ಬೆಂಗಳೂರು- ಚೆನ್ನೈ ಪಂದ್ಯದ ವೇಳೆ ವಿಶೇಷ ಕ್ಷಣ; ಆರ್ಸಿಬಿ ಜೆರ್ಸಿ ತೊಟ್ಟ ಗೆಳೆಯನಿಗೆ ಪ್ರೇಮ ನಿವೇದನೆ ಮಾಡಿದ ಯುವತಿ- ವಿಡಿಯೋ ಇಲ್ಲಿದೆ
IPL 2022| RCB vs CSK | Propose: ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ನಲ್ಲಿ ನಡೆದ ಆರ್ಸಿಬಿ ಹಾಗೂ ಸಿಎಸ್ಕೆ ನಡುವಿನ ಪಂದ್ಯದ ವೇಳೆ ನಡೆದ ಪ್ರೇಮ ನಿವೇದನೆ ಪ್ರಕರಣ ಆರ್ಸಿಬಿ ಅಭಿಮಾನಿಗಳಲ್ಲಿ ಮತ್ತಷ್ಟು ಸಂತಸ ಮೂಡಿಸಿತು. ಅಷ್ಟಕ್ಕೂ ಆಗಿದ್ದೇನು? ಇಲ್ಲಿದೆ ವಿಡಿಯೋ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವೆ ಬುಧವಾರ ನಡೆದ ಐಪಿಲ್ ಪಂದ್ಯವು ವಿಶೇಷ ಸಂದರ್ಭವೊಂದಕ್ಕೆ ಸಾಕ್ಷಿಯಾಯಿತು. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ನಲ್ಲಿ ನಡೆದ ಪಂದ್ಯದ ವೇಳೆ ನಡೆದ ಪ್ರೇಮ ನಿವೇದನೆ ಪ್ರಕರಣ ಆರ್ಸಿಬಿ ಅಭಿಮಾನಿಗಳಲ್ಲಿ ಮತ್ತಷ್ಟು ಸಂತಸ ಮೂಡಿಸಿತು. ಅಷ್ಟಕ್ಕೂ ಆಗಿದ್ದೇನು? ಇಲ್ಲಿದೆ ನೋಡಿ. ಆರ್ಸಿಬಿ ಹಾಗೂ ಸಿಎಸ್ ಕೆ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಡೆವೋನ್ ಕಾನ್ವೆ ಬ್ಯಾಟ್ ಮಾಡುತ್ತಿದ್ದರು. ವನಿಂದು ಹಸರಂಗ ಬೌಲ್ ಮಾಡುತ್ತಿದ್ದರು. ಈ ವೇಳೆ ಸ್ಟೇಡಿಯಂನಲ್ಲಿ ಯುವತಿಯೋರ್ವರು ತಮ್ಮ ಗೆಳೆಯನಿಗೆ ಪ್ರೇಮ ನಿವೇದನೆ ಮಾಡಿದರು. ಯುವಕ ಆರ್ಸಿಬಿ ಜೆರ್ಸಿ ತೊಟ್ಟಿದ್ದರು. ಪ್ರೇಮ ನಿವೇದನೆ ಮಾಡಿದ ಯುವತಿ ಗೆಳೆಯನಿಗೆ ರಿಂಗ್ ಕೂಡ ತೊಡಿಸಿದರು. ನಂತರ ಈರ್ವರೂ ಆಲಂಗಿಸಿಕೊಂಡರು. ಈ ಸುಂದರ ಕ್ಷಣವನ್ನು ಕ್ಯಾಮೆರಾಮೆನ್ ಸೆರೆಹಿಡಿಯುತ್ತಿದ್ದಂತೆ ಮೈದಾನದಲ್ಲಿ ಹರ್ಷೋದ್ಗಾರ ಕೇಳಿಬಂತು. ಕಾಮೆಂಟರಿ ಮಾಡುತ್ತಿದ್ದವರೂ ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದ ವಿಡಿಯೋ ಇಲ್ಲಿದೆ:
— Addicric (@addicric) May 4, 2022
ಸದ್ಯ ಪ್ರೇಮಿಗಳ ಪ್ರಪೋಸ್ ಪ್ರಕರಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ‘ಆರ್ಸಿಬಿ ಅಭಿಮಾನಿಗಳಾಗಿರುವವರು ಪತಿಯಾಗಲು ಯೋಗ್ಯರು, ಕಾರಣ ಅವರು ಬಹಳ ನಿಷ್ಠಾವಂತರು’ ಎಂಬ ಮೀಮ್ ಗಳನ್ನು ನೀವು ನೋಡಿರಬಹುದು. ಸದ್ಯ ಈ ಪ್ರಕರಣದಲ್ಲೂ ಅದನ್ನೇ ಉದಾಹರಿಸಿ ಮೀಮ್ಗಳನ್ನು ಮಾಡಲಾಗುತ್ತಿದೆ.
