Chikkamagalur News: ಶಾಕ್ ಕೊಟ್ಟ ಮೆಸ್ಕಾಂ; ಸಿಂಗಲ್ ರೂಮ್ ವಿದ್ಯುತ್ ಬಿಲ್ ಬರೋಬ್ಬರಿ 11,718 ರೂ!

ಕಡೂರಿನಲ್ಲಿ ಸಿಂಗಲ್ ರೂಮ್ ಬಾಡಿಗೆಗೆ ಪಡೆದು ಉಳಿದುಕೊಂಡಿದ್ದೇನೆ. ನನಗೆ ಪ್ರತಿ ತಿಂಗಳು 100 ರೂ.ಗಿಂತ ಕಡಿಮೆ ವಿದ್ಯುತ್ ಬಿಲ್ ಬರುತ್ತಿತ್ತು. ನಾನು ಮೆಸ್ಕಾಂ ಅಪ್ಲಿಕೇಶನ್ ಬಳಸಿ ವಿದ್ಯುತ್ ಬಿಲ್ ಪಾವತಿಸುತ್ತೇನೆ. ಈ ಬಾರಿ 11,718 ರೂಪಾಯಿ ವಿದ್ಯುತ್ ಬಿಲ್ ನೋಡಿ ಬೆಚ್ಚಿಬಿದ್ದೆ ಎಂದು ಜಗದೀಶ್ ಎಂಬವರು ತಿಳಿಸಿದ್ದಾರೆ.

Chikkamagalur News: ಶಾಕ್ ಕೊಟ್ಟ ಮೆಸ್ಕಾಂ; ಸಿಂಗಲ್ ರೂಮ್ ವಿದ್ಯುತ್ ಬಿಲ್ ಬರೋಬ್ಬರಿ 11,718 ರೂ!
ಮೆಸ್ಕಾಂ ಆ್ಯಪ್​ನಲ್ಲಿ ಕಂಡುಬಂದ ವಿದ್ಯುತ್ ಬಿಲ್​ನ ಸ್ಕ್ರೀನ್​ಶಾಟ್
Follow us
Ganapathi Sharma
|

Updated on:Jun 08, 2023 | 8:02 PM

ಚಿಕ್ಕಮಗಳೂರು: ಒಂದು ಕೊಠಡಿಯ ವಿದ್ಯುತ್ ಬಳಕೆಯ ಶುಲ್ಕ ಬರೋಬ್ಬರಿ 11,718 ರೂ. ಬಂದುದನ್ನು ಕಂಡು ಚಿಕ್ಕಮಗಳೂರಿನ (Chikkamagalur) ಕಡೂರಿನ (Kadur) ಗ್ರಾಹಕರೊಬ್ಬರು ಬೆಚ್ಚಿಬಿದ್ದಿದ್ದಾರೆ. ಹೌದು, ಪ್ರತಿ ತಿಂಗಳು ಸುಮಾರು 100 ರೂ. ಅಥವಾ ಅದಕ್ಕಿಂತ ಕಡಿಮೆ ಬಿಲ್ ಬರುತ್ತಿದ್ದ ವ್ಯಕ್ತಿಗೆ ಈ ಬಾರಿ ತಿಂಗಳೊಂದರ ವಿದ್ಯುತ್ ಬಿಲ್ 11,718 ರೂ. ಬಂದಿದೆ. ಕಡೂರಿನಲ್ಲಿ ವಾಸಿಸುವ ಜಗದೀಶ್ ಅವರಿಗೆ ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯಿಂದ (MESCOM) 11,718 ರೂ ಬಿಲ್ ಬಂದಿದೆ.

