IPL 2022: ಆರೆಂಜ್ ಕ್ಯಾಪ್ ಬಟ್ಲರ್ ಬಳಿ ಭದ್ರ; ಪರ್ಪಲ್ ಕ್ಯಾಪ್ ರೇಸ್​ನಲ್ಲಿ ಇರೋರು ಯಾರೆಲ್ಲಾ?

Orange Cap | Purple Cap: ಚೆನ್ನೈ ವಿರುದ್ಧ ಆರ್​ಸಿಬಿ ಉತ್ತಮ ಮೊತ್ತ ಪೇರಿಸಲು ಅಡಿಪಾಯ ಹಾಕಿಕೊಟ್ಟವರೆಂದರೆ ಕಪ್ತಾನ ಫಾಫ್ ಡು ಪ್ಲೆಸಿಸ್. ಸದ್ಯ ಬೆಂಗಳೂರು ತಂಡದ ಅತ್ಯಧಿಕ ರನ್ ಗಳಿಸಿದವರ ಪಟ್ಟಿಯಲ್ಲಿ ಅವರದ್ದೇ ಮೊದಲ ಹೆಸರು. ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಫಾಫ್ ಒಂದೊಂದೇ ಮೆಟ್ಟಿಲು ಹತ್ತಿರವಾಗುತ್ತಿದ್ದಾರೆ.

IPL 2022: ಆರೆಂಜ್ ಕ್ಯಾಪ್ ಬಟ್ಲರ್ ಬಳಿ ಭದ್ರ; ಪರ್ಪಲ್ ಕ್ಯಾಪ್ ರೇಸ್​ನಲ್ಲಿ ಇರೋರು ಯಾರೆಲ್ಲಾ?
ಜೋಸ್ ಬಟ್ಲರ್, ಯಜುವೇಂದ್ರ ಚಾಹಲ್
Follow us
TV9 Web
| Updated By: shivaprasad.hs

Updated on:May 05, 2022 | 10:07 AM

ಐಪಿಎಲ್ 2022 (IPL 2022) ಪಂದ್ಯಾವಳಿ ರಂಗೇರುತ್ತಿದೆ. ಲೀಗ್ ಹಂತ ಮುಕ್ತಾಯಗೊಳ್ಳುತ್ತಾ ಬಂದಂತೆಯೇ ಪ್ಲೇ ಆಫ್​ಗೆ ಯಾವ ತಂಡ ಪ್ರವೇಶಿಸಲಿದೆ ಎಂಬ ಕುತೂಹಲ ಜೋರಾಗುತ್ತಿದೆ. ಈ ನಡುವೆ ಆರ್​ಸಿಬಿ ಹಾಗೂ ಸಿಎಸ್​ಕೆ ಪಂದ್ಯದ ನಂತರ ಬೆಂಗಳೂರು ತಂಡ ಅಗ್ರ 4ರಲ್ಲಿ ಕಾಣಿಸಿಕೊಂಡಿದೆ. ಈ ಮೂಲಕ ಮುಂದಿನ ಹಂತದ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಚೆನ್ನೈ ವಿರುದ್ಧ ಆರ್​ಸಿಬಿ ಉತ್ತಮ ಮೊತ್ತ ಪೇರಿಸಲು ಅಡಿಪಾಯ ಹಾಕಿಕೊಟ್ಟವರೆಂದರೆ ಕಪ್ತಾನ ಫಾಫ್ ಡು ಪ್ಲೆಸಿಸ್. ಸದ್ಯ ಬೆಂಗಳೂರು ತಂಡದ ಅತ್ಯಧಿಕ ರನ್ ಗಳಿಸಿದವರ ಪಟ್ಟಿಯಲ್ಲಿ ಅವರದ್ದೇ ಮೊದಲ ಹೆಸರು. ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಫಾಫ್ ಒಂದೊಂದೇ ಮೆಟ್ಟಿಲು ಹತ್ತಿರವಾಗುತ್ತಿದ್ದಾರೆ. 11 ಪಂದ್ಯಗಳಿಂದ ಅವರು 316 ರನ್ ಬಾರಿಸಿದ್ದು ಸದ್ಯ 6ನೇ ಸ್ಥಾನದಲ್ಲಿದ್ದಾರೆ. ಆದರೆ ಫಾಫ್ ಸತತವಾಗಿ ಉತ್ತಮ ಪ್ರದರ್ಶನ ತೋರುತ್ತಿಲ್ಲ. ಹೀಗಾಗಿ ಅವರ ಸರಾಸರಿ 28.73ಕ್ಕಿಳಿದಿದೆ. 10 ಪಂದ್ಯಗಳಿಂದ 588 ರನ್ ಸಿಡಿಸಿರುವ ಜೋಸ್ ಬಟ್ಲರ್ ಆರೆಂಜ್ ಕ್ಯಾಪ್ (Orange Cap) ಒಡೆಯರಾಗಿದ್ದಾರೆ. ಅವರ ನಂತರ ಎರಡನೇ ಸ್ಥಾನದಲ್ಲಿ 451 ರನ್ ಬಾರಿಸಿರುವ ಕೆಎಲ್ ರಾಹುಲ್ ಇದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿ ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ. ವೈಯಕ್ತಿಕವಾಗಿಯೂ ಆ ತಂಡದ ಬ್ಯಾಟರ್​​ಗಳ ಸಾಧನೆ ಉತ್ತಮವಾಗಿಲ್ಲ. ಹೀಗಾಗಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಸಿಎಸ್​ಕೆಯ ಯಾವ ಬ್ಯಾಟರ್​ಗಳೂ ಇಲ್ಲ. 265 ರನ್ ಗಳಿಸಿರುವ ರುತುರಾಜ್ ಗಾಯಕ್ವಾಡ್ 16ನೇ ಸ್ಥಾನದಲ್ಲಿದ್ದಾರೆ.

