Yoga:ನಿಮ್ಮ ಥೈರಾಯ್ಡ್ ಆರೋಗ್ಯವನ್ನು ಕಾಪಾಡುವ ಆಸನಗಳಿವು

ದೇಶದಲ್ಲಿ ಪ್ರತಿ ಮೂವರಲ್ಲಿ ಒಬ್ಬರು ಥೈರಾಯ್ಡ್​ ( Thyroid)ಸಮಸ್ಯೆಯಿಂದ ಬಳಲುತ್ತಿದ್ದಾರೆ, ಥೈರಾಯ್ಡ್ ಸಮಸ್ಯೆಯಿಂದಾಗಿ ತೂಕ ಹೆಚ್ಚಳ, ಹಾರ್ಮೋನ್​ಗಳ ಅಸಮತೋಲನವು ಉಂಟಾಗಬಹುದು.

Yoga:ನಿಮ್ಮ ಥೈರಾಯ್ಡ್ ಆರೋಗ್ಯವನ್ನು ಕಾಪಾಡುವ ಆಸನಗಳಿವು
Yogasana
Follow us
TV9 Web
| Updated By: ನಯನಾ ರಾಜೀವ್

Updated on: Jun 11, 2022 | 1:27 PM

ದೇಶದಲ್ಲಿ ಪ್ರತಿ ಮೂವರಲ್ಲಿ ಒಬ್ಬರು ಥೈರಾಯ್ಡ್​ ( Thyroid)ಸಮಸ್ಯೆಯಿಂದ ಬಳಲುತ್ತಿದ್ದಾರೆ, ಥೈರಾಯ್ಡ್ ಸಮಸ್ಯೆಯಿಂದಾಗಿ ತೂಕ ಹೆಚ್ಚಳ, ಹಾರ್ಮೋನ್​ಗಳ ಅಸಮತೋಲನವು ಉಂಟಾಗಬಹುದು. ಸಿಪಿಒಡಿ ಹಾಗೂ ಪಿಸಿಒಎಸ್ ಸಮಸ್ಯೆಗಳು ಪುರುಷರಿಗಿಂತ ಮಹಿಳೆಯರನ್ನೇ ಹೆಚ್ಚಾಗಿ ಕಾಡುತ್ತದೆ. ಯೋಗ ಥೆರಪಿಯು ಥೈರಾಯ್ಡ್ ಸಮಸ್ಯೆಯನ್ನು ಕಡಿಮೆ ಮಾಡಲು ತುಂಬಾ ಸಹಕಾರಿಯಾಗಿದೆ. ಸ್ಟ್ರೆಚಿಂಗ್, ಟ್ವಿಸ್ಟಿಂಗ್ ವ್ಯಾಯಾಮಗಳು ದೇಹವು ಥೈರಾಕ್ಸಿನ್ ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ.

ಈ ಕೆಲವು ಯೋಗಾಸನಗಳನ್ನು ನಿತ್ಯ 30 ರಿಂದ 40 ನಿಮಿಷಗಳ ಕಾಲ ಮಾಡುವುದರಿಂದ ಥೈರಾಯ್ಡ್ ಸಮಸ್ಯೆ ಕಡಿಮೆಯಾಗಬಹುದು. ನೀವು ಸಿದ್ಧ ನಡಿಗೆ, ಯೋಗ ನಡಿಗೆ, ಮೀಂಡ್ ವಾಕ್ ಮಾಡಿ. ಈ ಆಸನಗಳನ್ನು ಮಾಡುವುದರಿಂದ ಥೈರಾಯ್ಡ್​ ಸಮಸ್ಯೆಗಳು ನಿವಾರಣೆಯಾಗಲಿವೆ.

