AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನ್ನಭಾಗ್ಯ ನಾ ಕೊಟ್ಟೆ ನಾ ಕೊಟ್ಟೆ ಎಂದು ಪ್ರಧಾನಿ ಮೋದಿಯವರು ಎಂದೂ ಎದೆಬಡಿದುಕೊಂಡಿಲ್ಲ, ಆದರೆ ಸಿದ್ದರಾಮಯ್ಯ ಮಾತ್ರ! ಎಂದು ಸಿ.ಟಿ. ರವಿ ವಾಗ್ದಾಳಿ

Annabhagya: ಅನ್ನಭಾಗ್ಯ ಯೋಜನೆಗೆ ಕೇಂದ್ರ 90 % ಹಣವನ್ನು ಕೊಡುತ್ತಿತ್ತು. 10 ಪರ್ಸೆಂಟ್ ಹಣ ಮಾತ್ರ ರಾಜ್ಯ ಸರ್ಕಾರ ಭರಿಸುತ್ತಿತ್ತು. ಯೋಜನೆಗೆ ಕಾಂಗ್ರೆಸ್ ಸರ್ಕಾರವಿದ್ದಾಗ 3 ರೂ. ಕೊಡುತ್ತಿತ್ತು. 29 ರೂ. ಕೊಟ್ಟವರು ನಾನು ಕೊಟ್ಟೆ ಅಂತ ಎಂದೂ ಹೇಳಲಿಲ್ಲ ಎಂದು ಚಿಕ್ಕಮಗಳೂರಿನಲ್ಲಿ ಸಿದ್ದರಾಮಯ್ಯ ವಿರುದ್ಧ ಸಿ.ಟಿ. ರವಿ ವಾಗ್ದಾಳಿ ನಡೆಸಿದರು.

ಅನ್ನಭಾಗ್ಯ ನಾ ಕೊಟ್ಟೆ ನಾ ಕೊಟ್ಟೆ ಎಂದು ಪ್ರಧಾನಿ ಮೋದಿಯವರು ಎಂದೂ ಎದೆಬಡಿದುಕೊಂಡಿಲ್ಲ, ಆದರೆ ಸಿದ್ದರಾಮಯ್ಯ ಮಾತ್ರ!  ಎಂದು ಸಿ.ಟಿ. ರವಿ ವಾಗ್ದಾಳಿ
ಅನ್ನಭಾಗ್ಯ ನಾ ಕೊಟ್ಟೆ ನಾ ಕೊಟ್ಟೆ ಎಂದು ಪ್ರಧಾನಿ ಮೋದಿಯವರು ಎಂದೂ ಎದೆಬಡಿದುಕೊಂಡಿಲ್ಲ, ಆದರೆ ಸಿದ್ದರಾಮಯ್ಯ ಮಾತ್ರ! ಎಂದು ಸಿ.ಟಿ. ರವಿ ವಾಗ್ದಾಳಿ
TV9 Web
| Edited By: |