ಆರೆಂಜ್ ಕ್ಯಾಪ್ ಪಟ್ಟಿ ಇಲ್ಲಿದೆ ನೋಡಿ:

ಇದನ್ನೂ ಓದಿ
Image
IPL 2022 Points Table: ಆರ್​ಸಿಬಿ ಗೆಲುವಿನಿಂದ ಪಾಯಿಂಟ್ಸ್​ ಪಟ್ಟಿಯಲ್ಲಿ ಮಹತ್ತರ ಬದಲಾವಣೆ; ಏನೇನು? ಇಲ್ಲಿದೆ ನೋಡಿ
Image
ಬೆಂಗಳೂರು- ಚೆನ್ನೈ ಪಂದ್ಯದ ವೇಳೆ ವಿಶೇಷ ಕ್ಷಣ; ಆರ್​ಸಿಬಿ ಜೆರ್ಸಿ ತೊಟ್ಟ ಗೆಳೆಯನಿಗೆ ಪ್ರೇಮ ನಿವೇದನೆ ಮಾಡಿದ ಯುವತಿ- ವಿಡಿಯೋ ಇಲ್ಲಿದೆ
Image
IPL 2022 DC vs SRH Live Streaming: ದೆಹಲಿ- ಹೈದರಾಬಾದ್ ನಡುವೆ ರೋಚಕ ಹೋರಾಟ! ಪಂದ್ಯದ ಬಗ್ಗೆ ಇಲ್ಲಿದೆ ಮಾಹಿತಿ
Orange Cap after Match 49

‘ಆರೆಂಜ್ ಕ್ಯಾಪ್’ ರೇಸ್​ನಲ್ಲಿರುವ ಬ್ಯಾಟರ್​ಗಳು

ಪರ್ಪಲ್ ಕ್ಯಾಪ್ ರೇಸ್​ನಲ್ಲಿ ಯಾರೆಲ್ಲಾ ಇದ್ದಾರೆ?