  • ಉಷ್ಟ್ರಾಸನ: ಉಷ್ಟ್ರ ಎಂದರೆ ಒಂಟೆ ಎಂದರ್ಥ. ಉಷ್ಟ್ರಾಸನ ಮಾಡುವ ವಿಧಾನ: ಯೋಗ ಮ್ಯಾಟ್ ಹಾಕಿಕೊಂಡು ಮೊದಲು ವಜ್ರಾಸನದಲ್ಲಿ ಕುಳಿತುಕೊಳ್ಳಿ
  • ಬಳಿಕ ವಜ್ರಾಸನದಿಂದ ಮೇಲೆ ಬಂದು ನಿಮ್ಮ ಮಂಡಿಯ ಮೇಲೆ ನಿಂತುಕೊಳ್ಳಿ. ಎರಡು ಮಂಡಿ ಭುಜದಷ್ಟು ಅಗಲವಾಗಿರಲಿ.
  • ನಿಮ್ಮ ಎರಡು ಹಸ್ತಗಳನ್ನು ಸೊಂಟದ ಮೇಲಿರಿಸಿ ಉಸಿರನ್ನು ತೆಗೆದುಕೊಳ್ಳುತ್ತಾ (ಪೂರಕ) ಎದೆಯ ಭಾಗವನ್ನು ವಿಸ್ತರಿಸುತ್ತಾ ಹಿಂದಕ್ಕೆ ಭಾಗಿ. ನಿಮ್ಮ ಕುತ್ತಿಗೆಯನ್ನು ಹಿಂದಕ್ಕೆ ಚಾಚಿ. ಇದೇ ಸ್ಥಿತಿಯಲ್ಲಿ 30 ಸೆಕೆಂಡುಗಳ ಕಾಲ ಹಾಗೆಯೇ ಇರಿ.
  • ಉಸಿರನ್ನು ಹೊರ ಬಿಡುತ್ತಾ (ರೇಚಕ) ನಿಧಾನವಾಗಿ ಮಧ್ಯಕ್ಕೆ ಬಂದು ಕೈಯನ್ನು ಕೆಳಗಡೆ ಇಳಿಸಿ ವಜ್ರಾಸನ ಸ್ಥಿತಿಗೆ ಬನ್ನಿ.
  • ಉಷ್ಟ್ರಾಸನದ ಪ್ರಯೋಜನಗಳೇನು?
  • ಉಸಿರಾಟದ ತೊಂದರೆ, ಅಸ್ತಮಾ, ಉಬ್ಬಸ ನಿವಾರಣೆಗೆ ಪೂರಕ.
  • ಹೊಟ್ಟೆ ಮತ್ತು ಎದೆಯ ಭಾಗ ವಿಸ್ತಾರವಾಗುವುದು.
  • ಅಜೀರ್ಣ ಮತ್ತು ಮಲಬದ್ಧತೆ ನಿವಾರಣೆಗೆ ಉತ್ತಮ ಆಸನ.
  • ಜೀರ್ಣ ಕ್ರಿಯೆ ಉತ್ತಮಗೊಳಿಸುತ್ತದೆ.
  • ಬೆನ್ನು ಮತ್ತು ಭುಜಗಳನ್ನು ಶಕ್ತಿಯುತಗೊಳಿಸುತ್ತದೆ.
  • ಬೆನ್ನು ನೋವನ್ನು ನಿವಾರಿಸುತ್ತದೆ.
  • ಶೀರ್ಷಾಸನ
  • ವಜ್ರಾಸನದಲ್ಲಿ ಕುಳಿತುಕೊಳ್ಳಿ
  • ತಲೆ ಕೆಳಗಾಗಿ, ಕಾಲು ಮೇಲಾಗಿ, ನೆತ್ತಿಯು ನೆಲಕ್ಕೊರಗಿದ್ದು, ಸಮತೋಲನ ಕಾಯ್ದು ನೆಲೆಸುವುದೇ ಶೀರ್ಷಾಸನ.

