AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧೆಯ ಮೇಲೆ ಅನಾಥಾಶ್ರಮದಲ್ಲಿ ಮನಸ್ಸೋ ಇಚ್ಛೆ ಥಳಿತ; ಆಸ್ಪತ್ರೆಗೆ ದಾಖಲು

ವೃದ್ಧೆಯ ಮೈತುಂಬ ಬಾಸುಂಡೆ ಗುರುತು, ತಲೆಗೆ ಗಂಭೀರ ಗಾಯ. ಚಿತ್ರ ಹಿಂಸೆ ನೀಡಿ ವೃದ್ಧೆಯ ಮೇಲೆ ಮನಸ್ಸೋ ಇಚ್ಛೆ ಥಳಿತ, ಇದರಿಂದ ಅಸ್ವಸ್ಥಗೊಂಡ ವೃದ್ಧೆಯನ್ನ ಚಿಕ್ಕಮಗಳೂರು ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿರುವ ಘಟನೆ ಜಿಲ್ಲೆಯ ಅನಾಥಾಶ್ರಮದಲ್ಲಿ ನಡೆದಿದೆ.

ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧೆಯ ಮೇಲೆ ಅನಾಥಾಶ್ರಮದಲ್ಲಿ ಮನಸ್ಸೋ ಇಚ್ಛೆ ಥಳಿತ; ಆಸ್ಪತ್ರೆಗೆ ದಾಖಲು
ಅನಾಥಶ್ರಾಮದಲ್ಲಿ ವೃದ್ಧೆಯ ಮೇಲೆ ಹಲ್ಲೆ
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Edited By: |

Updated on:Jul 15, 2023 | 7:40 AM

Share

ಚಿಕ್ಕಮಗಳೂರು, ಜು.15: ವೃದ್ಧೆಯ ಮೈತುಂಬ ಬಾಸುಂಡೆ ಗುರುತು, ತಲೆಗೆ ಗಂಭೀರ ಗಾಯ. ಚಿತ್ರ ಹಿಂಸೆ ನೀಡಿ ವೃದ್ಧೆಯ ಮೇಲೆ ಮನಸ್ಸೋ ಇಚ್ಛೆ ಥಳಿತ, ಇದರಿಂದ ಅಸ್ವಸ್ಥಗೊಂಡ ವೃದ್ಧೆಯನ್ನ ಚಿಕ್ಕಮಗಳೂರು(chikkamagaluru) ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿರುವ ಘಟನೆ ಜಿಲ್ಲೆಯ ಅನಾಥಾಶ್ರಮವೊಂದರಲ್ಲಿ ನಡೆದಿದೆ. ಹಾಸನ ಜಿಲ್ಲೆಯ ಚನ್ನಳ್ಳಿ ಗ್ರಾಮದ ರತ್ನಮ್ಮ (69) ಗಂಭೀರ ಗಾಯಗೊಂಡ ವೃದ್ಧೆ. ಇವರನ್ನ ಒಂದೂವರೆ ತಿಂಗಳ ಹಿಂದೆ, ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಹೊನ್ನೆಕೊಡಿಗೆ ಗ್ರಾಮದಲ್ಲಿರುವ ರಜಿನಾ ಸ್ನೇಹಾ ಆಶ್ರಮ ಟ್ರಸ್ಟ್ ಹೆಸರಿನ ಅನಾಥಾಶ್ರಮಕ್ಕೆ ಕುಟುಂಬಸ್ಥರು ಸೇರಿಸಿದ್ದರು. ಇದಾದ ಬಳಿಕ ವಾಪಸ್ ಮನೆಗೆ ಕರೆದುಕೊಂಡು ಹೋಗಲು ಬಂದಾಗ ಘಟನೆ ಬೆಳಕಿಗೆ ಬಂದಿದೆ.

ರಜಿತಾ ಸ್ನೇಹಾ ಆಶ್ರಮ ಟ್ರಸ್ಟ್ ಮುಖ್ಯಸ್ಥ ಲಿಜೇಶ್​ನಿಂದ ಕೃತ್ಯ ಆರೋಪ

ಇನ್ನು ಇತ್ತೀಚೆಗಷ್ಟೇ ಮಾನಸಿಕ ಕಾಯಿಲೆಗೆ ಚಿಕಿತ್ಸೆ ನೀಡುವುದಾಗಿ ಆಶ್ರಮಕ್ಕೆ ಸೇರಿಸಿಕೊಂಡಿದ್ದ ಲಿಜೇಶ್ ಎಂಬಾತ ಈ ಕೃತ್ಯ ಎಸಗಿದ್ದಾನೆ ಎಂದು ರತ್ನಮ್ಮ ಕುಟುಂಬಸ್ಥರು ಎನ್.ಆರ್ ಪುರ ಪೊಲೀಸ್ ‌ಠಾಣೆಯಲ್ಲಿ ಲಿಜೇಶ್ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ. ಇನ್ನು ಮೂಲಭೂತ ಸೌಕರ್ಯಗಳಿಲ್ಲದ ರಬ್ಬರ್ ತೋಟದಲ್ಲಿರುವ ಆಶ್ರಮದಲ್ಲಿ ಅನೇಕ ರೋಗದಿಂದ ಬಳಲುತ್ತಿರುವ 38 ವೃದ್ಧರು ಇದ್ದಾರೆ. ಇದೀಗ ಈ ಘಟನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ:ಪುಣ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬಂದು ಚಿನ್ನದ ಸರ ಮರೆತು ಹೋಗಿದ್ದ ಮಹಿಳೆ; ಪ್ರಾಮಾಣಿಕತೆ ಮೆರೆದು ಸರ ಪೊಲೀಸರಿಗೆ ತಲುಪಿಸಿದ ಚನ್ನಪಟ್ಟಣ ಯುವಕ!

ಇನ್ನು ಈ ಕುರಿತು ಮಾತನಾಡಿದ  ವೃದ್ದೆಯ ಮಗಳು ‘ ನಮ್ಮ ತಾಯಿ ಸರಿಯಾಗಿ ಔಷಧಿ, ಆಹಾರ ಸೇವಿಸುತ್ತಿರಲಿಲ್ಲ. ಹೀಗಾಗಿ ನಾವು ಸಾಮಾಜಿಕ ಜಾಲತಾಣದಲ್ಲಿ ಈ ಆಶ್ರಮದ ಬಗ್ಗೆ ನೋಡಿ, ಕೆಲ ದಿನಗಳ ಹಿಂದೆ ಇಲ್ಲಿ ಸೇರಿಸಿದ್ದೇವು. ಬಹುಶಃ ಈಗ ಸರಿ ಹೋಗಿರಬಹುದೆಂದು ಕರೆದುಕೊಂಡ ಹೋಗಲು ಬಂದಿದ್ದೆ. ಈ ವೇಳೆ ಅಮ್ಮನ ಮೈ ಮೇಲೆ ಬಾಸುಂಡೆಗಳು ಮೂಡಿದ್ದು, ಜೊತೆಗೆ ತಲೆಗೆ ಗಂಭೀರವಾಗಿ ಗಾಯಗೊಂಡಿರುವುದು ಕಾಣಿಸಿದ್ದು, ಕೂಡಲೇ ಆಸ್ಪತ್ರೆಗೆ ಸೇರಿದ್ದೇನೆ ಮತ್ತು ಈ ಕುರಿತು ಪೊಲೀಸ್​ ಠಾಣೆಗೂ ದೂರು ನೀಡಿರುವುದಾಗಿ ಹೇಳಿದರು.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 7:38 am, Sat, 15 July 23

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