AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇವಾಲಯಗಳಲ್ಲಿ ಕಡ್ಡಾಯ ವಸ್ತ್ರಸಂಹಿತೆ- ಸಮೀಕ್ಷೆಯಲ್ಲಿ ಹೊರಹೊಮ್ಮಿದ ಅಪರೂಪದ ಅಭಿಪ್ರಾಯ ಇಲ್ಲಿದೆ ನೋಡಿ

TV9 kannada Digital Poll : ದೇವಾಲಯಗಳಲ್ಲಿ ವಸ್ತ್ರ ಸಂಹಿತೆ ಬೇಕು ಅಥವಾ ಬೇಡ ಎಂಬ ಬಗ್ಗೆ ಸಾರ್ವಜನಿಕ ಅಭಿಪ್ರಾಯ ಏನು ಮತ್ತು ಈ ಬಗ್ಗೆ ಸಾರ್ವಜನಿಕರು ಏನು ಹೇಳುಬಹುದು ಎಂಬ ಪ್ರಶ್ನೆಯನ್ನು ಇಟ್ಟುಕೊಂಡು? ಟಿವಿ9 ಕನ್ನಡ ಡಿಜಿಟಲ್ ಒಂದು ಸಮೀಕ್ಷೆಯನ್ನು ಮಾಡಿತ್ತು.

ದೇವಾಲಯಗಳಲ್ಲಿ ಕಡ್ಡಾಯ ವಸ್ತ್ರಸಂಹಿತೆ- ಸಮೀಕ್ಷೆಯಲ್ಲಿ ಹೊರಹೊಮ್ಮಿದ ಅಪರೂಪದ ಅಭಿಪ್ರಾಯ ಇಲ್ಲಿದೆ ನೋಡಿ
ಟಿವಿ9 ಕನ್ನಡ ನಡೆಸಿದ ಸಮೀಕ್ಷೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಬಂದ ಪ್ರತಿಕ್ರಿಯೆ
TV9 Web
| Updated By: ಅಕ್ಷಯ್​ ಪಲ್ಲಮಜಲು​​|

Updated on: Mar 15, 2022 | 3:23 PM

Share

ದೇವಾಲಯಗಳಲ್ಲಿ  ವಸ್ತ್ರ ಸಂಹಿತೆ  ಬೇಕು ಅಥವಾ ಬೇಡ ಎಂಬ ಪ್ರಶ್ನೆಯನ್ನು  ಸಾಮಾಜಿಕ ಜಾಲತಾಣದ ಮೂಲಕ ಟಿವಿ9 ಕನ್ನಡ ಡಿಜಿಟಲ್  ಜನರ ಮುಂದೆ ಇಟ್ಟಾಗ, ಸಾವಿರಾರೂ ಜನ ಈ ಪ್ರಶ್ನೆಗೆ ಕಮೆಂಟ್ ಮಾಡಿದ್ದಾರೆ. ಹಿಂದೂ ದೇವಾಲಯಗಳಲ್ಲಿ ವಸ್ತ್ರ ಸಂಹಿತೆ ಎಂಬುದು ಹೆಚ್ಚು ಹೆಚ್ಚಾಗಿ ಸದ್ದು ಮಾಡುತ್ತಿದೆ. ಹಲವಾರು ಹಿಂದೂ ಪರ ಸಂಘಟನೆಗಳು ಈಗಾಗಲೇ ಎಲ್ಲ ದೇವಾಲಯಗಳಲ್ಲಿ ವಸ್ತ್ರ ಸಂಹಿತೆಯನ್ನು ಜಾರಿ ಮಾಡಬೇಕು ಎಂದಿದೆ. ಈ ಕುರಿತು ಅನೇಕ ದೇವಾಲಯಗಳ ಕಮಿಟಿಗಳು ಈ ಕಾನೂನನ್ನು ಜಾರಿ ಮಾಡಿದೆ. ದೇವಾಲಯಗಳಲ್ಲಿ ಬೇಕಾಬಿಟ್ಟು ಬರುತ್ತಿರುವುದಕ್ಕೆ ಮತ್ತು ದೇವಾಲಯದ ಭಕ್ತಿಯ ವಾತವರಣವನ್ನು ಹಿಂದಿನ ರೀತಿಯಲ್ಲಿ ಉಳಿಯುಂತೆ ಮಾಡಲು ಸಂಘಟನೆಗಳು ಮತ್ತು ದೇವಾಲಯಗಳ ಆಡಳಿತ ಮಂಡಳಿಗಳು ಈ ಕ್ರಮವನ್ನು ರಾಜ್ಯದ ದೇವಾಲಯಗಳಲ್ಲಿ ತಂದಿದೆ. ಹಾಗಾಗಿ ಈ ಬಗ್ಗೆ ಸರ್ಕಾರವು ಯೋಚನೆಯನ್ನು ಮಾಡಬೇಕು ಎಂಬ ಒತ್ತಾಯವು ಇದೆ. ಈ ಬಗ್ಗೆ ಸರ್ಕಾರಕ್ಕೆ ರಾಜ್ಯದ ಹಿಂದೂ ಸಂಘಟನೆಗಳನ್ನು ಆಗ್ರಹಿಸಿದೆ.

