AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಕಿಂಗ್ ಕೂಡ ಒಂದು ಯೋಗ, ನಡಿಗೆ ಯೋಗದ ಪ್ರಯೋಜನ ಇಲ್ಲಿದೆ

ವಾಕಿಂಗ್ ಕೂಡ ಒಂದು ಯೋಗ, ಅದು ಹೇಗೆ? ನಡಿಗೆಯ ಯೋಗದಲ್ಲಿ ಸಾಮಾನ್ಯ ಯೋಗಕ್ಕಿಂತ ಭಿನ್ನವಾಗಿರುತ್ತದೆ. ಇದು ಸರಳ ಯೋಗಕ್ಕೆ ಸಮಾನವಾಗಿದೆ. ಜತೆಗೆ ಇದೊಂದು ಒಳ್ಳೆಯ ಅಭ್ಯಾಸ ಕೂಡ ಹೌದು. ಇತರ ಯೋಗಕ್ಕಿಂತ ನಡಿಗೆಯ ಯೋಗ ಭಿನ್ನ ಹೇಗೆ? ಹಾಗೂ ನಡಿಗೆ ಯೋಗದ ಪ್ರಯೋಜನಗಳೇನು? ಇಲ್ಲಿದೆ ನೋಡಿ.

ವಾಕಿಂಗ್ ಕೂಡ ಒಂದು ಯೋಗ, ನಡಿಗೆ ಯೋಗದ ಪ್ರಯೋಜನ ಇಲ್ಲಿದೆ
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Edited By: |

Updated on: May 05, 2025 | 6:02 PM

Share

ನಡಿಗೆ (walking) ದೇಹದ ಆರೋಗ್ಯವನ್ನು ಹೆಚ್ಚಿಸುತ್ತದೆ. ರಕ್ತಪರಿಚಲನೆಯಿಂದ ಹಿಡಿದು ಹೃದಯದ ಆರೋಗ್ಯಕ್ಕೂ ಇದು ಒಳ್ಳೆಯದು. ಈ  ಯೋಗದಲ್ಲಿ ಬೇರೆ ರೀತಿಯ ವಿಧಗಳು ಇದೆ. ಆದರೆ ನಡಿಗೆಯು ಒಂದು ವಿಧದ ಯೋಗ ಎಂದು ಹೇಳಲಾಗಿದೆ. ಇದು ಸರಳ ಯೋಗಕ್ಕೆ (yoga) ಸಮಾನವಾಗಿದೆ. ಜತೆಗೆ ಇದೊಂದು ಒಳ್ಳೆಯ ಅಭ್ಯಾಸ. ಈ ನಡಿಗೆ ಎಂಬ ಯೋಗ ದೇಹವನ್ನು ಪೋಷಿಸಲು ಹಾಗೂ ಮನಸ್ಸನ್ನು ಶಾಂತಗೊಳಿಸಲು , ಆಂತರಿಕ ಆತ್ಮದೊಂದಿಗೆ ಸಂಪರ್ಕ ಸಾಧಿಸಲು ಇದು ಉತ್ತಮ ಅಭ್ಯಾಸವಾಗಿದೆ. ಇದು ದೇಹಕ್ಕೆ ಶಾಂತಿ ಹಾಗೂ ಸೌಮ್ಯವಾದ ಮನಸ್ಥಿತಿಯನ್ನು ನೀಡುತ್ತದೆ.

ಇತರ ಯೋಗಕ್ಕಿಂತ ನಡಿಗೆಯ ಯೋಗ ಭಿನ್ನ ಹೇಗೆ?

