ಚಿಕ್ಕಮಗಳೂರು, ಆ.05: ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿಯಲ್ಲಿರುವ ಪ್ರಸಿದ್ಧ ಬಿಂಡಿಗ ದೇವಿರಮ್ಮನ ದೇವಾಲಯದಲ್ಲಿ(Bindiga Deviramma Temple) ವಸ್ತ್ರ ಸಂಹಿತೆ ಜಾರಿ ಮಾಡಲಾಗಿದೆ. ಸಂಪ್ರದಾಯಿಕ ಉಡುಗೆ ಧರಿಸಿ ದೇವಾಲಯಕ್ಕೆ ಬರುವಂತೆ ದೇವಾಲಯ ಅಡಳಿತ ಮಂಡಳಿ ಸೂಚಿಸಿದೆ. ಹಾಗೂ ಸಂಪ್ರದಾಯಿಕ ಉಡುಗೆ ಧರಿಸದೆ ದೇವಾಲಯಕ್ಕೆ ಬರುವ ಭಕ್ತರಿಗೆ ದೇವಾಲಯದ ಒಳಗೆ ನಿಷೇಧ ಹೇರಲಾಗಿದೆ.
ಹಿಂದು ಧಾರ್ಮಿಕ ದತ್ತಿ ಇಲಾಖೆಗೆ ಸೇರಿರುವ ಬಿಂಡಿಗ ದೇವೀರಮ್ಮ ದೇವಾಲಯಕ್ಕೆ ದೀಪಾವಳಿ ದಿನ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ. ಬಿಂಡಿಗ ದೇವೀರಮ್ಮ ಬೆಟ್ಟಕ್ಕೆ ರಾಜ್ಯ ಹೊರ ರಾಜ್ಯದಿಂದ ಭಕ್ತರು ಆಗಮಿಸುತ್ತಾರೆ. ಹೀಗಾಗಿ ಬಿಂಡಿಗ ದೇವಾಲಯ ಮತ್ತು ಬೆಟ್ಟಕ್ಕೆ ಬರುವವರಿಗೆ ವಸ್ತ್ರ ಸಂಹಿತೆ ರೂಲ್ಸ್ ಹಾಕಲಾಗಿದೆ. ಇನ್ನು ಭಕ್ತರು ದೇವಾಲಯಕ್ಕೆ ಬೇಕಾಬಿಟ್ಟಿಯಾಗಿ ಬರುತ್ತಾರೆ. ಹೆಣ್ಣು ಮಕ್ಕಳು ಟೈಟ್ ಜೀನ್ಸ್, ಸ್ಕರ್ಟ್, ಶಾರ್ಟ್ಸ್ ಧರಿಸಿ ಬರುತ್ತಾರೆ. ಹಾಗೂ ಪುರುಷರು ನೈಟ್ ಪ್ಯಾಟ್, ಶಾರ್ಟ್ ಧರಿಸಿ ಬರುತ್ತಾರೆ. ಇದರಿಂದ ದೇವಾಲಯದ ಭಕ್ತಿಯ ವಾತವರಣ ಹಾಳಾಗುತ್ತಿದೆ ಎಂದು ಈ ಹಿಂದೆಯೇ ಕೆಲ ಸಂಘಟನೆಗಳು ವಾದಿಸಿದ್ದವು. ಸದ್ಯ ಈಗ ಸಿದ್ಧ ಬಿಂಡಿಗ ದೇವಿರಮ್ಮನ ದೇವಾಲಯದಲ್ಲಿ ವಸ್ತ್ರ ಸಂಹಿತೆ ಜಾರಿ ಮಾಡಲಾಗಿದೆ. ಅಲ್ಲದೆ ಅನೇಕ ದೇವಾಲಯಗಳ ಕಮಿಟಿಗಳು ಈ ಕಾನೂನನ್ನು ಈಗಾಗಲೇ ಜಾರಿ ಮಾಡಿವೆ. ಪ್ರಸಿದ್ಧ ದೇವಾಲಯಗಳಲ್ಲಿ ವಸ್ತ್ರ ಸಂಹಿತೆ ಇದೆ.
ಇದನ್ನೂ ಓದಿ: ದೇವಾಲಯಗಳಲ್ಲಿ ಕಡ್ಡಾಯ ವಸ್ತ್ರಸಂಹಿತೆ- ಸಮೀಕ್ಷೆಯಲ್ಲಿ ಹೊರಹೊಮ್ಮಿದ ಅಪರೂಪದ ಅಭಿಪ್ರಾಯ ಇಲ್ಲಿದೆ ನೋಡಿ
ಕಾಫಿನಾಡಿನಲ್ಲಿರುವ ಬಿಂಡಿಗ ದೇವಿರಮ್ಮನ ದೇವಾಲಯ ವರ್ಷಕ್ಕೆ ಒಮ್ಮೆ ಮಾತ್ರ ತೆರೆಯುತ್ತದೆ. ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಸಮೀಪದ ಬಿಂಡಿಗ ಗ್ರಾಮದಲ್ಲಿರುವ ಚಂದ್ರದ್ರೋಣ ಪರ್ವತ ಶ್ರೇಣಿಗೆ ಹೊಂದಿಕೊಂಡಿರುವ 3 ಸಾವಿರ ಅಡಿ ಎತ್ತರದ ಬೆಟ್ಟವೇ ದೇವೀರಮ್ಮ ಬೆಟ್ಟ. ತಾಯಿಯ ದರ್ಶನಕ್ಕೆ ರಾಜ್ಯ, ಹೊರ ರಾಜ್ಯಗಳಿಂದಲೂ ಭಕ್ತರು ಬರಿ ಕಾಲಿನಲ್ಲಿ ನಡೆದುಕೊಂಡು ಬರುತ್ತಾರೆ. ಭಕ್ತರಿಗೆ ದೇವಿರಮ್ಮನ ದರ್ಶನ ಭಾಗ್ಯ ಸಿಗುವುದು
ದೀಪಾವಳಿಯ ನರಕ ಚತುರ್ದಶಿಯಂದು ಮಾತ್ರ. ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ತಾಯಿಯನ್ನು ಕಾಣುತ್ತಾರೆ. ಇಲ್ಲಿ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹರಕೆಯನ್ನು ಹೊತ್ತು. ನರಕ ಚತುರ್ದಶಿಯಂದು ತಾಯಿಗೆ ಅರ್ಪಿಸುತ್ತಾರೆ. ಹರಕೆಯ ರೂಪದಲ್ಲಿ ತಾಯಿಗೆ ತುಪ್ಪ, ಬಳೆ, ಬಟ್ಟೆ, ಕಟ್ಟಿಗೆಗಳನ್ನು ಅರ್ಪಿಸಲಾಗುತ್ತೆ.
ಚಿಕ್ಕಮಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