Drunkard doctor in Kalasa: ಕಳಸದ ಬಾಲಕೃಷ್ಣನಂಥ ವೈದ್ಯರಿದ್ದರೆ ಯಮಧರ್ಮ ನಿರುದ್ಯೋಗಿಯಾಗಿ ಬಿಡುತ್ತಾನೆ!
ಚಿಕ್ಕಮಗಳೂರು ಜಿಲ್ಲಾ ವೈದ್ಯಾಧಿಕಾರಿ ಟಿವಿ9 ಕನ್ನಡ ವಾಹಿನಿ ಜೊತೆ ಮಾತಾಡಿದ್ದು, ಬಾಲಕೃಷ್ಣ ವಿರುದ್ಧ ಇಲಾಖಾ ತನಿಖೆ ನಡೆಸಿ ಶಿಸ್ತು ಕ್ರಮ ಜರುಗಿಸಲಾಗುವುದೆಂದು ಹೇಳಿದ್ದಾರೆ.
ಚಿಕ್ಕಮಗಳೂರು: ಜಿಲ್ಲೆಯ ಕಳಸ ತಾಲ್ಲೂಕು ಆಸ್ಪತ್ರೆಯಲ್ಲಿ ಸಂತಾನಹರಣ ಶಸ್ತ್ರಚಿಕಿತ್ಸೆ ಕ್ಯಾಂಪ್ (family planning camp) ಆಯೋಜನೆಗೊಂಡಿದ್ದು ಒಬ್ಬ ಹೊಣೆಗೇಡಿ ಮತ್ತು ಕುಡುಕ ವೈದ್ಯನಿಂದ (drunk doctor) ಭಾರೀ ಪ್ರಮಾಣದ ಪ್ರಮಾದ ನಡೆದಿದೆ. ವೈದ್ಯ ವೃತ್ತಿಗೆ ಕಳಂಕವೆನಿಸಿರುವ ಡಾ ಬಾಲಕೃಷ್ಣ (Dr Balakrishna) ಹೆಸರಿನ ಮದ್ಯವ್ಯಸನಿ ಮಾಡಿದ್ದೇನು ಗೊತ್ತಾ? ಕಂಠಮಟ್ಟ ಕುಡಿದು ಓಲಾಡುತ್ತಾ ಆಸ್ಪತ್ರೆ ಪ್ರವೇಶಿಸಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಬಂದಿದ್ದ 26 ಮಹಿಳೆಯರ ಪೈಕಿ 8 ಮಂದಿಗೆ ಅನಸ್ತೇಸಿಯಾ ನೀಡಿದ ಬಳಿಕ ಖುದ್ದು ತಾನೇ ಪ್ರಜ್ಞೆತಪ್ಪಿ ಬಿದ್ದಿದ್ದಾನೆ. ಅರವಳಿಕೆ ಮದ್ದು ಬಹಳ ಎಚ್ಚರಿಕೆಯಿಂದ ನೀಡಬೇಕಾಗುತ್ತದೆ. ಕೊಂಚವೇ ಏರುಪೇರಾದರೂ ರೋಗಿಯ ಜೀವಕ್ಕೆ ಅಪಾಯ. ಶಸ್ತ್ರಚಕಿತ್ಸೆಗೆ ಬರುವ ಮಹಿಳೆಯರು ಬರಿ ಹೊಟ್ಟೆಯಲ್ಲಿ ಬರುತ್ತಾರೆ ಮತ್ತು ಕೆಲವರು ಮಕ್ಕಳಿಗೆ ಹಾಲುಣಿಸುವ ತಾಯಂದಿರಾಗಿರುತ್ತಾರೆ. ಬಾಕಕೃಷ್ಣನ ಕುಕೃತ್ಯದಿಂದ ಯಾರಿಗೂ ಅಪಾಯ ಎದುರಾಗದಿರೋದು ಅದೃಷ್ಟವೇ ಸರಿ. ಚಿಕ್ಕಮಗಳೂರು ಜಿಲ್ಲಾ ವೈದ್ಯಾಧಿಕಾರಿ ಟಿವಿ9 ಕನ್ನಡ ವಾಹಿನಿ ಜೊತೆ ಮಾತಾಡಿದ್ದು, ಬಾಲಕೃಷ್ಣ ವಿರುದ್ಧ ಇಲಾಖಾ ತನಿಖೆ ನಡೆಸಿ ಶಿಸ್ತು ಕ್ರಮ ಜರುಗಿಸಲಾಗುವುದೆಂದು ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