ತಮ್ಮ ಪಂಚಿಂಗ್ ಟ್ವೀಟ್ಗಳಿಂದ ಹೆಸರುವಾಸಿಯಾಗಿರುವ ಮಾಜಿ ಕ್ರಿಕೆಟ್ ಆಟಗಾರ ವಾಸಿಂ ಜಾಫರ್ ಟ್ವೀಟ್ ಮಾಡಿ, “ಬುದ್ಧಿವಂತ ಹುಡುಗಿ ಆರ್ಸಿಬಿ ಫ್ಯಾನ್ಗೆ ಪ್ರಪೋಸ್ ಮಾಡಿದ್ದಾಳೆ. ಗೆಳೆಯ ಆರ್ಸಿಬಿಗೆ ನಿಷ್ಠನಾಗಿ ಇರುತ್ತಾನಾದರೆ ಜತೆಗಾರ್ತಿಯೊಂದಿಗೂ ಹಾಗೆಯೇ ಇರುತ್ತಾನೆ. ಒಳ್ಳೆಯ ಕೆಲಸ, ಹಾಗೂ ಪ್ರೇಮ ನಿವೇದನೆ ಮಾಡಲು ಒಳ್ಳೆಯ ದಿನ. ಶುಭವಾಗಲಿ” ಎಂದು ಬರೆದುಕೊಂಡಿದ್ದಾರೆ.
ವಾಸಿಂ ಜಾಫರ್ ಟ್ವೀಟ್ ಇಲ್ಲಿದೆ:
Smart girl proposing an RCB fan. If he can stay loyal to RCB, he can definitely stay loyal to his partner ? Well done and a good day to propose ? #RCBvCSK #IPL2022 pic.twitter.com/e4p4uTUaji
— Wasim Jaffer (@WasimJaffer14) May 4, 2022
ಅಂದಹಾಗೆ ಕ್ರಿಕೆಟ್ ಮೈದಾನದಲ್ಲಿ ನಿವೇದನೆಗಳು ಹೊಸದಲ್ಲ. ಈ ಹಿಂದೆ ಚೆನ್ನೈ ತಂಡದ ಕ್ರಿಕೆಟ್ ಆಟಗಾರ ದೀಪಕ್ ಚಾಹರ್ ಪಂದ್ಯ ಮುಗಿದ ಬಳಿಕ ತಮ್ಮ ಗೆಳತಿ ಜಯಾ ಭರಧ್ವಾಜ್ ಗೆ ಮೈದಾನದಲ್ಲೇ ಪ್ರಪೋಸ್ ಮಾಡಿದ್ದರು.
ಗೆಲ್ಲಲೇಬೇಕಾಗಿದ್ದ ಪಂದ್ಯದಲ್ಲಿ ಗೆದ್ದು ಬೀಗಿದ ಆರ್ಸಿಬಿ:
ಆರ್ಸಿಬಿ ಹಾಗೂ ಸಿಎಸ್ ಕೆ ನಡುವಿನ ಪಂದ್ಯದಲ್ಲಿ ಎರಡೂ ತಂಡಕ್ಕೆ ಗೆಲುವು ಅನಿವಾರ್ಯವಾಗಿತ್ತು. ಆರ್ಸಿಬಿ ಗೆಲುವಿನೊಂದಿಗೆ ಚೆನ್ನೈ ಪ್ಲೇ ಆಫ್ ಕನಸು ಬಹುತೇಕ ಭಗ್ನವಾಗಿದೆ. ಮೊದಲು ಬ್ಯಾಟ್ ಮಾಡಿದ ಬೆಂಗಳೂರು ತಂಡ 173 ರನ್ ಗಳ ಸವಾಲು ನೀಡಿತ್ತು. ಆದರೆ ಚೆನ್ನೈ 160 ರನ್ ಪೇರಿಸಲಷ್ಟೇ ಶಕ್ತವಾಯಿತು. ಈ ಗೆಲುವಿನ ಮೂಲಕ ಬೆಂಗಳೂರು ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ.
ಕ್ರೀಡಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:20 am, Thu, 5 May 22