ದೇವಾಲಯಗಳಲ್ಲಿ ವಸ್ತ್ರ ಸಂಹಿತೆ ಬೇಕು ಅಥವಾ ಬೇಡ ಎಂಬ ಬಗ್ಗೆ ಸಾರ್ವಜನಿಕ ಅಭಿಪ್ರಾಯ ಏನು ಮತ್ತು ಈ ಬಗ್ಗೆ ಸಾರ್ವಜನಿಕರು ಏನು ಹೇಳುಬಹುದು ಎಂಬ ಪ್ರಶ್ನೆಯನ್ನು ಇಟ್ಟುಕೊಂಡು? ಟಿವಿ9 ಕನ್ನಡ ಡಿಜಿಟಲ್ ಒಂದು ಸಮೀಕ್ಷೆಯನ್ನು ಮಾಡಿತ್ತು. ಈ ಸಮೀಕ್ಷೆಯನ್ನು ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಫೋಸ್ಟ್ ಮಾಡಲಾಗಿತ್ತು. ಸಮೀಕ್ಷೆಯ ಕುರಿತು ಸಾವಿರಾರೂ ಜನ ಕಮೆಂಟ್ ಮಾಡಿ, ದೇವಾಲಯದಲ್ಲಿ ವಸ್ತ್ರ ಸಂಹಿತೆ ಬೇಕು ಅಥವಾ ಬೇಡ ಎನ್ನುವುದಕ್ಕೆ ಉತ್ತರವನ್ನು ನೀಡಿದ್ದಾರೆ.

ಟಿವಿ9 ಕನ್ನಡ ಡಿಜಿಟಲ್ ನಡೆಸಿದ  ಸಮೀಕ್ಷೆಯಲ್ಲಿ  ಸಾವಿರಾರೂ ಜನ ಸೋಶಿಯಲ್  ಮೀಡಿಯಾದ ಮೂಲಕ ಭಾಗವಹಿಸಿದರು. ಒಟ್ಟು ಸಾವಿರಕ್ಕೂ ಹೆಚ್ಚಿನ ಜನರು ದೇವಾಲಯಗಳಲ್ಲಿ ವಸ್ತ್ರ ಸಂಹಿತೆ ಬೇಕು ಎಂದಿದ್ದಾರೆ ಹಾಗೂ ಒಂದಿಷ್ಟು ಜನ ದೇವಾಲಯದಲ್ಲಿ ವಸ್ತ್ರ ಸಂಹಿತೆ ಬೇಡ ಎಂದಿದ್ದಾರೆ, ಅದರ ಅವ್ಯಶಕತೆ ಇಲ್ಲ ಎಂದಿದ್ದಾರೆ. ಟಿವಿ9 ಕನ್ನಡ ಟಿಜಿಟಲ್  ಸಾಮಾಜಿಕ ಜಾಲತಾಣದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಒಟ್ಟು 3 ಸಾವಿರಕ್ಕೂ ಹೆಚ್ಚಿನ ಜನ ಭಾಗವಹಿಸಿದ್ದರು. ಜೊತೆಗೆ ಒಂದಿಷ್ಟು ಕ್ರಮಗಳನ್ನು ಸರ್ಕಾರವೇ ದೇವಾಲಯಗಳಲ್ಲಿ ತರಬೇಕು ಎಂದಿದ್ದಾರೆ. ಮಹಿಳೆಯರಿಗೆ ಸೀರೆ ಮತ್ತು ಲಂಗ – ದಾವಣಿಯನ್ನು ಹಾಕಬೇಕು ಮತ್ತು ಪುರುಷರು ಪಂಚೆ – ಶರ್ಟ್ ಹಾಕುವಂತೆ ಕಡ್ಡಾಯ ಮಾಡಬೇಕು, ಜೊತೆಗೆ ಇದನ್ನು ಸರ್ಕಾರವೇ ಜಾರಿ ಮಾಡಬೇಕು ಎಂಬುದು ಈ ಸಮೀಕ್ಷೆಯಲ್ಲಿ ಹೇಳಿಕೊಂಡಿದ್ದಾರೆ. ಇನ್ನೂ ಕೆಲವರು ದೇವಾಲಯಗಳಲ್ಲಿ ವಸ್ತ್ರ ಸಂಹಿತೆ ಎಂಬುದು ಬೇಡ ಅದು ಅವರ ಸ್ವಾತಂತ್ರ್ಯ ಅದನ್ನು ಯಾರು ? ಕೇಳಬಾರದು ಎಂದು ಕಮೆಂಟ್ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಭಾಗವಹಿಸಿದ ಮಹಿಳೆಯರು ಮತ್ತು ಪುರುಷರು  

