ಮೃತ ವ್ಯಕ್ತಿಯ ಆಸ್ತಿ ಲಪಟಾಯಿಸಿದ ಆರೋಪ; ಹೊಳಲ್ಕೆರೆ ಬಿಜೆಪಿ ಶಾಸಕ ಎಂ ಚಂದ್ರಪ್ಪ ಪತ್ನಿ, ಪುತ್ರರ ವಿರುದ್ಧ ಎಫ್ಐಆರ್ ದಾಖಲು

ಶ್ರೀಧರ್ ಮೃತರಾದ ಬಳಿಕ ಜಿಪಿಎ ದುರುಪಯೋಗ ಮಾಡಿಕೊಂಡು ಆಸ್ತಿ ಕಬಳಿಕೆ ಮಾಡಿದ್ದಾರೆ ಅಂತ ನಾಗರಾಜ್ ಮತ್ತು ಎಂ ಚಂದ್ರಪ್ಪ ಕುಟುಂಬದ ವಿರುದ್ಧ ಶ್ರೀಧರ್ ಸಹೋದರಿ ಲತಾ ಮತ್ತಿತರರು ಕೋರ್ಟ್ ಮೊರೆ ಹೋಗಿದ್ದಾರೆ.

ಮೃತ ವ್ಯಕ್ತಿಯ ಆಸ್ತಿ ಲಪಟಾಯಿಸಿದ ಆರೋಪ; ಹೊಳಲ್ಕೆರೆ ಬಿಜೆಪಿ ಶಾಸಕ ಎಂ ಚಂದ್ರಪ್ಪ ಪತ್ನಿ, ಪುತ್ರರ ವಿರುದ್ಧ ಎಫ್ಐಆರ್ ದಾಖಲು
ಬಿಜೆಪಿ ಶಾಸಕ ಎಂ ಚಂದ್ರಪ್ಪ ದಂಪತಿ
Follow us
TV9 Web
| Updated By: sandhya thejappa

Updated on:May 05, 2022 | 8:40 AM

ಚಿತ್ರದುರ್ಗ: ಮೃತ ವ್ಯಕ್ತಿಗೆ ಸೇರಿದ ಆಸ್ತಿಯನ್ನು ಲಪಟಾಯಿಸಿದ ಆರೋಪದ ಹಿನ್ನೆಲೆ ಹೊಳಲ್ಕೆರೆಯ ಬಿಜೆಪಿ ಶಾಸಕ ಎಂ ಚಂದ್ರಪ್ಪ (M Chandrappa) ಪತ್ನಿ ಮತ್ತು ಪುತ್ರರ ವಿರುದ್ಧ ಎಫ್ಐಆರ್ (FIR) ದಾಖಲಾಗಿದೆ. ಶಾಸಕ ಪತ್ನಿ ಚಂದ್ರಕಲಾ, ಪುತ್ರರಾದ ರಘುಚಂದನ್, ದೀಪ್ ಚಂದನ್ ವಿರುದ್ಧ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಮೂವರು ಶ್ರೀಧರ್ ಎಂಬುವರಿಗೆ ಸೇರಿದ ನಿವೇಶನಗಳನ್ನ ಕಬಳಿಸಿದ್ದು, ಶ್ರೀಧರ್ ಬಳಿ ಜಿಪಿಎ ಪಡೆದಿದ್ದ ನಾಗರಾಜ್ ರಿಂದ ಆಸ್ತಿ ಪಡೆದಿದ್ದಾರೆ ಎಂದು ಮೃತ ಶ್ರೀಧರ್ ಸಹೋದರಿ ಆರೋಪಿಸಿದ್ದಾರೆ.

ಶ್ರೀಧರ್ ಮೃತರಾದ ಬಳಿಕ ಜಿಪಿಎ ದುರುಪಯೋಗ ಮಾಡಿಕೊಂಡು ಆಸ್ತಿ ಕಬಳಿಕೆ ಮಾಡಿದ್ದಾರೆ ಅಂತ ನಾಗರಾಜ್ ಮತ್ತು ಎಂ ಚಂದ್ರಪ್ಪ ಕುಟುಂಬದ ವಿರುದ್ಧ ಶ್ರೀಧರ್ ಸಹೋದರಿ ಲತಾ ಮತ್ತಿತರರು ಕೋರ್ಟ್ ಮೊರೆ ಹೋಗಿದ್ದಾರೆ. ಕೋರ್ಟ್ ಪೊಲೀಸ್ ಠಾಣೆಗೆ ಸೂಚನೆ ನೀಡಿದ ಹಿನ್ನೆಲೆ ಎಪ್ರಿಲ್ 30 ರಂದು ಕಲಂ 404, 405, 415, 420, 423, 463, 464, 466, 468, 470, ರೆ/ವಿ 149 ಅಡಿಯಲ್ಲಿ ಕೇಸ್ ದಾಖಲಾಗಿದೆ.

ಚಿರತೆಯನ್ನು ಹತ್ಯೆಗೈದಿದ್ದ ಐವರು ಆರೋಪಿಗಳ ಬಂಧನ: ಮೈಸೂರು: ಚಿರತೆಯನ್ನು ಹತ್ಯೆಗೈದಿದ್ದ ಐವರು ಆರೋಪಿಗಳನ್ನ ಹುಣಸೂರು ತಾಲೂಕಿನ ಕಡೇಮನುಗನಹಳ್ಳಿ ಬಳಿ ಬಂಧಿಸಲಾಗಿದೆ. ಬೈಕ್‌ನಲ್ಲಿ ಸಾಗಿಸುತ್ತಿದ್ದ ಚಿರತೆ ಚರ್ಮ, ನಾಲ್ಕು ಕಾಲು,  ಚಿರತೆ ಹತ್ಯೆಗೆ ಬಳಸಲಾಗಿದ್ದ ಒಂಟಿ ನಳಿಕೆ ಬಂದೂಕು ಜಪ್ತಿ ಮಾಡಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ

ಬೆಂಗಳೂರು- ಚೆನ್ನೈ ಪಂದ್ಯದ ವೇಳೆ ವಿಶೇಷ ಕ್ಷಣ; ಆರ್​ಸಿಬಿ ಜೆರ್ಸಿ ತೊಟ್ಟ ಗೆಳೆಯನಿಗೆ ಪ್ರೇಮ ನಿವೇದನೆ ಮಾಡಿದ ಯುವತಿ- ವಿಡಿಯೋ ಇಲ್ಲಿದೆ

ಅತ್ಯಾಚಾರ ಸಂತ್ರಸ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ: ಯುಪಿ ಮುಖ್ಯ ಕಾರ್ಯದರ್ಶಿ, ಡಿಜಿಪಿಯಿಂದ ವರದಿ ಕೋರಿದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ

Published On - 8:39 am, Thu, 5 May 22