AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಮಗಳೂರು: ರಸ್ತೆ ಬದಿ ಕಸ ಎಸೆಯುತ್ತಿದ್ದ ಯುವಕನಿಗೆ ಸಿಟಿ ರವಿ ತರಾಟೆ

TV9 Web
| Updated By: ganapathi bhat|

Updated on: Dec 27, 2021 | 6:34 PM

Share

ಕಸ ಎಸೆದ ಯುವಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಸವನ್ನು ಮನೆ ಬಳಿ ಬರುವ ಕಸದ ಗಾಡಿಗೆ ಹಾಕಬೇಕು ಎಂದು ಬೈಕ್​ನಲ್ಲಿ ಬಂದು ಕಸ ಎಸೆದ ಯುವಕನಿಗೆ ಶಾಸಕ ಸಿ.ಟಿ ರವಿ ಪಾಠ ಮಾಡಿದ್ದಾರೆ.

ಚಿಕ್ಕಮಗಳೂರು: ನಗರದ ಬಸವನಹಳ್ಳಿ ರಸ್ತೆಯಲ್ಲಿ ಚರಂಡಿಗೆ ಕಸ ಎಸೆಯುತ್ತಿದ್ದ ಯುವಕನಿಗೆ ಬಿಜೆಪಿ ನಾಯಕ ಸಿ.ಟಿ. ರವಿ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ನಿಮ್ಮ ಮನೆ ಬಳಿ ಬರುವ ಕಸದ ಗಾಡಿಗೆ ಹಾಕಬೇಕು ಎಂಬಂತೆ ಸಿ.ಟಿ. ರವಿ ಸೂಚನೆ ನೀಡಿದ್ದಾರೆ. ಕಸ ಎಸೆದ ಯುವಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಸವನ್ನು ಮನೆ ಬಳಿ ಬರುವ ಕಸದ ಗಾಡಿಗೆ ಹಾಕಬೇಕು ಎಂದು ಬೈಕ್​ನಲ್ಲಿ ಬಂದು ಕಸ ಎಸೆದ ಯುವಕನಿಗೆ ಶಾಸಕ ಸಿ.ಟಿ ರವಿ ಪಾಠ ಮಾಡಿದ್ದಾರೆ.

ಅಲ್ಲಾ, ಈಶ್ವರ, ಜೀಸಸ್ ದೇವರೆಂದು ಒಪ್ಪಿಕೊಂಡರೆ ಜಗತ್ತಿನಲ್ಲಿ ಸಂಘರ್ಷ ಇರೋದಿಲ್ಲ ಎಂದು ಸಿ.ಟಿ ರವಿ ಸೋಮವಾರ ಸರ್ವಧರ್ಮ ಸಮನ್ವಯತೆಯ ಪಾಠ ಮಾಡಿದ್ದಾರೆ. ಒಬ್ಬ ಹಿಂದೂವಾಗಿ ಜೀಸಸ್, ಅಲ್ಲಾನನ್ನ ದೇವರು ಎಂದು ಒಪ್ಪಿಕೊಳ್ಳಬಹುದು. ಹಿಂದೂವಾಗಿ ಚರ್ಚ್, ಮಸೀದಿಗೂ ಕೂಡ ಹೋಗಬಹುದು. ನಮ್ಮಲ್ಲಿ ದೇವನೊಬ್ಬ ನಾಮ ಹಲವು ಎಂಬ ತತ್ವವಿದೆ. ಆದರೆ ಇಸ್ಲಾಂ ಆದ ತಕ್ಷಣ ಮಸೀದಿ ಹೊರತುಪಡಿಸಿ ದೇವಸ್ಥಾನದ ಬಾಗಿಲು ಬಂದ್ ಆಗುತ್ತೆ. ಇಸ್ಲಾಂ, ಕ್ರಿಶ್ಚಿಯನ್ ಧರ್ಮಗಳಲ್ಲಿ ಉಳಿದ ದೇವರುಗಳ ಅಸ್ತಿತ್ವದ ಬಗ್ಗೆ ನಿರಾಕರಣೆ ಇದೆ. ಈ ವಿಚಾರದಲ್ಲಿ ಎರಡು ಧರ್ಮಗಳು ಆಲೋಚನೆ ಮಾಡಿದರೆ ಉತ್ತಮ ಎಂದು ಹೇಳಿದ್ದಾರೆ.

ಎಷ್ಟು ಮತಿ ಇದ್ಯೋ ಅಷ್ಟು ಮತ ಅನ್ನೋ ಮುಕ್ತತೆಗೆ ಅವಕಾಶ ಸಿಗುತ್ತೆ. ಜಗತ್ತಿನಲ್ಲಿ ಶಾಂತಿ ನೆಲೆಸಲು ಇರುವ ಅಡೆತಡೆಗಳನ್ನು ನಿವಾರಿಸೋಕೆ ಸಾಧ್ಯವಿದೆ. ಈ ನಿಟ್ಟಿನಲ್ಲಿ ಎಲ್ಲರೂ ಆಲೋಚನೆ ಮಾಡಿದರೆ ಜಗತ್ತು ಸುಖವಾಗಿರುತ್ತೆ ಎಂದು ಚಿಕ್ಕಮಗಳೂರಿನಲ್ಲಿ ಬಿಜೆಪಿ ನಾಯಕ ಸಿ.ಟಿ ರವಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರು: ನೂರಾರು ವರ್ಷಗಳ ಹಿಂದಿನ ಮರಗಳಿಗೆ ಮರುಜೀವ; ನಗರಸಭೆ ಕಾರ್ಯಕ್ಕೆ ಪರಿಸರ ಪ್ರೇಮಿಗಳಿಂದ ಮೆಚ್ಚುಗೆ

ಇದನ್ನೂ ಓದಿ: ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಬಿಜೆಪಿಗೆ 3 ಮತಗಳ ರೋಚಕ ಗೆಲುವು, ಜಿದ್ದಾಜಿದ್ದಿ ರಣಕಣದಲ್ಲಿ ಗೆದ್ದು ಸೋತ ಕಾಂಗ್ರೆಸ್ ಅಭ್ಯರ್ಥಿ