ಚಿಕ್ಕಮಗಳೂರು: ನೇರಳೆ ಹಣ್ಣಿಗಾಗಿ ಮರ ಹತ್ತಿದ ವಿದ್ಯಾರ್ಥಿಗೆ ವಿದ್ಯುತ್ ತಂತಿ ತಾಗಿ ಸಾವು
ನೇರಳೆ ಹಣ್ಣು ತಿನ್ನುವ ಆಸೆಯಿಂದ ಮೂವರು ಸ್ನೇಹಿತರು ಚಿಕ್ಕಮಗೂರು ಜಿಲ್ಲೆಯ ಕಡೂರು ತಾಲೂಕಿನ ಕುಪ್ಪಾಳು ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿನ ಮರ ಹತ್ತಿದ್ದಾರೆ. ಆದರೆ, ಮರ ಹತ್ತಿದ ಮೂವರು ಸ್ನೇಹಿತರಲ್ಲಿ ಓರ್ವ ಮಾತ್ರ ದುರಂತ ಅಂತ್ಯ ಕಂಡಿದ್ದಾನೆ.
ಚಿಕ್ಕಮಗಳೂರು, ಜೂನ್ 15: ಬೇಸಿಗೆ ಅಂತ್ಯ ಮತ್ತು ಮಳೆಗಾಲದಲ್ಲಿ ನೇರಳೆ ಹಣ್ಣುಗಳ (Jamun Fruit) ಕಾಲ. ಗಿಡ ಹತ್ತಿ ನೇರಳೆ ಹಣ್ಣುಗಳನ್ನು ಕಿತ್ತು ತಿನ್ನುವುದರ ಮಜಾನೇ ಬೇರೆ. ಇದೇ ಆಸೆಯಿಂದ ನೇರಳೆ ಹಣ್ಣಿನ ಮರ ಹತ್ತಿದ ಬಾಲಕ ಮಾತ್ರ ದುರಂತ ಅಂತ್ಯ ಕಂಡಿದ್ದಾನೆ. ಆಕಾಶ್ (13) ಮೃತ ದುರ್ದೈವಿ. 7ನೇ ತರಗತಿ ಆಕಾಶ್ ತನ್ನ ಮೂವರು ಸ್ನೇಹಿತರನ್ನು ಕರೆದುಕೊಂಡು ಕಡೂರು (Kadur) ತಾಲೂಕಿನ ಕುಪ್ಪಾಳು ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಹೋಗಿದ್ದಾನೆ.
ಶಾಲೆ ಆವರಣದಲ್ಲಿರುವ ನೇರಳೆ ಮರವನ್ನು ಕಂಡು, ಹಣ್ಣು ತಿನ್ನವ ಆಸೆಯಾಗಿದೆ. ಬಳಿಕ ಮೂವರು ನೇರಳೆ ಮರ ಹತ್ತಿ ಹಣ್ಣು ಕೀಳಲು ಆರಂಭಿಸಿದ್ದಾರೆ. ಹಣ್ಣು ಕೀಳುವಾಗ ಆಕಾಶ್ ಆಯ ತಪ್ಪಿ ಮರದಿಂದ ಕಳಗೆ ಬೀಳುವಾಗ ವಿದ್ಯುತ್ ತಂತಿ ಹಿಡಿದಿದ್ದಾನೆ. ಈ ವೇಳೆ ವಿದ್ಯುತ್ ಶಾಕ್ ಹೊಡೆದಿದೆ. ಆಕಾಶ್ ಪ್ರಜ್ಞಾಹೀನನಾಗಿದ್ದಾನೆ.
ಇದನ್ನು ಕಂಡು ಗಾಬರಿಗೊಂಡ ಆಕಾಶ್ ಸ್ನೇಹಿತರು ಈ ವಿಚಾರವನ್ನು ಆತನ ಪೋಷಕರಿಗೆ ತಿಳಿಸಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೋಷಕರು ಆಕಾಶ್ನನ್ನು ಕೂಡಲೆ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ವಿಧಿಯಾಟ ಚಿಕಿತ್ಸೆ ಫಲಿಸದೆ ಆಕಾಶ್ ಮೃತಪಟ್ಟಿದ್ದಾನೆ. ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: 300ರ ಗಡಿ ದಾಟಿದ ಡೆಂಗ್ಯೂ ಪ್ರಕರಣಗಳ ಸಂಖ್ಯೆ, ಜನರಲ್ಲಿ ಆತಂಕ
ನಾಗರಹಾವು ಕಚ್ಚಿ 3 ವರ್ಷದ ಬಾಲಕ ಸಾವು
ಚಿಕ್ಕಬಳ್ಳಾಪುರ: ನಾಗರಹಾವು ಕಚ್ಚಿ 3 ವರ್ಷದ ಬಾಲಕ ಮೃತಪಟ್ಟ ಘಟನೆ ಬಾಗೇಪಲ್ಲಿ ತಾಲೂಕಿನ ಗುಮ್ಮವಾರಂಡ್ಲಪಲ್ಲಿ ಗ್ರಾಮದಲ್ಲಿ ನಡೆದಿದೆ. ಮನೆಯ ಮುಂದೆ ರಾತ್ರಿ ಮಲಗಿದ್ದಾಗ ನಾಗರಹಾವು ಕಚ್ಚಿ ದೀಕ್ಷಿತ್(3) ಮೃತಪಟ್ಟಿದ್ದಾನೆ. ಸೂಕ್ತ ಸಮಯದಲ್ಲಿ ಬಾಗೇಪಲ್ಲಿ ಆಸ್ಪತ್ರೆಯ ಸಿಬ್ಬಂದಿ ಬೊಮ್ಮಣ್ಣ ಸ್ಪಂದಿಸಿಲ್ಲ. ನಿರ್ಲಕ್ಷ್ಯ ತೋರಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.
ಮಾಲತಿ ಹಾಘೂ ಸುರೇಶ್ ದಂಪತಿಯ ಏಕೈಕ ಪುತ್ರ ದೀಕ್ಷಿತ್ ಮನೆಯ ಮುಂದೆ ಕಾಪೌಂಡ್ನಲ್ಲಿ ಮಲಗಿದ್ದಾಗ ರಾತ್ರಿ ನಾಗರಹಾವು ಕಚ್ಚಿದೆ. ಸಕಾಲಕ್ಕೆ ಬಾಗೇಪಲ್ಲಿ ಆಸ್ಪತ್ರೆಯ ಸ್ಟಾಪ್ ನರ್ಸ್ ಬೋಮ್ಮಣ್ಣ ಸ್ಪಂದಿಸಿಲ್ಲ. ವೈದ್ಯರು ಬಂದು ನೋಡುವಷ್ಟರಲ್ಲಿ ಮಗುವಿನ ಸ್ಥಿತಿ ಚಿಂತಾಜನಕವಾಗಿತ್ತು. ಹೀಗಾಗಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:46 pm, Sat, 15 June 24