ಸಾಮಾಜಿಕ ಜಾಲತಾಣಗಳು ಬೇಕು ಬೇಡ
ಫೇಸ್ಬುಕ್ : ಪುರುಷರು – 95 ಶೇಕಡಾ

ಮಹಿಳೆಯರು -2ಶೇಕಡಾ 

ಪುರುಷರು– 2ಶೇಕಡಾ

ಮಹಿಳೆಯರು -1ಶೇಕಡಾ

ಇನ್ಸ್ಟಾಗ್ರಾಮ್ ಪುರುಷರು – 80 ಶೇಕಡಾ

ಮಹಿಳೆಯರು -10 ಶೇಕಡಾ

ಪುರುಷರು– 7 ಶೇಕಡಾ

ಮಹಿಳೆಯರು -3 ಶೇಕಡಾ

ಟ್ವಿಟರ್ : ಪುರುಷರು– 70 ಶೇಕಡಾ

ಮಹಿಳೆಯರು -30 ಶೇಕಡಾ

ಪುರುಷರು

ಮಹಿಳೆಯರು

ಕೂ : ಪುರುಷರು– 60 ಶೇಕಡಾ

ಮಹಿಳೆಯರು -40 ಶೇಕಡಾ

ಪುರುಷರು

ಮಹಿಳೆಯರು

ಯೂಟ್ಯಬ್ ಪುರುಷರು– 73 ಶೇಕಡಾ

ಮಹಿಳೆಯರು -10 ಶೇಕಡಾ

ಪುರುಷರು– 10 ಶೇಕಡಾ

ಮಹಿಳೆಯರು -7 ಶೇಕಡಾ

ಸಮೀಕ್ಷೆಯಲ್ಲಿ ಜನರ ಅಭಿಪ್ರಾಯ 

  1. ದೇವಾಲಯಗಳಲ್ಲಿ ಹಿಂದೂ ಪದ್ಧತಿಗಳಂತೆ ವಸ್ತ್ರವನ್ನು ಮಾಡಬೇಕು, ಈ ರೀತಿಯ ಕಾನೂನುಗಳನ್ನು ಪಾಲಿಸಬೇಕು. ಸರ್ಕಾರ ಕೂಡ ಸರಿಯಾ ಕಾನೂನುಗಳನ್ನು ಮತ್ತು ಅವುಗಳನ್ನು ಪಾಲಿಸುವಂತೆ ಕ್ರಮವನ್ನು ತರಬೇಕು. – ವಿನಾಯಕ ನಾಯ್ಕ
  2. ದೇವಾಲಯದಲ್ಲಿ ಮಾತ್ರವಲ್ಲ ಸಾರ್ವಜನಿಕ ಪ್ರದೇಶಗಳಲ್ಲಿ ಇದು ಅನ್ವಯ ಆಗಬೇಕು ಹುಡುಗ ಮತ್ತು ಹುಡುಗಿಯರು ತೊಡುವ ಉಡುಪುಗಳು ನಮ್ಮ ಮೊದಲಿನ ಸಂಪ್ರದಾಯದಂತೆ ಇರಬೇಕು –ದೇವರಾಜ ದೇವ
  3. ಭಾರತ ದೇಶದ ದೇಸಿ ವಸ್ತ್ರ ಮಾತ್ರ ಜಾರಿಗೊಳಿಸಲಿ, ವೆಸ್ಟರ್ನ್ ಕಲ್ಚರ್ ಡ್ರೆಸ್ ಬೇಡ. ಹೆಣ್ಮಕ್ಳು ಸೀರೆ ಅಥವಾ ಚೋಡಿದರ್, ಗಂಡು ಮಕ್ಕಳು ಶರ್ಟ್ ಪಂಚೆ, ಜುಬ್ಬಾ ಪೈಜಾಮ್ ಹಾಕಿಕೊಂಡ ಬರಲಿ ಇದನ್ನು ಸರ್ಕಾರ ತಕ್ಷಣ ಜಾರಿ ಮಾಡಲಿ – ವಿಶ್ವನಾಥ್ ಕೆ.ಆರ್
