AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test : ಈ ಪ್ರಶ್ನೆಗಳಿಗೆ ನೀವು ನೀಡುವ ಉತ್ತರವೇ ಹೇಳುತ್ತೆ ನಿಮ್ಮ ವ್ಯಕ್ತಿತ್ವ

ಒಬ್ಬ ವ್ಯಕ್ತಿಗಿಂತ ಇನ್ನೊಬ್ಬ ವ್ಯಕ್ತಿಯೂ ನೋಡುವುದಕ್ಕೆ ಮಾತ್ರ ವ್ಯಕ್ತಿತ್ವದಲ್ಲಿ ಸಾಕಷ್ಟು ಭಿನ್ನವಾಗಿರುತ್ತಾರೆ. ಹೀಗಾಗಿ ಎಲ್ಲರೂ ಅವರದ್ದೇ ಆದ ವ್ಯಕ್ತಿತ್ವ ಹೊಂದಿದ್ದು, ಕೆಲವರು ತಮ್ಮ ಗುಣಸ್ವಭಾವ, ನಡವಳಿಕೆ ಹಾಗೂ ವ್ಯಕ್ತಿತ್ವದಿಂದಲೇ ಎಲ್ಲರ ಗಮನ ಸೆಳೆಯುತ್ತಾರೆ. ಆದರೆ ಈ ಕೆಲವು ಪ್ರಶ್ನೆಗಳಿಗೆ ನೀವು ಕೊಡುವ ಹೌದು ಅಥವಾ ಇಲ್ಲ ಎನ್ನುವ ಉತ್ತರವೇ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಬಹಿರಂಗ ಪಡಿಸುತ್ತದೆ. ಹಾಗಾದ್ರೆ ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

Personality Test : ಈ ಪ್ರಶ್ನೆಗಳಿಗೆ ನೀವು ನೀಡುವ ಉತ್ತರವೇ ಹೇಳುತ್ತೆ ನಿಮ್ಮ ವ್ಯಕ್ತಿತ್ವ
ಸಾಂದರ್ಭಿಕ ಚಿತ್ರImage Credit source: Getty Images
ಸಾಯಿನಂದಾ
|

Updated on: May 04, 2025 | 6:22 PM

Share

ನಮಗೆ ಸುಂದರ ಹೆಸರು (name) ಇದ್ದರೆ ಸಾಲದು ನಮ್ಮ ವ್ಯಕ್ತಿತ್ವ (personality) ನಾಲ್ಕು ಜನರನ್ನು ಸೆಳೆಯುವಂತೆ ಇರಬೇಕು. ನಮ್ಮ ಗುಣಸ್ವಭಾವ ಹಾಗೂ ವ್ಯಕ್ತಿತ್ವ ನಾವು ಏನೆಂಬುದನ್ನು ಪ್ರತಿನಿಧಿಸುತ್ತದೆ ಎನ್ನುವುದು ತಿಳಿದಿರುವ ವಿಚಾರ. ಸಾಮಾನ್ಯವಾಗಿ ಕಣ್ಣು, ಕಿವಿ, ಮೂಗು, ಬಾಯಿ, ಕೈ ಬೆರಳು, ಹಣೆ, ಹುಬ್ಬುಗಳ ಆಕಾರದಿಂದಲೇ ವ್ಯಕ್ತಿತ್ವವನ್ನು ತಿಳಿಯಬಹುದು. ಅದೇ ರೀತಿ ಕೆಲವು ಪ್ರಶ್ನೆಗಳಿಗೆ ನಾವು ಹೇಗೆ ವರ್ತಿಸುತ್ತೇವೆ ಎನ್ನುವುದು ಕೂಡ ನಮ್ಮ ನಿಜವಾದ ವ್ಯಕ್ತಿತ್ವ ಹಾಗೂ ಗುಣ ಸ್ವಭಾವವನ್ನು ಬಿಚ್ಚಿಡುತ್ತದೆ. ಇದೀಗ ಈ ಕೆಳಗೆ ಹನ್ನೊಂದು ಪ್ರಶ್ನೆ (question) ಗಳಿದ್ದು, ಅದರಲ್ಲಿ ನೀವು ನೀಡುವ ಉತ್ತರ ಹೌದು ಹಾಗೂ ಇಲ್ಲ ಎನ್ನುವುದರ ಆಧಾರದ ಮೇಲೆ ನೀವು ಬಹಿರ್ಮುಖಿಗಳೇ ಅಥವಾ ಅಂತರ್ಮುಖಿಗಳೇ ಎನ್ನುವುದನ್ನು ತಿಳಿಯಬಹುದಂತೆ.