ಸಾಮಾನ್ಯವಾಗಿ ಮಾಡುವ ಯೋಗಕ್ಕಿಂತ ಇದು ತುಂಬಾ ಭಿನ್ನವಾಗಿದೆ. ವಾಕಿಂಗ್ ಯೋಗವನ್ನು ಬುದ್ಧಿವಂತಿಯ ಚಲನೆ ಎಂದು ಹೇಳಬಹುದು. ನಡಿಗೆಯ ಪ್ರತಿಯೊಂದು ಹೆಜ್ಜೆಯೂ ಉಸಿರಾಟದ ಲಯ ಮತ್ತು ದೇಹ ಹಾಗೂ ಭೂಮಿಯ ನಡುವಿನ ಸಂಪರ್ಕವಾಗಿದೆ.  ನಡಿಗೆ ಯೋಗವನ್ನು ಪಾರ್ಕ್, ಕಡಲತೀರ, ಮನೆ ಎಲ್ಲಿ ಮಾಡಿದ್ರು ಸರಿ, ಅದು ಪ್ರತಿಯೊಂದು ಹೆಜ್ಜೆಯಲ್ಲೂ ಆರೋಗ್ಯ ಸೂಚನೆಯನ್ನು ನೀಡುತ್ತದೆ.

ನಡಿಗೆ ಯೋಗದ ಪ್ರಯೋಜನಗಳು:

  • ನಡಿಗೆಯ ಯೋಗವು ಮನಸ್ಸು, ದೇಹಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ .
  • ಇದನ್ನು ಪ್ರತಿದಿನದ ದಿನಚರಿಯಲ್ಲಿ ಸೇರಿಸಿಕೊಳ್ಳುವುದು ಉತ್ತಮ.
  • ದೈಹಿಕವಾಗಿ, ಇದು ರಕ್ತ ಪರಿಚಲನೆ ಸುಧಾರಿಸುತ್ತದೆ.
  • ಸ್ನಾಯುಗಳನ್ನು ಬಲಪಡಿಸುತ್ತದೆ.
  • ಕೀಲು ಚಲನಶೀಲತೆಯನ್ನು ಹೆಚ್ಚಿಸುತ್ತದೆ .
  • ಮಾನಸಿಕವಾಗಿ, ಇದು ಸಾವಧಾನತೆ ಮತ್ತು ಉಸಿರಾಟದ ಅರಿವನ್ನು ಉತ್ತೇಜಿಸುತ್ತದೆ.
  • ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಓ ಗಂಡಸರೇ… ಇಂತಹ ಮಹಿಳೆಯನ್ನು ನೀವು ಎಂದಿಗೂ ಮದುವೆಯಾಗಬಾರದಂತೆ

ಇದನ್ನೂ ಓದಿ
Image
15 ನಿಮಿಷದಲ್ಲಿ ಸುಲಭವಾಗಿ ಮಾಡಬಹುದು ಬೆಂಡೆಕಾಯಿ ಮಸಾಲೆ
Image
ಇಂತಹ ಮಹಿಳೆಯನ್ನು ನೀವು ಎಂದಿಗೂ ಮದುವೆಯಾಗಬಾರದಂತೆ
Image
ಈ ಪ್ರಶ್ನೆಗಳಿಗೆ ನೀವು ನೀಡುವ ಉತ್ತರವೇ ಹೇಳುತ್ತೆ ನಿಮ್ಮ ವ್ಯಕ್ತಿತ್ವ
Image
ರೈಲಿನ ಈ ಬೋಗಿಗಳಲ್ಲಿ ವೇಟಿಂಗ್‌ ಲಿಸ್ಟ್‌ ಪ್ರಯಾಣಿಕರಿಗೆ ನೋ ಎಂಟ್ರಿ

ಮನಸ್ಸಿಗೆ ಶಾಂತಿ ಮತ್ತು ಕೇಂದ್ರೀಕೃತ ಭಾವನೆಯನ್ನು ನೀಡುತ್ತದೆ.

