15 ನಿಮಿಷದಲ್ಲಿ ಸುಲಭವಾಗಿ ಮಾಡಬಹುದು ಬೆಂಡೆಕಾಯಿ ಮಸಾಲೆ, ಇಲ್ಲಿದೆ ನೋಡಿ
ಬೆಂಡಕಾಯಿ ರುಚಿ ಹಾಗೂ ಆರೋಗ್ಯಕ್ಕೂ ಒಳ್ಳೆಯದು, ಬೆಂಡಕಾಯಿಯಲ್ಲಿ ಆರೋಗ್ಯ ಶಕ್ತಿ ಇದೆ. ಅದಕ್ಕಾಗಿ ಬೆಂಡಕಾಯಿ ಮಸಾಲೆಯನ್ನು ಮಾಡಿ ತಿಂದರೆ ಇನ್ನು ಆರೋಗ್ಯಕ್ಕೆ ಒಳ್ಳೆಯದು ಹಾಗೂ ಬಾಯಿಗೂ ರುಚಿಯಾಗಿರುತ್ತದೆ. ಬೆಂಡಕಾಯಿ ಮಸಾಲೆ ಮಾಡುವುದು ಹೇಗೆ? ಅದಕ್ಕೆ ಬೇಕಾಗಿರುವ ವಸ್ತುಗಳೇನು? ವಿಧಾನ ಕೂಡ ಇಲ್ಲಿದೆ ನೋಡಿ.

ಬೆಂಡೆಕಾಯಿ (Okra) ಎಲ್ಲ ಕಾಲಕ್ಕೂ ಆರೋಗ್ಯಕರ ಆಹಾರ. ಅದರ ಸೇವನೆಯಿಂದ ಹಲವು ರೋಗಗಳಿಗೆ ಮುಕ್ತಿ ಸಿಗುತ್ತದೆ. ಅದರಲ್ಲೂ ಈ ಬೇಸಿಗೆಯಲ್ಲಿ ಇನ್ನು ಅತ್ಯಂತ ಹೆಚ್ಚು ಪರಿಣಾಮಕಾರಿಯಾಗಿದೆ. ಬೇಸಿಗೆಯಲ್ಲಿ ಬೆಂಡೆಕಾಯಿ ಪಲ್ಯ ತುಂಬಾ ಅಗತ್ಯವಾಗಿರುತ್ತದೆ. ಮತ್ತು ಇದನ್ನು ಮಾಡಲು ತುಂಬಾ ಸುಲಭವಿದೆ. ಅಲ್ಪ ಸಮಯದಲ್ಲಿ ಈ ರೆಸಿಪಿಯನ್ನು ಮಾಡಬಹುದು. ಬೆಂಡೆಕಾಯಿಯಲ್ಲಿ ಬೇರೆ ಬೇರೆ ರೀತಿಯ ರೆಸಿಪಿಗಳನ್ನು ಮಾಡಬಹುದು, ಆದರೆ ಬೆಂಡೆಕಾಯಿ ಮಸಾಲೆಯನ್ನು (Okra masala )ಮಾಡುವ ಬಗ್ಗೆ ಇಲ್ಲಿ ಹೇಳಲಾಗಿದೆ. 15 ನಿಮಿಷದಲ್ಲಿ ಈ ಮಸಾಲೆಯನ್ನು ಮಾಡಬಹುದು.
ಬೆಂಡೆಕಾಯಿ ಮಸಾಲೆಯ ವಿಶೇಷತೆಗಳೇನು?
ಈ ಗರಿಗರಿಯಾದ ಬೆಂಡೆಕಾಯಿ ಮಸಾಲೆ ದೇಹಕ್ಕೆ ತುಂಬಾ ಒಳ್ಳೆಯದು, ಅದರಲ್ಲಿರುವ ಪೌಷ್ಟಿಕಾಂಶ ದೇಹವನ್ನು ಚಟುವಟಿಕೆಯಲ್ಲಿ ಇರುವಂತೆ ಮಾಡುತ್ತದೆ. ಇದು ಸುವಾಸನೆಯಿಂದ ತುಂಬಿರುತ್ತದೆ. ಇದನ್ನು ಪಲ್ಯದ ರೀತಿಯಲ್ಲೂ ಹಾಗೂ ತಿಂಡಿಯಾಗಿ ಸೇವನೆ ಮಾಡಬಹುದು. ಸಾಮಾನ್ಯವಾಗಿ ಇದನ್ನು ಮನೆಯಲ್ಲಿ ತಕ್ಷಣಕ್ಕೆ ಮಾಡಿಕೊಳ್ಳವ ಆಹಾರವಾಗಿದೆ. 15 ನಿಮಿಷದಲ್ಲಿ ಈ ಮಸಾಲೆಯನ್ನು ಸುಲಭವಾಗಿ ಮಾಡಬಹುದು.
ಬೆಂಡೆಕಾಯಿ ಲೋಳೆ ತೆಗೆಯವುದು ಹೇಗೆ?
ಬೆಂಡೆಕಾಯಿ ಲೋಳೆಯನ್ನು ಹೇಗೆ ತೆಗೆಯುವುದು ಎಂದು ತಲೆಬಿಸಿ ಮಾಡಿಕೊಳ್ಳಬೇಡಿ. ಅದನ್ನು ತೆಗೆಯಲು ಸುಲಭ ವಿಧಾನಗಳು ಇದೆ. ಅದಕ್ಕೆ ಹೀಗೆ ಮಾಡಿ.