ಹನ್ನೊಂದು ಪ್ರಶ್ನೆಗಳು ಹೀಗಿವೆ

  •  ನೀವು ಇನ್ನೊಬ್ಬ ವ್ಯಕ್ತಿಗೆ ನಿಮ್ಮನ್ನು ಪರಿಚಯಿಸಿಕೊಳ್ಳಲು ಹಿಂಜರಿಯುತ್ತೀರಾ?
  • ನೀವು ಇತರರಿಗೆ ಉತ್ತಮರಾಗಿದ್ದೀರಿ ಎಂದು ಅನಿಸುತ್ತದೆಯೇ?
  •  ಒತ್ತಡದ ಸನ್ನಿವೇಶಗಳಲ್ಲಿಯೂ ನೀವು ನಿಮ್ಮನ್ನು ಶಾಂತವಾಗಿರಿಸಲು ಹಾಗೂ ಏಕಾಗ್ರತೆಯಿಂದ ಇರಲು ಪ್ರಯತ್ನ ಪಡುತ್ತೀರಾ?
  • ಪರಿಸ್ಥಿತಿ ಹೊಂದಿಕೊಳ್ಳುವ ಬದಲು ಅದನ್ನು ತಿಳಿಗೊಳಿಸಲು ಪ್ರಯತ್ನ ಪಡುವಿರಾ?
  • ವಾದ ಮಾಡುವ ಬದಲು ಸುತ್ತಲಿನ ಜನರ ಸಮಸ್ಯೆಗಳನ್ನು ಅರಿತು ಅವರ ಮೇಲೆ ಕಾಳಜಿ ತೋರಿಸುತ್ತೀರಾ?
  • ನಿಮ್ಮ ಮನಸ್ಸಿನಲ್ಲಿ ಗಾಢವಾದ ಆಲೋಚನೆಗಳು ಬರುವುದರಿಂದ ನಿಮ್ಮ ಸುತ್ತಲಿನ ವಿಷಯಗಳನ್ನು ಮರೆತುಬಿಡುತ್ತೀರಾ?
  • ಇತರರು ಮಾತನಾಡುವವರೆಗೆ ಕಾಯದೇ, ನೀವೇ ಮೊದಲು ಸಂಭಾಷಣೆಯನ್ನು ಪ್ರಾರಂಭಿಸುತ್ತೀರಾ?
  • ಕೆಲವೊಮ್ಮೆ ನೀವು ನಿಮ್ಮ ಕುತೂಹಲಕ್ಕಾಗಿ ಹೊಸ ಕೆಲಸಕ್ಕೆ ಕೈಹಾಕುತ್ತೀರಾ?
  • ನೀವು ಪ್ರತಿಯೊಂದು ಮೇಲ್ ಅಥವಾ ಸಂದೇಶಕ್ಕೆ ತಕ್ಷಣ ಪ್ರತಿಕ್ರಿಯಿಸಲು ನಿಮ್ಮ ಕೈಲಾದಷ್ಟು ಪ್ರಯತ್ನ ಪಡುತ್ತೀರಾ?
  • ನೀವು ನಿಮ್ಮ ಬಗ್ಗೆ ಇತರರೊಂದಿಗೆ ಹೇಳಿಕೊಳ್ಳಲು ಬಯಸುತ್ತೀರಾ?
  •  ಹೆಚ್ಚಿನ ಸಮಯವನ್ನು ಕಾಲಹರಣ ಮಾಡದೇ ಸದಾ ಚಟುವಟಿಕೆಯಲ್ಲಿ ತೊಡಗಿ ಕೊಳ್ಳುತ್ತೀರಾ?

ಈ ಹನ್ನೊಂದು ಪ್ರಶ್ನೆಗಳಲ್ಲಿ ಹೆಚ್ಚಿನ ಪ್ರಶ್ನೆಗಳಿಗೆ ಇಲ್ಲ ಎನ್ನುವ ಉತ್ತರ ನೀಡುವ ಜನರು ಅಂತರ್ಮುಖಿಗಳಾಗಿರುತ್ತಾರೆ. ಈ ವ್ಯಕ್ತಿಗಳು ಯಾರೊಂದಿಗೂ ಬೇರೆಯಲು ಇಷ್ಟ ಪಡುವುದಿಲ್ಲ. ತಮ್ಮ ಹೆಚ್ಚಿನ ಸಮಯವನ್ನು ಏಕಾಂಗಿಯಾಗಿ ಕಳೆಯಲು ಇಷ್ಟ ಪಡುತ್ತಾರೆ. ಒಂಟಿಯಾಗಿದ್ದರೂ ಸಂತೋಷವಾಗಿರುವ ವ್ಯಕ್ತಿಗಳಾಗಿದ್ದು ,ಇವರದ್ದು ಬಹಳ ಸೂಕ್ಷ್ಮ ಸ್ವಭಾವ. ಭಾವನಾತ್ಮಕ ಜನರಾಗಿದ್ದು, ಆದರೆ ಈ ವ್ಯಕ್ತಿಗಳು ಭಾವನೆಗಳನ್ನು ಮರೆಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಪರಿಸ್ಥಿತಿ ಹಾಗೂ ಸಂದರ್ಭಕ್ಕೆ ಅನುಗುಣವಾಗಿ ತಮ್ಮ ಭಾವನೆಗಳನ್ನು ಪ್ರಕಟಿಸುತ್ತಾರೆ.

