ಚಿಕ್ಕಮಗಳೂರು: ತಂತಿ ಉರುಳಿಗೆ ಸಿಲುಕಿ ನರಳಾಡಿದ ಮೂರು ವರ್ಷದ ಹೆಣ್ಣು ಚಿರತೆ; ಅರವಳಿಗೆ ಮದ್ದು ನೀಡಿ ರಕ್ಷಣೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 14, 2023 | 1:06 PM

ಚಿಕ್ಕಮಗಳೂರು ನಗರದ ಸಮೀಪದ ಕದ್ರಿಮಿದ್ರಿ ಗ್ರಾಮದ ಬಳಿ ತಂತಿ ಉರುಳಿಗೆ ಸಿಲುಕಿ ನಳಾಡುತ್ತಿದ್ದ ಮೂರು ವರ್ಷದ ಹೆಣ್ಣು ಚಿರತೆಯನ್ನ ರಕ್ಷಣೆ ಮಾಡಿದ ಘಟನೆ ನಡೆದಿದೆ.

ಚಿಕ್ಕಮಗಳೂರು: ತಂತಿ ಉರುಳಿಗೆ ಸಿಲುಕಿ ನರಳಾಡಿದ ಮೂರು ವರ್ಷದ ಹೆಣ್ಣು ಚಿರತೆ; ಅರವಳಿಗೆ ಮದ್ದು ನೀಡಿ ರಕ್ಷಣೆ
ಚಿರತೆ ರಕ್ಷಣೆ
Follow us on

ಚಿಕ್ಕಮಗಳೂರು, ಜು.14: ನಗರದ ಸಮೀಪದ ಕದ್ರಿಮಿದ್ರಿ ಗ್ರಾಮದ ಬಳಿ ತಂತಿ ಉರುಳಿಗೆ ಸಿಲುಕಿ ನಳಾಡುತ್ತಿದ್ದ ಚಿರತೆ (Leopard)ಯನ್ನ ರಕ್ಷಣೆ ಮಾಡಿದ ಘಟನೆ ನಡೆದಿದೆ. ಮೂರು ವರ್ಷದ ಹೆಣ್ಣು ಚಿರತೆ ಇದಾಗಿದ್ದು, ಕಳೆದ 9 ಗಂಟೆಗಳಿಂದ ಉರುಳಿಗೆ ಸಿಲುಕಿ ನರಳಾಡುತ್ತಿತ್ತು. ಬಳಿಕ ಅರವಳಿಗೆ ಮದ್ದು ನೀಡಿ ಚಿರತೆಯನ್ನ ರಕ್ಷಣೆ ಮಾಡಲಾಗಿದೆ. ಇನ್ನು ಅರಳವಳಿಗೆ ತಜ್ಞರು ತಡವಾಗಿ ಆಗಮಿಸಿದ ಹಿನ್ನೆಲೆ ಚಿರತೆ ಸಂಪೂರ್ಣವಾಗಿ ಅಸ್ವಸ್ಥವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ರಸ್ತೆ ದಾಟುವ ವೇಳೆ ಅಪರಿಚಿತ ವಾಹನ ಡಿಕ್ಕಿ, ಚಿರತೆ ಸಾವು

ಚಿತ್ರದುರ್ಗ: ಇನ್ನು ರಸ್ತೆ ದಾಟುವ ವೇಳೆ ಅಪರಿಚಿತ ವಾಹನ ಡಿಕ್ಕಿಯಾಗಿ ಚಿರತೆ ಸಾವನ್ನಪ್ಪಿದ ಘಟನೆ ಜಿಲ್ಲೆಯ ಹೊಸದುರ್ಗ ತಾಲೂಕಿನ ಚಿಕ್ಕ ಬ್ಯಾಲದಕೆರೆ ಚೆಕ್ ಪೋಸ್ಟ್ ಬಳಿ ನಡೆದಿದೆ. ಈ ಹಿನ್ನಲೆ ಹೊಸದುರ್ಗ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಒಂದು ಬಾರಿ ನಾಯಿ ಕಚ್ಚಿಕೊಂಡು ಹೋಗಿದ್ದ ಚಿರತೆ; ಮತ್ತೊಮ್ಮೆ ಎಂಟ್ರಿಕೊಟ್ಟು ಏನೂ ಸಿಗದೇ ತೆರಳಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ

ಮೈಸೂರಿನಲ್ಲಿ ಚಿರತೆ ದಾಳಿ; ವ್ಯಕ್ತಿಗೆ ಗಾಯ

ಮೈಸೂರು: ಹುಣಸೂರು ತಾಲ್ಲೂಕು ರಾಮೇನಹಳ್ಳಿ ಗ್ರಾಮದ ಜಾತ್ರೆ ಮಾಳದ ಬಳಿ‌ ಕುಮಾರಚಾರಿ(29) ಎಂಬ ರೈತನ ಮೇಲೆ ಚಿರತೆ ದಾಳಿ ಮಾಡಿದೆ. ಗಾಯಗೊಂಡ ಆತನನ್ನ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ನೇಹಿತರ ಜೊತೆ ಜಾತ್ರೆ ಮಾಳದ ಮಂಟಪದ ಬಳಿ ಇದ್ದಾಗ, ರಾಮೇನಹಳ್ಳಿ ಬೆಟ್ಟದ ಕಡೆಯಿಂದ ಬಂದ ಚಿರತೆ ದಾಳಿ ಮಾಡಿ, ಕುಮಾರಚಾರಿ ಭುಜ ಹಾಗೂ ಕಾಲಿಗೆ ಗಾಯಗಳಾಗಿವೆ. ಸ್ಥಳಕ್ಕೆ ಹಿರಿಯ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:06 pm, Fri, 14 July 23