Thyroid Imbalance: ನವಜಾತ ಶಿಶುಗಳನ್ನು ಕಾಡುತ್ತಿದೆ ಥೈರಾಯ್ಡ್ ಅಸಮತೋಲನ ಸಮಸ್ಯೆ
Thyroid Imbalance:ನವಜಾತ ಶಿಶುಗಳಲ್ಲಿ ಥೈರಾಯ್ಡ್ (Thyroid)ಅಸಮತೋಲನ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ನವಜಾತ ಶಿಶುಗಳಲ್ಲಿ ಒಂದೊಮ್ಮೆ ಥೈರಾಯ್ಡ್ ಸಮಸ್ಯೆ ಕಾಣಿಸಿಕೊಂಡರೆ ರೋಗ ನಿರ್ಣಯ ಮಾಡಿ ಆದಷ್ಟು ಬೇಗ ಚಿಕಿತ್ಸೆ ಕೊಡಿಸುವುದು ಕೂಡ ಬಹಳ ಮುಖ್ಯವಾಗಿರುತ್ತದೆ.
ನವಜಾತ ಶಿಶುಗಳಲ್ಲಿ ಥೈರಾಯ್ಡ್ (Thyroid)ಅಸಮತೋಲನ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ನವಜಾತ ಶಿಶುಗಳಲ್ಲಿ ಒಂದೊಮ್ಮೆ ಥೈರಾಯ್ಡ್ ಸಮಸ್ಯೆ ಕಾಣಿಸಿಕೊಂಡರೆ ರೋಗ ನಿರ್ಣಯ ಮಾಡಿ ಆದಷ್ಟು ಬೇಗ ಚಿಕಿತ್ಸೆ ಕೊಡಿಸುವುದು ಕೂಡ ಬಹಳ ಮುಖ್ಯವಾಗಿರುತ್ತದೆ. ಒಂದೊಮ್ಮೆ ಚಿಕಿತ್ಸೆ ನೀಡುವುದು ತಡವಾದರೆ ಮಕ್ಕಳ ನರಗಳ ಮೇಲೆ ಪರಿಣಾಮ ಬೀರಬಹುದು.
ನೊಯ್ಡಾದ ಗ್ಯಾಜುವೇಟ್ ಇನ್ಸ್ಟಿಟ್ಯೂಟ್ ಆಫ್ ಚೈಲ್ಡ್ ಹೆಲ್ತ್ 200 ಶಿಶುಗಳ ಸಮೀಕ್ಷೆ ನಡೆಸಿತ್ತು. ಅದರಲ್ಲಿ ಶೇ.10ರಷ್ಟು ಶಿಶುಗಳು ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿರುವುದು ತಿಳಿದುಬಂದಿತ್ತು. ಶಿಶುಗಳನ್ನು ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತದೆ. ಒಂದೊಮ್ಮೆ ಹಾರ್ಮೋನ್ ರಿಪ್ಲೇಸ್ಮೆಂಟ್ ಥೆರಪಿ ಮಾಡದಿದ್ದರೆ ಮಾನಸಿಕ ಸಮಸ್ಯೆಗಳಿಗೆ ತುತ್ತಾಗುವ ಸಾಧ್ಯತೆ ಇದೆ.
ಅವಧಿಗೂ ಮುನ್ನ ಜನಿಸಿದ ಶಿಶುಗಳು ಹಾಗೂ ಸಾಮಾನ್ಯವಾಗಿ ಜನಿಸಿದ ಶಿಶುಗಳ ಸಮೀಕ್ಷೆ ನಡೆಸಲಾಗಿದ್ದು, ಶಿಶುಗಳನ್ನು 7 ದಿನಗಳ ಕಾಲ ಐಸಿಯುನಲ್ಲಿಡಲಾಗಿತ್ತು. ಮಗು ಹುಟ್ಟಿ ಮೂರು ಅಥವಾ ನಾಲ್ಕು ದಿನಗಳ ಬಳಿಕ ರಕ್ತ ಪರೀಕ್ಷೆ ಮಾಡಿದಾಗ ಥೈರಾಯ್ಡ್ ಸಮಸ್ಯೆ ಇರುವುದು ಗೊತ್ತಾಗಿತ್ತು.
ಜನ್ಮಜಾತ ಥೈರಾಯ್ಡ್ ಇದ್ದರೆ ಆಜೀವ ಚಿಕಿತ್ಸೆಯ ಅಗತ್ಯವಿರುತ್ತದೆ, ಹುಟ್ಟಿ ಕೆಲವು ವರ್ಷಗಳ ಬಳಿಕ ಥೈರಾಯ್ಡ್ ಕಾಣಿಸಿಕೊಂಡರೆ ಚಿಕಿತ್ಸೆಯಿಂದ ಕಡಿಮೆ ಮಾಡಬಹುದಾಗಿದೆ.
ಹುಟ್ಟಿನಿಂದ ಉಂಟಾಗುವ ಹೈಪೋಥೈರಾಯ್ಡಿಸಮ್ನ ಅತ್ಯಂತ ಸಾಮಾನ್ಯ ಕಾರಣವೆಂದರೆ ಥೈರಾಯ್ಡ್ ಗ್ರಂಥಿಯ ಅಸಮರ್ಪಕ ಬೆಳವಣಿಗೆಯಾಗಿದೆ.
ಜನ್ಮಜಾತ ಥೈರಾಯ್ಡಿಸಮ್ನೊಂದಿಗೆ ಬಳಲುತ್ತಿರುವ ನವಜಾತ ಶಿಶುಗಳಿಗೆ ಯಾವುದೇ ಲಕ್ಷಣಗಳು ಇರುವುದಿಲ್ಲ.
