JDS ಬೆಂಬಲ ಇಲ್ಲದಿದ್ದರೆ ಡಿಕೆಶಿ ಬ್ರದರ್ಸ್ ಗೆಲ್ಲುತ್ತಿರಲಿಲ್ಲ- ಸಿ.ಟಿ. ರವಿ ತಿರುಗೇಟು

ಕುಮಾರಸ್ವಾಮಿಯವರನ್ನು ಸಿಎಂ ಮಾಡಿ ಕೊನೆಗೆ ಅವರನ್ನ ಇಳಿಸಿದ್ದು ಯಾರು? ಇಳಿಸಲು ಅವರ ಪಕ್ಷದ ಶಾಸಕರನ್ನು ಕಳುಹಿಸಿದ್ದು ಯಾರು? ಕೂರಿಸಿದ್ದು ಅವರೇ, ಕಾಲು ಎಳೆಯುವ ಕೆಲಸ ಮಾಡಿದ್ದು ಅವರೇ. ನಮ್ದು ಜೆಡಿಎಸ್ ಜೊತೆ ಒಪ್ಪಂದ ಇಲ್ಲ, ಅವರ ಜೊತೆ ಸಂಬಂಧ ಅಷ್ಟೇ ಎಂದು ಶಾಸಕ ಸಿ ಟಿ ರವಿ ಪ್ರತಿಕ್ರಿಯಿಸಿದ್ದಾರೆ.

JDS ಬೆಂಬಲ ಇಲ್ಲದಿದ್ದರೆ ಡಿಕೆಶಿ ಬ್ರದರ್ಸ್ ಗೆಲ್ಲುತ್ತಿರಲಿಲ್ಲ- ಸಿ.ಟಿ. ರವಿ ತಿರುಗೇಟು
JDS ಬೆಂಬಲ ಇಲ್ಲದಿದ್ದರೆ ಡಿಕೆಶಿ ಬ್ರದರ್ಸ್ ಗೆಲ್ಲುತ್ತಿರಲಿಲ್ಲ- ಸಿ.ಟಿ. ರವಿ ತಿರುಗೇಟು
Follow us
TV9 Web
| Updated By: ಸಾಧು ಶ್ರೀನಾಥ್​

Updated on:Dec 08, 2021 | 2:02 PM

ಚಿಕ್ಕಮಗಳೂರು: ಹಾಲಿ ವಿಧಾನ ಪರಿಷತ್​ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಜೆಡಿಎಸ್ ನಡುವೆ ಒಳಒಪ್ಪಂದ ಆಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆಗೆ ಬಿಜೆಪಿ ನಾಯಕ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ. JDS ಬೆಂಬಲ ಇಲ್ಲದಿದ್ದರೆ ಡಿಕೆಶಿ ಸಹೋದರರು ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ. ಡಿಕೆಶಿ ಕೂಡ ಜೆಡಿಎಸ್ ಜೊತೆ ಒಳ ಒಪ್ಪಂದ ಮಾಡಿಕೊಳ್ಳದಿದ್ದರೆ ಶಾಸಕರಾಗುತಿರಲಿಲ್ಲ ಎಂದು ಚಿಕ್ಕಮಗಳೂರಿನಲ್ಲಿ ಡಿಕೆ ಶಿವಕುಮಾರ್ ವಿರುದ್ಧ ಸಿಟಿ ರವಿ ವಾಗ್ದಾಳಿ ನಡೆಸಿದ್ದಾರೆ. ಜೆಡಿಎಸ್ ಪಕ್ಷದಲ್ಲಿ ಕೆಲ ಮತ ಇದೆ, ಹೀಗಾಗಿ ಕೇಳಿದ್ದೇವೆ. ಆದರೆ ಬಿಜೆಪಿ-JDS ನಡುವೆ ಯಾವುದೇ ಒಪ್ಪಂದ ಆಗಿಲ್ಲ. ಅದಕ್ಕೆ ಬಿಜೆಪಿ ವೀಕ್ ಆಗಿದೆ ಎಂದು ಡಿಕೆಶಿ ಹೇಳಿದ್ದಾರೆ. JDS ಇಲ್ಲದಿದ್ದರೆ ಡಿಕೆಶಿ ಸಹೋದರರು ಗೆಲ್ಲುತ್ತಿರಲಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.

