ಚಿಕ್ಕಮಗಳೂರು: ಕಾರು- ಬೈಕ್ ಮುಖಾಮುಖಿ ಡಿಕ್ಕಿ ಆಗಿ, ದಂಪತಿ ದುರ್ಮರಣವನ್ನಪ್ಪಿದ ದಾರುಣ ಘಟನೆ ಚಿಕ್ಕಮಗಳೂರು ನಗರದ ದಂಟರಮಕ್ಕಿ ಕೆರೆ ಬಳಿ ನಡೆದಿದೆ. ಆನಂದ್ (35) ಹಾಗೂ ಪತ್ನಿ ಲಕ್ಷ್ಮೀ (33) ಮೃತ ದುರ್ದೈವಿಗಳು. ಅಪಘಾತದ ರಭಸಕ್ಕೆ ಬೈಕ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಬೈಕ್‌ನಲ್ಲಿ ದಂಪತಿ ಧರ್ಮಸ್ಥಳಕ್ಕೆ ತೆರಳುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಚಿಕ್ಕಮಗಳೂರು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇತ್ತ ಬೆಂಗಳೂರಿನ ನೈಸ್ ರಸ್ತೆಯಲ್ಲಿ ಸ್ಯಾಂಟ್ರೊ ಕಾರಿನಲ್ಲಿದ್ದ ದರ್ಶನ್ ಸಾವು ಪ್ರಕರಣಕ್ಕೆ ಸಂಬಂಧಿಸಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದರ್ಶನ್ ಮೃತದೇಹ ಇರಿಸಲಾಗಿದೆ. 10 ಗಂಟೆ ಬಳಿಕ ದರ್ಶನ್ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುವುದು ಎಂದು ತಿಳಿಸಲಾಗಿದೆ. ಕೋಲಾರ ಮೂಲದವರಾದ ದರ್ಶನ್, ಬೆಂಗಳೂರಿನ ಉತ್ತರಹಳ್ಳಿಯಲ್ಲಿ ವಾಸವಿದ್ರು. ದರ್ಶನ್ಗೆ ಮೂರು ವರ್ಷದ ಹೆಣ್ಣು ಮಗುವಿದೆ. ಕಳೆದ ಎರಡು ದಿನದ ಹಿಂದಷ್ಟೆ ಹೆಣ್ಣು ಮಗು ಮೂರು ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡಿದ್ದರು ಎಂದು ತಿಳಿದುಬಂದಿದೆ.
ನಿನ್ನೆ ಬೆಳಗ್ಗೆಯಿಂದ ಮನೆಯಲ್ಲಿಯೇ ಇದ್ದ ದರ್ಶನ್, ಸಂಜೆ ಹೊತ್ತಿ ಮನೆಯುಂದ ತೆರಳಿದ್ದರು. ಮಾಗಡಿ ಬಳಿಯ ಟೋಲ್ ನಿಂದ ರಾತ್ರು 9.45 ಕ್ಕೆ ಪಾಸ್ ಆಗಿದ್ದ ದರ್ಶನ್, 10 ಗಂಟೆ ಸುಮಾರಿಗೆ ಚನ್ನಸಂದ್ರ ಬ್ರಿಡ್ಜ್ ಬಳಿ ಕಾರಿಗೆ ಬೆಂಕಿ ತಗುಲಿ ಸಾವನ್ನಪ್ಪಿದ್ದರು.
ಕೊಪ್ಪಳ: ಅಕ್ರಮ ಮದ್ಯ ಮಾರಾಟಕ್ಕೆ ಒಪ್ಪಂದದ ಮೇಲೆ ಒಪ್ಪಿಗೆ; ಪ್ರಕರಣ ದಾಖಲು
ಅಕ್ರಮ ಮದ್ಯ ಮಾರಾಟಕ್ಕೆ ಒಪ್ಪಂದದ ಮೇಲೆ ಒಪ್ಪಿಗೆ ಸೂಚಿಸಲಾಗಿದೆ. ಕೊಪ್ಪಳ ತಾಲೂಕಿನ ಕರ್ಕಿಹಳ್ಳಿ ಗ್ರಾಮಸ್ಥರಿಂದ ಒಪ್ಪಿಗೆ ಕೊಡಲಾಗಿದೆ. ಅಕ್ರಮ ಮದ್ಯ ಮಾರಾಟಕ್ಕೆ ಗ್ರಾಮಸ್ಥರಿಂದ ಲಿಖಿತ ಒಪ್ಪಿಗೆ ಆಗಿದ್ದು, ವರ್ಷಕ್ಕೆ 8.21 ಲಕ್ಷ ರೂಪಾಯಿ ಗ್ರಾಮಕ್ಕೆ ನೀಡಬೇಕು. ಜಾತ್ರೆ, ದೇಗುಲ, ಮಸೀದಿ ನಿರ್ಮಾಣಕ್ಕೆ ಹಣ ಬಳಕೆ ಮಾಡಲಾಗುವುದು. ಅಕ್ರಮ ಮದ್ಯ ಮಾರಾಟದ ಬಗ್ಗೆ ದೂರು ನೀಡುವಂತಿಲ್ಲ ಎಂದು ಕರ್ಕಿಹಳ್ಳಿಯಲ್ಲಿ ಗ್ರಾಮಸ್ಥರು ಒಪ್ಪಂದ ಮಾಡಿಕೊಂಡಿದ್ದಾರೆ. ವಿಷಯ ತಿಳಿದು ಗ್ರಾಮಕ್ಕೆ ಮುನಿರಾಬಾದ್ ಪೊಲೀಸರ ಭೇಟಿ ನೀಡಿದ್ದಾರೆ. ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿ ಬಂಧನ ಮಾಡಲಾಗಿದೆ. ರಾಜೇಸಾಬ ಇಟಗಿಯನ್ನ ಬಂಧಿಸಿ, 60 ಲೀ. ಮದ್ಯ ಜಪ್ತಿ ಮಾಡಲಾಗಿದೆ. ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಇಂದು ಘೋರ ಅಪಘಾತಗಳ ಸರಮಾಲೆ: ಕಾರು-ಬೈಕ್ ನಡುವೆ ಡಿಕ್ಕಿಯಾಗಿ ಅಪ್ಪ, ಮಗಳು ಬಲಿ
ಇದನ್ನೂ ಓದಿ: ಸೇತುವೆ ಮೇಲೆ ಅಪಘಾತ; ಸೇತುವೆಯಿಂದ ನದಿಗೆ ಬಿದ್ದ ಬೈಕ್ ಸವಾರನ ಮೃತ ದೇಹ ಪತ್ತೆ
Published On - 10:15 am, Sun, 13 March 22