ದೇಹದಲ್ಲಿ ಹಾರ್ಮೋನುಗಳು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ಆದರೆ, ಇಂದಿನ ದಿನಗಳಲ್ಲಿ, ಆಹಾರ ಮತ್ತು ಜೀವನಶೈಲಿಗೆ ಸಂಬಂಧಿಸಿದ ಅಂಶಗಳಿಂದಾಗಿ, ಹಾರ್ಮೋನುಗಳ ಅಸಮತೋಲನದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
ಅದೇ ರೀತಿ ಥೈರಾಯ್ಡ್ ಹಾರ್ಮೋನ್ ದೇಹದಲ್ಲಿನ ಅನೇಕ ಪ್ರಮುಖ ದೈಹಿಕ ಕಾರ್ಯಗಳನ್ನು ನಿಯಂತ್ರಿಸಲು ಸಹ ಕೆಲಸ ಮಾಡುತ್ತದೆ. ಈ ಹಾರ್ಮೋನ್ ಸಹಾಯದಿಂದ, ದೇಹದ ಚಯಾಪಚಯ ಮತ್ತು ಸಂತಾನೋತ್ಪತ್ತಿಯಂತಹ ಪ್ರಮುಖ ಪ್ರತಿಕ್ರಿಯೆಗಳನ್ನು ನಿಯಂತ್ರಿಸಲಾಗುತ್ತದೆ.
ಈ ಥೈರಾಯ್ಡ್ ಹಾರ್ಮೋನುಗಳನ್ನು ಆರೋಗ್ಯಕರವಾಗಿ ಮತ್ತು ಸಮತೋಲಿತವಾಗಿಡಲು, ಜೀವನಶೈಲಿ ಮತ್ತು ಆಹಾರದ ಬಗ್ಗೆ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಬೇಕು. ದೇಹದಲ್ಲಿ ಥೈರಾಯ್ಡ್ ಹಾರ್ಮೋನ್ ಅಧಿಕವಾಗುವುದರಿಂದ ಹೈಪರ್ ಥೈರಾಯ್ಡಿಸಮ್ ಉಂಟಾಗುತ್ತದೆ ಮತ್ತು ಕಡಿಮೆ ಉತ್ಪಾದನೆಯು ಹೈಪೋಥೈರಾಯ್ಡಿಸಮ್ನಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ. ದೇಹದಲ್ಲಿನ ಥೈರಾಯ್ಡ್ ಹಾರ್ಮೋನ್ ಅಸಮತೋಲನದ ಕಾರಣಗಳು, ಲಕ್ಷಣಗಳು ಮತ್ತು ಚಿಕಿತ್ಸೆಯ ಬಗ್ಗೆ ಇಲ್ಲಿ ನೋಡೋಣ.
ಥೈರಾಯ್ಡ್ ಹಾರ್ಮೋನ್ ಅಸಮತೋಲನವು ಆಹಾರ, ಜೀವನಶೈಲಿ ಮತ್ತು ದೇಹದಲ್ಲಿನ ಆರೋಗ್ಯಕ್ಕೆ ಸಂಬಂಧಿಸಿದ ಅಂಶಗಳಿಂದ ಉಂಟಾಗಬಹುದು. ಪುರುಷರು ಮತ್ತು ಮಹಿಳೆಯರಲ್ಲಿ ಇದಕ್ಕೆ ಕಾರಣಗಳು ವಿಭಿನ್ನವಾಗಿವೆ. ಪುರುಷರು ಮತ್ತು ಮಹಿಳೆಯರಲ್ಲಿ ಥೈರಾಯ್ಡ್ ಹಾರ್ಮೋನುಗಳ ಅಸಮತೋಲನದ ಕಾರಣಗಳು ಈ ಕೆಳಗಿನಂತಿವೆ.
ಪುರುಷರಲ್ಲಿ ಥೈರಾಯ್ಡ್ ಹಾರ್ಮೋನ್ ಅಸಮತೋಲನಕ್ಕೆ ಕಾರಣಗಳು:
1. ಮಧುಮೇಹ
2. ಕಡಿಮೆ ಅಥವಾ ಹೆಚ್ಚು ಥೈರಾಯ್ಡ್ ಉತ್ಪಾದನೆ
3. ಔಷಧಿಗಳ ಕಾರಣ
4. ಒತ್ತಡ
5. ಹಾರ್ಮೋನ್ ಚಿಕಿತ್ಸೆ
6. ಗೆಡ್ಡೆ
7. ಕ್ಯಾನ್ಸರ್ ಚಿಕಿತ್ಸೆ
8. ಸಮತೋಲಿತ ಆಹಾರದ ಕೊರತೆ
ಮಹಿಳೆಯರಲ್ಲಿ ಥೈರಾಯ್ಡ್ ಹಾರ್ಮೋನ್ ಅಸಮತೋಲನಕ್ಕೆ ಕಾರಣಗಳು:
1. PCOS ನಿಂದಾಗಿ ಅಂದರೆ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್
2. ಔಷಧಿ
3. ಗರ್ಭಾವಸ್ಥೆ
4. ಅಕಾಲಿಕ ಋತುಬಂಧ
5. ಸ್ತನ್ಯಪಾನ
6. ಆಹಾರದ ಅಡಚಣೆ
ಈ ಮೇಲಿನ ಮಾಹಿತಿಗಳು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ ಸಾಮಾನ್ಯ ಮಾಹಿತಿಯನ್ನು ಆಧರಿಸಿರುತ್ತದೆ.
ಆರೋಗ್ಯ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:42 pm, Thu, 26 May 22