MS Dhoni: ಧೋನಿ ವಿಕೆಟ್ ಉರುಳಿದ ನಂತರ ವಿರಾಟ್ ಸಂಭ್ರಮ ಹೇಗಿತ್ತು? ವಿಡಿಯೋ ವೈರಲ್
Virat Kohli | CSK vs RCB | IPL 2022: ಆರ್ಸಿಬಿ ಹಾಗೂ ಸಿಎಸ್ಕೆ ನಡುವಿನ ಪಂದ್ಯದಲ್ಲಿ ಚೆನ್ನೈ ತಂಡದ ನಾಯಕ ಎಂಎಸ್ ಧೋನಿ ವಿಕೆಟ್ ಉರುಳಿದಾಗ ಕೊಹ್ಲಿ ಸಂಭ್ರಮಾಚರಣೆಯ ದೃಶ್ಯಗಳು ಈಗ ವೈರಲ್ ಆಗಿವೆ.
ವಿರಾಟ್ ಕೊಹ್ಲಿ (Virat Kohli) ಮೈದಾನದಲ್ಲಿ ತಮ್ಮ ಆಕ್ರಮಣಕಾರಿ ನಡವಳಿಕೆಯಿಂದ ಗುರುತಿಸಿಕೊಂಡವರು. ಮೈದಾನದ ಹೊರಗೆ ಸ್ನೇಹಭಾವದಿಂದ ಹೆಸರಾದ ಅವರು, ಪಂದ್ಯದ ವೇಳೆ ಸಂಪೂರ್ಣವಾಗಿ ಆಟದತ್ತ ಮಾತ್ರ ಗಮನ ನೆಟ್ಟಿರುತ್ತಾರೆ. ಸ್ನೇಹ, ಹಿರಿತನ ಇದ್ಯಾವುದನ್ನೂ ಅವರು ಲೆಕ್ಕಿಸುವುದಿಲ್ಲ. ಭಾರತ ಹಾಗೂ ಆರ್ಸಿಬಿ ತಂಡವನ್ನು ಮುನ್ನಡೆಸುತ್ತಿದ್ದಾಗಲೂ ಅವರು ಇದೇ ಕಾರಣಕ್ಕೆ ಸಖತ್ ಸುದ್ದಿಯಾಗುತ್ತಿದ್ದರು. ಅವರ ವ್ಯಕ್ತಿತ್ವ ತಂಡದ ಇತರ ಆಟಗಾರರಿಗೆ ಮತ್ತಷ್ಟು ಹುರುಪು ನೀಡುತ್ತಿತ್ತು. ಎದುರಾಳಿ ತಂಡದ ವಿಕೆಟ್ ಬಿದ್ದಾಗ ಕೊಹ್ಲಿಯ ಸಂಭ್ರಮಾಚರಣೆ ಅವರ ಟ್ರೇಡ್ಮಾರ್ಕ್ಗಳಲ್ಲೊಂದು. ವಿರಾಟ್ ನಾಯಕತ್ವದಿಂದ ಇಳಿದಿದ್ದರೂ ಅವರ ಸಂಭ್ರಮಾಚರಣೆಯಲ್ಲಿ ತುಸುವೂ ಬದಲಾಗಿಲ್ಲ. ಇದಕ್ಕೆ ಇತ್ತೀಚಿನ ದೃಷ್ಟಾಂತವೇ ಸಾಕ್ಷಿ. ಆರ್ಸಿಬಿ (RCB) ಹಾಗೂ ಸಿಎಸ್ಕೆ (CSK) ನಡುವಿನ ಪಂದ್ಯದಲ್ಲಿ ಚೆನ್ನೈ ತಂಡದ ನಾಯಕ ಎಂಎಸ್ ಧೋನಿ ವಿಕೆಟ್ ಉರುಳಿದಾಗ ಕೊಹ್ಲಿ ಸಂಭ್ರಮಾಚರಣೆಯ ದೃಶ್ಯಗಳು ವೈರಲ್ ಆಗಿವೆ.
ವಿರಾಟ್ ಈ ಹಿಂದೆ ಮಾತನಾಡುತ್ತಾ ಧೋನಿ ಯಾವತ್ತಿಗೂ ತಮ್ಮ ಕ್ಯಾಪ್ಟನ್ ಎಂದು ಹೇಳಿಕೊಂಡಿದ್ದರು. ಆದರೆ ಕೊಹ್ಲಿ ಮೈದಾನದಲ್ಲಿ ಈ ಎಲ್ಲಾ ಭಾವನೆಗಳನ್ನು ಬದಿಗಿಡುತ್ತಾರೆ. ಇದಕ್ಕೆ ಧೋನಿ ವಿಕೆಟ್ ಪಡೆದಾಗ ಕೊಹ್ಲಿಯವರ ಆಕ್ರಮಣಕಾರಿ ಸಂಭ್ರಮವೇ ಸಾಕ್ಷಿ.