  4. 100% ಬೇಕು, ನಮ್ಮ ತನವನ್ನು ನಾವೇ ಉಳಿಸಿಕೊಳ್ಳಬೇಕು, ದೇವಸ್ಥಾನದಲ್ಲಿ ಸಾಂಪ್ರದಾಯಿಕ ಉಡುಗೆಯೇ ಸರಿ, ಅದು ಟೂರಿಂಗ್ ಜಾಗ ಅಲ್ಲಾ, ಅಲ್ಲಿ ಧಾರ್ಮಿಕ ಭಾವನೆ ಹಾಗೆ ಭಕ್ತಿ ಭಾವ ಮುಖ್ಯ ಅಂತ ನಮ್ಮ ಅನಿಸಿಕೆ.-  ಮಂಜುನಾಥ್ ಭಟ್
  5. ವಸ್ತ್ರ ಸಂಹಿತೆಯ ಅಗತ್ಯವಿಲ್ಲ, ಅದು ಅವರು ಸ್ವಾತಂತ್ರ್ಯ ಅವರಿಗೆ ಯಾವ ಬಟ್ಟೆಯನ್ನು ಬೇಕಾದರು ಹಾಕಿಕೊಳ್ಳಬಹುದು. ನಾವು ನೋಡುವ ನೋಟ ಸರಿಯಾಗಿರಬೇಕು –ಗಿಲ್ಬರ್ಟ್ ಭಟ್
  6. ಕಾಲ ಬದಲಾಗಿದೆ ಅಂತ  ಶೋಕಿ ಮಾಡಿಕೊಳ್ಳದೆ ಮೈತುಂಬ ಬಟ್ಟೆ ಧರಿಸಿ ದೇವರನ್ನು ದರ್ಶನ ಮಾಡಿಕೊಳ್ಳೋಕೆ ಮಾತ್ರ ದೇವಸ್ಥಾನಕ್ಕೆ ಬರ್ಬೇಕು , ಈಗಿನ ಕಾಲ ಹೇಗಿದೆ ಅಂದ್ರೆ ದೇವಾಲಯಗಳು ಪ್ರೇಮಾಲಯ ಅಗೋಗಿದೆ , ಅದನ್ನು ಒಂದು ನಿಲ್ಲಿಸಿದ್ರೆ ಸಾಕು , ಭಕ್ತಿ ಇಂದ ಬಂದು ನಮ್ಮ ಸಂಪ್ರದಾಯದ ಪ್ರಕಾರ ದೇವರಿಗೆ ಪೂಜೆ ಮಾಡ್ಕೊಂಡು ಹೋಗ್ಲಿ ಸಾಕು ,ಅದು ಬಿಟ್ಟು ಯಾವ ಸಮವಸ್ತ್ರ ಅವಶ್ಯಕತೆ ಇಲ್ಲ – ಹರೀಶ್ 
  7. ಮಂದಿರ, ಶಾಲೆಗಳಲ್ಲಿ ವಸ್ತ್ರ ಸಂಹಿತೆ ಬೇಕೇಬೇಕು ಇದಕ್ಕೆ ಸರ್ಕಾರ ಸರಿಯಾದ ಕಾನೂನುಗಳನ್ನು ತರಬೇಕು ಮತ್ತು ಖಾಸಗಿ ಜೀವನದಲ್ಲಿ ಹೇಗೆ ಬೇಕಾದರೂ ಇರಲಿ – ಸೋಮೇಗೌಡ ಹುಣಸೂರು
Video: ವಿದ್ಯುತ್ ಶಾಕ್ ತಗುಲಿ ಬಿದ್ದ ಮರಿಯನ್ನು ರಕ್ಷಿಸಿದ ಕಾಡಾನೆ ಹಿಂಡು
Video: ವಿದ್ಯುತ್ ಶಾಕ್ ತಗುಲಿ ಬಿದ್ದ ಮರಿಯನ್ನು ರಕ್ಷಿಸಿದ ಕಾಡಾನೆ ಹಿಂಡು
ಮನೆಯಲ್ಲಿ ಅಡುಗೆ ಕೋಣೆ ಯಾವ ದಿಕ್ಕಿನಲ್ಲಿರಬೇಕು? ವಾಸ್ತು ವಿವರಣೆ ಇಲ್ಲಿದೆ
ಮನೆಯಲ್ಲಿ ಅಡುಗೆ ಕೋಣೆ ಯಾವ ದಿಕ್ಕಿನಲ್ಲಿರಬೇಕು? ವಾಸ್ತು ವಿವರಣೆ ಇಲ್ಲಿದೆ
