಜಿನ ಸಮಸ್ಯೆ ಎಂಬುದು ಮಕ್ಕಳಿಂದ ಹಿಡಿದು ವಯಸ್ಕರವರನ್ನೂ ಕಾಡುವಂತಹ ಆರೋಗ್ಯ ಸಮಸ್ಯೆಯಾಗಿದೆ.

Obesity: ಬೊಜ್ಜಿನಿಂದ ಎದುರಾಗುವ ಆರೋಗ್ಯ ಸಮಸ್ಯೆಗಳ ಸುತ್ತ ಒಂದು ಸುತ್ತು
Obesity
Follow us
TV9 Web
| Updated By: ನಯನಾ ರಾಜೀವ್

Updated on:Jun 11, 2022 | 3:40 PM

ದೇಹದ ಬೊಜ್ಜು( Obesity) ನಿಮ್ಮನ್ನು ಖಿನ್ನತೆಯವರೆಗೂ ಕೊಂಡೊಯ್ಯಬಹುದು ಎಚ್ಚರವಾಗಿರಿ. ಬೊಜ್ಜಿನ ಸಮಸ್ಯೆ ಎಂಬುದು ಮಕ್ಕಳಿಂದ ಹಿಡಿದು ವಯಸ್ಕರವರನ್ನೂ ಕಾಡುವಂತಹ ಆರೋಗ್ಯ ಸಮಸ್ಯೆಯಾಗಿದೆ. ಇತ್ತೀಚೆಗೆ ಮಕ್ಕಳಲ್ಲಿ ದೇಹದ ಕೊಬ್ಬು, ಬಾಡಿ ಮಾಸ್ ಇಂಡೆಕ್ಸ್​ ಪ್ರಮಾಣ ಹೆಚ್ಚಳವಾಗುತ್ತಿದ್ದು, ಸಾವಿನ ಪ್ರಮಾಣವೂ ಅಧಿಕವಾಗುತ್ತಿದೆ. ಜೀವನಶೈಲಿ, ಜೀನ್​, ಒತ್ತಡ, ನಿದ್ರಾಹೀನತೆ ಸೇರಿದಂತೆ ಹಲವು ಸಮಸ್ಯೆಗಳಿಂದಅಗಿ ಒಬೆಸಿಟಿ ತೊಂದರೆ ಕಾಣಿಸಿಕೊಳ್ಳುತ್ತದೆ.

ಅಜೀರ್ಣ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳು ಸಹ ಹೊಟ್ಟೆ ಉಬ್ಬಿದಂತೆ ಕಾಣುವಂತೆ ಮಾಡುತ್ತದೆ. ಹೊಟ್ಟೆಯ ಸುತ್ತ ಇರುವ ಕೆಟ್ಟ ಕೊಬ್ಬು ಯಾವಾಗಲೂ ಆರೋಗ್ಯಕ್ಕೆ ಹಾನಿಕಾರಕ .

ಹಾರ್ಮೋನುಗಳ ಅಸಮತೋಲನ, ಅನಾರೋಗ್ಯಕರ ಆಹಾರ ಪದ್ಧತಿ, ನಿಧಾನ ಜೀರ್ಣಕ್ರಿಯೆ, ಗಂಟೆಗಟ್ಟಲೆ ಕುಳಿತುಕೊಳ್ಳುವುದು, ದೈಹಿಕ ಚಟುವಟಿಕೆಯ ಕೊರತೆ, ಜಂಕ್ ಫುಡ್, ಲಘು ಆಹಾರ ಪದ್ಧತಿ ಮತ್ತು ಒತ್ತಡದಿಂದ ಹೊಟ್ಟೆಯ ಕೊಬ್ಬು ಉಂಟಾಗುತ್ತದೆ.

ಸೂರ್ಯನ ಕಿರಣಗಳಿಗೆ ಒಡ್ಡಿಕೊಳ್ಳುವುದರಿಂದ ಹಾರ್ಮೋನುಗಳನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುವುದರ ಜೊತೆಗೆ ಸೇವಿಸುವ ಆಹಾರದಲ್ಲಿನ ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ. ಬೆಳಗ್ಗೆ ಸೂರ್ಯ ನಮಸ್ಕಾರ ಮಾಡುವುದರಿಂದ ದೇಹಕ್ಕೆ ಚೈತನ್ಯ ಬರುತ್ತದೆ.