ಸದ್ಯ ಪರ್ಪಲ್ ಕ್ಯಾಪ್ ರಾಜಸ್ಥಾನ ರಾಯಲ್ಸ್ ತಂಡದ ಸ್ಟಾರ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ಬಳಿ ಇದೆ. ಅವರು 19 ವಿಕೆಟ್ ಪಡೆದಿದ್ದಾರೆ. ಆರ್​ಸಿಬಿಯ ವನಿಂದು ಹಸರಂಗ ಪ್ರತಿ ಪಂದ್ಯದ ನಂತರವೂ ಒಂದೊಂದೇ ಸ್ಥಾನ ಮೇಲಕ್ಕೇರುತ್ತಿದ್ದಾರೆ. ಸಿಎಸ್​ಕೆ ವಿರುದ್ಧದ ಪಂದ್ಯಕ್ಕೂ ಮುನ್ನ 7ನೇ ಸ್ಥಾನದಲ್ಲಿದ್ದ ಹಸರಂಗ, ಮ್ಯಾಚ್ ನಂತರ ಅಗ್ರ 5ರಲ್ಲಿ ಕಾಣಿಸಿಕೊಂಡಿದ್ದಾರೆ. 16 ವಿಕೆಟ್ ಪಡೆದಿರುವ ಹಸರಂಗ, ತಲಾ 17 ವಿಕೆಟ್ ಪಡೆದಿರುವ ರಬಾಡ, ನಟರಾಜನ್ ಹಾಗೂ ಕುಲದೀಪ್ ಯಾದವ್​ ಅವರಿಗಿಂತ ಹಿಂದಿದ್ದಾರೆ. ಮುಂದಿನ ಪಂದ್ಯಗಳಲ್ಲಿ ಹಸರಂಗ ಉತ್ತಮ ಪ್ರದರ್ಶನ ನೀಡಿದರೆ ಪರ್ಪಲ್ ಕ್ಯಾಪ್​ಗೆ ಪ್ರಬಲ ಪೈಪೋಟಿಯನ್ನು ನೀಡಬಹುದು.

ಸಿಎಸ್​ಕೆ ವಿರುದ್ಧ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ, ಜಯಕ್ಕೆ ಕಾರಣರಾದ ಹರ್ಷಲ್ ಪಟೇಲ್ ಅಗ್ರ 10 ಬೌಲರ್​ಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. 10 ಪಂದ್ಯಗಳಿಂದ ಅವರು 13 ವಿಕೆಟ್ ಕಬಳಿಸಿದ್ದಾರೆ. ಕಳೆದೆರಡು ಪಂದ್ಯ ಆಡದಿದ್ದರೂ ಚೆನ್ನೈನ ಡ್ವೇನ್ ಬ್ರಾವೋ 14 ವಿಕೆಟ್​ಗಳೊಂದಿಗೆ 9ನೇ ಸ್ಥಾನದಲ್ಲಿದ್ದಾರೆ.

ಪರ್ಪಲ್ ಕ್ಯಾಪ್ ಪಟ್ಟಿ ಇಲ್ಲಿದೆ:

Purple Cap after Match 49

ಪರ್ಪಲ್ ಕ್ಯಾಪ್​ ರೇಸ್​ನಲ್ಲಿರುವ ಬೌಲರ್​ಗಳು

ಸಿಎಸ್​ಕೆ ವಿರುದ್ಧದ ಗೆಲುವಿನೊಂದಿಗೆ ಆರ್​ಸಿಬಿ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ. ಉಳಿದ ಮೂರೂ ಪಂದ್ಯಗಳನ್ನು ಗೆದ್ದು ಪ್ಲೇ ಆಫ್​ ಆಡುವ ಹಂಬಲದಲ್ಲಿ ಫಾಫ್ ಬಳಗವಿದೆ. ಇಂದು ನಡೆಯುವ ಸನ್​ರೈಸರ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯ ಉಳಿದ ಮಹತ್ವದ್ದಾಗಿದೆ.

ಕ್ರೀಡಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:02 am, Thu, 5 May 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್