ಜೆಡಿಎಸ್ ಜೊತೆ ಒಪ್ಪಂದ ಇಲ್ಲ, ನಮ್ದು ಅವರ ಜೊತೆ ಸಂಬಂಧ ಅಷ್ಟೇ ಕುಮಾರಸ್ವಾಮಿಯವರನ್ನು ಸಿಎಂ ಮಾಡಿ ಕೊನೆಗೆ ಅವರನ್ನ ಇಳಿಸಿದ್ದು ಯಾರು? ಇಳಿಸಲು ಅವರ ಪಕ್ಷದ ಶಾಸಕರನ್ನು ಕಳುಹಿಸಿದ್ದು ಯಾರು? ಕೂರಿಸಿದ್ದು ಅವರೇ, ಕಾಲು ಎಳೆಯುವ ಕೆಲಸ ಮಾಡಿದ್ದು ಅವರೇ. ನಮ್ದು ಜೆಡಿಎಸ್ ಜೊತೆ ಒಪ್ಪಂದ ಇಲ್ಲ, ಅವರ ಜೊತೆ ಸಂಬಂಧ ಅಷ್ಟೇ ಎಂದು ಶಾಸಕ ಸಿ ಟಿ ರವಿ ಪ್ರತಿಕ್ರಿಯಿಸಿದ್ದಾರೆ.

ಕರ್ನಾಟಕದ ಆಚೆ ಹೋದ್ರೆ ಸಿದ್ದರಾಮಯ್ಯ ಹೆಸರು ಹೇಳಲ್ಲ-ಸಿ.ಟಿ. ರವಿ ನರೇಂದ್ರ ಮೋದಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಿ.ಟಿ. ರವಿ ವಾಗ್ದಾಳಿ ನಡೆಸಿದ್ದಾರೆ. ತಾನು ಹೇಗಿರುತ್ತೇನೋ ಉಳಿದವರು ಹಾಗೇ ಇರಬೇಕು, ಸಿದ್ದರಾಮಯ್ಯ ಇರುವಂತೆಯೇ ಉಳಿದವರು ಕಾಣುತ್ತಾರೆ. ಜಗತ್ತಿನ ದೃಷ್ಟಿಯಲ್ಲಿ ಮೋದಿ ಒಬ್ಬ ಅಗ್ರಗಣ್ಯ ನಾಯಕ. ಸಿದ್ದರಾಮಯ್ಯನವರ ಸರ್ಟಿಫಿಕೆಟ್ ನಮಗೆ ಬೇಕಾಗಿಲ್ಲ. ದೇಶ-ವಿದೇಶ ಎಲ್ಲಿ ಹೋದ್ರೂ ಮೋದಿ ಮೋದಿ ಅಂತಾರೆ. ಕರ್ನಾಟಕದ ಆಚೆ ಹೋದ್ರೆ ಸಿದ್ದರಾಮಯ್ಯ ಹೆಸರು ಹೇಳಲ್ಲ. ಸಿದ್ದರಾಮಯ್ಯನ ಹೆಸರೂ ಹೇಳಲ್ಲ, ರಾಹುಲ್ ಗಾಂಧಿ ಹೆಸರು ಹೇಳಲ್ಲ. ಸಿದ್ದರಾಮಯ್ಯ ಹೆಸರು ಪಾಕಿಸ್ತಾನದಲ್ಲಿ ಮಾತ್ರ ಹೇಳಬಹುದು ಎಂದು ಬಿಜೆಪಿ ನಾಯಕ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.

Published On - 1:54 pm, Wed, 8 December 21