Updated on:May 18, 2022 | 7:44 PM

Share

ಚಿಕ್ಕಮಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ವಿರುದ್ಧ ಸಿ.ಟಿ. ರವಿ (CT Ravi) ಮತ್ತೊಂದು ಸುತ್ತು ವಾಗ್ದಾಳಿ ನಡೆಸಿದ್ದಾರೆ. ಮಾಜಿ ಸಿಎಂ ಒಬ್ಬರು ಯೋಜನೆ ನಾನೇ ಕೊಟ್ಟೆ ಅಂತಿದ್ದಾರೆ. ಆದರೆ ತುಂಬಿದ ಕೊಡ ಎಂದಿಗೂ ತುಳುಕುವುದಿಲ್ಲ. ಅರ್ಧಂಬರ್ದ ತುಂಬಿದ ಕೊಡ ಮಾತ್ರ ಅಲುಗಾಡುತ್ತದೆ! 84 ಕೋಟಿ ಜನರಿಗೆ ಕೇಂದ್ರ ಉಚಿತವಾಗಿ ರೇಷನ್ ಕೊಟ್ಟಿದೆ. ಪ್ರಧಾನಿ ಮೋದಿಯವರು (PM Narendra Modi) ಎಂದೂ ಎದೆಬಡಿದುಕೊಂಡಿಲ್ಲ. ನಾನು ಕೊಟ್ಟೆ ನಾನು ಕೊಟ್ಟೆ ಎಂದು ಅವರು ಎದೆ ಬಡಿದುಕೊಂಡಿಲ್ಲ. ಅನ್ನಭಾಗ್ಯ ಯೋಜನೆಗೆ (Annabhagya) ಕೇಂದ್ರ 90% ಹಣವನ್ನು ಕೊಡುತ್ತಿತ್ತು. 10 ಪರ್ಸೆಂಟ್ ಹಣ ಮಾತ್ರ ರಾಜ್ಯ ಸರ್ಕಾರ ಭರಿಸುತ್ತಿತ್ತು. 32 ರೂಪಾಯಿಯಲ್ಲಿ 29 ರೂ. ಕೇಂದ್ರ ಸರ್ಕಾರ ಕೊಡುತ್ತಿತ್ತು. ಈ ಯೋಜನೆಗೆ ಕಾಂಗ್ರೆಸ್ ಸರ್ಕಾರವಿದ್ದಾಗ 3 ರೂ. ಕೊಡುತ್ತಿತ್ತು. 29 ರೂ. ಕೊಟ್ಟವರು ನಾನು ಕೊಟ್ಟೆ ಅಂತ ಎಂದೂ ಹೇಳಲಿಲ್ಲ ಎಂದು ಚಿಕ್ಕಮಗಳೂರಿನಲ್ಲಿ ಸಿದ್ದರಾಮಯ್ಯ ವಿರುದ್ಧ ಸಿ.ಟಿ. ರವಿ ವಾಗ್ದಾಳಿ ನಡೆಸಿದರು.

ಸಿ.ಟಿ. ರವಿಗೆ ವಯಸ್ಸೇ ಆಗಲ್ಲ, ಏನು ಇದರ ಗುಟ್ಟು!? ಸಿಎಂ ಬೊಮ್ಮಾಯಿ ಪ್ರಶ್ನೆ:

ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಂದು ಪವರ್ ಇದೆ. ಅದರ ಮೇಯಿನ್ ಜನರೇಟರ್ ಸಿ.ಟಿ. ರವಿಯವರು. ನಾನು ಸಿಟಿ ರವಿ ಅವರನ್ನು 20ಕ್ಕೂ ಹೆಚ್ಚು ವರ್ಷಗಳಿಂದ ನೋಡುತ್ತಿದ್ದೇನೆ. ಸಿ.ಟಿ. ರವಿಗೆ ವಯಸ್ಸೇ ಆಗಲ್ಲ. ಏನು ನಿನ್ನ ಗುಟ್ಟು ಅಂತಾ ಇವತ್ತು ಕೂಡ ಕೇಳ್ದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಿ.ಟಿ. ರವಿಯವರನ್ನ ಹಾಡಿ ಹೊಗಳಿದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Also Read: Sandhya Aarti: ಟಿಪ್ಪುವಿನ ಸಲಾಂ ಆರತಿಗೆ ಬಿತ್ತು ಬ್ರೇಕ್, ಮೇಲುಕೋಟೆ ಚಲುವ ನಾರಾಯಣ ಸ್ವಾಮಿ ದೇವಸ್ಥಾನದಲ್ಲಿನ್ನು ಸಂಧ್ಯಾರತಿ!

Also Read: ಪಿಎಸ್ಐ ನೇಮಕಾತಿ ಅಕ್ರಮ; ಭ್ರಷ್ಟ ಸರ್ಕಾರಿ‌ ಅಧಿಕಾರಿಗಳಿಗೆ ಕಾದಿದೆ ಸಂಕಷ್ಟ, ಸೇರ್ಪಡೆಯಾಯ್ತು ಮತ್ತೊಂದು ಐಪಿಸಿ ಸೆಕ್ಷನ್! ಏನದು?

Published On - 6:43 pm, Wed, 18 May 22