ಮಹತ್ವ ಏನು? ಮನುಷ್ಯನ ಎಲ್ಲಾ ಚಟುವಟಿಕೆಗಳು ನಡೆಯುವುದು ಶಿರಸ್ಸಿನಿಂದ ಅಂದರೆ ತಲೆಯಿಂದ. ಕೇಂದ್ರ ಸ್ಥಾನದಲ್ಲಿನ ಮೆದುಳಿನ ನಿಯಂತ್ರಣದಲ್ಲಿಯೇ ಎಲ್ಲವೂ ಚಲನಶೀಲವಾಗಿವೆ. ಮೆದುಳು ನಿಷ್ಕ್ರಿಯಗೊಂಡರೆ ಯಾವ ಪ್ರಯೋಜನವೂ ಇಲ್ಲ. ಇಡೀ ದೇಹಕ್ಕೂ ರಕ್ತ ಸಂಚಾರ ಸುಗಮವಾಗುತ್ತದೆ ತಲೆ ನೋವು ನಿವಾರಣೆಯಾಗಲಿದೆ

ಅಭ್ಯಾಸಕ್ಕೂ ಮೊದಲು ಗಮನಸಿಬೇಕಾಗಿದ್ದು

  • ಹೆಚ್ಚು ಸಮಯ ತಲೆಕೆಳಗಾಗಿ ನೆಲೆಸಬೇಡಿ.
  • ನೆತ್ತಿಯ ಮೇಲೆ ತುಂಬಾ ಭಾರಹಾಕಬೇಕು
  • ಒಮ್ಮೆ ಆಸನದ ಭಂಗಿಗೆ ಹೋದ ಬಳಿಕ ಕತ್ತನ್ನು ಅತ್ತಿತ್ತ ತಿರುಗಿಸಬೇಡಿ
  • ಕಣ್ಣಿನ ದೋಷ ಇದ್ದವರು ಅಥವಾ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವವರು ಈ ಆಸನ ಮಾಡದಿದ್ದರೆ ಒಳಿತು.