ಹೈಪರ್​ಟೆನ್ಷನ್ ಹಾಗೂ ಕೊಲೆಸ್ಟ್ರಾಲ್: ಬೊಜ್ಜಿನ ತೊಂದರೆ ಇರುವವರಲ್ಲಿ ಅಧಿಕ ರಕ್ತದೊತ್ತಡ ಸಮಸ್ಯೆಯೂ ಕಾಡಬಹುದು. ಕೊಬ್ಬು ಕೂಡ ಅಧಿಕವಾಗಿರಬಹುದು. ಇವೆಲ್ಲವೂ ಹೃದಯ ಸಂಬಂಧಿ ಸಮಸ್ಯೆಗಳ ಹುಟ್ಟಿಗೆ ಕಾರಣವಾಗಬಹುದು.

ಮಧುಮೇಹ: ಬೊಜ್ಜು ಟೈಪ್ 2 ಮಾದರಿಯ ಮಧುಮೇಹಕ್ಕೆ ಕಾರಣವಾಗುತ್ತದೆ. ಇದರಿಂದಾಗಿ ರೋಗಿಯು ಇನ್ಸುಲಿನ್ ತೆಗೆದುಕೊಳ್ಳುವಂತಾಗುತ್ತದೆ. ಈ ಇನ್ಸುಲಿನ್ ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ. ಒಂದೊಮ್ಮೆ ಒಬೆಸಿಟಿ ಹೆಚ್ಚಾದರೆ ರಕ್ತದಲ್ಲಿ ಸಕ್ಕರೆ ಪ್ರಮಾಣ ಅಧಿಕಗೊಳ್ಳುವುದು.

ಸಂಧಿನೋವು: ಬೊಜ್ಜು ಸಂಧಿವಾತವನ್ನುಂಟು ಮಾಡುತ್ತದೆ. ಸ್ನಾಯು ಸೆಳೆತ ಉಂಟಾಗಲು ನಡೆಯಲು ಕಷ್ಟವಾಗುವಂತಹ ಪರಿಸ್ಥಿತಿ ಎದುರಾಗುತ್ತದೆ.

ನಿದ್ರಾಹೀನತೆ: ಒಬೆಸಿಟಿಯು ಹೆಚ್ಚಾದಾಗ ಹುಳಿ ತೇಗು ಬಂದಂತಹ ಅನುಭವವಾಗುವುದು, ರಾತ್ರಿ ಎಷ್ಟು ಹೊತ್ತು ಕಳೆದರೂ ನಿದ್ರೆ ಬರುವುದೇ ಇಲ್ಲ, ಉಸಿರಾಟದ ಸಮಸ್ಯೆಯೂ ಎದುರಾಗುವ ಸಾಧ್ಯತೆ ಇದೆ.

ಖಿನ್ನತೆ: ಈ ಎಲ್ಲಾ ಆರೋಗ್ಯ ಸಮಸ್ಯೆಗಳಿಂದಾಗಿ ಖಿನ್ನತೆ ಉಂಟಾಗುವ ಸಾಧ್ಯತೆ ಹೆಚ್ಚಿದೆ, ನೀವು ನರ್ವಸ್​ ಆಗಿದ್ದು, ಒಬ್ಬಂಟಿ ಎಂಬ ಮನೋಭಾವ ನಿಮ್ಮನ್ನು ಕಾಡುತ್ತದೆ. ಜನರ ಸಂಪರ್ಕವನ್ನೇ ಕಳೆದುಕೊಳ್ಳುತ್ತಾರೆ.

ಮಕ್ಕಳ ಆರೋಗ್ಯ ಕಾಪಾಡುವುದು ಪೋಷಕರ ಕರ್ತವ್ಯ ಮಕ್ಕಳು ಫಾಸ್ಟ್​ಫುಡ್​ಗಳಿಗೆ ಮೊರೆ ಹೋಗುತ್ತಿದ್ದಾರೆ, ಅವರು ತಿನ್ನುವ ಆಹಾರಗಳು ಗ್ಯಾಸ್ಟ್ರಿಕ್​ಗೆ ಕಾರಣವಾಗುತ್ತಿದೆ. ಹೀಗಾಗಿ ಕರಿದ ಪದಾರ್ಥಗಳನ್ನು ತಿನ್ನುವುದನ್ನು ಕಡಿಮೆ ಮಾಡಿಸಿ, ನಿತ್ಯ ವಾಕಿಂಗ್, ಸೈಕ್ಲಿಂಗ್, ಜಿಮ್, ಸ್ವಿಮ್ಮಿಂಗ್, ಜೂಂಬಾ, ಓಟ ಸೇರಿದಂತೆ ಹಲವು ಚಟುವಟಿಕೆಗಳಲ್ಲಿ ಅವರನ್ನು ತೊಡಗಿಸಿಕೊಳ್ಳುವಂತೆ ನೋಡಿಕೊಳ್ಳಿ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:35 pm, Sat, 11 June 22