1. ಬೆಂಡೆಕಾಯಿಯನ್ನು ಕತ್ತರಿಸುವುದು ನಿಜವಾಗಿಯೂ ಕಷ್ಟ. ಅದರಲ್ಲಿರುವ ಲೋಳೆ ತುಂಬಾ ತೊಂದರೆ ನೀಡುತ್ತದೆ. ಆದರೆ ಅದನ್ನು ತೆಗೆಯುವುದು ಮಾತ್ರ ಸುಲಭವಾಗಿರುತ್ತದೆ.
2.ಬೆಂಡೆಕಾಯಿಯನ್ನು ಕತ್ತರಿಸುವ ಮೊದಲು 5ರಿಂದ 6 ಗಂಟೆಯ ಮೊದಲು ನೀರಿನಲ್ಲಿ ತೊಳೆಯಿರಿ. ನಂತರ ಅದನ್ನು ನೀರಿನಲ್ಲಿ ನೆನೆಯಲು ಬಿಡಿ.
3. ಬೆಂಡೆಕಾಯಿಯನ್ನು ನಂತರ ಒಣಗಳು ಬಿಡಿ, ಬಳಿಕ ಒಣ ಬಟ್ಟೆಯಿಂದ ಸ್ವಚ್ಛ ಮಾಡಿ.
4. ನಂತರ ಕತ್ತರಿಸುವ ಮೊದಲು ಅದಕ್ಕೆ ನಿಂಬೆ ರಸವನ್ನು ಸ್ವಲ್ಪ ಮೇಲೆ ಹಚ್ಚಿ.
5. ಕತ್ತರಿಸಿದ ನಂತರ ಅದನ್ನು ಬೇಯಿಸಲು ಇಟ್ಟಾಗ, ಅದಕ್ಕೆ ಮೊದಲು ಉಪ್ಪು ಹಾಕಬೇಡಿ, ಎಲ್ಲ ಬೆಂದ ನಂತರ ಹಾಕಿ.
ಬೆಂಡೆಕಾಯಿ ಮಸಾಲೆ ಮಾಡುವುದು ಹೇಗೆ?
250 ಗ್ರಾಂ ಬೆಂಡೆಕಾಯಿ ತೆಗೆದುಕೊಂಡು, ಅದರ ತುದಿಗಳನ್ನು ಕತ್ತರಿಸಿ, ಉದ್ದವಾಗಿ ನಾಲ್ಕು ತೆಳುವಾದ ಪಟ್ಟಿಗಳಾಗಿ ಕತ್ತರಿಸಿ.
ಒಂದು ಕಪ್ ಬೇಳೆ ಹಿಟ್ಟು, ಕೆಂಪು ಮೆಣಸಿನ ಪುಡಿ, ಅರಿಶಿನ, ಉಪ್ಪು, ಕ್ಯಾರಮೆಲ್ ಬೀಜಗಳು, ಎರಡು ಟೀ ಚಮಚ ಎಣ್ಣೆ ಮತ್ತು ನಿಂಬೆ ರಸವನ್ನು ಬೆಂಡೆಕಾಯಿಗೆ ಹಾಕಿ.
ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ, ಬೆಂಡೆಕಾಯಿಯನ್ನು ಹಿಟ್ಟು ಮತ್ತು ಮಸಾಲೆಗಳಿಂದ ಸಮವಾಗಿ ಲೇಪನ ಮಾಡಿ.
ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಮತ್ತು ಅದಕ್ಕೆ ಈ ಬೆಂಡೆಕಾಯಿಯನ್ನು ಹಾಕಿ ಗೋಲ್ಡನ್ ಹಾಗೂ ಗರಿಗರಿಯಾಗುವವರೆಗೆ ಪ್ರೈ ಮಾಡಿ.
ಇದನ್ನೂ ಓದಿ: ಈ ಪ್ರಶ್ನೆಗಳಿಗೆ ನೀವು ನೀಡುವ ಉತ್ತರವೇ ಹೇಳುತ್ತೆ ನಿಮ್ಮ ವ್ಯಕ್ತಿತ್ವ
ಮಸಾಲೆ ಮಾಡುವ ವಿಧಾನ :
ಮೂರು ದೊಡ್ಡ ಈರುಳ್ಳಿ ತೆಗೆದುಕೊಂಡು, ಅವುಗಳನ್ನು ಹೋಳುಗಳಾಗಿ ಕತ್ತರಿಸಿ, ಈರುಳ್ಳಿ ಕಂದು ಬಣ್ಣ ಬರುವವರೆಗೆ ಪ್ರೈ ಮಾಡಿ. ಎರಡು ಕತ್ತರಿಸಿದ ಟೊಮ್ಯಾಟೊ ಸೇರಿಸಿ ಪ್ರೈ ಮಾಡಿ. ಪುಡಿಮಾಡಿದ ಬೆಳ್ಳುಳ್ಳಿ ಮತ್ತು ಹಸಿರು ಮೆಣಸಿನಕಾಯಿ ಸೇರಿಸಿ ಕೆಲವು ಸೆಕೆಂಡುಗಳ ಕಾಲ ಹುರಿಯಿರಿ. ನಂತರ ಕೆಂಪು ಮೆಣಸಿನ ಪುಡಿ, ಅರಿಶಿನ, ಕೊತ್ತಂಬರಿ ಪುಡಿ ಮತ್ತು ರುಚಿಗೆ ತಕ್ಕಂತೆ ಗರಂ ಮಸಾಲ ಸೇರಿಸಿ ಎರಡು ನಿಮಿಷ ಬೇಯಿಸಿ. ಎರಡು ಟೀ ಚಮಚ ಮೊಸರು ಸೇರಿಸಿ ಮಿಶ್ರಣ ಮಾಡಿ. ಮಸಾಲ ಚೆನ್ನಾಗಿ ಬೆಂದ ನಂತರ, ಹುರಿದ ಬೆಂಡೆಕಾಯಿ ಸೇರಿಸಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ







