ಚಿಕ್ಕಮಗಳೂರು: ತಾಲೂಕಿನ ಇನಾಂ ದತ್ತಾತ್ರೇಯ ಪೀಠದಲ್ಲಿ ವಿವಾದದ ಮೇಲೆ ವಿವಾದಗಳು ಹುಟ್ಟಿಕೊಳ್ಳುತ್ತಿವೆ. ಮಾಂಸದೂಟ, ಗೋರಿ ಪೂಜೆ ಬಳಿಕ ಮತ್ತೊಂದು ವಿವಾದ ಹುಟ್ಟಿಕೊಂಡಿದ್ದು, ಮುಜರಾಯಿ ಇಲಾಖೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಎನ್ನಲಾಗುತ್ತಿದೆ. ದತ್ತಪೀಠದ ಆವರಣದಲ್ಲೇ ಮುಸ್ಲಿಮರು ನಮಾಜ್ ಮಾಡಿದ್ದಾರೆ. ಆವರಣ ಮಾತ್ರವಲ್ಲ ಗುಹೆಯ ಒಳಗೂ ಮುಸ್ಲಿಮರಿಂದ ನಮಾಜ್ ಮಾಡಲಾಗಿದೆ ಎನ್ನಲಾಗುತ್ತಿದೆ. ಜಿಲ್ಲಾಡಳಿತದಿಂದ ನೇಮಿಸಲ್ಪಟ್ಟ ಮುಜಾವರ್ರಿಂದ ಮಾತ್ರ ದತ್ತ ಪಾದುಕೆ, ಗೋರಿಗಳಿಗೆ ಪೂಜೆಗೆ ಅವಕಾಶ ನೀಡಲಾಗಿದೆ. ಕೋರ್ಟ್ ಆದೇಶವನ್ನ ಗಾಳಿಗೆ ತೂರಿದ ಮುಸ್ಲಿಮರು. ಕೋರ್ಟ್ ಆದೇಶದ ಅನ್ವಯ ಆವರಣ ಸೇರಿ ಗುಹೆ ಒಳಗೆ ಪ್ರಾರ್ಥನೆ, ನಮಾಜ್, ಪೂಜೆ ಸಲ್ಲಿಸಲು ಅವಕಾಶವಿಲ್ಲ. ದತ್ತಭಕ್ತರು ಸೇರಿದಂತೆ ಮುಸ್ಲಿಂರಿಗೂ ಯಾವುದೇ ಪೂಜೆ ಪುನಸ್ಕಾರಕ್ಕೆ ಅವಕಾಶವಿಲ್ಲ.
ದಿಢೀರ್ ಸಭೆ
ದತ್ತಪೀಠದಲ್ಲಿ ಕಾನೂನು ಉಲ್ಲಂಘಿಸುವ ವಿಡಿಯೋಗಳು ವೈರಲ್ ಆಗಿದ್ದು, ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ನೇತೃತ್ವದಲ್ಲಿ ನಡೆಯುತ್ತಿರುವ ಮುಜಾರಾಯಿ ಇಲಾಖೆ ಅಧಿಕಾರಿಗಳ ದಿಢೀರ್ ಸಭೆ ನಡೆಸಿದರು. ಎಲ್ಲಾ ಕಡತಗಳನ್ನ ಕಚೇರಿಗೆ ತರೆಸಿಕೊಳ್ಳುತ್ತಿರೋ ಡಿಸಿ, ಸಂಪೂರ್ಣ ಮಾಹಿತಿ ಕಲೆಹಾಕುತ್ತಿದ್ದಾರೆ.
ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ
ಚಿಕ್ಕಮಗಳೂರು ದತ್ತಪೀಠದ ಪವಿತ್ರ ಕ್ಷೇತ್ರದಲ್ಲಿ ಮಾಂಸಾಹಾರ ಮಾಡಿದ ವಿಚಾರ ಸಂಬಂಧ ಆಕ್ರೋಶ ವ್ಯಕ್ತಪಡಿಸಿದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಇನ್ನು ಮುಂದೆ ದತ್ತಪೀಠದ ಒಳಗೆ ಮುಸ್ಲಿಮರನ್ನು ಬಿಡುವುದಿಲ್ಲ ಎಂದು ಈ ಹಿಂದೆ ಹೇಳಿದ್ದರು. ಜಿಲ್ಲೆಯ ಜಮಖಂಡಿಯಲ್ಲಿ ಹೇಳಿಕೆ ನೀಡಿದ ಅವರು, ಪವಿತ್ರ ಕ್ಷೇತ್ರ ದತ್ತಪೀಠವನ್ನು ಅಪವಿತ್ರ ಮಾಡಿದ್ದಾರೆ. ನಾನು ಇದನ್ನು ಖಂಡಿಸುತ್ತೇನೆ, ವಿರೋಧಿಸುತ್ತೇನೆ. ಮುಜರಾಯಿ ಇಲಾಖೆ, ಪೊಲೀಸ್ ಇಲಾಖೆ ಏನು ಕತ್ತೆ ಕಾಯ್ತಾ ಇದೆಯಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ದೀಪಿಕಾ, ಪ್ರಿಯಾಂಕಾ ರೀತಿ ಹಾಲಿವುಡ್ಗೆ ಹೋಗ್ತಾರಾ ಕಂಗನಾ? ಖಡಕ್ ಉತ್ತರ ನೀಡಿದ ‘ಧಾಕಡ್’ ನಟಿ
ಮಾಂಸದ ಊಟ ನಿಷಿದ್ಧ ಇದ್ದರೂ ಅಲ್ಲಿ ಮಾಂಸದ ಊಟ ಮಾಡ್ತಾರೆ, ಗೊಮಾಂಸದೂಟ ಮಾಡ್ತಾರೆ. ಹೋಮಹವನ ಮಾಡುವಂತ ಪವಿತ್ರ ಕ್ಷೇತ್ರದಲ್ಲಿ ಗಲೀಜು ಮಾಡಲಾಗಿದೆ. ಇದು ಅಕ್ಷಮ್ಯ ಅಪರಾಧ. ಮುಜರಾಯಿ ಇಲಾಖೆ ಮತ್ತು ಪೊಲೀಸ್ ಇಲಾಖೆ, ಜಿಲ್ಲಾಧಿಕಾರಿಯವರು ಕೂಡಲೆ ತನಿಖೆ ನಡೆಸಬೇಕು. ಯಾರು ತಪ್ಪಿತಸ್ಥರು ಇದ್ದಾರೋ ಅವರ ಮೇಲೆ ಕ್ರಮ ಕೈಗೊಳ್ಳಬೇಕು. ಇನ್ನು ಮುಂದೆ ಮುಸ್ಲಿಮರನ್ನು ಮೇಲೆ ಹೋಗಲು ಬಿಡುವುದಿಲ್ಲ. ದತ್ತಪೀಠ ಪ್ರವೇಶ ಮಾಡಲು ಬಿಡುವುದಿಲ್ಲ ಎಂದಿದ್ದಾರೆ.
ದತ್ತಪೀಠದಲ್ಲಿ ಮಾಂಸಾಹಾರವನ್ನು ನಿಷೇಧಿಸಲಾಗಿದೆ. ಹೋಮ ಮತ್ತು ಹವನ ನಡೆಸುವ ಹಿಂದೂಗಳಿಗೆ ಇದು ಬಹಳ ಪವಿತ್ರವಾದ ಸ್ಥಳವಾಗಿದೆ. ಪರಿಸ್ಥಿತಿ ಹೀಗಿರುವಾಗ ದತ್ತಪೀಠದ ಆವರಣದಲ್ಲಿ ಮಾಂಸ ತೆಗೆದುಕೊಂಡು ಬಂದು ಬೇಯಿಸಿಕೊಂಡು ತಿಂದರೆ ಸ್ಥಳದ ಪಾವಿತ್ರ್ಯತೆ ಹಾಳಾಗುತ್ತದೆ. ಸರ್ಕಾರ ಅದರಲ್ಲೂ ವಿಶೇಷವಾಗಿ ಮುಜರಾಯಿ ಹಾಗೂ ಪೊಲೀಸ್ ಕೂಡಲೇ ಕಾರ್ಯಪ್ರವೃತ್ತರಾಗಿ ತಪ್ಪಿತಸ್ಥರನ್ನು ಪತ್ತೆ ಮಾಡಿ ಅವರ ವಿರುದ್ಧ ಕ್ರಮ ಜರುಗಿಸಬೇಕೆಂದು ವಿ ಎಚ್ ಪಿ ಮತ್ತು ಭಜರಂಗ ದಳದ ಸದಸ್ಯರು ಅಗ್ರಹಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:21 am, Sat, 21 May 22