ಕಡೂರಿನಲ್ಲಿ ಸಿಂಗಲ್ ರೂಮ್ ಬಾಡಿಗೆಗೆ ಪಡೆದು ಉಳಿದುಕೊಂಡಿದ್ದೇನೆ. ನನಗೆ ಪ್ರತಿ ತಿಂಗಳು 100 ರೂ.ಗಿಂತ ಕಡಿಮೆ ವಿದ್ಯುತ್ ಬಿಲ್ ಬರುತ್ತಿತ್ತು. ನಾನು ಮೆಸ್ಕಾಂ ಅಪ್ಲಿಕೇಶನ್ ಬಳಸಿ ವಿದ್ಯುತ್ ಬಿಲ್ ಪಾವತಿಸುತ್ತೇನೆ. ಈ ಬಾರಿ 11,718 ರೂಪಾಯಿ ವಿದ್ಯುತ್ ಬಿಲ್ ನೋಡಿ ಬೆಚ್ಚಿಬಿದ್ದೆ. 10 ವರ್ಷ ವಿದ್ಯುತ್ ಬಳಸಿದರೂ ಬಿಲ್ ಇಷ್ಟು ಆಗುವುದಿಲ್ಲ ಎಂದು ಜಗದೀಶ್ ‘ಟಿವಿ9’ಗೆ ತಿಳಿಸಿದ್ದಾರೆ.

ಆ್ಯಪ್‌ನಲ್ಲಿನ ದೋಷವನ್ನು ಸರಿಪಡಿಸುವಂತೆ ಮೆಸ್ಕಾಂ ಅಧಿಕಾರಿಗಳೊಂದಿಗೆ ಮಾತನಾಡಿ ಮನವಿ ಮಾಡಿದ್ದೇನೆ ಎಂದು ಜಗದೀಶ್ ಹೇಳಿದ್ದಾರೆ. ಸಮಸ್ಯೆಯ ಬಗ್ಗೆ ಗಮನಹರಿಸಿ ಪರಿಶೀಲಿಸಲು ಅಪ್ಲಿಕೇಶನ್‌ನ ಸ್ಕ್ರೀನ್‌ಶಾಟ್‌ಗಳನ್ನು ಮೆಸ್ಕಾಂ ಅಧಿಕಾರಿಗಳೊಂದಿಗೆ ಹಂಚಿಕೊಂಡಿದ್ದೇನೆ ಎಂದೂ ಅವರು ಹೇಳಿದ್ದಾರೆ.

ಇದನ್ನೂ ಓದಿ: Gruha Jyothi scheme: ಗೃಹಜ್ಯೋತಿ ಯೋಜನೆ ಅಡಿ ವಿದ್ಯುತ್ ಬಿಲ್ ಲೆಕ್ಕಾಚಾರ ಹೇಗೆ? ಇಲ್ಲಿದೆ ಸ್ಪಷ್ಟ ಚಿತ್ರಣ

ಈ ಮಧ್ಯೆ, ರಾಜ್ಯದಾದ್ಯಂತ ಗ್ರಾಹಕರು ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್​​ಗೆ ಅರ್ಜಿ ಸಲ್ಲಿಸಲು ಕಾತರದಿಂದಿದ್ದಾರೆ. ಆಗಸ್ಟ್‌ 1 ರಂದು ಯೋಜನೆಗೆ ಚಾಲನೆ ದೊರೆಯುವ ನಿರೀಕ್ಷೆ ಇದೆ. ರಾಜ್ಯ ಸರ್ಕಾರ ಘೋಷಿಸಿರುವ ಗ್ಯಾರಂಟಿ ಯೋಜನೆಗಳಲ್ಲಿ ಗೃಹಜ್ಯೋತಿ ಯೋಜನೆಗೆ ಆಗಸ್ಟ್‌ 1 ರಂದು ಹಾಗೂ ಗೃಹ ಲಕ್ಷ್ಮಿ ಯೋಜನೆಗೆ ಆಗಸ್ಟ್‌ 17- 18 ರಂದು ಚಾಲನೆ ನೀಡಲು ತಯಾರಿ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ಟ್ವೀಟ್ ಮಾಡಿದೆ.

ರಾಜ್ಯದಲ್ಲಿ 2.16 ಕೋಟಿ ವಿದ್ಯುತ್ ಗ್ರಾಹಕರಿದ್ದು, 2.14 ಕೋಟಿ ಕುಟುಂಬಗಳು 200 ಯೂನಿಟ್‌ಗಿಂತ ಕಡಿಮೆ ವಿದ್ಯುತ್ ಬಳಸುತ್ತಿವೆ ಎಂದು ಇಂಧನ ಸಚಿವ ಕೆಜೆ ಜಾರ್ಜ್ ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:01 pm, Thu, 8 June 23