ಮಕ್ಕಳ ಮೇಲೆ ಗ್ರಹಗಳ ಪ್ರಭಾವ ಹೇಗಿರುತ್ತೆ ? ವಿಡಿಯೋ ನೋಡಿ
ಮಕ್ಕಳ ಮೇಲೆ ಗ್ರಹಗಳ ಪ್ರಭಾವ ಹೇಗಿರುತ್ತೆ ? ವಿಡಿಯೋ ನೋಡಿ
Daily Horoscope: ಈ ರಾಶಿಯವರಿಗೆ ಇಂದು ಹೆಚ್ಚಿನ ಧನ ಪ್ರಾಪ್ತಿಯಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಹೆಚ್ಚಿನ ಧನ ಪ್ರಾಪ್ತಿಯಾಗಲಿದೆ
ದರ್ಶನ್ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಪೊಲೀಸರ ಬಿಗಿ ಭದ್ರತೆ
ದರ್ಶನ್ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಪೊಲೀಸರ ಬಿಗಿ ಭದ್ರತೆ
ಆಸ್ಪತ್ರೆಯೊಳಗೆ ಜೋರಾಗಿ ಹಾಡು ಹಾಕಿ ನರ್ಸ್​ಗಳ ಡ್ಯಾನ್ಸ್
ಆಸ್ಪತ್ರೆಯೊಳಗೆ ಜೋರಾಗಿ ಹಾಡು ಹಾಕಿ ನರ್ಸ್​ಗಳ ಡ್ಯಾನ್ಸ್
ಗುಲ್ಮಾರ್ಗ್​ನಲ್ಲಿ ತಾಜಾ ಹಿಮಪಾತ; ಕುಣಿದು ಕುಪ್ಪಳಿಸಿದ ಪ್ರವಾಸಿಗರು
ಗುಲ್ಮಾರ್ಗ್​ನಲ್ಲಿ ತಾಜಾ ಹಿಮಪಾತ; ಕುಣಿದು ಕುಪ್ಪಳಿಸಿದ ಪ್ರವಾಸಿಗರು
ದತ್ತಜಯಂತಿ: ಶೋಭಾಯಾತ್ರೆಯ ಮನಮೋಹಕ ದೃಶ್ಯ ಡ್ರೋನ್​ನಲ್ಲಿ ಕಂಡಿದ್ದು ಹೀಗೆ
ದತ್ತಜಯಂತಿ: ಶೋಭಾಯಾತ್ರೆಯ ಮನಮೋಹಕ ದೃಶ್ಯ ಡ್ರೋನ್​ನಲ್ಲಿ ಕಂಡಿದ್ದು ಹೀಗೆ
ಬಿಜೆಪಿ ಅಧಿಕಾರದಲ್ಲಿದ್ದಾಗ ಯತ್ನಾಳ್ ಯಾಕೆ ವಕ್ಫ್ ವಿಷಯ ಮಾತಾಡಲಿಲ್ಲ: ಸಚಿವ
ಬಿಜೆಪಿ ಅಧಿಕಾರದಲ್ಲಿದ್ದಾಗ ಯತ್ನಾಳ್ ಯಾಕೆ ವಕ್ಫ್ ವಿಷಯ ಮಾತಾಡಲಿಲ್ಲ: ಸಚಿವ
ಕ್ಲಾಸ್​ ರೂಂನಲ್ಲೇ ಶಿಕ್ಷಕನಿಗೆ ಚಾಕುವಿನಿಂದ ಇರಿದ ವಿದ್ಯಾರ್ಥಿಗಳು
ಕ್ಲಾಸ್​ ರೂಂನಲ್ಲೇ ಶಿಕ್ಷಕನಿಗೆ ಚಾಕುವಿನಿಂದ ಇರಿದ ವಿದ್ಯಾರ್ಥಿಗಳು
ದರ್ಶನ್ ನಂಬಿಕೊಂಡು ಹಲವು ಕುಟುಂಬಗಳು ಇವೆ: ತರುಣ್ ಸುಧೀರ್​
ದರ್ಶನ್ ನಂಬಿಕೊಂಡು ಹಲವು ಕುಟುಂಬಗಳು ಇವೆ: ತರುಣ್ ಸುಧೀರ್​
ಧಾರವಾಡ ಸಭೆಯಲ್ಲಿ ಭಾಗಿಯಾಗಿದ್ದ ಬೆಲ್ಲದ್ ಸತ್ಯ ಸಭೆಗೆ ತಿಳಿಸಲಿ: ಜಮೀರ್
ಧಾರವಾಡ ಸಭೆಯಲ್ಲಿ ಭಾಗಿಯಾಗಿದ್ದ ಬೆಲ್ಲದ್ ಸತ್ಯ ಸಭೆಗೆ ತಿಳಿಸಲಿ: ಜಮೀರ್