ಆರೋಗ್ಯ ತಜ್ಞರು ಹೇಳಿರುವ ಪ್ರಕಾರ, ವಾಕಿಂಗ್ ಯೋಗವು ಭಾವನಾತ್ಮಕ ನೆಲೆಗಟ್ಟು ಮತ್ತು ಸಂಪರ್ಕವನ್ನು ಬೆಳೆಸುತ್ತದೆ. ಜತೆಗೆ ಇದು ಆಧ್ಯಾತ್ಮಿಕ ಪ್ರಭಾವವನ್ನು ಉಂಟು ಮಾಡುತ್ತದೆ. ವಾಕಿಂಗ್ ಯೋಗವು ಪ್ರಕೃತಿ ಮತ್ತು ಮನುಷ್ಯನ ಆಂತರಿಕ ಆತ್ಮ ಸಂಪರ್ಕವನ್ನು ಬೆಳೆಸುತ್ತದೆ. ಮನಸ್ಸಿನ ಒಳಗೆ ಶಾಂತಿ ಮತ್ತು ಸಾಮರಸ್ಯವನ್ನು ಬೆಳೆಸುತ್ತದೆ. ಇದರಿಂದ ಜೀವನದಲ್ಲಿ ಸಮತೋಲನ, ಸಾವಧಾನತೆ ಮತ್ತು ಸಂತೋಷ ಪಡೆಯಬಹುದು ಎಂದು ಹೇಳಿದ್ದಾರೆ.

ನಡಿಗೆ ಯೋಗ ಮಾಡುವುದು ಹೇಗೆ? ಅದಕ್ಕಿಂತ ಮೊದಲು ಮಾಡಬೇಕಿರುವುದು ಏನು?

  • ಒಂದು ಉದ್ದೇಶ ಇರಲಿ: ನಡಿಗೆ ಯೋಗ ಆರಂಭಿಸುವ ಮೊದಲು, ಸ್ವಲ್ಪ ಸಮಯ ವಿಶಾಂತ್ರಿ ಪಡೆಯಿರಿ. ನಂತರ ನಡಿಗೆಯ ಗುರಿಯನ್ನು ನಿರ್ಧರಿಸಿ. ಆಗಾ ಮನಸ್ಸಿನಲ್ಲಿ ಶಾಂತಿ ಹಾಗೂ ಛಲ ಬೆಳೆಯುತ್ತದೆ. ಜತೆಗೆ ಒಂದೇ ಏಕಾಗ್ರತೆ ಇರುತ್ತದೆ.
  • ಹೆಜ್ಜೆ ಜತೆಗೆ ಉಸಿರಾಟ: ಹಜ್ಜೆಯ ಜತೆಗೆ ಉಸಿರು ಹೊಂದಾಣಿಕೆ ಆಗಬೇಕು. ನಾಲ್ಕು ಹಜ್ಜೆ ಉಸಿರು ತೆಗೆದುಕೊಂಡು, ನಾಲ್ಕು ಹೆಜ್ಜೆ ಉಸಿರು ಬಿಡಿ.
  • ಸೌಮ್ಯ ಚಲನೆ ಇರಲಿ: ನಡಿಗೆ ಯಾವಾಗಲು ಸೌಮ್ಯವಾಗಿರಬೇಕು, ಹಾಗೂ ಉತ್ಸಾಹಿಯಾಗಿರಬೇಕು. ಭುಜ ಎತ್ತಿ, ತೋಳುಗಳನ್ನು ಹಿಗ್ಗಿಸಿ ನಡೆಯಿರಿ. ಯಾವ ರೀತಿ ಸುಲಭ ಅನ್ನಿಸುತ್ತದೆ, ಆ ರೀತಿ ನಡೆಯಿರಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು
‘45’ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ
‘45’ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ
ವ್ಯಕ್ತಿ ತಲೆಗೆ ಬಿಯರ್‌ ಬಾಟಲಿಂದ ಹೊಡೆದ ಗ್ಯಾಂಗ್
ವ್ಯಕ್ತಿ ತಲೆಗೆ ಬಿಯರ್‌ ಬಾಟಲಿಂದ ಹೊಡೆದ ಗ್ಯಾಂಗ್