ವಿಕೆಟ್ಕೀಪರ್-ಬ್ಯಾಟರ್ ಸಹಾಗೆ ಹೆದರಿಸಿ ಬೆದರಿಕೆಯೊಡ್ಡಿದ ಮಜುಂದಾರನ್ನು ಎರಡು ವರ್ಷ ಅವಧಿಗೆ ಬಿಸಿಸಿಐ ನಿಷೇಧಿಸಿದೆ
ಫೆಬ್ರುವರಿಯಲ್ಲಿ ಸಹಾ ಅವರು ತಮಗೆ ಬಂದ ಬೆದರಿಕೆ ಸಂದೇಶಗಳ ಸ್ಕ್ರೀನ್ ಶಾಟ್ ಶೇರ್ ಮಾಡಿದಾಗ ಪತ್ರಕರ್ತನ ಹೆಸರನ್ನು ಬಹಿರಂಗಪಡಿಸಿರಲಿಲ್ಲ. ತಾನು ಸಂದರ್ಶನ ನೀಡಲು ನಿರಾಕರಿಸಿದ ನಂತರ ಪತ್ರಕರ್ತ ತಮ್ಮ ವಿರುದ್ಧ ಕಠೋರವಾಗಿ ವರ್ತಿಸಲಾರಂಭಿಸಿದ್ದರು ಎಂದು ಸಹಾ ಆರೋಪಿದ್ದರು
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) (BCCI) ಭಾರತದ ಖ್ಯಾತ ಪತ್ರಕರ್ತ ಬೊರಿಯಾ ಮಜುಂದಾರ (Boria Majumdar) ಅವರನ್ನು ಭಾರತದ ವಿಕೆಟ್ ಕೀಪರ್-ಬ್ಯಾಟರ್ ವೃದ್ಧಿಮಾನ್ ಸಹಾ (Wriddhiman Saha) ಅವರಿಗೆ ಹೆದರಿಸಿದ ಮತ್ತು ಬೆದರಿಕೆಯೊಡ್ಡಿದ ಹಿನ್ನೆಲೆಯಲ್ಲಿ ಎರಡು ವರ್ಷಗಳ ಅವಧಿಗೆ ನಿಷೇಧಿಸಿದೆ. ಬಿಸಿಸಿಐನ ಹಂಗಾಮಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಮಾಂಗ್ ಅಮಿನ್ ಅವರ ಒಂದು ಆಂತರಿಕ ಪತ್ರದ ಮೂಲಕ ಮಂಡಳಿಯು ಮಜುಂದಾರ್ ಅವರನ್ನು ನಿಷೇಧಿಸಿರುವ ಸಂಗತಿಯನ್ನು ಎಲ್ಲ ರಾಜ್ಯಗಳ ಕ್ರಿಕೆಟ್ ಸಂಸ್ಥೆಗಳಿಗೆ ತಿಳಿಸಿದೆ.
ಬಿಸಿಸಿಯ ಉಪಾಧ್ಯಕ್ಷ ರಾಜೀವ್ ಶುಕ್ಲಾ, ಖಜಾಂಚಿ ಅರುಣ್ ಧುಮಾಲ್ ಮತ್ತು ಮಂಡಳಿಯ ಸದಸ್ಯ ಪ್ರಭ್ತೇಜ್ ಸಿಂಗ್ ಭಾಟಿಯಾ ಅವರನ್ನೊಳಗೊಂಡ ತ್ರಿ-ಸದಸ್ಯ ಸಮಿತಿಯು ಸದರಿ ನಿರ್ಧಾರವನ್ನು ತೆಗೆದುಕೊಂಡಿದೆ. ಒಬ್ಬ ಹಿರಿಯ ಪತ್ರಕರ್ತನಿಗೆ ಸಂದರ್ಶನ ನೀಡಲು ನಿರಾಕರಿಸಿದ ಬಳಿಕ ಅವರು ತನಗೆ ಹೆದರಿಸಲಾರಂಭಿಸಿ ಬೆದರಿಕೆಯೊಡ್ಡಿದರು ಅಂತ ವೃದ್ಧಿಮಾನ ಸಹಾ ಮಂಡಳಿಗೆ ದೂರು ಸಲ್ಲಿಸಿದ ನಂತರ ಅವರು ಮಾಡಿದ ಅರೋಪಗಳ ತನಿಖೆ ನಡೆಸಲು ಬಿಸಿಸಿಐ ತ್ರಿ-ಸದಸ್ಯರ ಸಮಿತಿಯನ್ನು ರಚಿಸಿತ್ತು.
ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ, ಮಜುಂದಾರ ಮೇಲೆ ನಿಷೇಧ ಹೇರುವ ಶಿಫಾರಸ್ಸನ್ನು ಬಿಸಿಸಿಐ ಉನ್ನತ ಮಂಡಳಿಗೆ ತಿಳಿಸುವ ಮೊದಲು ತ್ರಿ-ಸದಸ್ಯರ ಸಮಿತಿಯು ಇಬ್ಬರ ವಾದಗಳನ್ನು ಆಲಿಸಿತು.
ಎರಡೂ ಪಕ್ಷಗಳ ವಾದ ಕೇಳಿದ ಬಳಿಕ, ‘ಮಜುಂದಾರ ವರ್ತನೆ ನಿಸ್ಸಂದೇಹವಾಗಿ ಹೆದರಿಸುವ ಮತ್ತು ಥ್ರೆಟ್ ಮಾಡುವ ಸ್ವರೂಪದ್ದಾಗಿದೆ,’ ಎನ್ನುವದನ್ನು ಸಮಿತಿ ಕಂಡುಕೊಂಡಿತು. ಸಮಿತಿ ಮಾಡಿದ ಶಿಫಾರಸ್ಸಿಗೆ ಬಿಸಿಸಿಐ ಉನ್ನತ ಮಂಡಳಿಯು ಸಮ್ಮತಿ ಸೂಚಿಸಿತು.
ಮಂಡಳಿಯ ಆಂತರಿಕ ಪತ್ರದ ಪ್ರಕಾರ ಕೆಳ ಕಾಣಿಸಿದ ನಿರ್ಬಂಧಗಳನ್ನು ಬೊರಿಯಾ ಮಜುಂದಾರ ಅವರ ಮೇಲೆ ಹೇರಲಾಗಿದೆ:
-ಭಾರತದಲ್ಲಿ ನಡೆಯುವ ದೇಶೀಯ ಮತ್ತು ಅಂತರರಾಷ್ಟ್ರೀಯ ಯಾವುದೇ ಕ್ರಿಕೆಟ್ ಪಂದ್ಯವನ್ನು ಒಬ್ಬ ಪತ್ರಕರ್ತನಾಗಿ 2 ವರ್ಷಗಳ ಕಾಲ ವರದಿ ಮಾಡುವಂತಿಲ್ಲ, ಮತ್ತು ಯಾವುದೇ ಮಾಧ್ಯಮದ ಪ್ರತಿನಿಧಿಯಾಗಿ ಕ್ರೀಡಾಂಗಣಕ್ಕೆ ಬರುವಂತಿಲ್ಲ.
-ಬಿಸಿಸಿಐಯಲ್ಲಿ ನೋಂದಾಯಿತ ಯಾವುದೇ ಆಟಗಾರನೊಂದಿಗೆ ಭಾರತದಲ್ಲಿ 2-ವರ್ಷ ಕಾಲ ಸಂದರ್ಶನ ನಡೆಸುವಂತಿಲ್ಲ.
-ಬಿಸಿಸಿಐನ ಸದಸ್ಯ ಸಂಘಗಳ ಜೊತೆ ಮತ್ತು ಅವುಗಳ ಒಡೆತನದಲ್ಲಿರುವ ಯಾವುದೇ ಕ್ರಿಕೆಟ್ ಸೌಲಭ್ಯವನ್ನು 2 ವರ್ಷದ ಅವಧಿಗೆ ಬಳಸುವಂತಿಲ್ಲ.