ಸುಬ್ರಹ್ಮಣ್ಯನ ಲಹರಿಗಳಿರುವ ಈ ದಿನದ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸುಬ್ರಹ್ಮಣ್ಯನ ಲಹರಿಗಳಿರುವ ಈ ದಿನದ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಗಂಡನ ಗೆಳೆಯನೊಂದಿಗೆ ಪ್ರೇಮ ಸಲ್ಲಾಪ: ಮದ್ವೆ ಆಸೆ ತೋರಿಸಿ ಕೈಕೊಟ್ಟ ಪ್ರಿಯಕರ!
ಗಂಡನ ಗೆಳೆಯನೊಂದಿಗೆ ಪ್ರೇಮ ಸಲ್ಲಾಪ: ಮದ್ವೆ ಆಸೆ ತೋರಿಸಿ ಕೈಕೊಟ್ಟ ಪ್ರಿಯಕರ!
ಭಾಷೆಯಿಂದ ನಾವು, ನಮ್ಮಿಂದ ಭಾಷೆ ಅಲ್ಲ: ಗೋಲ್ಡನ್ ಸ್ಟಾರ್ ಗಣೇಶ್
ಭಾಷೆಯಿಂದ ನಾವು, ನಮ್ಮಿಂದ ಭಾಷೆ ಅಲ್ಲ: ಗೋಲ್ಡನ್ ಸ್ಟಾರ್ ಗಣೇಶ್
ಉತ್ತರಾಖಂಡದಲ್ಲಿ ಪ್ರವಾಹ, ಭೂಕುಸಿತದಿಂದ ರಸ್ತೆಗಳೇ ಮಾಯ!
ಉತ್ತರಾಖಂಡದಲ್ಲಿ ಪ್ರವಾಹ, ಭೂಕುಸಿತದಿಂದ ರಸ್ತೆಗಳೇ ಮಾಯ!
ಫೋಟೋಶೂಟ್ ಮಾಡಿಕೊಳ್ಳೋಕೆ ಬಂದ್ರಾ?; ಮಹಿಳೆಯ ಪ್ರಶ್ನೆಗೆ ಬೆವರಿದ ಕಂಗನಾ
ಫೋಟೋಶೂಟ್ ಮಾಡಿಕೊಳ್ಳೋಕೆ ಬಂದ್ರಾ?; ಮಹಿಳೆಯ ಪ್ರಶ್ನೆಗೆ ಬೆವರಿದ ಕಂಗನಾ
ಎಲ್ಲರ ಅಪೇಕ್ಷೆಯಂತೆ ಬಿಜೆಪಿಯಲ್ಲಿ ಖಂಡಿತ ಬದಲಾವಣೆಗಳು ಆಗಲಿವೆ: ಈಶ್ವರಪ್ಪ
ಎಲ್ಲರ ಅಪೇಕ್ಷೆಯಂತೆ ಬಿಜೆಪಿಯಲ್ಲಿ ಖಂಡಿತ ಬದಲಾವಣೆಗಳು ಆಗಲಿವೆ: ಈಶ್ವರಪ್ಪ
ಸುರ್ಜೇವಾಲಾ ನನಗೆ ಬಾಯ್ಮುಚ್ಚಿಕೊಂಡಿರುವಂತೆ ಹೇಳಿದ್ದಾರೆ: ಮಧು ಬಂಗಾರಪ್ಪ
ಸುರ್ಜೇವಾಲಾ ನನಗೆ ಬಾಯ್ಮುಚ್ಚಿಕೊಂಡಿರುವಂತೆ ಹೇಳಿದ್ದಾರೆ: ಮಧು ಬಂಗಾರಪ್ಪ
ಯಾವಾಗಲೂ ಕುಮಾರ್ ಬಂಗಾರಪ್ಪ ಮನೆಯಲ್ಲಿ ಸಭೆ ನಡೆಸುತ್ತಿದ್ದ ರೆಬೆಲ್​ಗಳು
ಯಾವಾಗಲೂ ಕುಮಾರ್ ಬಂಗಾರಪ್ಪ ಮನೆಯಲ್ಲಿ ಸಭೆ ನಡೆಸುತ್ತಿದ್ದ ರೆಬೆಲ್​ಗಳು