ಇದನ್ನೂ ಓದಿ : Buddha Purnima 2025: ಬುದ್ಧ ಪೂರ್ಣಿಮೆಯ ದಿನಾಂಕ, ಮಹತ್ವ ಮತ್ತು ಮಂತ್ರ ಪಠಣೆಯ ಮಾಹಿತಿ ಇಲ್ಲಿದೆ

ಇದನ್ನೂ ಓದಿ
Image
ಬುದ್ಧ ಪೂರ್ಣಿಮೆಯ ದಿನಾಂಕ, ಮಹತ್ವ ಮತ್ತು ಮಂತ್ರ ಪಠಣೆಯ ಮಾಹಿತಿ ಇಲ್ಲಿದೆ
Image
ಸರ್ವ ರೋಗಕ್ಕೂ ನಗುವೊಂದೇ ಔಷಧಿ
Image
ರೈಲಿನ ಈ ಬೋಗಿಗಳಲ್ಲಿ ವೇಟಿಂಗ್‌ ಲಿಸ್ಟ್‌ ಪ್ರಯಾಣಿಕರಿಗೆ ನೋ ಎಂಟ್ರಿ
Image
ಒಮ್ಮೆ ಹೃದಯಾಘಾತವಾಗಿ ಪ್ರಾಣ ಉಳಿಸಿಕೊಂಡವರು ಈ ಹೂವಿನ ಚಹಾ ಕುಡಿಯಲೇಬೇಕು

ಈ ಎಲ್ಲಾ ಪ್ರಶ್ನೆಗಳಲ್ಲಿ ಶೇಕಡಾ ಒಂಬತ್ತರಷ್ಟು ಉತ್ತರವು ಹೌದು ಹೇಳುವ ಜನರು ಬಹಿರ್ಮುಖಿಗಳು. ಇವರು ತನ್ನ ಸುತ್ತಮುತ್ತಲಿನ ಜನರೊಂದಿಗೆ ಸ್ನೇಹಮಯವಾಗಿರಲು ಇಷ್ಟ ಪಡುತ್ತಾರೆ. ಎಲ್ಲರ ಜೊತೆಗೆ ಹೆಚ್ಚು ಬೆರೆಯುವ ಮೂಲಕ ಗುಂಪಿನಲ್ಲಿ ಗುರುತಿಸಿಕೊಳ್ಳುತ್ತಾರೆ. ಸದಾ ಉತ್ಸಾಹಿಗಳಾಗಿದ್ದು, ಎಲ್ಲರನ್ನು ಹುರಿದುಂಬಿಸುತ್ತ ಕೆಲಸವನ್ನು ಮಾಡುತ್ತಾರೆ. ಈ ವ್ಯಕ್ತಿಗಳು ತಾರ್ಕಿಕ ಸ್ವಭಾವದವರು. ಜೀವನದ ಪ್ರಮುಖ ನಿರ್ಧಾರಗಳು ಹಾಗೂ ಇನ್ನಿತರ ಕಾಲಘಟ್ಟದಲ್ಲಿ ಹೆಚ್ಚು ಯೋಚಿಸಿ ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಬದುಕಿನಲ್ಲಿ ಏನೇ ಎದುರಾದರೂ, ಎಷ್ಟೇ ಒತ್ತಡವಿದ್ದರೂ ಎಲ್ಲವನ್ನು ಸಲೀಸಾಗಿ ಎದುರಿಸುವ ಗುಣ ಇವರದ್ದು. ಯಾರ ಮಾತಿಗೂ ಮರಳು ಆಗದೇ ತಮ್ಮ ಇಚ್ಛೆಯಂತೆ ಬದುಕುತ್ತಾರೆ.

ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!