ತುಮಕೂರು: ಅವ್ಯವಸ್ಥೆಯ ಆಗರವಾದ ಪಾವಗಡ ಸಾರ್ವಜನಿಕ ಆಸ್ಪತ್ರೆ; ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಪಟ್ಟವರಿಗೆ ವಿಶ್ರಾಂತಿಗೆ ಬೆಡ್‌ ಸಿಗದೆ ಪರದಾಟ

ತುಮಕೂರು: ಅವ್ಯವಸ್ಥೆಯ ಆಗರವಾದ ಪಾವಗಡ ಸಾರ್ವಜನಿಕ ಆಸ್ಪತ್ರೆ; ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಪಟ್ಟವರಿಗೆ ವಿಶ್ರಾಂತಿಗೆ ಬೆಡ್‌ ಸಿಗದೆ ಪರದಾಟ

TV9 Web
| Updated By: shivaprasad.hs

Updated on:May 07, 2022 | 9:59 AM

ತುಮಕೂರು ಜಿಲ್ಲೆಯ ಪಾವಗಡ ಸಾರ್ವಜನಿಕ ಆಸ್ಪತ್ರೆಯಲ್ಲಿ ಬೆಡ್​ ಸಿಗದೇ ಮಹಿಳೆಯರು ನೆಲದ ಮೇಲೆಯೇ ಮಲಗಿದ ಘಟನೆ ಬೆಳಕಿಗೆ ಬಂದಿದೆ. ಸಂತಾನಹರಣ ಶಸ್ತ್ರಚಿಕಿತ್ಸೆಗೊಳಪಟ್ಟವರು ಬೆಡ್‌ ಸಿಗದೆ ಪರದಾಟ ನಡೆಸಿದ್ದು, ಶಸ್ತ್ರಚಿಕಿತ್ಸೆ ಬಳಿಕ ನೆಲದ ಮೇಲೆಯೇ ಮಲಗಿ ಮಹಿಳೆಯರು ವಿಶ್ರಾಂತಿ ಪಡೆದಿದ್ದಾರೆ.

ತುಮಕೂರು: ಜಿಲ್ಲೆಯ ಪಾವಗಡ (Pavagada) ಸಾರ್ವಜನಿಕ ಆಸ್ಪತ್ರೆಯಲ್ಲಿ ಬೆಡ್​ ಸಿಗದೇ ಮಹಿಳೆಯರು ನೆಲದ ಮೇಲೆಯೇ ಮಲಗಿದ ಘಟನೆ ಬೆಳಕಿಗೆ ಬಂದಿದೆ. ಸಂತಾನಹರಣ ಶಸ್ತ್ರಚಿಕಿತ್ಸೆಗೊಳಪಟ್ಟವರು ಬೆಡ್‌ ಸಿಗದೆ ಪರದಾಟ ನಡೆಸಿದ್ದು, ಶಸ್ತ್ರಚಿಕಿತ್ಸೆ ಬಳಿಕ ನೆಲದ ಮೇಲೆಯೇ ಮಲಗಿ ಮಹಿಳೆಯರು ವಿಶ್ರಾಂತಿ ಪಡೆದಿದ್ದಾರೆ. ಪಾವಗಡ ತಾಲೂಕು ಸರ್ಕಾರಿ ಆಸ್ಪತ್ರೆಯ ಸಮಸ್ಯೆಗಳು ಹಲವಾರಿದ್ದು, ಜನರು ತೀವ್ರ ಸಮಸ್ಯೆ ಅನುಭವಿಸುವಂತಾಗಿದೆ. ಆಸ್ಪತ್ರೆಯಲ್ಲಿ ಸೂಕ್ತ ಔಷಧ, ಚಿಕಿತ್ಸೆ ಸಿಗದೆ ರೋಗಿಗಳು ಪರದಾಟ ನಡೆಸುತ್ತಿದ್ದಾರೆ. ವ್ಯವಸ್ಥೆಯ ಬಗ್ಗೆ, ಆಸ್ಪತ್ರೆ ಸಿಬ್ಬಂದಿ, ಜನಪ್ರತಿನಿಧಿಗಳ ವಿರುದ್ಧ ರೋಗಿಗಳು, ಸಂಬಂಧಿಕರು, ಸ್ಥಳೀಯ ನಿವಾಸಿಗಳು ಆಕ್ರೋಶ ಹೊರಹಾಕಿದ್ದಾರೆ. ಇನ್ನಾದರೂ ಶಾಸಕರು, ಜನಪ್ರತಿನಿಧಿಗಳು ಇತ್ತ ಗಮನಹರಿಸಲು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಬ್ರೇಕಿಂಗ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published on: May 07, 2022 09:56 AM