ಬುಧವಾರ ನಡೆದ ಸಿಎಸ್ಕೆ ಹಾಗೂ ಆರ್ಸಿಬಿ ನಡುವಿನ ಪಂದ್ಯದಲ್ಲಿ ಧೋನಿ ಬೆಂಗಳೂರು ತಂಡದ ಗೆಲುವಿಗೆ ಅಡ್ಡಗಾಲಾಗುವ ಸಾಧ್ಯತೆ ಇತ್ತು. ಹೀಗಾಗಿ ಅವರ ವಿಕೆಟ್ ಬಹಳ ಮುಖ್ಯವಾಗಿತ್ತು. ಜೋಶ್ ಹೇಜಲ್ವುಡ್ ಎಸೆತದಲ್ಲಿ ಧೋನಿ ವಿಕೆಟ್ ಒಪ್ಪಿಸಿದರು. ಆಗ ಅವರು 3 ಎಸೆತಗಳಲ್ಲಿ ಕೇವಲ 2 ರನ್ ಗಳಿಸಿದ್ದರು. ಇದರಿಂದ ಆರ್ಸಿಬಿ ಗೆಲುವು ಬಹುತೇಕ ಖಚಿತವಾಯಿತು. ಧೋನಿ ವಿಕೆಟ್ ಮಹತ್ವದ ಅರಿವಿದ್ದ ಕೊಹ್ಲಿ ಖುಷಿಯಿಂದ ತಮ್ಮ ಟ್ರೇಡ್ಮಾರ್ಕ್ ಸಂಭ್ರಮಾಚರಣೆ ನಡೆಸಿದರು.
ವಿರಾಟ್ ಸಂಭ್ರಮಾಚರಣೆ; ನೆಟ್ಟಿಗರಿಂದ ಚರ್ಚೆ:
ವಿರಾಟ್ ಸಂಭ್ರಮಾಚರಣೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಧೋನಿ ಅಭಿಮಾನಿಗಳು ಈ ಸಂಭ್ರಮಾಚರಣೆ ಅತಿಯಾಯಿತು ಎಂದೂ ಅಭಿಪ್ರಾಯಪಟ್ಟಿದ್ದಾರೆ. ಆದರೆ ಆರ್ಸಿಬಿ ಹಾಗೂ ಕೊಹ್ಲಿ ಫ್ಯಾನ್ಸ್ ಅದನ್ನು ಸಮರ್ಥನೆ ಮಾಡಿದ್ದಾರೆ. ಜತೆಗೆ ಅದು ವಿರಾಟ್ ಕೊಹ್ಲಿ ಎಂದಿನಂತೆ ಮಾಡುವ ಸೆಲೆಬ್ರೇಷನ್ ಅಷ್ಟೆ, ಅದು ಮೈದಾನದಲ್ಲಿ ಮಾತ್ರ ಎಂದು ಹೇಳಿದ್ದಾರೆ.
ವಿರಾಟ್ ಸಂಭ್ರಮಾಚರಣೆಯ ವಿಡಿಯೋ ಇಲ್ಲಿದೆ:
This Cricket clown? abusing Dhoni still some Mahirat Clowns are supporting this disgusting character ? pic.twitter.com/DX1Cm9k7O3
— Bruce Wayne (@Bruce_Wayne_MSD) May 4, 2022
ಕೊಹ್ಲಿ ಸಂಭ್ರಮಾಚರಣೆ ಬಗ್ಗೆ ನೆಟ್ಟಿಗರ ಕೆಲವು ಅಭಿಪ್ರಾಯಗಳು:
People getting triggered for kohli celebration Meanwhile Kohli isn’t even showing 10% of agression what football, tennis kabbadi players show
— Bavuma(Hardik warrior ) (@goatbavuma) May 5, 2022
Dhoni fans taking their frustration out on Kohli’s routine celebration is peak Twitter ?
— Shubh Aggarwal (@shubh_chintak) May 4, 2022
ಚೆನ್ನೈ ವಿರುದ್ಧದ ಗೆಲುವಿನಿಂದ ಆರ್ಸಿಬಿ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಲಗ್ಗೆಇಟ್ಟಿದೆ. ಅದಾಗ್ಯೂ ಪ್ಲೇ ಆಫ್ ಖಚಿತಗೊಳ್ಳಲು ಮುಂದಿನ ಎಲ್ಲಾ ಪಂದ್ಯಗಳಲ್ಲಿ ಗೆಲುವು ಸಾಧಿಸಲೇಬೇಕಾದ ಒತ್ತಡದಲ್ಲಿದೆ ಫಾಫ್ ಬಳಗ. ಧೋನಿ ನಾಯಕತ್ವದ ಸಿಎಸ್ಕೆ ಕೂಡ ಮುಂದಿನ ಎಲ್ಲಾ ಪಂದ್ಯಗಳನ್ನು ದೊಡ್ಡ ಅಂತರದಲ್ಲಿ ಗೆಲ್ಲಲೇಬೇಕಿದೆ. ಅದಾಗ್ಯೂ ಉಳಿದ ತಂಡಗಳ ಫಲಿತಾಂಶದಿಂದ ಸಿಎಸ್ಕೆ ಭವಿಷ್ಯ ನಿರ್ಧಾರವಾಗಲಿದೆ.
ಕ್ರೀಡಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