ಫೆಬ್ರುವರಿಯಲ್ಲಿ ಸಹಾ ಅವರು ತಮಗೆ ಬಂದ ಬೆದರಿಕೆ ಸಂದೇಶಗಳ ಸ್ಕ್ರೀನ್ ಶಾಟ್ ಶೇರ್ ಮಾಡಿದಾಗ ಪತ್ರಕರ್ತನ ಹೆಸರನ್ನು ಬಹಿರಂಗಪಡಿಸಿರಲಿಲ್ಲ. ತಾನು ಸಂದರ್ಶನ ನೀಡಲು ನಿರಾಕರಿಸಿದ ನಂತರ ಪತ್ರಕರ್ತ ತಮ್ಮ ವಿರುದ್ಧ ಕಠೋರವಾಗಿ ವರ್ತಿಸಲಾರಂಭಿಸಿದ್ದರು ಎಂದು ಸಹಾ ಆರೋಪಿದ್ದರು. ಬಳಿಕ ಸಹಾ, ‘ಭಾರತೀಯ ಕ್ರಿಕೆಟ್ ಗೆ ಇಷ್ಟೆಲ್ಲ ಕಾಣಿಕೆ ನೀಡಿದ ನಂತರ ಗೌರವಾನ್ವಿತ ಎಂದು ಕರೆಸಿಕೊಳ್ಳುವ ಪತ್ರಕರ್ತರೊಬ್ಬರು ನನ್ನನ್ನು ಹೀಗೆ ನಡೆಸಿಕೊಳ್ಳುತ್ತಾರೆ,’ ಅಂತ ಟ್ವೀಟ್ ಮಾಡಿದ್ದರು.
After all of my contributions to Indian cricket..this is what I face from a so called “Respected” journalist! This is where the journalism has gone. pic.twitter.com/woVyq1sOZX
— Wriddhiman Saha (@Wriddhipops) February 19, 2022
ಕೇವಲ ಒಂದು ಬದಿಯ ಮೇಸುಜುಗಳಿರುವ ಸ್ಕ್ರೀನ್ ಗ್ರ್ಯಾಬ್ ನಲ್ಲಿ ಮಜುಂದಾರ ಅವರು, ಸಹಾ ವರ್ತನೆಯಿಂದ ತನಗೆ ನೋವಾಗಿದೆ. ವಿಕೆಟ್ ಕೀಪರ್ ತನ್ನ ಕರೆಗಳಿಗೆ ಪ್ರತಿಕ್ರಿಯಿಸದಿರುವುದು ಅಮಾನವಾಗಿದೆ ಮತ್ತು ತಾನು ಅವಮಾನಗಳನ್ನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.
After all of my contributions to Indian cricket..this is what I face from a so called “Respected” journalist! This is where the journalism has gone. pic.twitter.com/woVyq1sOZX
— Wriddhiman Saha (@Wriddhipops) February 19, 2022
ಐಪಿಎಲ್ 2022 ಆರಂಭವಾಗುವ ಮೊದಲು ಶ್ರೀಲಂಕಾ ವಿರುದ್ಧ ನಡೆದ 2-ಪಂದ್ಯಗಳ ಟೆಸ್ಟ್ ಸರಣಿಗೆ ಸಹಾ ಅವರನ್ನು ಡ್ರಾಪ್ ಮಾಡಿದ ಮೇಲೆ ಅವರು ಸೋಶಿಯಲ್ ಮೀಡಿಯಾನಲ್ಲಿ ಸ್ಕ್ರೀನ್ಶಾಟ್ಗಳನ್ನು ಪೋಸ್ಟ್ ಮಾಡಲಾರಂಭಿಸಿದಾಗ ಇದೆಲ್ಲ ಶುರುವಾಯಿತು.
ಇದನ್ನೂ ಓದಿ: ಐಪಿಎಲ್ ಮಾದರಿಯಲ್ಲಿ ಟಿ20 ಲೀಗ್ ಆಯೋಜನೆಗೆ ಮುಂದಾದ ಕ್ರಿಕೆಟ್ ಸೌತ್ ಆಫ್ರಿಕಾ! ಟೂರ್ನಿ ಯಾವಾಗ ಆರಂಭ?