ಹಾಲಾಸನ

  • ಮೊಟ್ಟ ಮೊದಲು ಬೆನ್ನಿನ ಮೇಲೆ ಮಲಗಿ, ಕೈಗಳು ನೇರವಾಗಿರಬೇಕು ಅಕ್ಕ ಪಕ್ಕದಲ್ಲಿ ಎರಡೂ ಕೈಗಳು ನೆಲವನ್ನು ನೋಡುತ್ತಿರಲಿ.
  • ಉಸಿರನ್ನು ನಿಧಾನವಾಗಿ ತೆಗೆದುಕೊಳ್ಳುತ್ತಾ ಎರಡೂ ಕಾಲುಗಳು ಒಂದಕ್ಕೊಂದು ತಾಗಿಸಿ ಮೇಲಕ್ಕೆತ್ತಿ.
  • ಒಂದೊಮ್ಮೆ ಹಾಗೆ ಮಾಡುವುದು ಕಷ್ಟ ಎನಿಸಿದರೆ ಎರಡು ಕೈಗಳ ಸಹಾಯವನ್ನು ಪಡೆಯಿರಿ
  • ನಿಮ್ಮ ಕಾಲುಗಳು ಮೇಲಿದ್ದಾಗ ಉಸಿರು ತೆಗೆದುಕೊಂಡು ಮತ್ತೆ ಪಾದಗಳನ್ನು ಹಿಂದಕ್ಕೆ ಕೊಂಡು ಹೋಗಿ, ಪಾದಗಳು ನಿಮ್ಮ ತಲೆ ಹಿಂಭಾಗದ ನೆಲವನ್ನು ಸ್ಪರ್ಶಿಸಬೇಕು.
  • ಉಪಯೋಗಗಳೇನು:
  • ಮಲಬದ್ಧತೆ ನಿವಾರಣೆಯಾಗಲಿದೆ
  • ಕೊಬ್ಬನ್ನು ಕರಗಿಸಲು ಸಹಕಾರಿ
  • ಥೈರಾಯ್ಡ್​, ಕಿಡ್ನಿಗೆ ಸಂಬಂಧಿಸಿದ ಸಮಸ್ಯೆಗಳಿಂದ ದೂರ ಇರಬಹುದು
  • ಸರ್ವಾಂಗಾಸನ ಕಾಲುಗಳನ್ನು ಮುಂದೆ ಚಾಚಿ ಬೆನ್ನು ಕೆಳಗೆ ಮಾಡಿ ಮೇಲ್ಮುಖವಾಗಿ ಮಲಗಿ. ಕೈಗಳು ತೊಡೆಯ ಪಕ್ಕ ಮೇಲ್ಮುಖವಾಗಿರುವಂತೆ ನೋಡಿಕೊಳ್ಳಿ
  • ಬಳಿಕ ಮಂಡಿಗಳನ್ನು ಜೋಡಿಸಿ, ಪಾದಗಳನ್ನು ಚೂಪಾಗಿಸಿ ಸ್ವಲ್ಪ ಬಿಗಿಗೊಳಿಸಿ. ಉಸಿರನ್ನು ಹೊರಗೆ ಬಿಡುತ್ತಾ ಕಾಲುಗಳನ್ನು ನಿಧಾನವಾಗಿ ಮೇಲಕ್ಕೆತ್ತಿ.
  • ನೆಲದಿಂದ 30 ಡಿಗ್ರಿ ಕೋನದಲ್ಲಿ 10 ಸೆಕೆಂಡು, 60 ಡಿಗ್ರಿ ಕೋನದಲ್ಲಿ 10 ಸೆಕೆಂಡು, 90 ಡಿಗ್ರಿ ಕೋನದಲ್ಲಿ 10 ಸೆಕೆಂಡು ನಿಲ್ಲಿಸಿ. ಸೊಂಟ ಭಾಗವನ್ನು ಮೇಲೆತ್ತಿ ಕಾಲುಗಳನ್ನು ತಲೆ ಇರುವ ದಿಕ್ಕಿನತ್ತ ಚಾಚಿ. ಕೈಗಳನ್ನು ಸೊಂಟಕ್ಕೆ ಆಧಾರವಾಗಿಸಿ, ಒತ್ತಿಕೊಳ್ಳುತ್ತಾ ಕಾಲುಗಳನ್ನು ಮೇಲಕ್ಕೆತ್ತಿ ನೇರವಾಗಿ ನಿಲ್ಲಿಸಿ.
  • ತೊಡೆ, ಮೀನಖಂಡ, ಪಾದ ಒಂದೇ ನೇರಕ್ಕೆ ಬರುವಂತೆ ಸಮತೋಲನವಾಗಿಸಿ ಎದೆಯನ್ನು ಹಿಗ್ಗಿಸಿ ಗದ್ದಕ್ಕೆ ತಾಗುವಂತಿರಿಸಿ, ಪಾದದ ಹೆಬ್ಬೆರಳನ್ನು ನೋಡುತ್ತಾ ಗಮನ ಕೇಂದ್ರೀಕರಿಸಿ.
  • ಅಂತ್ಯದಲ್ಲಿ ಒಂದರಿಂದ ಐದು ನಿಮಿಷದವರೆಗೆ ನಿಮ್ಮ ಸಾಮರ್ಥ್ಯ ಅರಿತು ದೇಹವನ್ನು ಅತ್ತಿತ್ತ ಅಲುಗಾಡದಂತೆ ಸ್ಥಿರವಾಗಿ ನಿಲ್ಲಿಸಿ. ಸರಳವಾದ ಉಸಿರಾಟ ನಡೆಸಿ.
  • ಅಂತಿಮ ಸ್ಥಿತಿ ತಲುಪಿದ ಕ್ರಮದಲ್ಲಿಯೇ ನಿಧಾನವಾಗಿ ಬನ್ನಿ.
  • ಉಪಯೋಗಗಳೇನು ಟೈಪ್ 1 ಹಾಗೂ ಟೈಪ್ 2 ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸಹಕಾರಿಯಾಗಿದೆ

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