‘ರಾಜ್ಯದಲ್ಲಿ ಯಾವ ಸಾರಿಗೆ ಸಚಿವನೂ ಉದ್ಧಾರ ಆಗಿಲ್ಲ..ಲಕ್ಷ್ಮಣ ಸವದಿಯೂ ಮೂಲೆಗುಂಪು ಆಗ್ತಾನೆ’

| Updated By: ಸಾಧು ಶ್ರೀನಾಥ್​

Updated on: Dec 12, 2020 | 11:09 AM

ರಾಜ್ಯದಲ್ಲಿ ಯಾವ ಸಾರಿಗೆ ಸಚಿವನೂ ಉದ್ಧಾರ ಆಗಿಲ್ಲ. ಪ್ರತಿಯೊಬ್ಬ ಸಾರಿಗೆ ಸಚಿವನೂ ಮೂಲೆ ಗುಂಪಾಗಿದ್ದಾರೆ. ಈಗ ಸಾರಿಗೆ ಸಚಿವ ಲಕ್ಷ್ಮಣ ಸವದಿಯೂ ಮೂಲೆಗುಂಪು ಆಗ್ತಾನೆ ಎಂದು ನಗರದಲ್ಲಿ KSRTC ಬಸ್ ಚಾಲಕನೊಬ್ಬ ತನ್ನ ಆಕ್ರೋಶ ಹೊರಹಾಕಿದ್ದಾನೆ.

‘ರಾಜ್ಯದಲ್ಲಿ ಯಾವ ಸಾರಿಗೆ ಸಚಿವನೂ ಉದ್ಧಾರ ಆಗಿಲ್ಲ..ಲಕ್ಷ್ಮಣ ಸವದಿಯೂ ಮೂಲೆಗುಂಪು ಆಗ್ತಾನೆ’
ಲಕ್ಷ್ಮಣ ಸವದಿಯೂ ಮೂಲೆಗುಂಪು ಆಗ್ತಾನೆ -ಚಾಲಕನ ಆಕ್ರೋಶ
Follow us on

ಚಿಕ್ಕಮಗಳೂರು: ರಾಜ್ಯದಲ್ಲಿ ಯಾವ ಸಾರಿಗೆ ಸಚಿವನೂ ಉದ್ಧಾರ ಆಗಿಲ್ಲ. ಪ್ರತಿಯೊಬ್ಬ ಸಾರಿಗೆ ಸಚಿವನೂ ಮೂಲೆ ಗುಂಪಾಗಿದ್ದಾರೆ. ಈಗ ಸಾರಿಗೆ ಸಚಿವ ಲಕ್ಷ್ಮಣ ಸವದಿಯೂ ಮೂಲೆಗುಂಪು ಆಗ್ತಾನೆ ಎಂದು ನಗರದಲ್ಲಿ KSRTC ಬಸ್ ಚಾಲಕನೊಬ್ಬ ತನ್ನ ಆಕ್ರೋಶ ಹೊರಹಾಕಿದ್ದಾನೆ.

ಅಶೋಕ್ ಫ್ರಂಟ್‌ಲೈನ್‌ನಲ್ಲಿದ್ದ.. ಈಗ ಮೂಲೆಗುಂಪಾಗಿದ್ದಾನೆ. PGR ಸಿಂಧ್ಯಾ ಸೇರಿದಂತೆ ಎಲ್ಲರೂ ಮೂಲೆಗುಂಪಾಗಿದ್ದಾರೆ. ಸಗೀರ್ ಅಹ್ಮದ್​ ಹೇಳ ಹೆಸರಿಲ್ಲದಂತಾಗಿದ್ದಾರೆ ಎಂದು ಚಾಲಕ ತನ್ನ ಆಕ್ರೋಶ ಹೊರಹಾಕಿದ. ಎಷ್ಟೋ ಕಾರ್ಮಿಕ ಸಚಿವರು ವಾಷ್​ ಔಟ್ ಆಗಿದ್ದಾರೆ ಎಂದು ಮಾಜಿ, ಹಾಲಿ ಸಾರಿಗೆ ಸಚಿವರ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ.

ಈ ನಡುವೆ, ತಮ್ಮ ಪ್ರತಿಭಟನೆ ಹತ್ತಿಕ್ಕಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಸಾರಿಗೆ ನೌಕರರ ಆಕ್ರೋಶ ವ್ಯಕ್ತಪಡಿಸಿದರು. ಬಸ್ ನಿಲ್ದಾಣದಲ್ಲಿ ಅಡುಗೆ ತಯಾರಿಗೆ ಅವಕಾಶ ನೀಡ್ತಿಲ್ಲ. ಹೊರಗಡೆಯಿಂದ ಊಟ ತಂದು ತಿನ್ನುವಂತೆ ಹೇಳ್ತಿದ್ದಾರೆ ಎಂದು ಪ್ರತಿಭಟನಾನಿರತ ನೌಕರರು ಸಿಟ್ಟಿಗೆದ್ದರು.

ಸಾರಿಗೆ ನೌಕರರಿಗೆ ಸೆಡ್ಡು ಹೊಡೆಯಲು ಸರ್ಕಾರದ ಮಾಸ್ಟರ್ ​ಪ್ಲ್ಯಾನ್: ರೆಡಿಯಾಯ್ತು 2 ತಂತ್ರ